ಪತ್ರಿಕಾ ಜಾಹೀರಾತು ಶೇ. 35ರಷ್ಟು ವೃದ್ಧಿ?
ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳು ಶೇ. 9ರಷ್ಟು ಜಾಹೀರಾತು ಬಜೆಟ್ ಅನ್ನು ಹೆಚ್ಚು ಮಾಡಿವೆ
Team Udayavani, Feb 19, 2021, 10:36 AM IST
ನವದೆಹಲಿ: 2020ರಲ್ಲಿ ಕೊರೊನಾದಿಂದಾಗಿ ನರಳಿದ್ದ ಭಾರತೀಯ ಮುದ್ರಣ ಮಾಧ್ಯಮಕ್ಕೆ ಈ ವರ್ಷ ಶೇ. 35ರಷ್ಟು ಜಾಹೀರಾತು ಆದಾಯ ವೃದ್ಧಿಯಾಗಲಿದ್ದು, ಈ ಬಾರಿ 16,100 ಕೋಟಿ ರೂ. ಮೊತ್ತದಷ್ಟು ಜಾಹೀರಾತುಗಳು ಸಿಗಲಿವೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಪಿಚ್ ಮ್ಯಾಡಿಸನ್ ಅಡ್ವಟೈಸಿಂಗ್ ಎಂಬ ಸಂಸ್ಥೆ ತಯಾರಿಸಿರುವ ಈ ವರದಿಯಲ್ಲಿ, ಈ ರೀತಿ ಹೇಳಲಾಗಿದೆ.
ಒಟ್ಟಾರೆಯಾಗಿ, ಭಾರತೀಯ ಮಾಧ್ಯಮ ರಂಗಕ್ಕೆ ಜಾಹೀರಾತು ಪ್ರಮಾಣ ಶೇ. 26ರಷ್ಟು ಹೆಚ್ಚಾಗಲಿದ್ದು, 68,325 ಕೋಟಿ ರೂ. ಮೊತ್ತದ ಜಾಹೀರಾತು ಹರಿದುಬರಲಿದೆ. 2020ರಲ್ಲಿ ಕೊರೊನಾ ಲಾಕ್‌ಡೌನ್‌ನಿಂದಾಗಿ ನಷ್ಟ ಅನುಭವಿಸಿದ್ದ ಕಂಪನಿಗಳು ತಮ್ಮ ಜಾಹೀರಾತು ವೆಚ್ಚವನ್ನು ಶೇ. 20ರಷ್ಟು ಕಡಿತ ಮಾಡಿದ್ದವು. ಆ ನಷ್ಟದಿಂದ ಕಂಪನಿಗಳೂ ಈಗ ಮೇಲೆದ್ದಿದ್ದು, ಅದರ ಲಾಭ ಮಾಧ್ಯಮಗಳಿಗೂ ಆಗಲಿದೆ ಎಂಬುದು ಸಮೀಕ್ಷೆಯ ಒಟ್ಟಾರೆ ಸಾರಾಂಶವಾಗಿದೆ.
ಈ ವರ್ಷ ಯಾರಿಂದ ಸಿಂಹಪಾಲು?
ಈ ವರ್ಷ ಮಾಧ್ಯಮಗಳಿಗೆ ಸಿಗುವ ಜಾಹೀರಾತುಗಳಲ್ಲಿ ಸಿಂಹಪಾಲು ಜಾಹೀರಾತುಗಳು “ತ್ವರಿತವಾಗಿ ಮಾರಾಟ ವಾಗುವ ಸರಕುಗಳ ರಂಗ’ದಿಂದಲೇ (ಎಫ್ಎಂಸಿಜಿ) ಹರಿದುಬರಲಿದೆ.
ಲಾಕ್‌ಡೌನ್ ಮುಗಿದ ನಂತರ ಈ ರಂಗ ಜಾಹೀರಾತುಗಳಿಗಾಗಿ ಮೀಸಲಿಡುವ ಮೊತ್ತವನ್ನು ಶೇ. 38ರಷ್ಟು ಹೆಚ್ಚಿಸಿಕೊಂಡಿವೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ಹೇಳಿದೆ. ಇನ್ನುಳಿದಂತೆ, ಇ-ಕಾಮರ್ಸ್ ರಂಗದ ಸಂಸ್ಥೆಗಳು ಶೇ. 30ರಷ್ಟು ಜಾಹೀರಾತು ನೀಡಿದರೆ, ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳು ಶೇ. 9ರಷ್ಟು ಜಾಹೀರಾತು ಬಜೆಟ್ ಅನ್ನು ಹೆಚ್ಚು ಮಾಡಿವೆ ಎಂದು ಹೇಳಲಾಗಿದೆ.
ಮತ್ತೂಂದೆಡೆ, ಗ್ರೂಪ್-ಎಂ ಎಂಬ ಸಂಸ್ಥೆ ಕೂಡ ತನ್ನದೇ ಆದ ವರದಿಯೊಂದನ್ನು ಸಿದ್ಧಪಡಿಸಿದ್ದು ಅದರಲ್ಲಿ 2021 ರಲ್ಲಿ ಭಾರತೀಯ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ರಂಗಗಳಿಗೆ ಅವರು ಸಾಮಾನ್ಯವಾಗಿ ಪಡೆಯುತ್ತಿದ್ದ ಜಾಹೀರಾತುಗಳಿಗಿಂತ ತಲಾ ಶೇ. 23ರಷ್ಟು ಜಾಹೀರಾತು ವೃದ್ಧಿ ಕಾಣಲಿವೆ ಎಂದು ಅಂದಾಜಿಸಿದೆ.
*16,100 ಕೋಟಿ ರೂ. ಮುದ್ರಣ ಮಾಧ್ಯಮಕ್ಕೆ ಹರಿದು ಬರಲಿರುವ ಜಾಹೀರಾತುಗಳ ಅಂದಾಜು ಮೊತ್ತ
*68,325 ಕೋಟಿ ರೂ. ಭಾರತೀಯ ಮಾಧ್ಯಮ ರಂಗಕ್ಕೆ ಹರಿದು ಬರಲಿರುವ ಒಟ್ಟಾರೆ ಜಾಹೀರಾತು ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.