ನೆನಪಿನ ಕಲಾ ಭಂಡಾರವನ್ನು ತೊರೆದು ಹೋದ ಭಂಡಾರಿ


Team Udayavani, Feb 20, 2021, 6:40 AM IST

ನೆನಪಿನ ಕಲಾ ಭಂಡಾರವನ್ನು ತೊರೆದು ಹೋದ ಭಂಡಾರಿ

ಹಸುಳೆಯೆನಬಹುದೇ ಮಹಾದೇವಸಮ ಬಲ ಬಾಲಕನೆನುತ ಚಾಳಿಸಿತು ಪಡೆಯಲ್ಲಲ್ಲಿ ತಲ್ಲಣಿಸಿದರು ನಾಯಕರು |

ಮುಸುಡ ತಿರುಹುತ ಮಕುಟ ವರ್ಧನ ರುಸುರಲಮ್ಮದೆ ಸಿಕ್ಕಿ ಭೂಪನ  ನುಸುಳುಗಂಡಿಯ ನೋಡುತಿರ್ದರು ಕೂಡೆ ತಮತಮಗೆ||

ಕುಮಾರವ್ಯಾಸ ಕರ್ಣಾಟಭಾರತ ಕಥಾಮಂಜರಿಯ ದ್ರೋಣ ಪರ್ವದ ಆರನೆಯ ಸಂಧಿಯ ನಲವತ್ತೇಳನೆಯ ಪದ್ಯದಲ್ಲಿ ಅಭಿಮನ್ಯುವನ್ನು ಹಸುಳೆ ಯೆನಬಹುದೇ ಎಂದು ವಿವರಿಸುವಾಗ ಅಭಿಮನ್ಯು ವಿನ ವೀರಾವೇಷಕ್ಕೆ ಸಿಕ್ಕಿದ ಭೂಪರು ತಮ್ಮ ಜೀವವುಳಿ ಸಲು ಚಕ್ರವ್ಯೂಹದ ಎಡೆ (ನುಸುಳುಗಂಡಿ)ಯನ್ನು ಹುಡುಕುತ್ತಿದ್ದರು ಎಂದು ವರ್ಣಿಸುವಾಗ ನಮ್ಮ ಕಣ್ಣೆ ದುರಿಗೆ ಬರುವುದು ಸಿಡಿಲ ಮರಿಎಂಬ ರೂಪಕದ ಪುತ್ತೂರು ಶ್ರೀಧರ ಭಂಡಾರಿ ಅವರ ಅಭಿಮನ್ಯು. ಯಕ್ಷಗಾನದ ರಂಗಸ್ಥಳದ ರಥವನ್ನೇರಿ ನಿಂತ ಅಭಿಮನ್ಯು ಪಾತ್ರದ ಶ್ರೀಧರ ಭಂಡಾರಿ ಅವರು ತನ್ನ ಸಾರಥಿಯನ್ನು ಉದ್ದೇಶಿಸಿ ಕೌರವ ಸೈನ್ಯವನ್ನು ಕಂಡು ಹೇಳುವ ಅರ್ಥ ಕುಮಾರ ವ್ಯಾಸನ ಕಾವ್ಯವೊಂದನ್ನೇ!

ಬವರವಾದರೆ ಹರನ ವದನಕೆ

ಬೆವರ ತಹೆನವಗಡಿಸಿದರೆ ವಾ

ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ..

ಇದನ್ನು ನೋಡುತ್ತಿರುವಾಗ ಶ್ರೀಧರ ಭಂಡಾರಿ ಅವರ ಅಭಿಮನ್ಯುವಿನ ಅನುಕೀರ್ತನದ  ಅನಾವರಣ ಮೆಲ್ಲ ಮೆಲ್ಲನೇ ಆಗುತ್ತಿರುವುದು ನೋಡುಗರಾದ ನಮ್ಮಲ್ಲೂ ಉತ್ಸಾಹ ಭಾವದ ಉತ್ಕಂಪ ಆಗುತ್ತಿದ್ದುದು ಅನುಭವಿಸಿದ್ದು. ಕೊನೆಗೆ ಅಭಿಮನ್ಯುವಿನ ಮರಣವೂ ಶುದ್ಧ ಕರುಣ ರಸವಾಗಿ ಪರಿಣಮಿಸಿ ಕಾಮ ಕ್ರೋಧಾದಿಗಳಿಂದ ವರ್ಜಿತವಾದ ಪರಿಶುದ್ಧವಾದ ಶಾಂತಿಯನ್ನು ಕೊಡುತ್ತಿದ್ದುದು ಸತ್ಯವೇ ಸರಿ. ಇಂಥ ರಸವು ಶಾಂತಿಯನ್ನು ಕೊಡುವುದರಿಂದ ಅದು ಹಿತವೆನಿಸುತ್ತದೆ. ಅಂಥ ನಟಶ್ರೇಷ್ಠನ ಅಂತ್ಯ ಇಂದಾಗಿದೆ. ಅವರು ಕೊಟ್ಟ ರಸಾನಂದ ಮಾತ್ರವೇ ಶಾಶ್ವತವಾಗಿ ನಮ್ಮಲ್ಲುಳಿಯುತ್ತದೆ; ಮತ್ತು ಸದಾ ನಮ್ಮನ್ನಾಳುತ್ತದೆ. ಅವರು ನಿರ್ವಹಿಸಿದ ಪಾತ್ರದ ಶೀಲ- ಸ್ವಭಾವಗಳು ಆಯಾ ಪಾತ್ರದ ಅನುಕೂಲ- ಪ್ರತಿಕೂಲ ಸಂದರ್ಭಗಳಲ್ಲಿ ಔಚಿತ್ಯಪೂರ್ಣವಾಗಿ ತೆರೆದುಕೊಳ್ಳುತ್ತಿತ್ತು.

ಒಂದು ಸಂದರ್ಶನದಲ್ಲಿ (ಪ್ರಾಯಶಃ ಉದಯವಾಣಿ) ಯಕ್ಷಗಾನದ ಶ್ರೇಷ್ಠ ಮದ್ದಳೆವಾದಕರಾದ ದಿವಂಗತ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌ ಅವರು ಹೇಳಿದ ಮಾತು ತುಂಬಾ ಮಹತ್ವದ್ದು.  ನನ್ನಲ್ಲಿದ್ದ ಪ್ರತಿಭೆಯನ್ನು ಹೊರ ಎಳೆದದ್ದು ಆ ಹುಡುಗ ಶ್ರೀಧರ ಭಂಡಾರಿ ಎಂದು. ಕಲೆಯಲ್ಲಿ ರಸೋತ್ಕರ್ಷವಾದ ಬೇರಾವುದೇ ವೈಯಕ್ತಿಕ ಸ್ವಾರ್ಥದ ಆವೇಶವಿಲ್ಲದೆ ಶುದ್ಧ ರಸಸ್ಯಂದಿಯಾಗಿ ಮೂಡಿದ ಮಾತಿದು. ಇದು ಮುಖ್ಯ, ಯಾಕೆಂದರೆ ಬÇÉಾಳರ ಕಲಾ ಸು#ರಣೆಗೆ ಕಾರಣವಾದದ್ದು (ವಿಭಾವ) ಪುತ್ತೂರು ಶ್ರೀಧರ ಭಂಡಾರಿಗಳ ನಾಟ್ಯ. ಇದರಿಂದಾಗಿ ಬÇÉಾಳರಲ್ಲಿ ಮೂಡಿದ ಸೊÌàಪಜ್ಞ ವಾದನರೂಪಿ ಭಾವಪ್ರಕಟ (ವಾದನ, ಅಪ್ರತಿಮ ನುಡಿಸಾಣಿಕೆ). ಇದು ಇಲ್ಲಿಗೇ ನಿಲ್ಲದೆ ಮದ, ಮಾತ್ಸರ್ಯಗಳಿಂದ ಕೊಡವಿಕೊಂಡು ಎದ್ದ ಬÇÉಾಳರ ಭಾವ ವೈಖರಿಯ ರೂಪದಲ್ಲಿ ಶುದ್ಧ ರಸವಾಗಿ ಮೇಲಿನ ಮಾತಿನ ಮೂಲಕ ಪ್ರಕಟವಾಯಿತಲ್ಲ! ಇದು ರಸಾನಂದ; ಬ್ರಹ್ಮಾನಂದ ಸೋದರ. ಈ ಘಳಿಗೆಯÇÉೇ ಈರ್ವರೂ ಪರಿಪೂರ್ಣ ಕಲಾವಿದರಾದದ್ದು-ಕೃತಕೃತ್ಯರಾದದ್ದು.

ಧರ್ಮಸ್ಥಳ ಮೇಳದಲ್ಲಿ ದಶಕಗಳ ಕಾಲ ವ್ಯವಸಾಯ ಮಾಡಿದ ಶ್ರೀಧರ ಭಂಡಾರಿಗಳು ತನ್ನ ವಿದ್ಯೆಯನ್ನು ಮುಂದಿನ ಜನಾಂಗಕ್ಕೆ ದಾಟಿಸಿದವರೂ ಆಗಿದ್ದಾರೆ. ಪುತ್ತೂರಲ್ಲಿ ಯಕ್ಷಕೂಟ ಮಕ್ಕಳ ಮೇಳವನ್ನು ಕಟ್ಟಿ ಅಸಂಖ್ಯ ಪ್ರದರ್ಶನಗಳನ್ನೂ ಕೊಟ್ಟವರಿ¨ªಾರೆ. ತಮ್ಮ ಕಾರ್ಯಕ್ಷೇತ್ರದಲ್ಲಿ ವ್ಯುತ್ಪನ್ನರೂ ಆಗಿದ್ದವರು ಶ್ರೀಧರ ಭಂಡಾರಿಗಳು. ನಾನು ಮತ್ತು ನನ್ನ ಪುತ್ತೂರಿನ ಗೆಳೆಯರಾದ ಜಗನ್ನಿವಾಸ ರಾವ್‌, ಪುತ್ತೂರು ರಮೇಶ ಭಟ್‌ ಇವರು ಈ ಮಕ್ಕಳ ಮೇಳದ ಹಿಮ್ಮೇಳ ಕಲಾವಿದರಾಗಿ ತೊಡಗಿದವರಾದುದರಿಂದ ನಮಗೆ ದೊಡ್ಡ ಸೆಟ್‌ನ ಕಲಾವಿದರ ಪರಿಚಯವೂ ಮತ್ತು ಶ್ರೀಧರ ಭಂಡಾರಿಗಳ ವೇಷಕ್ಕೆ ನುಡಿಸಿದವರಾದುದರಿಂದ ನಾವು ಹೆದರಬೇಕಾಗಿಲ್ಲ ಎಂಬ ಧೈರ್ಯ ಭಾವವನ್ನು ಅಂದೇ ಬೆಳೆಸಿಕೊಂಡವರು. ಇದಕ್ಕೆ ಕಾರಣ ಶ್ರೀಧರ ಭಂಡಾರಿಗಳೇ ಹೌದು.

ತನ್ನ ಪಾತ್ರ ಪ್ರಸ್ತುತಿಯಲ್ಲಿ ಪ್ರಸ್ಫುಟವಾಗಿ ತೋರುತ್ತಿದ್ದ ಭಾವಸಂಚಾರಗಳು ಅವರ ಮುಖ್ಯ ಕಲಾಭಿವ್ಯಕ್ತಿ. ದಿಗಿಣ ಆನುಷಂಗಿಕವಾಗಿ ಇದೆ. ಆದರೆ ಅದಕ್ಕೂ ಮುಖ್ಯ ಭಾವ ಪ್ರಕಟ. ಕುದಾRಡಿ ವಿಶ್ವನಾಥ ರೈಗಳಲ್ಲಿ ಕಲಿತ ಭರತನಾಟ್ಯದ ಆಂಗಿಕ ಯಕ್ಷಗಾನದ ತಮ್ಮ ನೃತ್ತದಲ್ಲಿ ಸಮುಚಿತವಾಗಿ ಪ್ರಕಟಗೊಂಡು ಸಹೃದಯರಿಗೆ ಸಂತೋಷ ಕೊಡುತ್ತಿತ್ತು. ಅವರ ತಂದೆ ದಿವಂಗತ ಶೀನಪ್ಪ ರೈಗಳ ಗರಡಿ, ಮೂಡುಬಿದ್ರೆ ಮಾಧವ ಶೆಟ್ಟಿಯವರಿಂದ ಯಕ್ಷಗಾನ ನಾಟ್ಯಾಭ್ಯಾಸ, ಹೊಸಹಿತ್ಲು ಮಹಾಲಿಂಗ ಭಟ್ಟರಿಂದ ಪಾತ್ರತಂತ್ರ ಮತ್ತು ರಂಗತಂತ್ರಗಳನ್ನು ಕಲಿತು ಯಕ್ಷರಂಗವನ್ನು ಶ್ರೀಮಂತಗೊಳಿಸಿದ್ದಾರೆ.

ಮಳೆಗಾಲದಲ್ಲಿ ಪುತ್ತೂರು ಮಹಾಲಿಂಗೇಶ್ವರ ಸಂಚಾರಿ ಯಕ್ಷಗಾನ ಮಂಡಳಿಯನ್ನು ಕಟ್ಟಿ ರಾಜ್ಯದ ಸುತ್ತಲೂ ಕಲಾಪಯಣವನ್ನು ಮಾಡಿರುವ ಶ್ರೀಧರ ಭಂಡಾರಿಗಳು ಅನೇಕ ಕಲಾವಿದರಿಗೆ ಆಶ್ರಯವನ್ನೂ ಪೋಷಕತ್ವವನ್ನೂ ಕೊಟ್ಟವರೆಂಬುದನ್ನು ನೆನಪಿಸಲೇಬೇಕು. ಧರ್ಮಸ್ಥಳ ಚಂದ್ರಶೇಖರ, ದಿವಾಕರ ರೈ ಸಂಪಾಜೆ, ಶಶಿಧರ ಕುಲಾಲ್‌ ಸಹಿತ ಹಲವರು ಅವರ ಗರಡಿಯಲ್ಲಿ ಪಳಗಿದ ಪುಂಡುವೇಷಧಾರಿಗಳು. ಶ್ರೀಧರ ಭಂಡಾರಿಗಳ ಪರಂಪರೆ ಮುಂದುವರಿಯುತ್ತದೆ. ಶ್ರೀಮಂತವಾಗಿ ಮುಂದುವರಿಯುತ್ತದೆ ಎಂಬ ಆಶಾಭಾವದಿಂದ ಅವರಿಗೆ ವಿದಾಯವನ್ನು ಹೇಳ್ಳೋಣ. ಅವರು ಕಲಾ ರಸಿಕರಿಗೆ ಕೊಟ್ಟ ಸಂತೋಷದ ಪುಣ್ಯ ದೊಡ್ಡದು.

 

-ಕೃಷ್ಣಪ್ರಕಾಶ ಉಳಿತ್ತಾಯ, ಪೆರ್ಮಂಕಿ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.