![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Feb 20, 2021, 6:50 AM IST
ಹೊಸದಿಲ್ಲಿ /ಬೀಜಿಂಗ್: ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯಲ್ಲಿ ಕುತಂತ್ರ ಪ್ರದರ್ಶಿಸುತ್ತ ಬಂದಿದ್ದ ಚೀನವು ಭಾರತದ ಬಿಗಿ ಪಟ್ಟಿಗೆ ಬಾಗಿದ್ದು, ಗಡಿಯಿಂದ ತನ್ನ ಸೇನೆಯನ್ನು ವಾಪಸ್ ಕರೆಯಿಸಿಕೊಳ್ಳುತ್ತಿದೆ. ಈ ನಡುವೆ ಕಳೆದ ಜೂನ್‌ನಲ್ಲಿ ಲಡಾಖ್ ಬಳಿಯ ಗಾಲ್ವಾನ್‌ನಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ತನ್ನ ನಾಲ್ವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇದೇ ಮೊದಲ ಬಾರಿಗೆ ಅದು ಬಾಯಿಬಿಟ್ಟಿದೆ.
9 ಸುತ್ತುಗಳ ಮಾತುಕತೆಯ ಅನಂತರ ಗಡಿಯಿಂದ ಸೇನೆ ವಾಪಸಾತಿಗೆ ಎರಡೂ ದೇಶಗಳು ಒಪ್ಪಿಕೊಂಡಿದ್ದು, ಪ್ಯಾಂಗೋಂಗ್ ಲೇಕ್ ಬಳಿ ಜಮಾವಣೆಗೊಂಡಿದ್ದ ಸೇನೆ, ಟ್ಯಾಂಕ್‌ಗಳು, ಶಸ್ತ್ರಾಸ್ತ್ರ
ಗಳನ್ನು ಸಂಪೂರ್ಣವಾಗಿ ವಾಪಸ್ ಕರೆಯಿಸಿಕೊಂಡಿವೆ. ಪೂರ್ವ ಲಡಾಖ್‌ನ ಗಾಟ್ ಸ್ಪ್ರಿಂಗ್ಸ್, ಗೋಗ್ರಾ ಮತ್ತು ದೆಪ್ಸಂಗ್ ಬಳಿ ಸೇನೆ ಇದ್ದು, ಈ ಬಗ್ಗೆ ಶನಿವಾರ ನಿರ್ಧಾರವಾಗುವ ಸಾಧ್ಯತೆ ಇದೆ.
ಸೇನಾ ವಾಪಸಾತಿ ಪೂರ್ಣ ಸೇನಾ ಮೂಲಗಳ ಪ್ರಕಾರ, ಪ್ಯಾಂಗೋಂಗ್ ಲೇಕ್‌ನ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿದ್ದ ಸೇನೆ, ಆಯುಧಗಳು, ಇತರ ಮಿಲಿಟರಿ ಪರಿಕರ ಗಳು, ಬಂಕರ್‌ಗಳು, ಟೆಂಟ್‌ಗಳು, ತಾತ್ಕಾಲಿಕ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವು ಮಾಡಲಾಗಿದೆ. ಈ ಪ್ರಕ್ರಿಯೆ ಗುರುವಾರವೇ ಮುಕ್ತಾಯವಾಗಿದೆ. ಎರಡೂ ಕಡೆಯವರು ಪರಸ್ಪರ ಸಣ್ಣ ಮಟ್ಟಿಗೆ ಪರಿಶೀಲನೆಯನ್ನೂ ನಡೆಸಿದ್ದಾರೆ. ಸದ್ಯದಲ್ಲೇ ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತದೆ ಎಂದೂ ಹೇಳಲಾಗಿದೆ.
ನಾಲ್ವರು ಪಿಎಲ್ಎ ಸೈನಿಕರ ಸಾವು :
ಗಾಲ್ವಾನ್ ಘರ್ಷಣೆ ಸಂಬಂಧ ಇದುವರೆಗೆ ಬಾಯಿಗೆ ಬೀಗ ಹಾಕಿದ್ದ ಚೀನ, ಇದೇ ಮೊದಲ ಬಾರಿಗೆ ಸತ್ಯ ಒಪ್ಪಿಕೊಂಡಿದೆ. ಗಾಲ್ವಾನ್‌ನಲ್ಲಿ ಭಾರತೀಯ ಯೋಧರ ಜತೆ ನಡೆದ ಘರ್ಷಣೆಯಲ್ಲಿ ಅಧಿಕಾರಿ
ಗಳು, ಸೈನಿಕರು ಸೇರಿ ನಾಲ್ವರು ಮೃತಪಟ್ಟಿದ್ದಾರೆ ಎಂದಿದೆ. ಇತ್ತೀಚೆಗಷ್ಟೇ ರಷ್ಯಾದ ಸುದ್ದಿ ಏಜೆನ್ಸಿಯೊಂದು ಗಾಲ್ವಾನ್ ಘರ್ಷಣೆಯಲ್ಲಿ ಚೀನದ 45 ಸೈನಿಕರು ಸತ್ತಿದ್ದಾರೆ ಎಂದು ವರದಿ ಮಾಡಿತ್ತು. ಅಂದು ಮಡಿದ ನಾಲ್ವರಿಗೆ ಶುಕ್ರವಾರ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ. ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷತೆಯ ಸೆಂಟ್ರಲ್ ಮಿಲಿಟರಿ ಕಮಿಷನ್ ಆಫ್ ಚೀನ ಎಂಬ ಸಮಿತಿ ಈ ವಿಚಾರ ತಿಳಿಸಿದೆ.
ನಿಜವಾಗಿ ಸತ್ತವರೆಷ್ಟು? :
ಭಾರತ ಮತ್ತು ಚೀನ ನಡುವೆ ಈಗ ಸಮನ್ವಯ ಮೂಡುತ್ತಿದ್ದು, ಚೀನ ತನ್ನ ಕಡೆಯ ನಾಲ್ವರು ಸೈನಿಕರು ಸತ್ತಿದ್ದಾರೆ ಎಂದು ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಅಮೆರಿಕದ ಗುಪ್ತಚರ ಇಲಾಖೆಯ ಪ್ರಕಾರ, ಗಾಲ್ವಾನ್ ಘರ್ಷಣೆಯಲ್ಲಿ ಚೀನದ 35 ಯೋಧರು ಸತ್ತಿದ್ದಾರೆ. ರಷ್ಯಾದ ಸುದ್ದಿ ಏಜೆನ್ಸಿ ಚೀನದ 45 ಸೈನಿಕರು ಸತ್ತಿದ್ದರು ಎಂದು ವರದಿ ಮಾಡಿತ್ತು. ಆದರೆ ಒಂಬತ್ತು ತಿಂಗಳ ಅನಂತರ ತನ್ನ ಕಡೆಯ ಕೇವಲ ನಾಲ್ವರು ಸತ್ತಿದ್ದಾರೆ ಎಂದು ಚೀನ ಹೇಳಿಕೊಂಡಿರುವುದು ನಾನಾ ಅನುಮಾನಗಳಿಗೆ ಕಾರಣವಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.