ಕುಂಚಾವರಂ ಹಸಿರು; ಸಮಸ್ಯೆಗಳೇ ಉಸಿರು!
1994ರಿಂದ 1996ರಲ್ಲಿ ಹಲವಾರು ನಕ್ಸ್‌ಲರನ್ನು ಈ ಭಾಗದಲ್ಲಿ ಬಂಧಿಸಲಾಗಿತ್ತು.
Team Udayavani, Feb 19, 2021, 5:27 PM IST
ಚಿಂಚೋಳಿ: “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತೆಲಂಗಾಣ ಗಡಿ ಪ್ರದೇಶದ ಕುಂಚಾವರಂ ಗ್ರಾಮದಲ್ಲಿ ಫೆ.20ರಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ತಾಲೂಕಿನ ಕುಂಚಾವರಂ ಅರಣ್ಯಪ್ರದೇಶದ ಗ್ರಾಮಗಳ ಜನರ ಸ್ಥಿತಿ ಎಲ್ಲರಂತಿಲ್ಲ. ಲಿಂಗ ತಾರತಮ್ಯ, ಅನಕ್ಷರತೆ, ಕಡು ಬಡತನ, ನಿರುದ್ಯೋಗ ಸಮಸ್ಯೆ, ಮಹಿಳೆಯರಲ್ಲಿ ಅಪೌಷ್ಟಿಕತೆ, ತಾಂಡಾಗಳಲ್ಲಿ ಬಡತನದಿಂದಾಗಿ ಹೆಣ್ಣು ಹಸುಗೂಸುಗಳ ಮಾರಾಟ ಹೀಗೆ ಅನೇಕ ಸಮಸ್ಯೆಗಳು ಈ ಭಾಗದಲ್ಲಿವೆ. ಹೆಣ್ಣು ಮಗುವೊಂದು ಮಾರಾಟವಾದ ಕುರಿತು 2001-02ರಲ್ಲಿ ದೇಶದ ಗಮನವನ್ನೇ ಕುಂಚಾವರಂ ಸೆಳೆದಿತ್ತು.
ಕುಂಚಾವರಂ ಗಡಿಪ್ರದೇಶದಲ್ಲಿ ವೆಂಕಟಾಪುರ, ಕುಂಚಾವರಂ, ಶಾದೀಪುರ ಗ್ರಾಮ ಪಂಚಾಯಿತಿಗಳು ಬರುತ್ತವೆ. ಈ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು
17 ತಾಂಡಾ, 11 ಗ್ರಾಮಗಳು ಬರುತ್ತವೆ. ಒಟ್ಟು 29,800 ಜನಸಂಖ್ಯೆ ಇಲ್ಲಿದೆ. ಕುಂಚಾವರಂ ಸುತ್ತಲಿನ ಗ್ರಾಮಗಳಲ್ಲಿ ಹೆಚ್ಚಾಗಿ ತೆಲಗು, ಲಂಬಾಣಿ ಭಾಷೆಯೇ
ಮನೆಮಾತಾಗಿದೆ. ಜೊತೆಗೆ ಬೆರಳೆಣಿಕೆಯಷ್ಟು ಜನ ಕನ್ನಡ ಮಾತನಾಡುವರು ಸಿಗುತ್ತಾರೆ.
ಚಿಂದಾನೂರ, ಜಿಲವರ್ಷ, ಭಿಕ್ಕುನಾಯಕ, ಚಂದುನಾಯಕ, ಸಂಗಾಪುರ, ಮೋಟಿಮೋಕ ತಾಂಡಾ, ಪೆದ್ದಾತಾಂಡಾ, ಲಿಂಗಾನಗರ, ಗೋಪುನಾಯಕ, ವಂಟಿಚಿಂತಾ, ಧರ್ಮಸಾಗರ, ಜವಾಹರ ನಗರ, ಸೇವುನಾಯಕ ತಾಂಡಾಗಳಲ್ಲಿ 2001ರಲ್ಲಿ ಹೆಣ್ಣು ಹಸುಗೂಸುಗಳ ಮಾರಾಟ ಪ್ರಕರಣಗಳು ನಡೆದಿದ್ದವು. ಮುಂದೆ ಇಂತಹ ಪ್ರಕರಣಗಳು ನಡೆಯಬಾರದು ಎನ್ನುವ ಕಾರಣಕ್ಕೆ ಹಾಗೂ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವ ನಿಟ್ಟಿನಲ್ಲಿ ವಂಟಿಚಿಂತಾ ತಾಂಡಾದಲ್ಲಿ ವಸತಿ ಶಾಲೆ ಪ್ರಾರಂಭಿಸಲಾಗಿದೆ.
ಕುಂಚಾವರಂ ಗಡಿಯಲ್ಲಿ ಅನಕ್ಷರಸ್ಥರೇ ಜಾಸ್ತಿ ಇರುವುದರಿಂದ ಸರ್ಕಾರಿ ಸೌಲಭ್ಯಗಳು ಲಭ್ಯವಾಗುತ್ತಿಲ್ಲ. ಕಂದಾಯ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಿಗುವ ಸರ್ಕಾರಿ ಸವಲತ್ತುಗಳು ಸಮರ್ಪಕವಾಗಿ ಈ ಜನತೆಯನ್ನು ತಲುಪಬೇಕಿದೆ.
ಗಡಿಪ್ರದೇಶದಲ್ಲಿ ಇರುವ ಕುಂಚಾವರಂ ಸುತ್ತಲಿನ ಜನರು ಸರ್ಕಾರಿ ಕೆಲಸ, ಕಾರ್ಯಗಳಿಗೆ ತಾಲೂಕು ಕೇಂದ್ರಕ್ಕೆ ದಿನನಿತ್ಯ ತಿರುಗಾಡಬೇಕಾಗಿದೆ. ಪ್ರಮುಖ ಸಮಸ್ಯೆಗಳೆಂದರೆ ವೃದ್ಧಾಪ್ಯ, ಅಂಗವಿಕಲ, ವಿಧವೆ, ಸಂಧ್ಯಾಸುರಕ್ಷಾಯೋಜನೆ, ಪಡಿತರ ಚೀಟಿ ಸೌಲಭ್ಯಗಳು ಜನರಿಗೆ ತಲುಪಬೇಕಾಗಿದೆ. ಈ ನಿಟ್ಟಿನಲ್ಲಿ ತಾಂಡಾ, ಗ್ರಾಮಗಳಲ್ಲಿ ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಇಲ್ಲಿನ ನಿವಾಸಿಗಳ ಮೊಗದಲ್ಲಿ ಹರ್ಷ
ಮೂಡಿದೆ.
ನಕ್ಸಲ್‌ರ ಹಾವಳಿ ಈಗಿಲ್ಲ: ವೆಂಕಟಾಪುರ, ಮಗದುಮಪುರ, ಶಿವರಾಂಪುರ ಭಾಗದಲ್ಲಿ ಕುಂಚಾವರಂ ಭಾಗ ಆಂಧ್ರ ಪ್ರದೇಶದ ಗಡಿ ಭಾಗ ಆಗಿರುವುದರಿಂದ ನಕ್ಸಲ್‌ರ ಅಡುಗು ತಾಣವಾಗಿತ್ತು. 1994ರಿಂದ 1996ರಲ್ಲಿ ಹಲವಾರು ನಕ್ಸ್‌ಲರನ್ನು ಈ ಭಾಗದಲ್ಲಿ ಬಂಧಿಸಲಾಗಿತ್ತು. ವೆಂಕಟಾಪುರ ಗ್ರಾಮದ ಬಳಿ ಸೇಂದಿ ಸರಬರಾಜು ಮಾಡುವ ಲಾರಿಯನ್ನು ನಕ್ಸಲ್‌ರು ಸುಟ್ಟು ಹಾಕಿದ್ದರು. ಅಲ್ಲದೇ ಶಾದೀಪುರ ಬಳಿ 1997ರಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಸೇಂದಿ ಲಾರಿ ನಿಲ್ಲಿಸಿ, ಹಣ ದರೋಡೆ ಮಾಡಲಾಗಿತ್ತು. ವೆಂಕಟಾಪುರದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಈಗ ಈ ಹಾವಳಿ ನಿಂತಿದೆ.
ಎರಡು ದಶಕಗಳ ಹಿಂದೆ ಹೆಣ್ಣು ಮಕ್ಕಳ ಮಾರಾಟದಿಂದ ಕುಖ್ಯಾತಿ ಪಡೆದಿದ್ದ ಕುಂಚಾವರಂ ವಲಯದಲ್ಲಿ ಈಚೆಗೆ ಆಗಿರುವ ಜಾಗೃತಿ ಕುರಿತು ಜತೆಗೆ ಸರ್ಕಾರದ ಯೋಜನೆಗಳು ಯಾವ ಮಟ್ಟದಲ್ಲಿ ಕಾರ್ಯಾನುಷ್ಠಾನಗೊಂಡಿವೆ ಎನ್ನುವುದನ್ನು ಅರಿಯಲು ಗಡಿ ಗ್ರಾಮವಾದ ಕುಂಚಾವರಂ ಆಯ್ಕೆ ಮಾಡಿಕೊಂಡಿದ್ದೇನೆ.
ವಾಸ್ತವ್ಯದಲ್ಲಿ ಖುದ್ದಾಗಿ ಎಲ್ಲವನ್ನು ಅವಲೋಕಿಸಲಾಗುವುದು.
ವಾಸಿ ವಿಜಯಾರಡ್ಡಿ ಜೋತ್ಸ್ನಾ,
ಜಿಲ್ಲಾಧಿಕಾರಿ
ಕುಂಚಾವರಂ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಹರ್ಷದ ಸಂಗತಿ. ಗ್ರಾಮದಲ್ಲಿ ಸಾಕಷ್ಟು ಬಡ ಜನರಿಗೆ ವಿಧವಾ, ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷಾ ಯೋಜನೆಗಳ ಲಾಭ ಸಿಗುತ್ತಿಲ್ಲ. ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ನೀಡುತ್ತಿರುವುದರಿಂದ ಅತೀವ ಸಂತಸವಾಗಿದೆ.
ಸುಜಾತಾ ರಮೇಶಕುಮಾರ ಸಂಕಟಿ,
ಗ್ರಾಪಂ ಅಧ್ಯಕ್ಷೆ, ಕುಂಚಾವರಂ
ಚಿಂಚೋಳಿ ತಾಲೂಕಿನ ಅತೀ ಹಿಂದುಳಿದ ಪ್ರದೇಶವಾಗಿರುವ ಕುಂಚಾವರಂ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡುತ್ತಿರುವುದು ಮಹಿಳೆಯರಲ್ಲಿ
ಸಂಭ್ರಮವನ್ನುಂಟು ಮಾಡಿದೆ. ಗ್ರಾಮದ ಅತಿ ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಸ್ಥಳದಲ್ಲಿಯೇ ಕೊಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ತಾಲೂಕಿನ ಗಡಿಯಲ್ಲಿರುವ ವೆಂಕಟಾಪುರ, ಶಿವರಾಮಪುರ, ಲಚಮಾಸಾಗರ,ಪೋಚಾವರಂ, ಶಿವರೆಡ್ಡಿಪಳ್ಳಿ, ಬೋನಸಪುರ ಗ್ರಾಮಗಳಲ್ಲಿ ನಡೆಸಬೇಕು ಎನ್ನುವುದು ನಮ್ಮ ಬೇಡಿಕೆ.
ಸ್ವಪ್ನ ವೆಂಕಟ, ಗ್ರಾಪಂ ಉಪಾಧ್ಯಕ್ಷೆ, ಕುಂಚಾವರಂ
*ಶಾಮರಾವ ಚಿಂಚೋಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.