ಕುಡಿವ ನೀರಿಗೆ ಊರೂರು ಅಲೆಯುವ ಸ್ಥಿತಿ!
ಪದೇ ಪದೆ ದುರಸ್ತಿಗೆ ಬರುವ ಶುದ್ಧ ನೀರು ಘಟಕಅ ಧಿಕಾರಿಗಳ ವಿರುದ್ಧ ಗ್ರಾಮಸ್ಥರ ಅಸಮಾಧಾನ
Team Udayavani, Feb 19, 2021, 3:14 PM IST
ಕಲಾದಗಿ: ಬಾಗಲಕೋಟೆ ತಾಲೂಕು ಸರಹದ್ದು ಕೊನೆ ಗ್ರಾಮ ಉದಗಟ್ಟಿ ಗ್ರಾಮಸ್ಥರಿಗೆ ಶುದ್ಧ ನೀರಿಗಾಗಿ ಊರೂರು ಅಲೆಯುವ ಸ್ಥಿತಿ ಬಂದೊದಗಿದೆ.ಶುದ್ಧ ನೀರಿನ ಘಟಕ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕಾದ ಅ ಧಿಕಾರಿಗಳು ನಿರ್ಲಕ್ಷéತೋರುತ್ತಿದ್ದಾರೆಂದು ಆರೋಪಿಸಿರುವ ಉದಗಟ್ಟಿ ಗ್ರಾಮಸ್ಥರು ಅ ಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರಿಪೇರಿಗೆ ಬಂದು ಒಂದು ತಿಂಗಳ ಕಾಲ ಬಂದ್ ಆಗಿತ್ತು, ದುರಸ್ತಿ ಮಾಡಿ ನೀರು ಲಭ್ಯವಾಗುವಂತೆ ಮಾಡಲಾಗಿತ್ತು. ಘಟಕ ಮತ್ತೆ ರಿಪೇರಿಗೆ ಬಂದಿದ್ದು, ಕಳೆದೊಂದು ವಾರದಿಂದ ಬಂದ್ ಆಗಿದೆ. ಪದೇ ಪದೇ ದುರಸ್ತಿಗೆ ಬರುವ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಗ್ರಾಮಸ್ಥರಿಗೆ ಇದ್ದೂ ಇಲ್ಲದಂತಾಗಿದೆ. ದುರಸ್ತಿಗೊಳಿಸಿದ ಕೆಲವೇ ದಿನ ಮಾತ್ರ ನೀರು ಬಂದು, ಮತ್ತೆ ದುರಸ್ತಿಗೆ ಬಂದು ನಿಲ್ಲುತ್ತದೆ. ಪದೇ ಪದೆ ದುರಸ್ತಿಗೆ ಬರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಗ್ರಾಮಸ್ಥರು ಬೇಸತ್ತು ಹೋಗಿದ್ದಾರೆ. ಊರಲ್ಲಿ ಇದು ಇದ್ದರೆಷ್ಟು ಬಿಟ್ಟರೆಷ್ಟು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಅ ಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶುದ್ಧ ನೀರಿಗಾಗಿ ಮೂರ್‍ನಾಲ್ಕು ಕಿಲೋಮೀಟರ್ ದೂರದ ಗ್ರಾಮ ಮುಧೋಳ ತಾಲೂಕಿನ ಜುನ್ನೂರು ಗ್ರಾಮ ಇಲ್ಲವೇ ಪಕ್ಕದ ಶಾರದಾಳ ಗ್ರಾಮಕ್ಕೆ ಹತ್ತಾರು ರೂಪಾಯಿ ಖರ್ಚು ಮಾಡಿ, ಸಮಯ ವ್ಯಯ ಹೋಗುವ ಪರಿಸ್ಥಿತಿ ಇದೆ. ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಿ ಉದಗಟ್ಟಿ ಗ್ರಾಮದವರು ನೀರಿಗಾಗಿ ಊರೂರು ಅಲೆಯುವುದನ್ನು ತಪ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.