ಕೋ-ವಿದಾಯ ಕೋವಿಡ್ ಲಸಿಕೆ ವೆಬಿನಾರ್
Team Udayavani, Feb 20, 2021, 4:10 PM IST
ನ್ಯೂಜರ್ಸಿ : ಬೃಂದಾವನ ಕನ್ನಡ ಸಂಘದ ಆರೋಗ್ಯ ಬೃಂದಾವನದ ವತಿಯಿಂದ ಫೆ.7ರಂದು ಭಾನುವಾರ ಕೋವಿಡಾ(ದಾ)ಯ ಕೋವಿಡ್ ಬಗೆಗಿನ ಹೊಸ ಮಾಹಿತಿಗಳ ವಿಚಾರ ವಿನಿಮಯ ಕಾರ್ಯಕ್ರಮ ಆನ್‌ಲೈನ್ ಮೂಲಕ ಆಯೋಜಿಸಲಾಗಿತ್ತು.
ಕೋವಿಡ್ ತನ್ನ ಕಬಂಧ ಬಾಹುಗಳನ್ನು ಚಾಚಲು ಪ್ರಾರಂಭಿಸಿದ ದಿನಗಳಿಂದಲೂ ಅಂದರೆ ಕಳೆದ ಮಾರ್ಚ್ ತಿಂಗಳಿಂದಲೂ ನಿರಂತರವಾಗಿ ನ್ಯೂಜೆರ್ಸಿಯ ಕನ್ನಡ ಸಮುದಾಯದ ಜತೆಗಿದ್ದು, ಸೂಕ್ತ ಸಲಹೆ, ಮಾರ್ಗದರ್ಶನ, ವೈದ್ಯಕೀಯ ಸಹಾಯಗಳನ್ನು ಕೊಟ್ಟು, ಕನ್ನಡಿಗರಲ್ಲಿ ಧೈರ್ಯ ತುಂಬುತ್ತಿರುವ ನ್ಯೂಜರ್ಸಿಯ ಎಡಿಸನ್ ಪ್ರದೇಶದ ಹಿರಿಯ ವೈದ್ಯ, ಪಲ್ಮೊನರಿ ಹಾಸ್ಪೈಸ್ ಪ್ಯಾಲಿಯೇಟಿವ್ ಕೇರ್ ಮತ್ತು ಸ್ಲಿàಪ್ ಮೆಡಿಸಿನ್ ತಜ್ಞರಾದ ಡಾ| ರಾಮ್ ಬೆಂಗಳೂರು ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಕೋವಿಡ್ ಮೇಲೆ ಜಯ ಸಾಧಿಸುವ ದಿನಗಳು ಬರುತ್ತಿವೆ. ಆ ದಿನಗಳಿಗೆ ನಾವು ಹೇಗೆ ಸಿದ್ಧರಾಗಬೇಕು ಎನ್ನುವ ಕುರಿತು ಕಾರ್ಯಕ್ರಮದಲ್ಲಿ ಡಾ| ರಾಮ್ ಮಾಹಿತಿ ಹಂಚಿಕೊಂಡರು.
ಪ್ರಗತಿ ತಂಡದ ಅಧ್ಯಕ್ಷೆ ಪದ್ಮಿನಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರ್ಚನಾ ಆಚಾರ್ಯ ವಿಚಾರ ವಿನಿಮಯದ ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಡಾ| ರಾಮ್ ಬೆಂಗಳೂರ್ ಅವರು, ಕೋವಿಡ್ ರಂಗದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಲ್ಲದೆ, ವ್ಯಾಕ್ಸಿನ್‌ಗಳ ರಚನೆ, ಅಭಿವೃದ್ಧಿ ಮತ್ತು ಅವು ಕೆಲಸ ಮಾಡುವ ಬಗೆಯನ್ನೂ ತಿಳಿಸಿಕೊಟ್ಟರು. ಜತೆಗೆ ಸಂವಾದ ಕಾರ್ಯಕ್ರಮದಲ್ಲಿ ಎಲ್ಲರ ಪ್ರಶ್ನೆಗೂ ಸೂಕ್ತ ಸಲಹೆ, ಉತ್ತರಗಳನ್ನು ನೀಡಿದರು.
ಡಾ| ರಾಮ್ ಅವರು ತಿಳಿಸಿದ ಮುಖ್ಯಾಂಶಗಳು :
- – ಕೋವಿಡ್ ಒಂದು ರೆಸ್ಪಿರೇಟರಿ ವೈರಸ್. ಈ ರೋಗದ ಲಕ್ಷಣಗಳು- ಸೋರುವ ಮೂಗು, ಜ್ವರ, ಕೆಮ್ಮು, ಮೈಕೈ ನೋವು ಮತ್ತು ಕೆಲವೊಮ್ಮೆ ಅತಿಸಾರ.
- ಕೋವಿಡ್ ವ್ಯಾಕ್ಸಿನ್ ಜೀವಂತ ವೈರಸ್ ಅಲ್ಲ. ಇದು ನಮ್ಮ ಶರೀರದ ರಕ್ಷಣಾ ವ್ಯವಸ್ಥೆ antibody ಗಳನ್ನು ಉತ್ಪಾದಿಸಲು ಪ್ರೇರೇಪಿಸುವ ಮೆಸೆಂಜರ್ RNA . ಇದನ್ನು Antigen ಎಂದು ಕರೆಯುತ್ತಾರೆ.
- ಅಮೆರಿಕ ದೇಶದಲ್ಲಿ ಈಗ ಎರಡು ವ್ಯಾಕ್ಸಿನ್‌ಗಳು ಲಭ್ಯವಿವೆ. ಫೈಜರ್ ಮತ್ತು ಮಡೋರ್ನಾ. ಫೈಜರ್ ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಂಡ 21 ದಿನಗಳಿಗೆ ಎರಡನೇ ಡೋಸ್ ತೆಗೆದುಕೊಳ್ಳಬೇಕು. ಮಡೋರ್ನಾ ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಂಡ 28 ದಿನಗಳಿಗೆ ಎರಡನೇ ಡೋಸ್ ಪಡೆಯಬೇಕು. ತೀರಾ ತುರ್ತುಪರಿಸ್ಥಿತಿ ಇಲ್ಲದಿದ್ದಲ್ಲಿ, ಈ ಶೆಡ್ನೂಲ್ ಅನ್ನು ಖಂಡಿತವಾಗಿ ಪಾಲಿಸಬೇಕು.
- ಮೊದಲ ಡೋಸ್‌ನ ಅನಂತರ ಕೋವಿಡ್ ವಿರುದ್ಧ ಶೇ. 50ರಷ್ಟು ರೋಗ ನಿರೋಧಕ ಶಕ್ತಿಯೂ, ಎರಡನೇ ಡೋಸ್‌ನ ಅನಂತರ ಶೇ. 90- 95ರಷ್ಟು ರೋಗ ನಿರೋಧಕ ಶಕ್ತಿಯೂ ಬರುತ್ತದೆ.
- ಡಬ್ಲ್ಯುಎಚ್‌ಒ ಮತ್ತು ಸಿಡಿಸಿ ನಿಯಮಿತ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಎಲ್ಲ ಅಮೆರಿಕ ನಿವಾಸಿಗಳಿಗೂ ಕೋವಿಡ್ ವ್ಯಾಕ್ಸಿನ್ ನೀಡಲಾಗುತ್ತದೆ. ಅವರು ಯಾವುದೇ ರೀತಿಯ ವೀಸಾದಲ್ಲಿದ್ದರೂ ಈ ವ್ಯಾಕ್ಸಿನ್ ಲಭ್ಯವಿದೆ ಮತ್ತು ಇದು ಎಲ್ಲರಿಗೂ ಸಂಪೂರ್ಣವಾಗಿ ಉಚಿತ. ನಿಯಮಿತ ಸಂಸ್ಥೆಗಳಲ್ಲಿ ವ್ಯಾಕ್ಸಿನ್‌ಗಾಗಿ ನೋಂದಾಯಿಸಿಕೊಳ್ಳಬೇಕು.
- ಈ ವ್ಯಾಕ್ಸಿನ್‌ನಿಂದ ಯಾವುದೇ ಗಂಭೀರ ರೀತಿಯ ದುಷ್ಪರಿಣಾಮಗಳಿಲ್ಲ. ವ್ಯಾಕ್ಸಿನ್ ಕೊಟ್ಟ ಜಾಗದಲ್ಲಿ ಕೆಂಪಾಗಿದ್ದು, ನೋವು, ಸಣ್ಣಗೆ ಜ್ವರ ಕಾಣಿಸಿಕೊಳ್ಳಬಹುದು. ಕೆಲವರಿಗೆ ಕೀಲುನೋವು ಬರಬಹುದು. ಆದರೆ ತಂಕಕಾರಿಯಲ್ಲ.
- ವ್ಯಾಕ್ಸಿನ್ ತೆಗೆದುಕೊಳ್ಳಲು ಬರಿ ಹೊಟ್ಟೆಯಲ್ಲಿ ಹೋಗುವ ಅವಶ್ಯಕತೆಯಿಲ್ಲ. ಕೊಟ್ಟ ಸಮಯಕ್ಕೆ ಸರಿಯಾಗಿ ವ್ಯಾಕ್ಸಿನ್ ಕೇಂದ್ರಕ್ಕೆ ಹೋಗಬೇಕು. ಅಲ್ಲಿಯೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಬೇಕು.
- ವ್ಯಾಕ್ಸಿನ್ ತೆಗೆದುಕೊಂಡ ಅನಂತರವೂ ಆ ವ್ಯಕ್ತಿ ವೈರಸ್ಸನ್ನು ಹರಡುವ ಸಾಧ್ಯತೆ ಇದೆ. ಆದ್ದರಿಂದ ಶೇ. 70ರಷ್ಟು ಜನರಿಗೆ ವ್ಯಾಕ್ಸಿನ್ ಸಿಗುವವರೆಗೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
- ವ್ಯಾಕ್ಸಿನ್ ತೆಗೆದುಕೊಂಡ ಅನಂತರವೂ ಕೋವಿಡ್ ತಗಲುವ ಸಾಧ್ಯತೆ ಇದೆ. ಆದರೆ ಅದು ತೀವ್ರ ಸ್ವರೂಪದಾಗಿರುವುದಿಲ್ಲ.
- 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಹಾಲುಣಿಸುತ್ತಿರುವ ಮಹಿಳೆಯರಿಗೆ ವ್ಯಾಕ್ಸಿನ್ ನೀಡಲಾಗುವುದಿಲ್ಲ.
- ವ್ಯಾಕ್ಸಿನ್ ತೆಗೆದುಕೊಳ್ಳುವ ಸಮಯದಲ್ಲಿ, ಬೇರೆ ಯಾವುದೇ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅವನ್ನು ನಿಲ್ಲಿಸುವ ಅಗತ್ಯವಿಲ್ಲ. ಆದರೆ ಬೇರೊಂದು ವ್ಯಾಕ್ಸಿನ್‌ನ ಅಗತ್ಯವಿದ್ದರೆ ಕೋವಿಡ್ ವ್ಯಾಕ್ಸಿನಿಗೂ ಅದಕ್ಕೂ ಒಂದು ವಾರದ ಅಂತರವಿರಲಿ.
- ಅಂತಾರಾಷ್ಟ್ರೀಯ ಪ್ರಯಾಣ/ಪ್ರವಾಸ ಮಾಡುತ್ತಿದ್ದಲ್ಲಿ, ಆಯಾ ದೇಶಗಳ ಕೋವಿಡ್ ನಿಯಮಗಳನ್ನು ಪಾಲಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.