ಮಂಗಳನ ಅಂಗಳಕ್ಕೆ ರೋವರ್ ಇಳಿಸುವಲ್ಲಿ ಭಾರತ ಮೂಲದ ಸ್ವಾತಿ ಮೋಹನ್ ಯಶಸ್ವಿ..!
ಡಾ. ಸ್ವಾತಿ ಮೋಹನ್ ಯಾರು..?
Team Udayavani, Feb 19, 2021, 1:22 PM IST
ವಾಷಿಂಗ್ಟನ್ : ನಾಸಾದ ರೋವರ್ ಮಿಷನ್ ಮಂಗಳನ ಅಂಗಳಕ್ಕೆ ಯಶಸ್ವಿಯಾಗಿ ಇಳಿದಿದೆ. ಮಂಗಳ ಗ್ರಹದ ಮೇಲೆ ಏನ್ಶಿಯಂಟ್ ಜೀವಿಗಳ ವಾಸದ ಬಗ್ಗೆ ಹಾಗೂ ಅಲ್ಲಿ ಖಗೋಳ ವಿಜ್ಞಾನದ ಅನ್ವೇಷಣೆಗಾಗಿ ರೋವರನ್ನು ಕಳುಹಿಸಲಾಗಿತ್ತು.
ನಾಸಾದ ಮಹತ್ವಾಕಾಂಶೆಯ ಯೋಜನೆಯೆಂದು ಹೇಳಲಾಗುತ್ತಿದ್ದ ರೋವರ್ ಯಶಸ್ವಿಯಾಗಿ ಮಂಗಳನ ಅಂಗಳಕ್ಕೆ ತಲುಪಿರುವಲ್ಲಿ ಭಾರತ ಮೂಲದ ಮಹಿಳೆಯೋರ್ವರ ಪಾಲಿರುವುದು ಇಡೀ ಭಾರತೀಯರಿಗೆ ಹೆಮ್ಮೆ ತರುವಂತಹ ವಿಚಾರವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಹೌದು, ಈ ರೋವರ್ ನ ನಿಯಂತ್ರಣ ಹಾಗೂ ಪಥ ಮಾರ್ಗದರ್ಶನ ಇಂಜಿನಿಯರ್ ಆಗಿದ್ದವರು ಡಾ. ಸ್ವಾತಿ ಮೋಹನ್, ಭಾರತದ ಮೂಲದವರು.
ಓದಿ : 391ನೇ ಛತ್ರಪತಿ ಶಿವಾಜಿ ಜಯಂತಿ : ಪ್ರಧಾನಿ ಸೇರಿ ಹಲವು ಪ್ರಮುಖ ನಾಯಕರಿಂದ ಶುಭಾಶಯ
ಈ ಐತಿಹಾಸಿಕ ಯಶಸ್ವಿ ಕಾರ್ಯಕ್ಕೆ ಭಾರತ ಮೂಲದ ಮಹಿಳೆಯೋರ್ವರ ನಿರ್ದೇಶನ ಇತ್ತು ಎನ್ನುವುದೇ ಸಹಸ್ರ ಸಹಸ್ರ ಭಾರತೀಯರಿಗೆ ಸಂತೋಷದ ವಿಚಾರವಾಗಿದೆ. ಅದರಲ್ಲೂ ಕರ್ನಾಟಕದ ಹಿನ್ನಲೆಯವರು ಎನ್ನುವುದು ಇನ್ನೂ ದೊಡ್ಡ ಹೆಮ್ಮೆ.
ಡಾ. ಸ್ವಾತಿ ಮೋಹನ್ ಯಾರು..?
ಅಮೇರಿಕಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಕನ್ನಡಿಗರಾದ ಜ್ಯೋತಿ ಹಾಗೂ ಮೋಹನ್ ದಂಪತಿಗಳ ಪುತ್ರಿ, ಡಾ. ಸ್ವಾತಿ ಮೋಹನ್.
ಕ್ಯಾಲಿಫೋರ್ನಿಯಾದ ನಾಸಾದ ನಿಯಂತ್ರಣ ಕೊಠಡಿಯಲ್ಲಿ ಗೈಡೆನ್ಸ್ ಆ್ಯಂಡ್ ನೇವಿಗೇಶನ್ ಹಾಗೂ ಕಂಟ್ರೋಲ್ ಯೋಜನೆಯ ತಂಡದ ನಡುವೆ ಸ್ವಾತಿ ಯಶಸ್ವಿಯಾಗಿ ರೋವರ್ ನ್ನು ಮಂಗಳನ ಅಂಗಳಕ್ಕೆ ಇಳಿಸಿದ್ದಾರೆ.
ನಾಸಾ ವಿಜ್ಞಾನಿ ಡಾ ಮೋಹನ್ ಅವರು ಕೇವಲ ಒಂದು ವರ್ಷದವರಾಗಿದ್ದಾಗ ಭಾರತದಿಂದ ಅಮೆರಿಕಕ್ಕೆ ತಮ್ಮ ತಂದೆ ತಾಯಿಯವರೊಂದಿಗೆ ವಲಸೆ ಬಂದರು. ಸ್ವಾತಿ, ತಮ್ಮ ಬಾಲ್ಯದ ಬಹು ಭಾಗವನ್ನು ಉತ್ತರ ವರ್ಜೀನಿಯಾ-ವಾಷಿಂಗ್ಟನ್ ಡಿಸಿ ಮೆಟ್ರೋ ಪ್ರದೇಶದಲ್ಲಿ ಕಳೆದಿದ್ದಾರೆ. 9ನೇ ವಯಸ್ಸಿನಲ್ಲಿ, ಮೊದಲ ಬಾರಿಗೆ ವೀಕ್ಷಿಸಿದ ‘ಸ್ಟಾರ್ ಟ್ರೆಕ್'(ಅಮೇರಿಕನ್ ಟೆಲಿವಿಷನ್ ಸೀರೀಸ್) ಸ್ವಾತಿಯವರನ್ನು ಪ್ರಭಾವಿಸಿತು.
ಓದಿ : ಯಕ್ಷರಂಗದ ಸಿಡಿಲಮರಿ ಡಾ.ಶ್ರೀಧರ ಭಂಡಾರಿ ನಿಧನ: ಕೊಳ್ತಿಗೆ ನಾರಾಯಣ ಗೌಡರಿಂದ ನುಡಿ ನಮನ
ಸ್ವಾತಿ, ತನ್ನ 16 ವರ್ಷದ ತನಕ ಶಿಶು ವೈದ್ಯರಾಗಲು ಬಯಸಿದ್ದರು. ಆದಾಗ್ಯೂ, ಅವರ ಮೊದಲ ಭೌತಶಾಸ್ತ್ರ ತರಗತಿ ಮತ್ತು ಅವರಿಗಿದ್ದ ಉತ್ತಮ ಶಿಕ್ಷಕರ ಸಲಹೆಯ ಮೇರೆಗೆ, ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಆಸಕ್ತಿಯನ್ನು ಮುಂದುವರಿಸುವ ಉದ್ದೇಶದಿಂದ “ಎಂಜಿನಿಯರಿಂಗ್” ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡರು.
ಡಾ. ಸ್ವಾತಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿ ಪಡೆದಿದ್ದಾರೆ ಮತ್ತು ಏರೋನಾಟಿಕ್ಸ್ ಎಂ ಐ ಟಿ ಯಿಂದ ಎಂ ಎಸ್ ಮತ್ತು ಪಿ ಎಚ್ ಡಿ ಪೂರ್ಣಗೊಳಿಸಿದ್ದಾರೆ. ಸಿಎ ಪಾಸಡೆನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯಲ್ಲಿ ಮೊದಲಿನಿಂದಲೂ ಸ್ವಾತಿ ರೋವರ್ ಮಿಷನ್ ನ ವಿಜ್ಞಾನಿಗಳ ತಂಡದಲ್ಲಿದ್ದರು, ಡಾ.ಮೋಹನ್ ಅವರು ನಾಸಾದ ವಿವಿಧ ಪ್ರಮುಖ ಕಾರ್ಯಗಳಲ್ಲಿ ಪಾಲ್ಪಡೆದಿದ್ದಾರೆ. ಭಾರತೀಯ-ಅಮೇರಿಕನ್ ವಿಜ್ಞಾನಿ ಡಾ. ಸ್ವಾತಿ ಕ್ಯಾಸಿನಿ (ಶನಿಯ ಒಂದು ಮಿಷನ್) ಮತ್ತು ಗ್ರೇಲ್ (ಚಂದ್ರನಲ್ಲಿಗೆ ಒಂದು ಜೋಡಿ ರಚನೆಯ ಬಾಹ್ಯಾಕಾಶ ನೌಕೆಯ ಉಡಾವಣೆ) ಯೋಜನೆಗಳಲ್ಲಿ ಕೆಲಸ ಮಾಡಿದ್ದು, ನುರಿತ ವಿಜ್ಞಾನಿಯಾಗಿದ್ದಾರೆ.
ಇನ್ನು, ಬರೋಬ್ಬರಿ 203 ದಿನಗಳನ್ನು ತೆಗೆದುಕೊಂಡು ಈ ರೋವರ್ ಮಂಗಳನ ಅಂಗಳಕ್ಕಿಳಿದಿದೆ. ಸುಮಾರು 470 ರಿಂದ 472 ಮಿಲಿಯನ್ ಕಿಲೋಮೀಟರ್ ದೂರ ಈ ರೋವರ್ ತಲುಪಿದೆ. ಸದ್ಯಕ್ಕೆ ಪ್ರಾಥಮಿಕ ಹಂತದ ಯಶಸ್ವಿ ಕಂಡಿದ್ದು, ಮಂಗಳನ ಮೇಲ್ಮೈನಲ್ಲಿ ಏನ್ಶಿಯಂಟ್ ಸೂಕ್ಷ್ಮ ಜೀವಿಗಳ ವಾಸದ ವಿಚಾರವನ್ನೊಳಗೊಂಡು ಅಲ್ಲಿನ ಹಲವು ಮಾಹಿತಿಗಳನ್ನು ಭೂಮಿಗೆ ಕಳುಹಿಸಲಿದೆ.
Touchdown confirmed. The #CountdownToMars is complete, but the mission is just beginning. pic.twitter.com/UvOyXQhhN9
— NASA (@NASA) February 18, 2021
ಓದಿ : ಮಾರುಕಟ್ಟೆಗೆ ಲಗ್ಗೆ ಇಡಲಿರುವ Moto E7 Power… ವೈಶಿಷ್ಟ್ಯತೆಗಳೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.