ಹೀಗೂ ಉಂಟು ವಿದ್ಯುತ್ ಕಂಬ!
Team Udayavani, Feb 17, 2021, 1:56 PM IST
ಯಳಂದೂರು: ವಿದ್ಯುತ್ ಇಲಾಖೆ ಅಪ್ಡೇಟ್ ಆಗುತ್ತಿದ್ದು, ದಿನನಿತ್ಯ ನೂತನ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಇದಕ್ಕೆ ಅಪವಾದ ಎಂಬಂತೆ ಮರದ ವಿದ್ಯುತ್ ಕಂಬವಿದೆ. ಇನ್ನೂ ಅಚ್ಚರಿ ಎಂದರೆ ಈ ಮರದ ತಳಭಾಗ ಮುರಿದು ಹೋಗ್ತಿರೂ ಅದಕ್ಕೆ ಮತ್ತೂಂದು ಮರದ ತುಂಡನ್ನು ಜೋಡಿಸಲಾಗಿದೆ. ಈ ಮರದ ವಿದ್ಯುತ್ ಕಂಬ ಅಪಾಯ ಆಹ್ವಾನಿಸುವಂತಿರೂ ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ತಾಲೂಕಿನ ಗೌಡಹಳ್ಳಿಯ ಶಿವಸ್ವಾಮಿ ಅವರು ಜಮೀನಿನ ಬಳಿ ಈ ರೀತಿಯ ಮರದ ವಿದ್ಯುತ್ ಕಂಬ ಇದೆ. ಕಂಬದ ತಳ ಭಾಗ ಗೆದ್ದಲು ಹಿಡಿದು ಸಂಪೂರ್ಣವಾಗಿ ಮುರಿದು ಹೋಗಿದೆ. ಇದಕ್ಕೆ ಇನ್ನೊಂದು ಮರದ ತುಂಡನ್ನು ಆಧಾರವಾಗಿ ಕೊಟ್ಟುನಿಲ್ಲಿಸಲಾಗಿದೆ. ಆದರೆ, ಇದು ಯಾವಾಗ ಬೇಕಾದರೂ ಬೀಳುವ ಸ್ಥಿತಿಯಲ್ಲಿದೆ. ಬಿಆರ್ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶಕ್ಕೆಹೊಂದಿಕೊಂಡಂತೆ ಈ ಜಮೀನು ಇದೆ. ಇಲ್ಲಿ ಆನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಸಾಮಾನ್ಯವಾಗಿದೆ. ಈ ಮರದ ವಿದ್ಯುತ್ ಕಂಬ ಬಿದ್ದಲ್ಲಿ ವಿದ್ಯುತ್ ಪ್ರವಹಿಸಿ ಹೆಚ್ಚಿನ ತೊಂದರೆ ಆಗುವ ಸಾಧ್ಯತೆಗಳಿವೆ. ಈ ಬಗ್ಗೆ ಸೆಸ್ಕ್ ಅಧಿಕಾರಿಗಳಿಗೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ವಹಿಸಿಲ್ಲ. ಒಂದು ವೇಳೆ ಗಾಳಿ ಮಳೆ, ಕಾಡು ಪ್ರಾಣಿಗಳ ದಾಳಿಗೆ ಕಂಬ ಬಿದ್ದು ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆ ಹೊತ್ತುಕೊಳ್ಳಬೇಕು. ಇನ್ನಾದರೂ ಮರದ ಕಂಬ ತೆರವುಗೊಳಿಸಿ, ಹೊಸ ಕಾಂಕ್ರೀಟ್ ಕಂಬ ಅಳವಡಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಗೌಡಹಳ್ಳಿ ಸುತ್ತಮುತ್ತಲ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
– ಫೈರೋಜ್ ಖಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.