ಅಂಗವಿಕಲರ ಬಾಳಿಗೆ ಜೀವ ನೀಡಿದ ಸಂಗೀತ

ಸಂಗೀತದಿಂದ ತಲ್ಲಣಗೊಂಡಿರುವ ಮನಸ್ಸಿಗೆ ಮುದ ನೀಡಿ ಶಾಂತಚಿತ್ತಗೊಳಿಸುವ ಅತ್ಯದ್ಭುತ ಶಕ್ತಿ ಇದೆ

Team Udayavani, Feb 17, 2021, 5:49 PM IST

ಅಂಗವಿಕಲರ ಬಾಳಿಗೆ ಜೀವ ನೀಡಿದ ಸಂಗೀತ

ಬೀದರ: ಕೃತಿ ಮತ್ತು ಶ್ರುತಿ ಸೇರಿದಾಗ ಸಂಸ್ಕೃತಿ ಹೊರಹೊಮ್ಮುತ್ತದೆ. ಸಾಹಿತ್ಯ, ಸಂಗೀತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಪಂ| ಪುಟ್ಟರಾಜ ಗವಾಯಿಗಳ ಸಂಗೀತ ಸೇವೆ ಅಪ್ರತಿಮ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ನುಡಿದರು. ನಗರದ ಬಸವ ಕೇಂದ್ರದಲ್ಲಿ ಗಾನಯೋಗಿ ಸಂಗೀತ ಪರಿಷತ್‌ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತನರ ಬಾಳಿಗೆ ಸಂಗೀತ ಜೀವ ನೀಡಿದೆ. ಭಿಕ್ಷೆ ಬೇಡುವ ಅನೇಕರಿಗೆ ಸಂಗೀತ ಶಿಕ್ಷಣ ನೀಡಿ ಬಾಳಿಗೊಂದು ಬೆಳಕು ನೀಡಿರುವ ಏಕೈಕ ಸಂಸ್ಥೆ ಗದುಗಿನ ಪುಣ್ಯಾಶ್ರಮ. ಭಾಷಣ, ಉಪನ್ಯಾಸ ಸಾಕೆನಿಸಬಹುದು. ಆದರೆ ಸಂಗೀತ ಮಾತ್ರ ಬೇಕೇ ಬೇಕೆನಿಸುತ್ತದೆ. ಸಂಗೀತಕ್ಕೆ ಮನಸ್ಸು ಶಾಂತಗೊಳಿಸುವ ಶಕ್ತಿ ಇದೆ ಎಂದರು.

ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ಮಾತನಾಡಿ, ಸಂಗೀತ ಮಾನಸಿಕ ನೆಮ್ಮದಿಗೆ ಮಹಾ ಔಷಧ. ಜೀವನದಲ್ಲಿ ಸಂಕಷ್ಟ, ಬೇಜಾರು ಎದುರಿಸುವಾಗ ಸಂಗೀತಕ್ಕೆ ಮೊರೆ ಹೋಗುತ್ತಾರೆ. ಸಂಗೀತ ಇರುವ ಮನೆ ನೆಮ್ಮದಿಯ ತಾಣ ಎಂದು ಹೇಳಿದರು.

ಹುಲಸೂರಿನ ಡಾ| ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ, ಪುಟ್ಟರಾಜ ಗವಾಯಿಗಳು ಜನ್ಮ ತಾಳದಿದ್ದರೆ ವಿಕಲಚೇತನರ ಬಾಳು ಶಾಶ್ವತವಾಗಿ ಕತ್ತಲಾಗಿರುತಿತ್ತು. ಜಿಲ್ಲೆಯಲ್ಲಿಯೂ ಅನೇಕ ಕಲಾವಿದರು ಸಂಗೀತ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಸರ್ಕಾರ ಸಂಗೀತ ನಿಗಮ ಮಂಡಳಿ ಸ್ಥಾಪಿಸಿ ಸಂಗೀತ ಕಲಿತ ಅಂಧರ ಮತ್ತು ಅಂಗವಿಕಲರೂ ಉನ್ನತ ಸ್ಥಾನಕ್ಕೆ ಬರುವ ಹಾಗೆ ಚಿಂತನೆ ಮಾಡಲು ಸಲಹೆ ನೀಡಿದರು.

ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ಶಿವಸ್ವಾಮಿ ಚೀನಕೇರಿ ಅಧ್ಯಕ್ಷತೆ ವಹಿಸಿ, ಅಂಧರಿಗೆ ಸಂಗೀತ ಆರ್ಥಿಕ ಸದೃಢತೆ ನೀಡಬಲ್ಲದು. ಸಂಗೀತದಿಂದ ಮದವೇರಿದ ಆನೆಯೂ ಸಹ ಶಾಂತವಾಗುವುದು. ಸಂಗೀತದಿಂದ ತಲ್ಲಣಗೊಂಡಿರುವ ಮನಸ್ಸಿಗೆ ಮುದ ನೀಡಿ ಶಾಂತಚಿತ್ತಗೊಳಿಸುವ ಅತ್ಯದ್ಭುತ ಶಕ್ತಿ ಇದೆ. ಪರಿಷತ್‌ ಮುಂದಿನ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಿತ ಚಟುವಟಿಕೆಗಳನ್ನು ನಡೆಸಲಿದೆ ಎಂದು ತಿಳಿಸಿದರು.

ಸರ್ಕಾರಿ ಐಟಿಐ ನೋಡಲ್‌ ಅಧಿಕಾರಿ ಶಿವಶಂಕರ ಟೋಕರೆ ಇನ್ನಿತರರು ಇದ್ದರು. ನವಲಿಂಗ ಪಾಟೀಲ ಪ್ರಸ್ತಾವಿಕ ಮಾತನಾಡಿದರು. ಜಗನ್ನಾಥ ನಾನಕೇರಿ,
ವಿಶ್ವೇಶ್ವರ್‌ ಹಿರೇಮಠ, ಸಂತೋಷ ಕಾಮಶೆಟ್ಟಿ, ಜನಾರ್ಧನ ವಾಘಮಾರೆ, ಶಿವಲಿಂಗ ಎರಗಲ್‌, ಚನ್ನಬಸಪ್ಪ ನೌಬಾದೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಪರಿಷತ್‌ ತಾಲೂಕು ಘಟಕ ರಚಿಸಿ ಮಹೇಶ ಮಜಗೆ ಅವರನ್ನು ನೇಮಿಸಲಾಯಿತು.

ಟಾಪ್ ನ್ಯೂಸ್

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿದ್ದರಾಮಯ್ಯ

CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ

1-max

Max; ಟ್ರೈಲರ್ ಬಿಡುಗಡೆ: ಭರ್ಜರಿ ಲುಕ್ ನಲ್ಲಿ ಕಿಚ್ಚ!

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Yathanal

Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್‌ ಆಕ್ರೋಶ

sand 1

Padubidri: ಮರಳು ಅಕ್ರಮ ಸಾಗಾಟ; ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.