ಕಠಿನ ಹಾದಿಯಲ್ಲೂ ಸಿಕ್ಕಿದ ಭರವಸೆಯ ಕಿರಣಗಳು
Team Udayavani, Feb 20, 2021, 5:16 PM IST
ಅರ್ಜೆಂಟೀನಾದಲ್ಲಿ ಒಂದು ವರ್ಷದ ಓದು ಸುತ್ತಾಟಕ್ಕೆ ನೆನ್ನೆ ಮೊನ್ನೆಯಷ್ಟೇ ಹೊರಟಿದ್ದೆ ಎನಿಸುತ್ತಿದ್ದರೂ ಈಗಾಗಲೇ ನನ್ನ ಪ್ರಯಾಣ ಕೊನೆಯಾಗುತ್ತಿದೆ. ಅದೂ ಎಂತಹ ವರ್ಷ! ಈ ಪ್ರಯಾಣ ಕೈಗೊಂಡಾಗ ಚೈನಾದ ವೂಹಾನಿನ ಈ ನಿಗೂಢ ಕಾಯಿಲೆಯ ಬಗ್ಗೆ ಯಾವ ಮಟ್ಟದ ಆತಂಕವೂ ಇರಲಿಲ್ಲ ಎನ್ನುವುದು ಸೋಜಿಗದಂತೆ ಈಗ ಕಾಣುತ್ತದೆ.
ಅರ್ಜೆಂಟೀನಾದಲ್ಲಿ ಬಂದಿಳಿದಾಗ, ಇಡೀ ದಕ್ಷಿಣ ಅಮೆರಿಕದಲ್ಲಿ ಒಂದೇ ಒಂದು ಕೇಸ್ ಬ್ರೆಜಿಲ್‌ನಲ್ಲಿ ವರದಿಯಾಗಿತ್ತು. ಮುಂದೆ ನಾನು ಈ ದೇಶದಲ್ಲಿ ಇಪ್ಪತ್ತು ದಿನ ಕಳೆಯುವ ಮುನ್ನವೇ ಎಲ್ಲ ಬದಲಾಗಲಿದೆ ಎಂದು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ನೆಲದ ನುಡಿಯನ್ನು ಅಲ್ಪಸ್ವಲ್ಪ ಮಾತಾನಾಡಬಲ್ಲ ದೇಶಕ್ಕೆ ಕಾಲ್ಲಿಟಿದ್ದಲ್ಲದೆ, ಸಾಂಕ್ರಾಮಿಕದ ಲಾಕ್‌ಡೌನ್‌ನಡಿ ಬದುಕನ್ನು ತುರ್ತಾಗಿ ಹೊಂದಿಸಿಕೊಳ್ಳಬೇಕಾಗಿತ್ತು.
ವರ್ಷವಿಡೀ ಹಲವಾರು ಕಾರ್ಯಕ್ರಮ, ಸುತ್ತಾಟ ಹಾಗೂ ಹೊಸ ಹೊಸ ಗೆಳೆತನಗಳನ್ನು ಎದುರು ನೋಡುತ್ತಿದ್ದವಳಿಗೆ ಈ ಪರಿಸ್ಥಿತಿಯಿಂದ ಹತಾಶೆಯಾಗಿದ್ದಂತೂ ಹೌದು. ಆಸ್ಟ್ರೇಲಿಯಾಕ್ಕೆ ಮರಳದೇ ಅರ್ಜೆಂಟೀನಾದಲ್ಲೇ ಉಳಿಯಲು ನಿರ್ಧರಿಸಿದ ಕೂಡಲೇ, ಆಸ್ಟ್ರೇಲಿಯಾವೂ ನಮ್ಮನ್ನು ಒಳಗೆ ಬಿಟ್ಟುಕೊಳ್ಳುವುದಕ್ಕೆ ಮನಸ್ಸು ಮಾಡುತ್ತಿಲ್ಲ ಎಂದು ಅರಿವಿಗೆ ಬಂದಿತು.
ಈ ಸಾಂಕ್ರಾಮಿಕವನ್ನು ಅರ್ಜೆಂಟೀನಾದಲ್ಲೇ ಎದುರಿಸುವ ನಿರ್ಧಾರದ ಬಗ್ಗೆ ಅಂದೂ, ಇಂದೂ ನನ್ನ ಮನಸ್ಸು ಸಮಾಧಾನದಲ್ಲೇ ಇದೆ. ಆದರೆ, ಇಲ್ಲಿ ಕುಳಿತು ಆಸ್ಟ್ರೇಲಿಯಾ ತನ್ನೆಲ್ಲ ಗಡಿಗಳನ್ನು ಮುಚ್ಚುವುದನ್ನು ನೋಡುವುದಷ್ಟೇ ಅಲ್ಲದೆ, ದೇಶದ ಪ್ರಧಾನಿ ಹೊರಗೆ ಉಳಿದ ನಮ್ಮಂತಹವರನ್ನು ಹೀಗಳೆದದ್ದನ್ನೂ ಕೇಳಬೇಕಾದ ವಿಶಿಷ್ಟ ಪರಿಸ್ಥಿತಿ ರೂಪುಗೊಂಡಿತ್ತು.
ಜೂನ್‌ನ ಹೊತ್ತಿಗೆ ಎಲ್ಲ ಸರಿ ಹೋಗುತ್ತದೆ ಎಂದು ನನ್ನ ವಸತಿ ಸಂಗಾತಿ ಹೇಳಿದ್ದು ಈಗ ನೆನಪಾಗುತ್ತಿದೆ. ಆ ಜೂನ್- ಆಗಸ್ಟಾಗಿ, ಅಕ್ಟೋಬರಿಗೆ ತಿರುಗಿ, ಡಿಸೆಂಬರ್ ಬಂದು ಜನವರಿಯಾದರೂ, ಇನ್ನೂ ಸುಗಮವಾಗಿ ಕೊನೆಗೊಳ್ಳುವ ಸೂಚನೆಗಳೇ ಕಾಣುತ್ತಿಲ್ಲ. ಒಂದಾದ ಮೇಲೆ ಒಂದರಂತೆ ನನ್ನಂತಹವರ ಫ್ಲೈಟ್‌ಗಳನ್ನು ರದ್ದು ಮಾಡುತ್ತಾ, ಆಟಗಾರರನ್ನೂ, ಸೆಲೆಬ್ರಿಟಿಗಳನ್ನೂ ಎಗ್ಗಿಲ್ಲದೇ ಆಸ್ಟ್ರೇಲಿಯಾದ ಒಳ ಹೊರಗೆ ಹಾರಾಡಿಸುತ್ತಿದ್ದರು. ನನ್ನ ದೇಶದ ಸರಕಾರ ನನ್ನನ್ನು ನನ್ನ ಮನೆಯಿಂದ ಹೊರಗಿಡಲು ಸರ್ವಪ್ರಯತ್ನ ಮಾಡುತ್ತಿರುವುದು ನಂಬಲಾಗದಂತಹ ವಿಚಿತ್ರ ಅನುಭವವಾಗಿ ನನ್ನನ್ನು ತಟ್ಟಿತು.
ನನ್ನ ಹಾಗೇ ಅನುಭವಿಸುತ್ತಿರುವವರನ್ನು ಆನ್‌ಲೈನ್‌ನಲ್ಲಿ ಹುಡುಕಿದಾಗ ಫೇಸ್‌ಬುಕ್‌ನಲ್ಲಿ ಸಿಕ್ಕ ದಕ್ಷಿಣ ಅಮೆರಿಕದಲ್ಲಿ ಸಿಕ್ಕುಳಿದ ಆಸ್ಟ್ರೇಲಿಯನ್ನರ ಗುಂಪೊಂದರಲ್ಲಿ ಹಲವಾರು ಮಂದಿ ಹಿಂದಿರುಗಲು ತಾವು ಪಡುತ್ತಿದ್ದ ಪಾಡಿನ ಕತೆಗಳನ್ನು ಹಂಚಿಕೊಳ್ಳುವುದನ್ನು ನೋಡಿದೆ. ಅಲ್ಲಿದ್ದವರ ಜತೆ ಮಾತಾಡಿದಾಗ ಮತ್ತೆ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ಮನೆಯವರನ್ನೂ ಸಂಗಾತಿಗಳನ್ನೂ ನೋಡುತ್ತೇನೆ ಎನ್ನುವ ಆಶಾಕಿರಣ ನನ್ನ ಮನದಲ್ಲೂ ಮೂಡಿತು ಎಂದೇ ಹೇಳಬೇಕು.
ನೀವು ಇದನ್ನು ಓದುತ್ತಿರುವಾಗ, ಸುಮಾರು ಮೂವತ್ತು ಸಾವಿರ ಆಸ್ಟ್ರೇಲಿಯನ್ನರು ಪ್ರಪಂಚದ ಹಲವೆಡೆ ಹಿಂದಿರುಗಲು ಕಾಯುತ್ತಿದ್ದು, ಸರಕಾರ ಯುಕೆ, ಯುಎಸ್ ಹಾಗೂ ಏಷಿಯಾಗಳಲ್ಲಿ ಸಹಾಯ ಮಾಡುತ್ತಿದ್ದರೂ ದಕ್ಷಿಣ ಅಮೆರಿಕದಲ್ಲಿ ಯಾವುದೇ ಸಹಾಯವಿಲ್ಲದೆ ಸಿಲುಕಿಕೊಂಡಿದ್ದಾರೆ ಎನ್ನುವುದು ವಿಷಾದಕರ.
ಆಸ್ಟ್ರೇಲಿಯಾದ ನನ್ನೂರು ಸಿಡ್ನಿಯಲ್ಲಿ ನಾನು ಹದಿನಾಲ್ಕು ದಿನಗಳ ಕಡ್ಡಾಯ ಕ್ವಾರಂಟೈನ್ ಅನ್ನು ಪೂರೈಸುತ್ತಿದ್ದೇನೆ. ನನ್ನ ಮನೆಯವರನ್ನು ಒಂದು ವರ್ಷದ ಬಳಿಕ, ಬಹುಶಃ ನಮ್ಮ ಬದುಕಿನ ಒಂದು ಅತ್ಯಂತ ವಿಷ್ಣ ವರ್ಷದ ಬಳಿಕ, ಮತ್ತೆ ತಬ್ಬಿಕೊಳ್ಳುತ್ತೇನೆ. ಮನೆಯವರೊಡನೆ ಸೇರಿಕೊಳ್ಳುತ್ತಿರುವ ನಾನು ಅತ್ಯಂತ ಅದೃಷ್ಟವಂತೆ ಅನಿಸುವಾಗಲೂ, ತಮ್ಮ ಕುಟುಂಬದವರಿಂದ ಬೇರ್ಪಟ್ಟು ಸಿಕ್ಕಿಕೊಂಡಿರುವವರನ್ನು ನೋಡಿ ನನ್ನ ಮನಸ್ಸು ಆರ್ದ್ರವಾಗಿ ನೆನೆಯುತ್ತದೆ.
ತನ್ಮಯ ನಾವಡ, ಅರ್ಜೆಂಟೀನ
ಅನುವಾದ: ಸುದರ್ಶನ್ ಎನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.