ಝೂಮ್ ಮೀಟಿಂಗ್ ನಲ್ಲಿದ್ದ ಪತಿಗೆ ಕಿಸ್…ವಿಡಿಯೋ ವೈರಲ್
Team Udayavani, Feb 20, 2021, 6:30 PM IST
ಮುಂಬೈ : ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದ ಸ್ವಾತಿ ‘ವಿಡಿಯೋ’ ಪ್ರಸಂಗ ಮಾಸುವ ಮುನ್ನವೇ ಅಂತಹದೇ ಮತ್ತೊಂದು ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಝೂಮ್ ಮೀಟಿಂಗ್ ನಲ್ಲಿದ್ದ ಪತಿಗೆ ಪತ್ನಿಯೋರ್ವಳು ಮುತ್ತು ಕೊಡಲು ಮುಂದಾದ ದೃಶ್ಯ ವಿಡಿಯೋದಲ್ಲಿದೆ. ಈ ವಿಡಿಯೋದಲ್ಲಿರುವ ದಂಪತಿಯ ಹೆಸರು ಹಾಗೂ ಇದು ನಡೆದಿರುವುದು ಎಲ್ಲಿ ಎಂಬುದರ ಮಾಹಿತಿ ಲಭ್ಯವಾಗಿಲ್ಲವಾದರೂ, ಫನ್ನಿಯಾಗಿರೋ ಈ ವಿಡಿಯೋ 3.2 ಲಕ್ಷ ವೀಕ್ಷಣೆಯಾಗಿದೆ.
ಮೀಟಿಂಗ್ ನಲ್ಲಿ ಬ್ಯುಸಿಯಾಗಿದ್ದ ಗಂಡನ ಬಳಿ ಆಗಮಿಸಿದ ಹೆಂಡತಿ, ಆತನ ಕೆನ್ನೆಗೆ ಮುತ್ತಿಕ್ಕಲು ಮುಂದಾಗುತ್ತಾಳೆ. ಇದರಿಂದ ಕಸಿವಿಸಿಗೊಂಡ ಪತಿ, ಏ ಏನ್ ಮಾಡ್ತೀದಿಯಾ ? ಕ್ಯಾಮರಾ ಆನ್ ಇದೆ ಎಂದು ಸಿಟ್ಟಿನಿಂದ ಹೇಳುತ್ತಾನೆ. ಗಂಡನ ಕೋಪಕ್ಕೆ ಪತ್ನಿ ಮುಗುಳ್ನಗೆ ಬೀರಿ ಸುಮ್ಮನಾಗುತ್ತಾಳೆ.
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುವ ಈ ವಿಡಿಯೋ ಉದ್ಯಮಿ ಹರ್ಷಾ ಗೋಯಂಕಾ ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಇವರ ಟ್ವಿಟ್ ಗೆ ಕಾಮೆಂಟ್ ಮಾಡಿರುವ ಮತ್ತೋರ್ವ ಉದ್ಯಮಿ ಆನಂದ್ ಮಹೇಂದ್ರ, ನಾನು ಇವರನ್ನ ’Wife of the year’ಗೆ ನಾಮಿನೇಟ್ ಮಾಡಲು ಬಯಸುತ್ತೇನೆ. ಪತಿ ಕೂಡ ಖುಷಿಯಿಂದ ಪ್ರತಿಕ್ರಿಯಿಸಿದ್ದರೆ ಈ ದಂಪತಿಯನ್ನು ನಾಮನಿರ್ದೇಶನ ಮಾಡುತ್ತಿದ್ದೆ. ಆದರೆ, ಆ ಪತಿ ಈ ಅವಕಾಶ ಮಿಸ್ ಮಾಡಿಕೊಂಡ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.
Haha. I nominate the lady as the Wife of the Year. And if the husband had been more indulgent and flattered, I would have nominated them for Couple of the Year but he forfeited that because of his grouchiness! @hvgoenka https://t.co/MVCnAM0L3W
— anand mahindra (@anandmahindra) February 19, 2021
ಏನಿದು ಸ್ವಾತಿ ವಿಡಿಯೋ ?
ಆನ್ ಲೈನ್ ಕ್ಲಾಸ್ ವೇಳೆ ಸ್ವಾತಿ ಹೆಸರಿನ ವಿದ್ಯಾರ್ಥಿನಿ ಅಶ್ಲೀಲವಾಗಿ ಮಾತಾಡಿದ್ದಳು. ತನ್ನ ಮೈಕ್ ಆಫ್ ಇದೆ ಎಂದು ತಿಳಿದುಕೊಂಡು ಗೆಳೆಯನ ಕುರಿತು ಖಾಸಗಿ ವಿಚಾರ ಹಂಚಿಕೊಂಡಿದ್ದಳು. ಆದರೆ, ಇದು ಆನ್ ಲೈನ್ ಕ್ಲಾಸ್ ನಲ್ಲಿ ಭಾಗಿಯಾಗಿದ್ದ ಶಿಕ್ಷಕಿ ಹಾಗೂ ಆಕೆಯ ಸಹಪಾಠಿಗಳಿಗೂ ಕೇಳಿಸಿತ್ತು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹವಾಮಾನ ಹಣಕಾಸು ಪ್ಯಾಕೇಜ್ ತಿರಸ್ಕರಿಸಿದ ಭಾರತ
Maharashtra: 400ಕ್ಕೂ ಅಧಿಕ ಮುಸ್ಲಿಮರ ಸ್ಪರ್ಧೆ: ಗೆದ್ದದ್ದು 10 ಅಭ್ಯರ್ಥಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.