ಕೋವಿಡ್‌ನಿಂದ ದೀರ್ಘ‌ಕಾಲಿಕ ಪ್ರತಿರಕ್ಷಣೆೆ ಮುಖ್ಯ


Team Udayavani, Feb 18, 2021, 7:15 AM IST

ಕೋವಿಡ್‌ನಿಂದ ದೀರ್ಘ‌ಕಾಲಿಕ ಪ್ರತಿರಕ್ಷಣೆೆ ಮುಖ್ಯ

ದೇಶದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿ ಫೆಬ್ರವರಿ 16ಕ್ಕೆ ಒಂದು ತಿಂಗಳಾಗಿದೆ. 28 ದಿನಗಳ ಅನಂತರ ಜನರಿಗೆ ಎರಡನೇ ಡೋಸ್‌ ಕೂಡ ಆರಂಭಿಸಲಾಗುತ್ತಿದೆ. ಇದರ ನಡುವೆಯೇ ದೇಶದಲ್ಲಿ ಪ್ರಕರಣಗಳ ಸಂಖ್ಯೆಯಲ್ಲೂ ಗಣನೀಯ ಇಳಿಕೆಯಾಗಿದೆಯಾದರೂ, ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮತ್ತೆ ಹೆಚ್ಚುತ್ತಿರುವ ಸಂಖ್ಯೆ ಗಾಬರಿ ಹುಟ್ಟಿಸುವಂತಿದೆ.

ಆದಾಗ್ಯೂ ಗಮನಿಸಬೇಕಾದ ಸಂಗತಿಯೆಂದರೆ, ಜಗತ್ತಿನಾದ್ಯಂತ ಕೋವಿಡ್‌ ಸಾಂಕ್ರಾಮಿಕದ ಮೊದಲನೆ ಅಲೆ ಮುಗಿಯುತ್ತಿದ್ದಂತೆಯೇ ಎರಡನೇ ಅಲೆಯನ್ನು ಎದುರಿಸಿದ ಅನೇಕ ರಾಷ್ಟ್ರಗಳಿವೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಒಂದು ಹಂತದಲ್ಲಿ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಗಳು ಬಹಳವೇ ಕೆಳಕ್ಕೆ ಕುಸಿದಿದ್ದವು. ಆದರೆ ಈ ಎಲ್ಲ ರಾಷ್ಟ್ರಗಳಲ್ಲೂ ಹೇಗೆ ಪ್ರಕರಣಗಳ ಸಂಖ್ಯೆ ಅಧಿಕವಾಯಿತು ಎನ್ನುವುದನ್ನು ನಾವು ನೋಡಿದ್ದೇವೆ.

ಭಾರತದಲ್ಲಿ ಎರಡನೆ ಅಲೆಯ ಆರಂಭ ವ್ಯಾಪಕವಾಗಿ ಆಗಬಹುದೇ ಎನ್ನುವ ಬಗ್ಗೆ ಪರ-ವಿರೋಧದ ವಾದಗಳಂತೂ ಇವೆ. ಕೆಲವು ತಜ್ಞರು ಎರಡನೆಯ ಅಲೆಯ ಸಾಧ್ಯತೆಯನ್ನು ಅಲ್ಲಗಳೆದರೆ, ಇನ್ನೂ ಕೆಲವರು ಆ ಅಪಾಯದ ತೂಗುಗತ್ತಿ ತೂಗಾಡುತ್ತಲೇ ಇದೆ ಎಂದು ಎಚ್ಚರಿಸುತ್ತಾರೆ. ಕಳೆದ ವರ್ಷದ ಸೆಪ್ಟಂಬರ್‌ ತಿಂಗಳಲ್ಲಿ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಉತ್ತುಂಗ ತಲುಪಿತ್ತು, ಆಗ ನಿತ್ಯ ಹತ್ತಿರಹತ್ತಿರ 1 ಲಕ್ಷ ಪ್ರಕರಣಗಳು ದಾಖಲಾಗುತ್ತಿದ್ದವು. ಈಗ 11 ಸಾವಿರದ ಆಸುಪಾಸು ಪ್ರಕರಣಗಳು ವರದಿಯಾಗುತ್ತಿವೆೆ.

ಆದರೆ ನೆನಪಿಡಬೇಕಾದ ಸಂಗತಿಯೆಂದರೆ ಪ್ರಕರಣಗಳ ಇಳಿಕೆಯಲ್ಲಿ ಲಸಿಕೆಯ ಭೂಮಿಕೆಯೇನೂ ಇಲ್ಲ. ಏಕೆಂದರೆ, ಲಸಿಕೆ ಪ್ರಕ್ರಿಯೆ ಆರಂಭವಾಗಿ ಇನ್ನೂ ಒಂದು ತಿಂಗಳಾಗಿದೆ. ಎರಡನೇ ಡೋಸ್‌ ಪಡೆಯದವರ ಸಂಖ್ಯೆಯೂ ಬಹಳಷ್ಟಿದೆ ಎಂದು ವರದಿಯಾಗುತ್ತಿವೆ. ಎರಡನೆಯದಾಗಿ, ಪ್ರಸಕ್ತ ಲಸಿಕೆಯನ್ನು ವೈದ್ಯರು, ಆಸ್ಪತ್ರೆ ಸಿಬಂದಿಯಂಥ ಫ್ರಂಟ್ ಲೈನ್‌ ಕೊರೊನಾ ವಾರಿಯರ್‌ಗಳಿಗಷ್ಟೇ ನೀಡಲಾಗುತ್ತಿದೆ. ಲಸಿಕೆಯ ಪೂರ್ಣ ಪರಿಣಾಮ ಎರಡನೇ ಡೋಸ್‌ ಮುಗಿದ ಕೆಲವು ದಿನಗಳ
ಅನಂತರವೇ ತಿಳಿಯುತ್ತದೆ.

ಹಾಗಿದ್ದರೆ ಈಗ ಪ್ರಕರಣಗಳು ತಗ್ಗಿರುವುದೇಕೆ ಎನ್ನುವ ಬಗ್ಗೆಯೂ ಚರ್ಚೆ ಆರಂಭವಾಗಿದೆ. ಕೆಲವು ಪರಿಣಿತರ ಪ್ರಕಾರ ದೇಶವಾಸಿಗಳ ದೇಹದಲ್ಲಿ ಭಾರೀ ಪ್ರಮಾಣದಲ್ಲಿ ನೈಸರ್ಗಿಕವಾಗಿ ಉತ್ಪನ್ನವಾಗಿರುವ ಪ್ರತಿಕಾಯಗಳೂ ಇದಕ್ಕೆ ಕಾರಣವಾಗಿರಬಹುದು. ಆದರೆ ಹೀಗೆ ಉತ್ಪನ್ನವಾದ ಪ್ರತಿಕಾಯಗಳು ಹೆಚ್ಚು ದಿನ ದೇಹದಲ್ಲಿ ಇರಲಾರವು ಎಂದೂ ಎಚ್ಚರಿಸಲಾಗುತ್ತಿದೆ. ದೀರ್ಘ‌ಕಾಲಿಕ ಪ್ರತಿರಕ್ಷಣ ವ್ಯವಸ್ಥೆಗೆ ಲಸಿಕೆಯೇ ಪರಿಹಾರ.

ಲಸಿಕೆ ಪ್ರಕ್ರಿಯೆಯ ಮುಂದಿನ ಚರಣ ಮಾರ್ಚ್‌ 1ರಿಂದ ಆರಂಭವಾಗಲಿದೆ. ಅಂದಿನಿಂದ 50 ವರ್ಷಕ್ಕೂ ಮೇಲ್ಪಟ್ಟವರು ಲಸಿಕೆ ಪಡೆಯಬಹುದಾಗಿದೆ. ಆದರೆ ಅಲ್ಲಿಯವರೆಗೂ ಭಾರತ ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಯಿಡಲೇಬೇಕಿದೆ. ಪ್ರತಿಯೊಬ್ಬರೂ ಸುರಕ್ಷತ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸುವುದು ಅತ್ಯಗತ್ಯ. ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ತಗ್ಗುವುದೂ ಸಹ ಜಾಗೃತಿಯ ದೃಷ್ಟಿಯಿಂದ ಮುಖ್ಯವಾಗಿದೆ.

ಟಾಪ್ ನ್ಯೂಸ್

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7(1

Lalbagh: ಆಸ್ತಿ ತೆರಿಗೆ ಇಳಿಕೆಗೆ ಪಾಲಿಕೆ ಅವಳಿ ಪ್ರಸ್ತಾವನೆ

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.