ಹೊಟೇಲ್‌ಗೆ ಕೈಗಾರಿಕೆ ಸ್ಥಾನ :ಆರ್ಥಿಕ ಸಂಕಷ್ಟಕ್ಕೀಡಾಗಿರುವ ಉದ್ಯಮಕ್ಕೆ ಆಸರೆ
Team Udayavani, Feb 21, 2021, 6:50 AM IST
ಬೆಂಗಳೂರು: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಆತಿಥ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲು ರಾಜ್ಯದ ವರ್ಗೀಕೃತ 62 ತಾರಾ ಹೊಟೇಲ್‌ಗಳಿಗೆ ವಾಣಿಜ್ಯಕ್ಕೆ ಬದಲಾಗಿ ಕೈಗಾರಿಕಾ ಸ್ಥಾನ ನೀಡಲು ನಿರ್ಧರಿಸಲಾಗಿದ್ದು, ಇದರಿಂದ ಕೆಲವು ರಿಯಾಯಿತಿಗಳು ಲಭಿಸಲಿವೆ ಎಂದು ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಹೊಟೇಲ್ ಉದ್ಯಮಿಗಳ ವಿದ್ಯುತ್ ದರ, ಆಸ್ತಿ ತೆರಿಗೆಯಲ್ಲಿ ಇಳಿಕೆಯಾಗಲಿದೆ ಎಂದು ವಿಧಾನಸೌಧದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಿಳಿಸಿದರು.
ಈ ವರೆಗೆ ಹೊಟೇಲ್ ಉದ್ಯಮದವರು ವಾಣಿಜ್ಯ ವಲಯದಡಿ ನಿಗದಿತ ವಿದ್ಯುತ್ ದರ, ಆಸ್ತಿ ತೆರಿಗೆ ಪಾವತಿಸುತ್ತಿದ್ದರು. ಕೈಗಾರಿಕೆ ಎಂದು ಪರಿಗಣಿಸುವುದರಿಂದ ವಿದ್ಯುತ್ ದರ, ಆಸ್ತಿ ತೆರಿಗೆ ಶುಲ್ಕ ಇಳಿಕೆಯಾಗಲಿದೆ. ಮುಂದಿನ 5 ವರ್ಷ ಈ ರಿಯಾಯಿತಿ ಸಿಗಲಿದ್ದು, ಸರಕಾರದ ಬೊಕ್ಕಸಕ್ಕೆ ಇದರಿಂದ 5 ವರ್ಷಗಳಲ್ಲಿ 500 ಕೋಟಿ ರೂ. ನಷ್ಟವಾಗಲಿದೆ. ಆದರೆ ಪ್ರವಾಸೋದ್ಯಮ ಚಟುವಟಿಕೆ ಚೇತರಿಸಿಕೊಂಡು ಉದ್ಯೋಗ ಸೃಷ್ಟಿಗೆ ನೆರವಾಗುವ ನಿರೀಕ್ಷೆ ಇದೆ ಎಂದರು.
ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಹೊಟೇಲ್‌ಗಳ ವರ್ಗೀಕರಣ ಮಾಡುತ್ತದೆ. ಆದರೆ ಬಹಳಷ್ಟು ಹೊಟೇಲ್‌ಗಳು ನೋಂದಾಯಿಸಿ ಕೊಳ್ಳುವುದಿಲ್ಲ. ಕೈಗಾರಿಕೆ ಸ್ಥಾನ ನೀಡುವುದರಿಂದ ನೋಂದಣಿ ಹೆಚ್ಚಬಹುದು. ರಾಜ್ಯದಲ್ಲಿ 2,000ಕ್ಕೂ ಹೆಚ್ಚು ಹೊಟೇಲ್‌ಗಳಿದ್ದು, ಬಹುಪಾಲು ನೋಂದಣಿಯಾಗುವ ನಿರೀಕ್ಷೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.