ತಾಜ್ಯ ನಿರ್ವಹಣೆ ಉತ್ಪಾದದಕರದ್ದೆ ಹೊಣೆ
ಪ್ಲ್ಯಾಸ್ಟಿಕ್ ನಿಷೇಧದ ಬಗ್ಗೆ ಕುರುಡುತನ ಪ್ರದರ್ಶನ ಬೇಡ |ರೈಲ್ವೆ ನಿಲ್ದಾಣಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಸೂಚನೆ
Team Udayavani, Feb 19, 2021, 3:06 PM IST
ಹುಬ್ಬಳ್ಳಿ: ಪರಿಸರ ಕಾಯ್ದೆಯಲ್ಲಿ ತಿಳಿಸಿರುವಂತೆ ತ್ಯಾಜ್ಯ ಉತ್ಪಾದಕರೇ ಅದರ ನಿರ್ವಹಣೆಯ ಹೊಣೆ ಹೊರಬೇಕು. ಪ್ರಾಥಮಿಕ ಹಂತದಲ್ಲಿ ಹಸಿರು, ಒಣ ಹಾಗೂ ವೈದ್ಯಕೀಯ ತ್ಯಾಜ್ಯ ವಿಂಗಡಣೆಗೆ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾ ಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಸುಭಾಶ ಅಡಿ ಹೇಳಿದರು.
ನಗರದಲ್ಲಿ ಘನತ್ಯಾಜ್ಯ, ಕಟ್ಟಡ ತಾಜ್ಯ, ವೈದ್ಯಕೀಯ ತಾಜ್ಯ ನಿರ್ವಹಣೆ ನಿಯಮಗಳು 2016 ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ರೈಲು ನಿಲ್ದಾಣ, ರೈಲ್ವೆ ಬ್ರಿಡ್ಜ್ ಹಾಗೂ ಹಳಿಗಳ ಬಳಿ ಸಾರ್ವಜನಿಕರು ತ್ಯಾಜ್ಯಗಳನ್ನು ತಂದು ಸುರಿಯುತ್ತಾರೆ. ಯಾವುದೇ ಗುಣಮಟ್ಟದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇ ಧಿಸಲಾಗಿದೆ. ಸಾರ್ವಜನಿಕರು ಪ್ರಯಾಣದ ಅವ ಧಿಯಲ್ಲಿ ಪ್ಲಾಸ್ಟಿಕ್ ಬಳಸದಂತೆ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ನೈಋತ್ಯ ಮುಖ್ಯ ವ್ಯವಸ್ಥಾಪಕರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕುರುಡುತನ ಪ್ರದರ್ಶಿಸುವಂತಿಲ್ಲ. ನಿಲ್ದಾಣಗಳಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಿ. ನಿಯಮ ಮೀರಿದವರಿಗೆ ದಂಡ ವಿ ಧಿಸಿ ಕ್ರಮ ಕೈಗೊಳ್ಳಿ. ತಿಂಗಳಿಗೆ 300 ಟನ್ ತ್ಯಾಜ್ಯ ಉತ್ಪಾದಿಸುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಕಡ್ಡಾಯವಾಗಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಹೊಂದಿರಬೇಕು. ರೈಲ್ವೆ ನಿಲ್ದಾಣಗಳಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಿ ಎಂದು ಸೂಚನೆ ನೀಡಿದರು.
ಸಂಸ್ಕರಣೆಗೊಳ್ಳದೇ ಯಾವುದೇ ಕಸ ಭೂಮಿಗೆ ಸೇರಬಾರದು. ಮಹಾನಗರ ಪಾಲಿಕೆ ಇದರ ಬಗ್ಗೆ ಕ್ರಮ ವಹಿಸಬೇಕು. ಕಟ್ಟಡ ಪರವಾನಗಿ ನೀಡುವ ಸಂದರ್ಭದಲ್ಲಿ ಕಟ್ಟಡ ತ್ಯಾಜ್ಯಗಳ ವಿಲೇವಾರಿ ಬಗ್ಗೆ ನಿರ್ಮಾತೃಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಿ. ಹಳೇ ಕಟ್ಟಡ ತೆರವುಗೊಳಿಸಿದ ಸಂದರ್ಭದಲ್ಲಿ ಬರುವ ಮರುಬಳಕೆವಸ್ತುಗಳನ್ನು ಹೊಸ ನಿರ್ಮಾಣದ ಸಂದರ್ಭದಲ್ಲಿ ಬಳಸಬೇಕು. ಕಟ್ಟಡ ತ್ಯಾಜ್ಯಗಳಿಂದ ತಯಾರಿಸಿದ ಫೇವರ್ಸ್ ಇನ್ನಿತರ ವಸ್ತುಗಳನ್ನು ಸರ್ಕಾರದ ಹೊಸ ನಿರ್ಮಾಣ ಕಾಮಗಾರಿಯಲ್ಲಿ ಶೇ.20 ಬಳಸಬೇಕು. ಸ್ವತ್ಛ ಭಾರತ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ತ್ಯಾಜ್ಯ ನಿರ್ವಹಣೆಗಾಗಿ ಅನುದಾನ ಸಲಿಸಲಾಗಿದೆ ಎಂದರು.
ಪಾಲಿಕೆ ಮನೆಗ ಳಿಂದ ವಿಂಗಡಿಸಿದ ಕಸವನ್ನು ಪಡೆದುಕೊಳ್ಳಬೇಕು. ಕಸ ವಿಂಗಡಿಸದವರ ಮೇಲೆ ಕ್ರಮ ಕೈಗೊಳ್ಳಬೇಕು. ಸ್ಯಾನಿಟರಿ ಪ್ಯಾಡ್ ವೈದ್ಯಕೀಯ ತ್ಯಾಜ್ಯವಾಗಿದೆ. ಇದನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ಇದರ ಬಗ್ಗೆ ಜನಜಾಗೃತಿ ಮೂಡಿಸಬೇಕು. ಈ ತ್ಯಾಜ್ಯ ಸಂಗ್ರಹಣೆಗೆ ಘಟಕಗಳನ್ನು ಸ್ಥಾಪಿಸಬೇಕು. ವಿಮಾನ ನಿಲ್ದಾಣ ಹಾಗೂ ವೈದ್ಯಕೀಯ ಸಂಸ್ಥೆಗಳಿಂದ ಸಂಗ್ರಹಿಸುವ ಪಿಪಿಇ ಕಿಟ್ ವೈಜ್ಞಾನಿಕ ರೀತಿಯಲ್ಲಿ ಸುಟ್ಟು ವಿಲೇವಾರಿ ಮಾಡಬೇಕು. ವೈದ್ಯಕೀಯ ತ್ಯಾಜ್ಯಗಳನ್ನು ಸುಡುವ ಘಟಕ ಹಾಗೂ ಉಪಕರಣಗಳು ಪರಿಸರ ನಿಯಂತ್ರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯವಾಗಿದೆ. ಹು-ಧಾ ಸ್ಮಾರ್ಟ್ ಸಿಟಿ ಅಡಿ ಹೊಸದಾಗಿ ನಿರ್ಮಿಸಿದ ರಸ್ತೆಗಳ ಮೇಲೆ ಹಾಗೂ ಇಕ್ಕೆಲಗಳಲ್ಲಿ ನಿರ್ಮಾಣ ಕಾಮಗಾರಿಯ ತ್ಯಾಜ್ಯ ಹಾಗೂ ಧೂಳು ಹಾಗೆಯೇ ಇದೆ. ಇದರ ಬಗ್ಗೆ ಅ ಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಡಿಸಿ ನಿತೇಶ ಪಾಟೀಲ, ನೈಋತ್ಯ ರೈಲ್ವೆ ಜಿ.ಎಂ. ಅಜಯಕುಮಾರ್ ಸಿಂಗ್, ಜಿಪಂ ಸಿಇಒ ಡಾ| ಬಿ. ಸುಶೀಲಾ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ, ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಕುಮಾರ ಖಡಕಬಾವಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Lok Sabha:ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆ ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.