ಜಾಹೀರಾತು ವೆಚ್ಚ ಹೆಚ್ಚಳ ನಿರೀಕ್ಷೆ
ಇದೇ ಸಂಸ್ಥೆಯು 2020ರಲ್ಲಿ ಜಾಹೀರಾತು ವೆಚ್ಚದಲ್ಲಿ ಶೇ. 10.7ರಷ್ಟು ಪ್ರಗತಿ ಉಂಟಾಗಲಿದೆ
Team Udayavani, Feb 17, 2021, 10:12 AM IST
ಹೊಸದಿಲ್ಲಿ, ಫೆ. 16: ಕೋವಿಡ್ ಕಾಲದಲ್ಲಿ ಎಲ್ಲ ಕ್ಷೇತ್ರಗಳಂತೆ ಜಾಹೀರಾತು ಕ್ಷೇತ್ರವೂ ಹಿನ್ನಡೆ ಅನುಭವಿಸಿದೆ. ಆದರೆ ಈಗ ಅದು ಚೇತರಿಸಿಕೊಳ್ಳುತ್ತಿದ್ದು, 2021ರಲ್ಲಿ ಪೂರ್ಣ ಪ್ರಮಾಣದ ಪುನಶ್ಚೇತನ ಪಡೆಯಲಿದೆ ಎಂಬುದಾಗಿ ವಿಶ್ಲೇಷಕ ಏಜೆನ್ಸಿಯೊಂದು ವರದಿ ಮಾಡಿದೆ.
ಸಾಂಕ್ರಾಮಿಕ ಪೀಡಿತ 2020ರಲ್ಲಿ ಎಲ್ಲ ಮಾಧ್ಯಮಗಳಲ್ಲಿ ಜಾಹೀರಾತು ವೆಚ್ಚವು ಶೇ. 21.5ರಷ್ಟು ಕುಸಿತ ಕಂಡಿತ್ತು. 2021ರಲ್ಲಿ ಅದು ಶೇ. 23.5ರಷ್ಟು ಅಂದರೆ 80,123 ಕೋ.ರೂ.ಗಳಷ್ಟು ಹೆಚ್ಚಳವಾಗಲಿದೆ ಎಂದು ಗ್ರೂಪ್ ಎಂ ಎಂಬ ವಿಶ್ಲೇಷಕ ಸಂಸ್ಥೆ ಭವಿಷ್ಯ ನುಡಿದಿದೆ. ಕೋವಿಡ್ ಲಾಕ್ ಡೌನ್ ಘೋಷಣೆಗೆ ಕೆಲವು ತಿಂಗಳುಗಳ ಹಿಂದೆ ಇದೇ ಸಂಸ್ಥೆಯು 2020ರಲ್ಲಿ ಜಾಹೀರಾತು ವೆಚ್ಚದಲ್ಲಿ ಶೇ. 10.7ರಷ್ಟು ಪ್ರಗತಿ ಉಂಟಾಗಲಿದೆ ಎಂದಿತ್ತು.
ಇಪಿಎಫ್ ಬಡ್ಡಿದರ ಮಾ. 4ರಂದು?
ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯ 2020-21ನೇ ಸಾಲಿನ ಬಡ್ಡಿದರಗಳು ಮಾರ್ಚ್ ಮೊದಲ ವಾರದಲ್ಲಿ ಪ್ರಕಟವಾಗುವ ಸಾಧ್ಯತೆಗಳಿವೆ. ಇಪಿಎಫ್ ಸಂಸ್ಥೆಯ ವಿಶ್ವಸ್ತರ ಸಭೆಯು ಮಾ. 4ರಂದು ಶ್ರೀನಗರದಲ್ಲಿ ನಡೆಯಲಿದ್ದು, ಅದೇ ಸಂದರ್ಭದಲ್ಲಿ ಬಡ್ಡಿದರ ಘೋಷಣೆಯಾಗಲಿವೆ ಎನ್ನಲಾಗಿದೆ.
ಬಡ್ಡಿದರ ಘೋಷಣೆಯನ್ನು ಇಪಿಎಫ್ ನ 5 ಕೋಟಿಗೂ ಹೆಚ್ಚು ಚಂದಾದಾರರು ಕಾತರದಿಂದ ನಿರೀಕ್ಷಿಸುತ್ತಿದ್ದು, ಕಳೆದ ವರ್ಷದ ಶೇ. 8.5 ಬಡ್ಡಿದರ ಮುಂದುವರಿಯುವುದೇ ಇಲ್ಲವೇ ಎಂಬುದನ್ನು ಎದುರುನೋಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
55th IFFI Goa: ಕೆಲವೇ ಕ್ಷಣಗಳಲ್ಲಿ 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಚಾಲನೆ
UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…
UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.