![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 17, 2021, 10:46 PM IST
ಜೊಹಾನ್ಸ್‌ಬರ್ಗ್: ಸೀಮಿತ ಓವರ್‌ಗಳ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್ ಬುಧವಾರ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.
“ಈ ವರ್ಷ ಎಲ್ಲರಿಗೂ ಬಹಳ ಕಠಿನ ಹಾಗೂ ಸವಾಲಿನದಾಗಿತ್ತು. ಅನೇಕ ಗೊಂದಲ ಕಾಡಿದ್ದು ನಿಜ. ಆದರೆ ನನಗಂತೂ ಹಲವು ವಿಚಾರಗಳಲ್ಲಿ ಸ್ಪಷ್ಟತೆ ಸಿಕ್ಕಿದೆ. ನನ್ನ ಮನಸ್ಸು ನಿರಾಳವಾಗಿದ್ದು, ವೃತ್ತಿ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಲು ಇದು ಸೂಕ್ತ ಸಮಯ. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ದೇಶದ ಪರ ಆಡುವ ಅವಕಾಶ ಸಿಕ್ಕಿದ್ದು ಬಹು ದೊಡ್ಡ ಗೌರವ. ಆದರೆ ನನ್ನ ಸಮಯ ಬಂದಾಗಿದೆ. ಟೆಸ್ಟ್ ಕ್ರಿಕೆಟಿಗೆ ವಿದಾಯ ಹೇಳುತ್ತಿದ್ದೇನೆ’ ಎಂದು ಡು ಪ್ಲೆಸಿಸ್ ತಮ್ಮ ಇನ್‌ಸ್ಟಾಮ್ ಖಾತೆಯಲ್ಲಿ ಪತ್ರವೊಂದನ್ನು ಪೋಸ್ಟ್ ಮಾಡಿ ನಿವೃತ್ತಿ ಸಾರಿದ್ದಾರೆ.
ಇದನ್ನೂ ಓದಿ:ಹಳ್ಳಿ ದತ್ತು ಪಡೆದು ಗ್ರಾಮಾಭಿವೃದ್ಧಿಗೆ ಹೊಸ ಹೆಜ್ಜೆ ಇಟ್ಟ ಕಿಚ್ಚ ಸುದೀಪ್
ಟಿ20ಗೆ ಮೊದಲ ಆದ್ಯತೆ
“ಮುಂದಿನ ಎರಡೂ ವರ್ಷಗಳಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಗಳು ನಡೆಯಲಿವೆ. ಹೀಗಾಗಿ ಚುಟುಕು ಮಾದರಿಯ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ನೀಡಲಿದ್ದೇನೆ. ಚುಟುಕು ಮಾದರಿಯಲ್ಲಿ ತಂಡಕ್ಕೆ ಹೆಚ್ಚಿನ ಸೇವೆ ಒದಗಿಸಬಲ್ಲ ಸಾಮರ್ಥ್ಯ ನನ್ನಲ್ಲಿ ಇನ್ನೂ ಇದೆ. ಇದರರ್ಥ ಏಕದಿನ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದೇನೆ ಎಂದಲ್ಲ. ಸದ್ಯಕ್ಕೆ ಟಿ20 ಕ್ರಿಕೆಟ್‌ಗೆ ಮೊದಲ ಆದ್ಯತೆ ನೀಡಿದ್ದೇನೆ’ ಎಂದು ಡು ಪ್ಲೆಸಿಸ್ ಹೇಳಿದರು.
36ರ ಹರೆಯದ ಡು ಪ್ಲೆಸಿಸ್ ದಕ್ಷಿಣ ಆಫ್ರಿಕಾ ಪರ 69 ಟೆಸ್ಟ್ ಪಂದ್ಯಗಳನ್ನಾಡಿ 4,163 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಸೇರಿದೆ. 190 ರನ್ ಅತ್ಯುತ್ತಮ ಸಾಧನೆ. ನಾಯಕನಾಗಿ 36 ಪಂದ್ಯಗಳನ್ನು ಮುನ್ನಡೆಸಿದ್ದು, 18 ಪಂದ್ಯಗಳಲ್ಲಿ ತಂಡ ಗೆಲುವು ಕಂಡಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.