ನೋನಿ ಚಹಾ ತಂತ್ರಜ್ಞಾನ ಇಂದು ಹಸ್ತಾಂತರ
Team Udayavani, Feb 17, 2021, 5:35 PM IST
ಶಿವಮೊಗ್ಗ: ಇಲ್ಲಿನ ಕೃಷಿ ಮತ್ತು ತೋಟಗಾರಿಕೆ ವಿವಿ ಅಭಿವೃದ್ಧಿಪಡಿಸಿರುವ ಸಹ್ಯಾದ್ರಿ ನೋನಿ ಚಹಾ ತಂತ್ರಜ್ಞಾನವನ್ನು ಅಮೃತ್‌ನೋನಿ ಖ್ಯಾತಿಯ ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಗೆ ಹಸ್ತಾಂತರಿಸುತ್ತಿದೆ.
ಈ ಸಂಸ್ಥೆ ಈಗಾಗಲೇ ಅನೇಕ ನೋನಿ ಉತ್ಪನ್ನಗಳನ್ನು ಪರಿಚಯಿಸಿ ರಾಜ್ಯಾದ್ಯಂತ ಮನೆಮಾತಾಗಿದೆ. ಈಗ ಮತ್ತೂಂದು ಉತ್ಪನ್ನ ಸರಕಾರದಿಂದಲೇ ಹಸ್ತಾಂತರವಾಗುತ್ತಿರುವುದು ಸಂಸ್ಥೆಯ ಹಿರಿಮೆಯನ್ನು ಇಮ್ಮಡಿಗೊಳಿಸಿದೆ. ಆಯುರ್ವೇದ ಔಷಧಗಳಲ್ಲೇ ಅತಿ ಹೆಚ್ಚು ಆರೋಗ್ಯ ವೃದ್ಧಿ ಅಂಶಗಳನ್ನು ಹೊಂದಿರುವ ನೋನಿ ಹಣ್ಣು ಹಾಗೂ ಪಾರಂಪರಿಕ ಆಯುರ್ವೇದ ಗಿಡಮೂಲಿಕೆಗಳನ್ನು ಬಳಸಿ ಆಯುರ್ವೇದ ಉತ್ಪನ್ನಗಳಾದ ಅಮೃತ್ ನೋನಿ ಡಿಪ್ಲಸ್, ಅಮೃತ್ ನೋನಿ ಆಥೋìಪ್ಲಸ್, ಅಮೃತ್‌ನೋನಿ ಪವರ್ ಪ್ಲಸ್ ಹಾಗೂ ಅಮೃತ್‌ನೋನಿ ಪೇನ್ ಆಯಿಲ್ ಗಳನ್ನು ಜನರಿಗೆ ನೀಡಿದ್ದು, ಈಗಾಗಲೇ ಲಕ್ಷಾಂತರ ಜನರ ಆರೋಗ್ಯ ವೃದ್ಧಿಗೆ ಹೆಸರುವಾಸಿಯಾಗಿರುವ ವ್ಯಾಲ್ಯೂ ಪ್ರಾಡೆಕ್ಟ್ ಮುಡಿಗೆ ಮತ್ತೂಂದು ಗರಿಮೆ ಸಿಕ್ಕಂತಾಗುತ್ತಿದೆ.
ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನವನ್ನು ಕೃಷಿ ವಿಶ್ವವಿದ್ಯಾಲಯ ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಗೆ ನೀಡುತ್ತಿರುವುದಕ್ಕೆ ವ್ಯಾಲ್ಯೂ ಪ್ರಾಡೆಕ್ಟ್ ಸಂಸ್ಥೆಯ ಜನಪರ ಕಾಳಜಿ ಹಾಗೂ ಸಂಸ್ಥೆಯಿಂದ ಹೊರ ಬಂದಿರುವ ಉತ್ಪನ್ನಗಳ ಯಶಸ್ಸೇ ಕಾರಣವಾಗಿದೆ.
ಆರಂಭದಿಂದಲೂ ಸಂಸ್ಥೆಯೇ ಸ್ವತಃ ನೂರಾರು ಎಕರೆ ಪ್ರದೇಶದಲ್ಲಿ ನೈಸರ್ಗಿಕ ವಿಧಾನದಲ್ಲಿ ನೋನಿ ಹಣ್ಣು ಹಾಗೂ ಆಯುರ್ವೇದ ಗಿಡಮೂಲಿಕೆಗಳನ್ನು ಬೆಳೆದು ಹಲವಾರು ರೀತಿಯ ಸಂಶೋಧನೆಗಳ ಮೂಲಕ ಅತ್ಯುತ್ತಮ ತಂತ್ರಜ್ಞಾನದಲ್ಲಿ ತಯಾರಾಗುವ ಅಮೃತ್‌ನೋನಿಯನ್ನು ಜನರಿಗೆ ನೀಡುತ್ತಿದೆ. ಈ ಕಾರ್ಯದಲ್ಲಿ ಕೃಷಿ ವಿಶ್ವವಿದ್ಯಾಲಯವೂ ಆರಂಭದಿಂದಲೂ ವ್ಯಾಲ್ಯೂ ಪ್ರಾಡೆಕ್ಟ್‌ನ ಬೆನ್ನೆಲುಬಾಗಿ ನಿಂತಿದೆ. ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಹಲವು ಸಂಶೋಧನೆಗಳ ಮೂಲಕ ತಾನೇ ಅಭಿವೃದ್ಧಿ ಪಡಿಸಿರುವ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನವನ್ನು ವ್ಯಾಲ್ಯೂ ಪ್ರಾಡೆಕ್ಟ್ಗೆ ನೀಡುವುದರ ಮೂಲಕ ದೇಹದ ಜೀವಕೋಶಗಳನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುವ ವ್ಯಾಲ್ಯೂ ಪ್ರಾಡಕ್ಟ್‌ನ ಆಶಯಕ್ಕೆ ಮತ್ತಷ್ಟು ಬಲ ನೀಡಿದಂತಾಗುತ್ತಿದೆ. ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಹಸ್ತಾಂತರವಾಗುತ್ತಿರುವ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನ ಮುಂಬರುವ
ದಿನಗಳಲ್ಲಿ ಅಮೃತ್‌ನೋನಿ ಸಹ್ಯಾದ್ರಿ ಟೀ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ನೋನಿ ಹಣ್ಣಿನ ಸಂಸ್ಕರಿತ ಪೇಯಗಳ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ದೇಶದಲ್ಲೇ ಹೆಸರುವಾಸಿ ಮಾಡುವಲ್ಲಿ ವ್ಯಾಲ್ಯೂ ಪ್ರಾಡಕ್ಟ್ ಸಂಸ್ಥೆಯ ಪಾತ್ರ ಬಹಳ ಮುಖ್ಯವಾಗಿದೆ. ರೈತ ಸಂಘಟನೆಗಳ ಮೂಲಕ ನೋನಿಯ ಬೆಳೆ, ಉತ್ತಮ ಬೆಳೆ ಪಡೆಯಲು ಅಗತ್ಯವಿರುವ ಕ್ರಮಗಳ ಬಗ್ಗೆ ರೈತರಿಗೆ ತಿಳಿವಳಿಕೆ ಹೀಗೆ ಹತ್ತು ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಈ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದೆ. ನೋನಿ ಹಣ್ಣಿನ ಲಾಭವನ್ನು ಎಲ್ಲ ರೀತಿಯಲ್ಲೂ ಎಲ್ಲರೂ ಪಡೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಚಹಾ ತಯಾರಿಸುವ ತಂತ್ರಜ್ಞಾನ ಸಿದ್ಧಪಡಿಸಬೇಕು ಎನ್ನುವುದು ಅಮೃತ್‌ನೋನಿ ಉತ್ಪನ್ನಗಳ ಕಂಪನಿಯಾದ ವ್ಯಾಲ್ಯೂ ಪ್ರಾಡಕ್ಟ್ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ಡಾ| ಶ್ರೀನಿವಾಸ ಮೂರ್ತಿ ಅವರ ಬಹಳ ದಿನಗಳ ಕನಸಾಗಿತ್ತು.
ಇದಕ್ಕಾಗಿ ನವುಲೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಇದರ ತಂತ್ರಜ್ಞಾನಕ್ಕಾಗಿ ಅವರು ಅರ್ಜಿ ಸಲ್ಲಿಸಿದ್ದರು. ವಿಶ್ವವಿದ್ಯಾಲಯ ಸುಮಾರು ಒಂದು ವರ್ಷ ಸಂಶೋಧನೆ ನಡೆಸಿ ಅಂತಿಮವಾಗಿ ನೋನಿ ಚಹಾದ ತಂತ್ರಜ್ಞಾನ ಅಭಿವೃದ್ಧಿಪಡಿಸಿತು. ಇದು ಇಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜನರು ಕೂಡಾ ಇದನ್ನು ಉತ್ತಮವಾಗಿ ಸ್ವೀಕರಿಸುತ್ತಾರೆಂಬ ಭರವಸೆ ಇದೆ ಎಂದು ಡಾ| ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.