ಸಿಎಂ ಸ್ವಕ್ಷೇತ್ರದಲ್ಲಿಂದು ಅಧಿಕಾರಿಗಳ ವಾಸ್ತವ್ಯ
ತಡಸನಹಳ್ಳಿಯಲ್ಲಿದೆ ಹಲವು ಸಮಸ್ಯೆ |ಗ್ರಾಮಸ್ಥರಲ್ಲಿ ಅಧಿಕಾರಿಗಳ ಭೇಟಿಯಿಂದ ಪರಿಹಾರ ಸಿಗುವ ನಿರೀಕ್ಷೆ
Team Udayavani, Feb 20, 2021, 4:45 PM IST
ಶಿವಮೊಗ್ಗ: ಎರಡು ವರ್ಷಗಳ ನಂತರ ಜಿಲ್ಲಾ ಧಿಕಾರಿ ಗ್ರಾಮವಾಸ್ತವ್ಯ ಕಾರ್ಯಕ್ರಮ ಪುನಾರಂಭಗೊಂಡಿದ್ದು ಶನಿವಾರ ಸಿಎಂ ಸ್ವಕ್ಷೇತ್ರ ಶಿಕಾರಿಪುರದ ತಡಸನಹಳ್ಳಿಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ವಾಸ್ತವ್ಯ ಹೂಡಲಿದ್ದಾರೆ.
ಎಲ್ಲ ಗ್ರಾಮಗಳಲ್ಲಿರುವಂತೆ ಈ ಗ್ರಾಮದಲ್ಲೂ ಮೂಲಸೌಕರ್ಯದ ಸಮಸ್ಯೆ ಸಾಕಷ್ಟಿದೆ. ಕುಡಿವ ನೀರು, ರಸ್ತೆ ದುರಸ್ತಿ, ಅಂಗವಿಕಲ, ವಿಧವಾ ವೇತನದಂಥ ಸಮಸ್ಯೆಗಳು ಬಾಕಿ ಉಳಿದಿವೆ. ಜಿಲ್ಲಾ ಧಿಕಾರಿ ವಾಸ್ತವ್ಯ ಹಿನ್ನೆಲೆಯಲ್ಲಿ ಕೆಲ ಅರ್ಜಿಗಳನ್ನು ತರಾತುರಿಯಲ್ಲಿ ವಿಲೇವಾರಿ ಮಾಡಲಾಗಿದೆ. ಮುಖ್ಯವಾಗಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳ ಅವಶ್ಯಕತೆ ಇದೆ ಎನ್ನುತ್ತಾರೆ ಗ್ರಾಮಸ್ಥರು. ಕೆರೆಗಳ ಹೂಳೆತ್ತುವುದು, ತಡಸನಹಳ್ಳಿ-ಮುತ್ತಗಿ ಸಂಪರ್ಕ ರಸ್ತೆ ಅಭಿವೃದ್ಧಿ , ಶಿರಾಳಕೊಪ್ಪ ಪಟ್ಟಣಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದ್ದು ದುರಸ್ತಿಗೆ ಮೊದಲು ಆದ್ಯತೆ ನೀಡಬೇಕು ಎಂಬುದು ಗ್ರಾಮಸ್ಥರ ಒತ್ತಾಯ. ಇದಲ್ಲದೆ ಗ್ರಾಮಕ್ಕೆ ಹೊಂದಿಕೊಂಡಂತಿರುವ 800 ಎಕರೆ ಉಂಬಳಿ ಜಮೀನಿನಲ್ಲಿ 250 ಎಕರೆ ಗ್ರಾಮಸ್ಥರು ಉಳುಮೆ ಮಾಡುತ್ತಿದ್ದು ಅವರಿಗೆ ಖಾತೆ ಮಾಡಿಕೊಡಬೇಕೆಂಬುದು ಪ್ರಮುಖ ಒತ್ತಾಯವಾಗಿದೆ.
ಊರಿನ ಮಧ್ಯೆ ಇರುವ ದೊಡ್ಡ ಹೊಂಡವನ್ನು ಕಲ್ಯಾಣಿ ರೂಪದಲ್ಲಿ ಅಭಿವೃದ್ಧಿಪಡಿಸಬೇಕು. ಪಕ್ಕದಲ್ಲಿ ಒಂದು ಸಮುದಾಯ ಭವನ ನಿರ್ಮಾಣವಾಗಬೇಕು. ( ಚಂದ್ರಪ್ಪ ಗ್ರಾಮದ ಮುಖಂಡ.)
ಹೊಲಗದ್ದೆಗಳಿಗೆ ಹೋಗುವ ರಸ್ತೆ ಅಭಿವೃದ್ಧಿಯಾಗಬೇಕು. ಅದೇ ರೀತಿ ಗ್ರಾಮದಲ್ಲಿನ ಚರಂಡಿ ದುರಸ್ತಿ ಮಾಡಬೇಕು. ಮುಖ್ಯವಾಗಿ ಈ ಭಾಗಕ್ಕೆ ಏತನೀರಾವರಿ ವ್ಯವಸ್ಥೆಯಾಗಬೇಕು. ( ದೇವಿಕ ಶ್ರೀಧರ್, ಗ್ರಾಮಸ್ಥೆ )
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.