ಮಹನೀಯರ ಹೋರಾಟದ ಬದುಕು ಮಾದರಿ
Team Udayavani, Feb 20, 2021, 3:03 PM IST
ಕೊಪ್ಪಳ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಗರದ ಡಿಸಿ ಕಚೇರಿ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಸವಿತಾ ಮಹರ್ಷಿ ಅವರ ಜಯಂತಿ ಆಚರಿಸಲಾಯಿತು.
ಎಡಿಸಿ ಎಂ.ಪಿ. ಮಾರುತಿ ಅವರು ಶಿವಾಜಿ ಮಹಾರಾಜ ಮತ್ತು ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಅಗ್ನಿ ಶಾಮಕ ಠಾಣಾಧಿಕಾರಿ ಜಿ.ಕೃಷ್ಣೋಜಿರಾವ್ ಹಾಗೂ ಕ್ಷತ್ರಿಯ ಸಮಾಜದ ಮುಖಂಡರಾದ ನಾಗೇಶ ಬಡಿಗೇರ, ಮಾರುತಿ ಕಾರಟಗಿ, ಸರೋಜಾ ಬಾಕಳೆ, ರಾಘವೇಂದ್ರ ಹುಯಿಲಗೋಳ,ನಾಮದೇವ ಜಕ್ಲಿ, ಉದಯ್ ಕಲಾಲ್, ಅಮರಸಿಂಗ್ ರಜಪೂತ್ ಮತ್ತು ಸವಿತಾ ಸಮಾಜದ ಮುಖಂಡರಾದ ರವಿಕುಮಾರ್ ಸೂಗೂರ, ಕಲ್ಲಪ್ಪ ಹೊನ್ನುಂಚಿ, ಯಲ್ಲಪ್ಪ, ನಾಗರಾಜ ಕಂಪ್ಲಿ, ಮಾರುತಿ ಸೂಗೂರ, ವಿಠ್ಠಲ್ ಕೊಪ್ಪಳ, ದೇವಪ್ಪ ಗೌರಿಅಂಗಳ, ಈಶಪ್ಪ ಚಿಕ್ಕ ಮಾದಿನಾಳ, ತುಕಾರಾಮ್, ಶ್ರೀನಿವಾಸ ಗೋಪಲದಿನ್ನಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸೇರಿ ಇತರರು ಉಪಸ್ಥಿತರಿದ್ದರು.
ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಶ್ರೇಯಸ್ಸು :
ಕಾರಟಗಿ: ಚಿಕ್ಕ ವಯಸ್ಸಿನಲ್ಲಿಯೇ ದೇಶಾಭಿಮಾನ ಬೆಳೆಸಿಕೊಂಡು ಮಹಾನ್ ರಾಜನಾಗಿ ದೇಶಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾಗಿವೆ ಎಂದು ಪುರಸಭೆ ಅಧ್ಯಕ್ಷ ಶರಣೇಶ ಸಾಲೋಣಿ ಹೇಳಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ನಡೆದ ಛತ್ರಪತಿ ಶಿವಾಜಿ ಹಾಗೂ ಸವಿತಾ ಮಹರ್ಷಿಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಎನ್.ಶಿವಲಿಂಗಪ್ಪ ಮಾತನಾಡಿ, ಛತ್ರಪತಿ ಶಿವಾಜಿ ದೇಶ ಹಾಗೂ ಸಮಾಜದ ಒಳಿತಿಗೆ ಶ್ರಮಿಸುವ ಮೂಲಕ ಮಹಾನ್ ನಾಯಕರೆನಿಸಿಕೊಂಡವರು. ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಅವರ ಜಯಂತಿಗಳ ಆಚರಣೆಗೆ ಅರ್ಥಬರುತ್ತದೆ ಎಂದರು. ಪುರಸಭೆ ಅಧಿಕಾರಿಗಳಾದ ರಾಘವೇಂದ್ರ, ಮಂಜುನಾಥ, ಅಕ್ಷತಾ, ಪುಷ್ಪಾವತಿ, ಎಚ್.ಪರಮೇಶ್ವರ, ಚನ್ನಬಸವ, ಸಿಬ್ಬಂದಿ ಇತರರು ಇದ್ದರು.
ವಿವಿಧೆಡೆ ಆಚರಣೆ: ಛತ್ರಪತಿ ಶಿವಾಜಿ ಹಾಗೂ ಸವಿತಾ ಮಹರ್ಷಿಗಳ ಜಯಂತಿಯನ್ನು ಪಟ್ಟಣದ ವಿವಿಧೆಡೆ ಸಡಗರ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಶ್ರೀ ಶರಣ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ, ರಾಜೀವ್ ಗಾಂಧಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧೆಡೆ ಇಬ್ಬರು ಮಹನೀಯರ ಜಯಂತಿ ಆಚರಿಸಿದರು. ಶಾಲೆಯ ಶಿಕ್ಷಕ ಶಿಕ್ಷಕಿಯರು, ಸವಿತಾ ಸಮಾಜದ ಮುಖಂಡರು ಸಿಬ್ಬಂದಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.