ಅಂಬೇಡ್ಕರ್ ಯಶಸ್ಸಿನಲ್ಲಿ ರಮಾಬಾಯಿ ಕೊಡುಗೆ ದೊಡ್ಡದು
ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಲ್.ಎಚ್.ಅರುಣ್‌ಕುಮಾರ್ ಉದ್ಘಾಟಿಸಿದರು.
Team Udayavani, Feb 18, 2021, 3:42 PM IST
ದಾವಣಗೆರೆ: ಭಾರತ ರತ್ನ, ಸಂವಿಧಾನ ಶಿಲ್ಪಿ·ಅಂಬೇಡ್ಕರ್‌ರವರ ಯಶಸ್ವಿ ಹೋರಾಟದಹಿಂದೆ ಪತ್ನಿ ರಮಾಬಾಯಿ ಅಂಬೇಡ್ಕರ್‌ರವರ
ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ರಾಜ್ಯಕಾನೂನು ಸೇವಾ ಪ್ರಾಧಿ ಕಾರದ ಸದಸ್ಯ ಎಲ್.ಎಚ್.ಅರುಣ್‌ಕುಮಾರ್ ಹೇಳಿದರು.
ಬುಧವಾರ ಸಂಜೀವಿನಿ ಮಹಿಳಾಮತ್ತು ಮಕ್ಕಳ ಸಬಲೀಕರಣ ಸಂಸೆ, ಸ್ಲಂಜನಾಂದೋಲನ , ಸಾವಿತ್ರಿ ಬಾಪುಲೆ ಮಹಿಳಾಸಂಘಟನೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಆಶ್ರಯದಲ್ಲಿ ಬಾಬು ಜಗಜೀವನರಾಂಭವನದಲ್ಲಿ ರಮಾಬಾಯಿ ಅಂಬೇಡ್ಕರ್‌ಜಯಂತಿ ಅಂಗವಾಗಿ ಏರ್ಪಡಿಸಿದ್ದ ವಿಚಾರಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಉದ್ಘಾಟಿಸಿ ಮಾತನಾಡಿದ ಅವರು, ಬಾಬಸಾಹೇಬರ ಬೆಳವಣಿಗೆಗೆ ರಮಾಬಾಯಿಅರ್ಥಪೂರ್ಣ ಕೊಡುಗೆ ನೀಡಿದ ಧೀಮಂತೆಎಂದು ಸ್ಮರಿಸಿದರು.
ಪ್ರತಿಯೊಬ್ಬರೂ ರಮಾಬಾಯಿಅವರ ಆದರ್ಶಗಳನ್ನು ಬದುಕಿನಲ್ಲಿಅಳವಡಿಸಿಕೊಳ್ಳಬೇಕು. ಅಂಬೇಡ್ಕರ್‌ಅವರು ಬದುಕು ಕಳೆದುಕೊಂಡವರ ಮರುಬದುಕಿಗಾಗಿ ನಿರಂತರ ಸಂಘರ್ಷ ಮಾಡಿದರು.ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳಬದುಕಿನ ಎಲ್ಲಾ ಸಾಧನೆಗಳಿಗೆ ರಮಾಬಾಯಿ
ಅವರು ಬಹುದೊಡ್ಡ ಶಕ್ತಿಯಾಗಿ ಬೆಂಬಲಕ್ಕೆನಿಂತಿದ್ದರು ಎಂದರು. ಎಸ್.ಎಸ್.ಎಂ.ವಿಶಿಕ್ಷಣ ಮಹಾವಿದ್ಯಾಲಯದ ಸಹಾಯಕಿಪ್ರಾಧ್ಯಾಪಕಿ ಡಾ| ಅನಿತಾ ದೊಡ್ಡಗೌಡರ್‌ಮಾತನಾಡಿ, ರಮಾಬಾಯಿ ತಮ್ಮ 9ನೇವಯಸ್ಸಿನಲ್ಲಿ 15 ವರ್ಷದ ಅಂಬೇಡ್ಕರ್‌ಅವರನ್ನು ಮದುವೆಯಾದರು. ಅಂಬೇಡರ್‌ರವರ ಸಂಪೂರ್ಣ ಶಿಕ್ಷಣ ಮತ್ತು ಹೋರಾಟಕ್ಕೆಬೆನ್ನಲುಬಾಗಿ ನಿಂತರು. ಜೀವನದುದ್ದಕ್ಕೂಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಾಅಂಬೇಡ್ಕರ ಸಾಧನೆಗೆ ಕೈ ಜೋಡಿಸಿದರಮಾಬಾಯಿ ಚಿಕ್ಕವಯಸ್ಸಿನಲ್ಲೇ 1935ರಲ್ಲಿ ಮರಣ ಹೊಂದಿದರು. ಶೋಷಿತರಶಿಕ್ಷಣ, ಸಂಘಟನೆ, ಹೋರಾಟಗಳಿಗೆ ಜೀವನಸಮರ್ಪಿಸಿದರು ಎಂದು ತಿಳಿಸಿದರು.
ಸಮಾಜಕಲ್ಯಾಣ ಇಲಾಖೆಯ ಸಹಾಯನಿರ್ದೇಶಕಿ ಬೇಬಿ ಸುನೀತಾ, ಸಾವಿತ್ರಿಬಾಪುಲೆ ಮಹಿಳಾ ಸಂಘಟನೆ ರಾಜ್ಯಸಂಚಾಲಕರಾದ ಚಂದ್ರಮ್ಮ, ಎಸ್.ಎಲ್.ಆನಂದಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಾಯಕ ನಿರ್ದೇಶಕ ರವಿಚಂದ್ರ, ದಲಿತಸಂಘಟನೆಗಳ ಒಕ್ಕೂಟದ ಉಪಾಧ್ಯಕ್ಷಸಿ. ಬಸವರಾಜ್, ಸಂಜೀವಿನಿ ಮಹಿಳಾಮತ್ತು ಮಕ್ಕಳ ಸಬಲೀಕರಣ ಸಂಸ್ಥೆ ಅಧ್ಯಕ್ಷಎಚ್. ಬಸವರಾಜ್, ಸ್ಲಂ ಜನಾಂದೋಲನರೇಣುಕಾ ಯಲ್ಲಮ್ಮ, ಮಹಮದ್ ಶಬ್ಬೀರ್‌ಸಾಬ್, ವೀರಯ್ಯ ಇತರರು ಇದ್ದರು. ಹೆಗ್ಗರೆರಂಗಪ್ಪ ಮತ್ತು ಐರಣಿ ಚಂದ್ರು ಸಂಗಡಿಗರುಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಓದಿ :·ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan Bail; ನಾವು ಏನೂ ಹೇಳಲು ಆಗುವುದಿಲ್ಲ..: ರೇಣುಕಾಸ್ವಾಮಿ ತಂದೆ ಪ್ರತಿಕ್ರಿಯೆ
Davanagere: ಬಿಜೆಪಿಯ ಬಾಯಿಚಟದ ಮೂರ್ನಾಲ್ಕು ಜನರ ವಿರುದ್ದ ರೇಣುಕಾಚಾರ್ಯ ಟೀಕೆ
Nyamathi: ಎಸ್‌ಬಿಐ ಬ್ಯಾಂಕ್ ನಿಂದ 12.95 ಕೋಟಿ ರೂ ಮೌಲ್ಯದ ಚಿನ್ನ ಕಳ್ಳತನ
Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್: ಮಹಾನಗರ ಪಾಲಿಕೆಯ ಹೊಸ ಕ್ರಮ
Davanagere: ನಾಪತ್ತೆಯಾಗಿದ್ದ ವ್ಯಕ್ತಿ ಅಣಜಿ ಕೆರೆ ಬಳಿ ಅಸ್ಥಿಪಂಜರವಾಗಿ ಪತ್ತೆ!
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.