![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, Feb 19, 2021, 6:35 PM IST
ಚಡಚಣ: ಇಂದಿನ ಸ್ಪರ್ಧಾತ್ಮಕ ಶೈಕ್ಷಣಿಕ ಯುಗದಲ್ಲಿ ಸಂಪಾದಿಸುವ ಅಂಕಗಳು, ಪದವಿಗಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯೋಜನ ನೀಡದು. ಬದಲಾಗಿ ಭಾಷಾ ಕೌಶಲ್ಯ ವಿಷಯ ಮಂಡನೆ, ಸಂವಹನ ಕೌಶಲ್ಯ ಇತ್ಯಾದಿಗಳ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅನಿವಾರ್ಯ ಎಂದು ಅಥಣಿಯ ಕೆ.ಎ ಲೋಕಾಪುರ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಗಿರೀಶ ಕುಲಕರ್ಣಿ ಹೇಳಿದರು.
ಪಟ್ಟಣದ ಸಂಗಮೇಶ್ವರ ಕಲಾಹಾಗೂ ವಾಣಿಜ್ಯ, ಬಿಸಿಎ, ಬಿ.ಎಸ್. ಡಬ್ಲ್ಯೂ , ಸ್ನಾತಕೋತ್ತರ ಎಂ.ಕಾಂ ಮತ್ತು ಎಂ.ಎಸ್.ಡಬ್ಲ್ಯೂ ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಮಾಜ ಕಾರ್ಯ ಪದವಿ, ಸ್ನಾತಕೋತ್ತರ ಪದವಿ ವಿಭಾಗ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಕೋಶ ಸಹಯೋಗದಲ್ಲಿ ನಡೆದ “ಸಾಮರ್ಥ್ಯ ಬಲವರ್ಧನೆ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಕೌಶಲ್ಯ ವಿಷಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಯಾವುದೇ ಸಾಧನೆ ಮಾಡಬೇಕಾದರೆ ಮೌಲ್ಯಗಳು ಮುಖ್ಯ. ಜೀವನದಲ್ಲಿ ವಾಮ ಮಾರ್ಗದಿಂದ ಮುಂದೆ ಬಾರದೇ ಕಷ್ಟಪಟ್ಟು ಮೆಟ್ಟಿಲು ಹತ್ತಿ ಮೇಲೆ ಬರಬೇಕು.
ಯಾರಾದರೊಬ್ಬರು ಉನ್ನತ ವ್ಯಕ್ತಿಗಳಾಗಿದ್ದರೆ ಅವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಬಿಟ್ಟು, ಅವರು ಬೆಳೆದು ಬಂದ ಹಾದಿ ಅನುಸರಿಸಬೇಕು. ಅವರ ಬದ್ಧತೆ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಎಸ್ ಚೋರಗಿ ಮಾತನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕ ಓದು, ಶ್ರದ್ಧೆಯಿಂದ ಕಲಿಕಾ ಮೌಲ್ಯಗಳನ್ನು ತಮ್ಮ ಶೈಕ್ಷಣಿಕ ಜೀವನದಲ್ಲಿ ಅಳವಡಿಸಿಕೊಂಡು ಗುರಿ ಮತ್ತು ಸಾಧನೆಗೆ ಸಂಪರ್ಕ ಕೊಂಡಿಯಾಗಿ ಕೌಶಲ್ಯ ಕೆಲಸ ಮಾಡುತ್ತದೆ. ನೀವು ಯಾವುದೇ ಕೆಲಸ ಮಾಡಿ ಶಿಸ್ತು, ಸಮಯ ಪ್ರಜ್ಞೆಯಿಂದ ಮಾಡಿದ್ದೆ ಆದಲ್ಲಿ ಯಶಸ್ಸು
ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಸಮಾಜ ಕಾರ್ಯ ಪದವಿ ವಿಭಾಗ ಮುಖ್ಯಸ್ಥ ಐ.ಎ. ರೋಣದ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಎಂ.ಎಸ್.ಡಬ್ಲ್ಯೂ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಬಿ ಶಿರೋಳ, ಪ್ರೊ. ರಾಜಶೇಖರ ಮಾವಿನಮರ, ಡಾ.ಎಸ್.ಎಸ್. ದೇಸಾಯಿ, ಪ್ರೊ. ಧರ್ಮರಾಜ ಕುಂಬಾರ, ಸಮಾಜ ಕಾರ್ಯ ವಿಭಾಗದ ಪ್ರೊ. ಎನ್.ಎಂ. ಬಿರಾದಾರ, ಪ್ರೊ. ರಾಮ ನಡಗೇರಿ, ಪ್ರೊ. ಬಸವರಾಜ ಯಳ್ಳೂರ, ಪ್ರೊ. ಮಹಾಂತೇಶ ಜನವಾಡ, ದೈಹಿಕ ನಿರ್ದೇಶಕ ಸಂಜಯ ಅವಟಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.