ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಿಸಿ
Team Udayavani, Feb 17, 2021, 7:13 PM IST
ಯಾದಗಿರಿ: ಆರೋಗ್ಯ ಇಲಾಖೆ ಸಿಬ್ಬಂದಿ, ಕಂದಾಯ, ಪೊಲೀಸ್, ಪಂಚಾಯತ್ ರಾಜ್ ಇಲಾಖೆಗಳು ಸೇರಿದಂತೆ ಇತರಇಲಾಖೆಯ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಮುಂದಿನದಿನಗಳಲ್ಲಿ ಎರಡನೇ ಡೋಸ್ (ಲಸಿಕೆ)ಪಡೆಯುವವರ ಸಂಖ್ಯೆ ಹೆಚ್ಚಿಸಲುಕ್ರಮವಹಿಸಬೇಕೆಂದು ಜಿಲ್ಲಾ ಧಿಕಾರಿಡಾ| ರಾಗಪ್ರಿಯಾ ಆರ್. ಸೂಚನೆ ನೀಡಿದರು.
ಎರಡನೇ ಡೋಸ್ ವಿತರಣೆಗೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ಮಂಗಳವಾರಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೋವಿಡ್-19 ಲಸಿಕೆಗೆ ಸಂಬಂಧಿ ಸಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಲಸಿಕಾ ಕೇಂದ್ರಗಳಲ್ಲಿ ಜನಸಂದಣಿಉಂಟಾಗದಂತೆ ಲಸಿಕಾ ಕೇಂದ್ರಗಳಲ್ಲಿಕೋವಿಡ್ ಲಸಿಕೆ ವಿತರಣೆಗೆ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕು ಎಂದರು.
ಲಸಿಕೆ ಸಂಗ್ರಹಿಸಿಡಲುಜಿಲ್ಲೆಯಲ್ಲಿ ದಾಸ್ತಾನು ಕೇಂದ್ರ ತೆರೆಯಲಾಗಿದ್ದು, ಲಸಿಕೆ ಪೂರೈಕೆಸಂದರ್ಭದಲ್ಲಿ ಯಾವುದೇ ಸಮಸ್ಯೆಉಂಟಾಗಬಾರದು. ವ್ಯವಸ್ಥಿತವಾಗಿಲಸಿಕೆ ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಇಂದುಮತಿಕಾಮಶೆಟ್ಟಿ ಮಾತನಾಡಿ, ಎರಡನೇಡೋಸ್ ನೀಡಲು 15 ಸೆಷನ್ಗಳನ್ನು ಮಾಡಲಾಗಿದ್ದು, ಒಂದುಕೇಂದ್ರದಲ್ಲಿ ದಿನಕ್ಕೆ 150 ಜನ ಲಸಿಕೆಪಡೆಯಬಹುದು. ಜಿಲ್ಲೆಯ 53ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೋವಿಡ್ ಲಸಿಕೆ ಪಡೆದವರಿಗೆವೇಟಿಂಗ್ ಹಾಲ್, ಲಸಿಕಾ ಕೊಠಡಿ,ನಿಗಾವಣೆ ಕೊಠಡಿ ಸೇರಿದಂತೆಲಸಿಕೆಗಾಗಿ ಮೂರು ಕೊಠಡಿಗಳುಬೇಕಾಗುತ್ತವೆ. ಈ ನಿಟ್ಟಿನಲ್ಲಿ ಕಿರಿಯಆರೋಗ್ಯ ಸಹಾಯಕಿಯರಿಗೆ, ಆಶಾಕಾರ್ಯಕರ್ತೆಯರಿಗೆ ಸೇರಿದಂತೆಆರೋಗ್ಯ ಇಲಾಖೆ ಸಿಬ್ಬಂದಿಗೆಈಗಾಗಲೇ ತರಬೇತಿ ನೀಡಲಾಗಿದೆ. ಕೋವಿಡ್ ಲಸಿಕೆ ದಾಸ್ತಾನ ಕೇಂದ್ರದಲ್ಲಿ ಸುಮಾರು 24 ಲಕ್ಷ ಡೋಸ್ ಸಂಗ್ರಹಿಸುವ ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಸಹಾಯಕಆಯುಕ್ತ ಶಂಕರಗೌಡ ಸೋಮನಾಳ,ವಿಶ್ವ ಆರೋಗ್ಯ ಸಂಸ್ಥೆಯ ಎನ್‌ಪಿಎಸ್ ಅಧಿಕಾರಿ ಅನಿಲ ಕುಮಾರ್ ತಾಳಿಕೋಟಿ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.