ತುಳು ಚಿತ್ರರಂಗ ಉಳಿಯಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು: ದೇವದಾಸ್ ಕಾಪಿಕಾಡ್
Team Udayavani, Feb 19, 2021, 3:03 PM IST
ತುಳು ಚಿತ್ರರಂಗ ಇಂದಿಗೆ 50 ವರ್ಷಗಳನ್ನು ಪೂರೈಸಿದೆ. 1971ರ ಫೆ 19ರಂದು ಬಿಡುಗಡೆಯಾದ ಮೊದಲ ಚಿತ್ರ ‘ಎನ್ನ ತಂಗಡಿ’ ಯಿಂದ ಇಂದಿನವರೆಗೆ ನೂರಾರು ಚಿತ್ರಗಳು ಬಿಡುಗಡೆಯಾಗಿದೆ. ಈ ಸಮಯದಲ್ಲಿ ಚಿತ್ರರಂಗ ಹಲವಾರು ಏಳುಬೀಳುಗಳನ್ನು ಕಂಡಿದೆ. ತಂತ್ರಜ್ಞಾನ ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಗತಿ ಸಾಧಿಸಿದೆ.
ಕೋಸ್ಟಲ್ ವುಡ್ ನ ಈ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರೊಂದಿಗೆ ಉದಯವಾಣಿ ಡಾಮ್ ಕಾಮ್ ನಡೆಸಿದ ಮಾತುಕತೆ ಸಾರಾಂಶ ಇಲ್ಲಿದೆ…
ಚಿತ್ರರಂಗ ಈಗ ಹೇಗಿದೆ ಸರ್?
ತುಳು ಚಿತ್ರರಂಗದ ಪರಿಸ್ಥಿತಿ ಮೊದಲು ತುಂಬಾ ಒಳ್ಳೆಯದಿತ್ತು, ಆದರೆ ಹಾಳಾಗಿದೆ. ಇಲ್ಲಿ ಥಿಯೇಟರ್ ನದ್ದೇ ದೊಡ್ಡ ಸಮಸ್ಯೆ. ಇಲ್ಲಿನ ಥಿಯೇಟರ್ ಮಾಲಕರು ಬೇರೆ ಭಾಷೆಗೆ ಅವಕಾಶ ಕೊಡುತ್ತಾರೆ. ತುಳು ಭಾಷೆಗೆ ಸಿಂಗಲ್ ಸ್ಕ್ರೀನ್ ಸರಿಯಾಗಿ ಸಿಗುವುದಿಲ್ಲ. ಇದು ಸಮಸ್ಯೆ.
ಒರಿಯಾರ್ದ್ ಒರಿ ಅಸಲ್ ಚಿತ್ರ ದೊಡ್ಡ ಹಿಟ್ ಆದ ನಂತರ ಎಲ್ಲರಿಗೂ ಸಿನಿಮಾ ಹುರುಪು ಬಂತು. ಹೀಗಾಗಿ ಒಂದು ಕಾಲದಲ್ಲಿ ಬೆನ್ನುಬೆನ್ನಿಗೆ ಚಿತ್ರಗಳು ಬಂದವು. ಆದರೆ ಕೆಲವು ಮಾತ್ರ ಹಿಟ್ ಆಯ್ತು, ಒಂದಷ್ಟು ಕಳಪೆ ಗುಣಮಟ್ಟದ ಚಿತ್ರಗಳೂ ಬಂದವು. ಇದು ಪ್ರೇಕ್ಷಕರಿಗೂ ನಿರಾಸೆ ಉಂಟುಮಾಡಿದ್ದು ಮಾತ್ರ ಸುಳ್ಳಲ್ಲ.
ನಿರ್ಮಾಪಕರ ಪರಿಸ್ಥಿತಿ ಹೇಗಿದೆ? ಅವರೆಷ್ಟು ಸೇಫ್?
ಥಿಯೇಟರ್ ಸಮಸ್ಯೆಯಿಂದ ನಿರ್ಮಾಪಕರು ಬಂಡವಾಳ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ಥಿಯೇಟರ್ ಮಾಲಕರು ದೊಡ್ಡ ಹಂಚಿಕೆದಾರರಿಗೆ ಪ್ರಾಮುಖ್ಯತೆ ಕೊಡುತ್ತಾರೆ. ಇದರಿಂದ ತುಳು ಸಿನಿಮಾಗಳು ಬಹುಬೇಗನೆ ಹೊರಬೀಳಬೇಕಾದ ಪರಿಸ್ಥಿತಿಯಿದೆ. ಹಿಂದೆ ಜ್ಯೋತಿ ಟಾಕೀಸ್ ಉತ್ತಮ ಸ್ಥಳದಲ್ಲಿತ್ತು, ಇದೀಗ ಅದೂ ಮುಚ್ಚಿದ್ದು, ನಮಗೆ ಸರಿಯಾದ ಸಿಂಗಲ್ ಸ್ಕ್ರೀನ್ ಥಿಯೇಟರ್ ಸಿಗದ ಪರಿಸ್ಥಿತಿಯಿದೆ.
ಇಷ್ಟು ವರ್ಷಗಳಲ್ಲಿ ಕಾನ್ಸೆಪ್ಟ್ ಗಳಲ್ಲಿ ಏನು ಬದಲಾವಣೆಯಾಗಿದೆ?
ಮೊದಲು ಕಥಾ ಹಂದರವೇ ಪ್ರಮುಖವಾದ ಚಿತ್ರಗಳಿದ್ದವು. ಆದರೆ ಈಗ ಹಾಸ್ಯ ಪ್ರಧಾನವಾಗಿದೆ. ನಮ್ಮ ಪ್ರಮುಖ ಪ್ರೇಕ್ಷಕರು ರಂಗಭೂಮಿ ಪ್ರದರ್ಶನಗಳನ್ನು ನೋಡಿಕೊಂಡು ಬಂದ ಪ್ರೇಕ್ಷಕರು. ಅವರು ಹಾಸ್ಯವನ್ನೇ ಬಯಸುತ್ತಾರೆ. ಹಾಸ್ಯವನ್ನು ಬಿಟ್ಟು ಬೇರೆ ಜಾನರ್ ನಲ್ಲಿ ಬಂದ ಸಿನಿಮಾಗಳು ಯಶಸ್ವಿಯಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಾವು ಬದಲಾಗಬೇಕಿದೆ. ಒಮ್ಮೆಲೆ ಇದು ಸಾಧ್ಯವಾಗದು. ನಿಧಾನವಾಗಿ ನಡೆಯುವ ಪ್ರಕ್ರಿಯೆಯಿದು. ಇದೀಗ ಅರ್ಜುನ್ ಕಾಪಿಕಾಡ್ ನಿರ್ದೇಶನದ ‘ಅಬತರ’ ಸಿನಿಮಾದಲ್ಲಿ ಈ ರೀತಿ ಪ್ರಯತ್ನ ಮಾಡುತ್ತಿದ್ದೇವೆ.
ರಂಗಭೂಮಿ ಮತ್ತು ಸಿನಿಮಾ
ನಮ್ಮ ರಂಗಭೂಮಿ ಈಗಲೂ ಸಿನಿಮಾಕ್ಕಿಂತ ಸ್ಟ್ರಾಂಗ್ ಇದೆ. ಹಿಂದೆ ನಾವು ಒಂದು ವರ್ಷದಲ್ಲಿ 375 ಶೋ ಮಾಡಿದ್ದೇವೆ. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ತಾಂತ್ರಿಕವಾಗಿ ಹಿಟ್ ಸಿನಿಮಾ ನೀಡಿದ ನಂತರ ನಾವು ತೆಲಿಕೆದ ಬೊಳ್ಳಿ ಚಿತ್ರ ಮಾಡಿದೆವು. ಮುಂದೆ ರಂಗಭೂಮಿಯಲ್ಲಿದ್ದ ಬಹುತೇಕರು ಈಗ ಚಿತ್ರರಂಗದಲ್ಲಿದ್ದೇವೆ.
ಮುಂದಿನ ದಿನಗಳಲ್ಲಿ ಚಿತ್ರರಂಗ ಹೇಗಿರಬೇಕು?
ಚಿತ್ರರಂಗ ಬೆಳವಣಿಗೆ ಆಗಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು. ತುಳು ಸಿನಿಮಾಗಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ ಆಗಬೇಕು. ಮಲ್ಟಿಪ್ಲೆಕ್ಸ್ ನಿಂದ ಲಾಭವಿಲ್ಲ. ನಿರ್ಮಾಪಕರು ಉಳಿಯಬೇಕು. ಹೊಸಬರು ತಾಂತ್ರಿಕವಾಗಿ ಕಲಿತು ಬರಬೇಕು. ಬೇರೆ ಸಿನಿಮಾಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಬೇಕು. ನಂತರ ಅನುಭವದೊಂದಿಗೆ ಸಿನಿಮಾ ಮಾಡಬೇಕು. ಆಗ ಬೆಳವಣಿಗೆ ಸಾಧ್ಯ.
ಕೀರ್ತನ್ ಶೆಟ್ಟಿ ಬೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.