ಹೋಟೆಲ್ ಮಾಲೀಕರೊಂದಿಗೆ ಮತ್ತೊಮ್ಮೆ ಸಭೆ
Team Udayavani, Feb 19, 2021, 4:18 PM IST
ಹಾವೇರಿ: ಅಖೀಲ ಭಾರತ 86ನೇ ನುಡಿಜಾತ್ರೆಗೆ ಹಾವೇರಿ ಜಿಲ್ಲೆ ಹೊರತು ಹುಬ್ಬಳ್ಳಿ ಹಾಗೂ ದಾವಣಗೆರೆ ನಗರಗಳಲ್ಲಿ ವಸತಿ ವ್ಯವಸ್ಥೆ ಮಾಡಬೇಕಾಗಿದೆ. ಉಭಯ ನಗರಗಳಲ್ಲಿ ವರ್ಗವಾರು ರೂಂಗಳ ಲಭ್ಯತೆ ಹಾಗೂ ದರಗಳ ಕುರಿತಂತೆ ಮಾಹಿತಿ ಸಂಗ್ರಹಿಸಿ ಆಯಾ ನಗರದ ಹೋಟೆಲ್ ಮಾಲೀಕರೊಂದಿಗೆ ಸಭೆ ಆಯೋಜಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.
ನಗರದ ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿ 86ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ವಸತಿ ವ್ಯವಸ್ಥೆ ಕುರಿತಂತೆ ಜರುಗಿದ ಅಧಿ ಕಾರಿಗಳು ಹಾಗೂ ಹೋಟೆಲ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. ಸಮ್ಮೇಳನಕ್ಕೆ ಅಂದಾಜು 15 ಸಾವಿರ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಸಮ್ಮೇಳನ ನಡೆಯುವ ವಾರದ ಮುಂಚೆ ನಿರ್ದಿಷ್ಟ ಸಂಖ್ಯೆ ದೊರೆಯಲಿದೆ. ಈಗಾಗಲೇ ಹಾವೇರಿ ಜಿಲ್ಲೆಯಲ್ಲಿ ಹೋಟೆಲ್ ಹಾಗೂ ವಿದ್ಯಾರ್ಥಿ ನಿಲಯ, ಸಮುದಾಯ ಭವನಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಗುರುತಿಸಲಾಗಿದೆ. ಅಂದಾಜು 10 ರಿಂದ 12 ಸಾವಿರ ಜನರಿಗೆ ಜಿಲ್ಲೆಯಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಒಂದೊಮ್ಮೆ ಪ್ರತಿನಿಧಿ ಗಳ ನೋಂದಣಿ ಸಂಖ್ಯೆ ಹೆಚ್ಚಾದರೆ ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿ ವಸತಿ ವ್ಯವಸ್ಥೆಗೆ ಹೋಟೆಲ್‌ಗಳು ಅವಶ್ಯ ಬೀಳಲಿದ್ದು, 2000-3000 ಜನರಿಗೆ ಹೊರ ಜಿಲ್ಲೆಯಲ್ಲಿ ವಸತಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ ಎಂದರು.
ದಾವಣಗೆರೆ ಮತ್ತು ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಸಭೆ ಶೀಘ್ರ ಮತ್ತೂಮ್ಮೆ ಕರೆಯಲಾಗುವುದು. ಇದಕ್ಕಿಂತ ಮುಂಚಿತವಾಗಿ ಎರಡು ನಗರಗಳಲ್ಲಿ ಲಭ್ಯವಿರುವ ಕೊಠಡಿ ಹಾಗೂ ದರಗಳ ಪಟ್ಟಿ ಹಾಗೂ ಸಮ್ಮೇಳನಕ್ಕೆ ತಾವು ಒದಗಿಸಬಹುದಾದ ಕೊಠಡಿಗಳ ಸಂಖ್ಯೆ ಕುರಿತಂತೆ ಮಾಹಿತಿ ನೀಡಲು ಕೋರಿದ ಅವರು ಹೋಟೆಲ್ ಮಾಲೀಕರಿಗೂ ನಷ್ಟವಾಗದಂತೆ ಹಾಗೂ ಸಮ್ಮೇಳನಕ್ಕೂ ಹೆಚ್ಚು ಹೊರೆ ಬೀಳದಂತೆ ಪರಸ್ಪರ ಚರ್ಚಿಸಿ ಕೊಠಡಿಗಳ ದರ ಅಂತಿಮಗೊಳಿಸಲು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಎಸ್.ಯೋಗೇಶ್ವರ, ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ಯಲ್ಲಪ್ಪ ಆಲದಕಟ್ಟಿ, ಕಾರ್ಯದರ್ಶಿ ಎಸ್.ಎಸ್. ಬೇವಿನಮರದ, ವಸತಿ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಮಠದ, ದಾವಣಗೆರೆ ಹೋಟೆಲ್ ಮಾಲೀಕರ ಸಂಘದ ಪ್ರತಿನಿ ಧಿ ರಮೇಶ ಸೇರಿದಂತೆ ಸ್ಥಳೀಯ ಹೋಟೆಲ್ ಮಾಲೀಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.