ಭಕ್ತರ ಹೃದಯ ಗೆದ್ದ ಪ್ರಸನ್ನ  ಪಂಪಾ ವಿರೂಪಾಕ್ಷೇಶ್ವರ


Team Udayavani, Feb 19, 2021, 4:37 PM IST

veerupakshi tepmple

ಕೊಪ್ಪಳ: ಗಂಗಾವತಿಯ ಹಿರೇಜಂತಗಲ್‌ ಒಂದು ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು, ಇಲ್ಲಿಯ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯ ಸೇರಿದಂತೆ ಶೈವ ಪರಂಪರೆಯ ಪ್ರಾಚೀನ ದೇವಾಲಯಗಳನ್ನು ಇಲ್ಲಿ ಕಾಣಬಹುದಾಗಿದೆ.

ಭಾರತೀಯ ಸಾಹಿತ್ಯದಲ್ಲಿ ಧಾರ್ಮಿಕ-ಸಾಂಸ್ಕೃತಿಕವಾಗಿ ಹಿರೇಜಂತಗಲ್‌ ಸ್ಥಾನ ಪಡೆದಿದೆ. ವಿಜಯನಗರ ಅರಸರು ರಾಜ್ಯದೆಲ್ಲೆಡೆ ಶೈವ ಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಿದ್ದರು. ತಾಲೂಕಿನ ಹನುಮನಹಳ್ಳಿ ಹತ್ತಿರ ಋಷಿಮುಖ ಪರ್ವತಕ್ಕೆ ಹೊಂದಿಕೊಂಡಿರುವ ಚಂದ್ರಮೌಳೇಶ್ವರ, ಹಿರೇಜಂತಗಲ್‌ನಲ್ಲಿರುವ ಪ್ರಸನ್ನ ಪಂಪಾ ವಿರೂಪಾಕ್ಷ ದೇವಾಲಯಗಳು ಹಂಪಿಯಲ್ಲಿರುವ ವಿರೂಪಾಕ್ಷೇಶ್ವರ ದೇವಾಲಯದಷ್ಟೇ ಮಹತ್ವ ಪಡೆದಿವೆ.

ವಿಜಯನಗರ ಅರಸರ ದೈವವಾಗಿದ್ದ ವಿರೂಪಾಕ್ಷ ದೇವಾಲಯ ಪ್ರವರ್ಧಮಾನಕ್ಕೆ ಬಂದ ನಂತರ ಇಲ್ಲಿಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗುತ್ತದೆ. ಅರಸರು ಈ ದೇವಾಲಯ ಹೋಲುವ ದೇವಾಲಯಗಳನ್ನು ನಿರ್ಮಿಸಲು ತೀರ್ಮಾನಿಸಿದರು. ಸಂಗಮ ವಂಶದ ಪ್ರಖ್ಯಾತ ದೊರೆ ಪ್ರೌಢದೇವರಾಯ ಸಾಹಿತ್ಯ, ಕಲೆ, ವಾಸ್ತುಶಿಲ್ಪಕಲಾ ಕ್ಷೇತ್ರಕ್ಕೆ ಹೆಚ್ಚಿನ ಪೊÅàತ್ಸಾಹ ನೀಡಿದ್ದ. ಪ್ರೌಢದೇವರಾಯ ಹಿರೇಜಂತಗಲ್‌ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯ ನಿರ್ಮಿಸಿದ ಕುರಿತು ಅರಸನ ಮಹಾದಂಡನಾಯಕ ಹಾಗೂ ಕವಿ ಲಕ್ಕಣ್ಣ ದಂಡೇಶ ತನ್ನ ಶಿವತತ್ವ ಚಿಂತಾಮಣಿಯಲ್ಲಿ (ಕಾಲ 1450) ಕೊಂಡಾಡಿದ್ದಾನೆ.

ಪ್ರೌಢದೇವರಾಯನ ಕಾಲದಲ್ಲಿ ಹಿರೇಜಂತಗಲ್‌ ಧಾರ್ಮಿಕವಾಗಿ ಹಂಪಿಯಷ್ಟೇ ಮಹತ್ವ ಪಡೆದಿತ್ತು. ಮುಕ್ಕುಂಪಿ ಹತ್ತಿರ ಕೆರೆ ನಿರ್ಮಿಸಿರುವ ಮತ್ತು ಕನಕಗಿರಿ ದೇವಾಲಯಕ್ಕೆ ದತ್ತಿಗಳನ್ನು ನೀಡಿರುವ ಕುರಿತು ಹಿರೇಬೆಣಕಲ್‌ ಕೆರೆ ಹತ್ತಿರ ಇರುವ ಕಲ್ಲಿನಲ್ಲಿ ಕೆತ್ತಿದ ಅಸ್ಪಷ್ಟ ಶಾಸನದಲ್ಲಿ ಉಲ್ಲೇಖೀಸಲಾಗಿದೆ.

ಹಿರೇಜಂತಗಲ್‌ನಲ್ಲಿರುವ ವೆಂಕಟೇಶ್ವರ, ಕೇಶವ, ಬ್ರಹ್ಮದೇವರು, ವೀರಭದ್ರೇಶ್ವರ,ಬೆಟ್ಟದ ಮೇಲಿನ ಈರಣ್ಣ ಗುಡಿ, ಕೋಟಿ ಶಂಕರ ದೇವರು ಹಾಗೂ ಆಂಜನೇಯ ದೇವಾಲಯಗಳನ್ನು ಕೃಷ್ಣದೇವರಾಯ ಮತ್ತು  ಅಚ್ಯುತ ದೇವರಾಯನ ಕಾಲದಲ್ಲಿ ನಿರ್ಮಿಸಿರುವ ಕುರಿತು ಉಲ್ಲೇಖೀಸಲಾಗಿದೆ. ಅಚ್ಯುತದೇವರಾಯ(1529-42)ತನ್ನ ತಂದೆ ನರಸಣ್ಣ ನಾಯಕನಿಗೆ ಪುಣ್ಯ ಪ್ರಾಪ್ತಿಯಾಗಬೇಕೆಂದು ಹಿರೇಜಂತಗಲ್‌ ಪ್ರಸನ್ನ  ವಿರೂಪಾಕ್ಷ ದೇವರಿಗೆ ಬಳ್ಳಾರಿ ಹತ್ತಿರ ಇರುವ ಚಿಟಿಕಿನಹಾಳು ಗ್ರಾಮವನ್ನು ದಾನವಾಗಿ ಸಮರ್ಪಣೆ  ಮಾಡಿದ ಕುರಿತು ಇದೇ ಗ್ರಾಮದ ಶಿಲಾಶಾಸನದಲ್ಲಿ ತಿಳಿಸಲಾಗಿದೆ.

ಗಂಗಾವತಿ ಪರಿಸರದಲ್ಲಿ ಪ್ರೌಢದೇವರಾಯನ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳೇ ಹೆಚ್ಚಿವೆ. ಆನೆಗೊಂದಿಯ ಜೈನಬಸದಿ, ಕನಕಗಿರಿಯ ಕನಕಾಚಲ ಲಕ್ಷ್ಮಿ ನರಸಿಂಹ ದೇವಾಲಯ ಪ್ರಮುಖವಾಗಿವೆ. ಹಿರೇಜಂತಗಲ್‌ ಪ್ರಸನ್ನ ಪಂಪಾ ವಿರೂಪಾಕ್ಷ ದೇವಾಲಯ ಸಂಪೂರ್ಣ ವಿಜಯನಗರ ವಾಸ್ತುಶೈಲಿಯಲ್ಲಿದ್ದು, ಹಂಪಿ ದೇವಾಲಯಗಳನ್ನು ನೆನಪಿಸುತ್ತದೆ.

ಎರಡು ಮಹಾದ್ವಾರ ಮಂಟಪಗಳು, ಮುಖಮಂಟಪ, ಸಭಾಮಂಟಪ ಮತ್ತು ಎರಡು  ಗರ್ಭಗೃಹ(ವಿರೂಪಾಕ್ಷ ಮತ್ತು ಪಂಪಾಂಬಿಕೆ)ಹೊಂದಿ ವಿಶಾಲವಾಗಿದೆ. ದೇವಾಲಯದ ಪ್ರಧಾನ ದ್ವಾರ ಮಂಟಪವು ತನ್ನ ರಚನಾ ವಿನ್ಯಾಸದಿಂದ ಎಲ್ಲರನ್ನೂ ಸೆಳೆಯುತ್ತದೆ.

ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳ ಮಂಟಪಗಳ ಕಂಬಗಳ ಮೇಲಿರುವಂತೆ  ಸಿಂಹ, ಹಂಸ, ಶಂಖವಾದಕ, ಶಂಖು, ಬೆಣ್ಣೆಕೃಷ್ಣ, ಯಕ್ಷ, ಭಕ್ತ, ಶಿವಲಿಂಗ, ಬೇಡತಿ, ಆನೆ, ಲಿಂಗ ಮತ್ತು ಸರ್ಪದ ಚಿತ್ರವನ್ನು ಹಿರೇಜಂತಗಲ್‌ ದೇವಾಲಯದಲ್ಲಿ ಕಾಣಬಹುದಾಗಿದೆ.

ಎರಡನೆಯ ದ್ವಾರ ಮಂಟಪವಿರುವುದು ಪ್ರಾದೇಶಿಕವಾಗಿ ಈ ದೇವಾಲಯದ ವೈಶಿಷ್ಟÂವಾಗಿದೆ. ಇದು ವಾಸ್ತು ರಚನೆಯಲ್ಲಿ ಮೊದಲಿನ ಮಂಟಪದಂತೆಯೇ ಇದೆಯಾದರೂ ಬಾಗಿಲ ಚೌಕಟ್ಟಿನ ಹಿಂಭಾಗದಲ್ಲಿ  ಒಳಮಂಟಪವಿರುವುದು ವಿಶೇಷ. ಇಲ್ಲಿಯ ಕಂಬದ ಮೇಲೆ ವ್ಯಕ್ತಿ ಟೊಪ್ಪಿಗೆಯಾಕಾರದ  ಕಿರೀಟವಿಟ್ಟುಕೊಂಡಿರುವುದು ಕಾಣಬಹುದಾಗಿದೆ. ಪ್ರಧಾನ (ವಿರೂಪಾಕ್ಷ) ಗರ್ಭಗುಡಿ ಮೇಲೆ ಇಟ್ಟಿಗೆ ಗಾರೆಯಿಂದ ನಿರ್ಮಿಸಿದ ಮಧ್ಯಮ ಪ್ರಮಾಣದ ದ್ರಾವಿಡಶೈಲಿ ಏಕತಲ ಶಿಖರವಿದೆ. ಸ್ಥೂಪಿಯ ಕೆಳಗೆ ಶಿಖರದಲ್ಲಿ ನಾಲ್ಕೂ ಮೂಲೆಗಳಲ್ಲಿ ನಂದಿಯ ಶಿಲ್ಪಗಳಿವೆ.

ಚಂಡಿಕೇಶ್ವರ ಗುಡಿ: ದೇವಾಲಯದ ಹೊರಭಾಗದ ಬಲಗಡೆಯಲ್ಲಿ ಚಂಡಿಕೇಶ್ವರನ ಚಿಕ್ಕಗುಡಿ ಇದೆ. ಚಂಡಿಕೇಶ್ವರನ ಚಿಕ್ಕ ಮೂರ್ತಿ ಇದೆ. ಬಲಗೈಯಲ್ಲಿ ಡಮರುಗ, ಎಡಗೈಯಲ್ಲಿ ವ್ಯಾಖ್ಯಾನ ಮುದ್ರೆ ಇದೆ. ತಲೆ ಮೇಲೆ ಕರಂಡು ಕಿರೀಟವಿದೆ. ಚಂಡಿಕೇಶ್ವರ ಶಿವನ ಮಹಾಭಕ್ತನಾಗಿದ್ದನೆಂದೂ ತನ್ನ ತಂದೆ ಕಾಲಿನಿಂದ ಶಿವಲಿಂಗವನ್ನು ಒದ್ದುದ್ದಕ್ಕಾಗಿ ಅವನ ಕಾಲನ್ನೇ ಕಡಿದು ಹಾಕಿದನೆಂದು ಇದನ್ನು ಮೆಚ್ಚಿ ಶಿವ ತಾನು ಧರಿಸಿದ್ದ ಮಾಲೆಯನ್ನು ಅವನಿಗೆ ಹಾಕಿ ತನ್ನ ಗೃಹ ಕೆಲಸದ ಮೇಲ್ವಿಚಾರಕನನ್ನಾಗಿ ಚಂಡಿಕೇಶ್ವರನನ್ನು ನೇಮಕ ಮಾಡಿದನೆಂಬ ಕಥೆ ಇದೆ.

ಪರಿವಾರ ದೇವತಾ ಶಿಲ್ಪಗಳು: ದೇವಾಲಯದಲ್ಲಿ ಹಲವಾರು ಪರಿವಾರ ದೇವತಾ ಶಿಲ್ಪಗಳಿವೆ. ಧಾರ್ಮಿಕ ಪರಂಪರೆ ಹಾಗೂ ಮೂರ್ತಿ ಶಿಲ್ಪಕಲಾ ದೃಷ್ಟಿಯಿಂದ ಗಮನ ಸೆಳೆಯುತ್ತವೆ. ದಕ್ಷಿಣಾಮೂರ್ತಿ, ಕಾಲಭೆ„ರವ, ವೀರಭದ್ರ, ಗಣೇಶ, ಕಾರ್ತಿಕೇಯ, ಸೂರ್ಯ, ಮಹಿಷಾಸುರ ಮರ್ದಿನಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಜಾತ್ರೆ ಉತ್ಸವಗಳು:

ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ಆಚರಿಸುವಂತೆ ಹಿರೇಜಂತಗಲ್‌ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಲ್ಲೂ ಜಾತ್ರೆ-ಉತ್ಸವಗಳು ನಡೆಯುತ್ತಿದ್ದು, ಸಮುದಾಯದ ನಂಬಿಕೆ-ಆಚರಣೆಗಳನ್ನು ಬಿಂಬಿಸುವ ಜಾತ್ರೆ ಆಚರಣೆಗಳು ಸಂಸ್ಕೃತಿ ದೃಷ್ಟಿಯಿಂದ ಮಹತ್ವ ಪಡೆಯುತ್ತವೆ. ಇವುಗಳನ್ನು ದೇಶಿಯ ಸಂಸ್ಕೃತಿಯ ಸಮ್ಮೇಳನಗಳೆಂದೇ ಕರೆಯಬಹುದಾಗಿದೆ. ಜಾತ್ರೆ ಪ್ರತಿ ವರ್ಷ ಮಾಘಶುದ್ಧ ಸಪ್ತಮಿಯಂದು ಜರುಗುತ್ತದೆ. ಈ ಸಂದರ್ಭದಲ್ಲಿ ಹೋಮ ಪುಣ್ಯಾಹವಾಚನ, ನಂದಿ ಧ್ವಜ ಸ್ಥಾಪನೆ, ಕಂಕಣ ಕಟ್ಟುವ ಮತ್ತು ಕಳಶ ಪ್ರತಿಷ್ಠಾಪನೆ ಸಂಪ್ರದಾಯವಿದೆ. ಮಾಘಶುದ್ಧ 2ನೇ ದಿನ(ಬಿದಿಗೆ)ಪುಷ್ಪ ಮಂಟಪದಲ್ಲಿ ಪ್ರಸನ್ನ ಪಂಪಾ ವಿರೂಪಾಕ್ಷನ ಮೂರ್ತಿ ಕೂಡಿಸಿ ಉತ್ಸವ ಜರುಗಿಸಲಾಗುತ್ತದೆ.

ಸಪ್ತಮಿಯವರೆಗೆ ಪ್ರತಿ ದಿನ ಮಯೂರೋತ್ಸವ ಅಶ್ವವಾಹನೋತ್ಸವ ಭಕ್ತರ ಸಮ್ಮುಖದಲ್ಲಿ ಜರುಗುತ್ತದೆ. ರಥ(ತೇರಿನ)ಗಡ್ಡೆಯು ನಿರ್ಮಾಣವಾಗಿ ಒಂದು ಶತಮಾನ ಕಳೆದಿದೆ.

ಟಾಪ್ ನ್ಯೂಸ್

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.