ಮರ ಕಿತ್ತು ಸಸಿ ನೆಡುವ ಅರಣ್ಯಾಧಿಕಾರಿಗಳು!

ರಾಮಪ್ಪನಕೆರೆ ಸುತ್ತಮುತ್ತಲ ನೂರಾರು ಎಕರೆ ಅರಣ್ಯದಲ್ಲಿ ಮರಗಳು ನಾಶ | ಆರೋಪ ತಳ್ಳಿ ಹಾಕಿದ ಅಧಿಕಾರಿಗಳು

Team Udayavani, Feb 17, 2021, 4:55 PM IST

ಮರ ಕಿತ್ತು ಸಸಿ ನೆಡುವ ಅರಣ್ಯಾಧಿಕಾರಿಗಳು!

ಹುಳಿಯಾರು: ಹೋಬಳಿಯ ದಸೂಡಿ ಸಮೀಪದ ರಾಮಪ್ಪನಕೆರೆ ಸುತ್ತಮುತ್ತಲ ನೂರಾರು ಎಕರೆಅರಣ್ಯದಲ್ಲಿ ಅರಣ್ಯಾಧಿಕಾರಿಗಳೇ ಮರಗಳನ್ನು ಕಡಿದು ಅದೇ ಸ್ಥಳದಲ್ಲಿ ಪುನಹ ಅರಣ್ಯೀಕರಣ ಮಾಡಲು ಹೊರಟಿದ್ದಾರೆ ಎಂದು ಗಾಣಧಾಳು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಾಣಿ ಪಕ್ಷಿಗಳಿಗೆ ಹಣ್ಣು ಸಿಗುತ್ತಿತ್ತು: ಬುಕ್ಕಾಪಟ್ಟಣ ವಲಯ ಅರಣ್ಯ ಪ್ರದೇಶಕ್ಕೆ ಸೇರಿದ ದಸೂಡಿ ಸರ್ಕಾರಿಸರ್ವೆ ನಂಬರ್‌ 100, 101, 104, 106 ರಲ್ಲಿ ಸುಮಾರು290 ಎಕರೆ ಅರಣ್ಯದಲ್ಲಿ ಈ ಹಿಂದೆ ಜಾಣೆ, ಕಮರಸೇರಿದಂತೆ ಅನೇಕಗಿಡಗಳನ್ನು ಅರಣ್ಯ ಇಲಾಖೆನೆಟ್ಟು 5-6 ವರ್ಷ ಟ್ಯಾಂಕರ್‌ಗಳಲ್ಲಿ ನೀರುಣಿಸಿಬೆಳೆಸಿತ್ತು. ಆದರೆ, ಈಗ ಈ ಎಲ್ಲಾ ಮರಗಳುಹೆಮ್ಮರವಾಗಿ ಬೆಳೆದು ಪ್ರಾಣಿ ಪಕ್ಷಿಗಳಿಗೆ ನೆರಳು, ಹಣ್ಣು ನೀಡುತ್ತಿರುವ ಸಂದರ್ಭದಲ್ಲಿ ನಿರ್ದಾಕ್ಷಿಣ್ಯವಾಗಿ ಕಡಿದು ಧರೆಗುರುಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಾವಿರಾರು ಮರಗಳು ನಾಶ: ಮುಂಬೈ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ಹಾದು ಹೋಗುವರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಹಾಳಾಗಿರುವಅರಣ್ಯ ನಾಶದ ಪರ್ಯಾಯವಾಗಿ ಅರಣ್ಯ ಬೆಳೆಸಲುಬುಕ್ಕಾಪಟ್ಟಣ ಅರಣ್ಯ ಇಲಾಖೆಗೆ ಲಕ್ಷಾಂತರ ರೂ.ಬಿಡುಗಡೆಯಾಗಿದೆ. ಈ ಹಣವನ್ನು ಖರ್ಚು ಮಾಡುವ ಸಲುವಾಗಿ ಈಗಾಗಲೇ ಸರ್ವೆ ನಂಬರ್‌104ರಲ್ಲಿ ಹಿಟಾಚಿ ಯಂತ್ರದಿಂದ ಸಾವಿರಾರುಮರಗಳನ್ನು ನೆಲಕ್ಕೆ ಉರುಳಿಸಿದ್ದಾರೆ ಎಂದು ಚಿತ್ರ ಸಹಿತ ಗ್ರಾಪಂ ಸದಸ್ಯ ಗುರುವಾಪುರ ಶ್ರೀನಿವಾಸ್‌ ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ,ಉಳಿದಿರುವ ಮರಗಳನ್ನೂ ಕಡಿದು ನೆಲಸಮಮಾಡುತ್ತಾರೆ. ಹೀಗಾಗಿ ಎಚ್ಚೆತ್ತು ಇಂತಹ ಕೃತ್ಯನಡೆಸಿರುವ ಬುಕ್ಕಾಪಟ್ಟಣ ವಲಯ ಅರಣ್ಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮರ ಉ‌ರುಳಿಸಿ ಸಸಿ ನೆಡುವುದು ಸರಿಯೇ? :

ಬುಕ್ಕಾಪಟ್ಟಣ ಅರಣ್ಯ ಪ್ರದೇಶಲ್ಲಿ ಅರಣ್ಯೀಕರಣಗೊಳಿಸಲು ಸಾಕಷ್ಟು ಅರಣ್ಯ ಪ್ರದೇಶವಿದ್ದರೂ ಮರಗಳನ್ನು ಕಡಿದು ಪುನಃ ಅದೇ ಸ್ಥಳದಲ್ಲಿ ನೆಡಲು ಹೊರಟಿರುವುದರ ಹಿಂದಿರುವ ರಹಸ್ಯವಾದರೂ ಏನು. ಅರಣ್ಯೀಕರಣ ಮಾಡುವ ಮೊದಲು ಸ್ಥಳೀಯ ಸಭೆ ನಡೆಸಬೇಕಿದೆ. ಆದರೆ, ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈಗಾಗಲೇ ಹುಲುಸಾಗಿ ಬೆಳೆದಿರುವ ಮರಗಳನ್ನು ತೆರವುಗೊಳಿಸಿ ಮತ್ತೆ ಗಿಡಗಳನ್ನು ನೆಡಲು ತೀರ್ಮಾನಿಸಿರುವುದು ಆಕ್ಷೇಪಾರ್ಹ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹಿಟಾಚಿ ಓಡಾಡುವಾಗ ಮುರಿದಿವೆ :

ಕುಂದಾಪುರ, ಹೊನ್ನಾವರದ ಮಾರ್ಗದಲ್ಲಿ ಅರಣ್ಯ ಜಾಗ ಬಿಟ್ಟುಕೊಡಲಾಗಿತ್ತು. ಅದಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ 300 ಹೆಕ್ಟೇರ್‌ ಅರಣ್ಯೀಕರಣ ಮಾಡಲು 2010ರಲ್ಲಿ ನಿರ್ಧರಿಸಿ ದಸೂಡಿ ಭಾಗದ 120 ಹೆಕ್ಟೇರ್‌ ಅನ್ನು ಆಯ್ಕೆ ಮಾಡಲಾಗಿತ್ತು. ಈಗ ಅನುಮೋದನೆ ದೊರೆತಿದ್ದು ಹೊಸ ಸಸಿ ನೆಡಲು ಟ್ರಂಚ್‌ ತೆಗೆಯಲು ಹಿಟಾಚಿ ಬಳಸಲಾಗಿತ್ತು. ಟ್ರಂಚ್‌ ತೆಗೆಯಲು ಹಿಟಾಚಿ ಓಡಾಡುವಾಗ ಕೆಲ ಉದಯದ ಗಿಡಗಳು ಮುರಿದಿವೆಯೇ ವಿನಃ ಉದ್ದೇಶ ಪೂರ್ವಕವಾಗಿ ಗಿಡಗಳನ್ನು ಕೀಳಲಾಗಿಲ್ಲ. ಇದನ್ನು ಗಮನಿಸಿ ಕೆಲಸ ನಿಲ್ಲಿಸಿದ್ದು ಹಿಟಾಚಿ ಸಹ ಅಲ್ಲಿಯೇ ನಿಲ್ಲಿಸಲಾಗಿದೆ. ಪಂಚಾಯ್ತಿಯವರು ಬಯಲು ಸ್ಥಳದಲ್ಲಿ ಕೂಲಿಯವರಿಂದ ಕೆಲಸ ಮಾಡಿಸಿ ಸಸಿ ನೆಡಲುತಿಳಿಸಿದ್ದಾರೆ. ಮೇಲಧಿಕಾರಿಗಳ ಅನುಮತಿಪಡೆದು ಮುಂದಿನ ಹೆಜ್ಜೆ ಇಡಲಾಗುವುದು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KN-Rajaanna

Congress: ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಶೋಷಿತರ ಸಮಾವೇಶ: ಕೆ.ಎನ್‌.ರಾಜಣ್ಣ

14-madhugiri

Madhugiri: 90 ಲಕ್ಷದ ಬೆಳೆ ವಿಮೆ ಹಣ ಅಕ್ರಮ ತನಿಖೆಗೆ ಆಗ್ರಹ

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

Tumkur: ಪರಂ, ರಾಜಣ್ಣ  ವರ್ಚಸ್ಸು ಕುಂದಿಸಲು ಸುರೇಶ್‌ಗೌಡ ಟೀಕೆ: ಗೌರಿಶಂಕರ್‌

9

Koratagere: ಗುಡಿಸಲಿಗೆ ಆಕಸ್ಮಿಕ ಬೆಂ*ಕಿ; 4 ಮೇಕೆಗಳು ಸಜೀವ ದಹನ; ಇಬ್ಬರಿಗೆ ಗಾಯ

10

Koratagere: ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿ‌ಲ್ಲಿಂಗ್; ಓರ್ವ ಆರೋಪಿ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.