ಒಂದು ಠೇವಣಿ; ಪ್ರತಿ ತಿಂಗಳು ನಿಗದಿತ ಡ್ರಾ : ಏನಿದು ಯೋಜನೆ? ಏನಿದರ ಲಾಭ?


Team Udayavani, Feb 21, 2021, 6:30 AM IST

ಒಂದು ಠೇವಣಿ; ಪ್ರತಿ ತಿಂಗಳು ನಿಗದಿತ ಡ್ರಾ : ಏನಿದು ಯೋಜನೆ? ಏನಿದರ ಲಾಭ?

ಭಾರತದ ಅತೀ ದೊಡ್ಡ ಸಾರ್ವ ಜನಿಕ ವಲಯದ ಬ್ಯಾಂಕ್‌ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ತನ್ನ ವರ್ಷಾಶನ(ಆ್ಯನ್ವಿಟಿ) ಠೇವಣಿ ಯೋಜನೆಯ ನ್ನು ಪರಿಚಯಿಸಿದೆ. ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಇದರಲ್ಲಿ ಠೇವಣಿ ದಾರರು ಒಂದು ಬಾರಿ ಒಟ್ಟು ಮೊತ್ತವನ್ನು ಠೇವಣಿ ಮಾಡ ಬೇಕು. ಹೀಗೆ ಠೇವಣಿ ಮಾಡಿದ ಮೊತ್ತವನ್ನು ಮಾಸಿಕ ಮೊತ್ತದ ರೂಪದಲ್ಲಿ ಬಡ್ಡಿ ಸಹಿತ ಪಡೆಯಬಹುದಾಗಿದೆ.

ಯಾರು ಅರ್ಹರು?
ಅಪ್ರಾಪ್ತ ವಯಸ್ಕರು ಸಹಿತ ಯಾವು ದೇ ವ್ಯಕ್ತಿ ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯನ್ನು ತೆರೆಯಬ ಹುದು. ಆದರೆ ಎನ್‌ಆರ್‌ಐ ಅಥವಾ ಎನ್‌ಜಿಒ ವಿಭಾಗಗಳಲ್ಲಿ ಖಾತೆ ಹೊಂದಿದ ಯಾವುದೇ ಗ್ರಾಹಕರು ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಗೆ ಅನರ್ಹರಾಗಿರುತ್ತಾರೆ.

ಅವಧಿ ಎಷ್ಟು?
ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯ ಹೂಡಿಕೆದಾರರು 36 ತಿಂಗಳು (3 ವರ್ಷ), 60 ತಿಂಗಳು (5 ವರ್ಷ), 84 ತಿಂಗಳು (7 ವರ್ಷ), ಅಥವಾ 120 ತಿಂಗಳು (10 ವರ್ಷ) ಗಳಿಂದ ಠೇವಣಿ ಅವಧಿಯನ್ನು ಆರಿಸಬೇಕಾಗುತ್ತದೆ. ಹೂಡಿಕೆಯ ಮೇಲಿನ ಬಡ್ಡಿದರವು ಎಫ್ಡಿ ದರದಂತೆ ಅನ್ವಯಿಸುತ್ತದೆ. ಉದಾಹರಣೆಗೆ ನೀವು 5 ವರ್ಷಗಳ ವರೆಗೆ ಠೇವಣಿ ಮಾಡಿದರೆ, 5 ವರ್ಷಗಳ ಸ್ಥಿರ ಠೇವಣಿ(ಎಫ್ಡಿ)ಗೆ ಅನ್ವಯವಾಗುವ ಬಡ್ಡಿದರಕ್ಕೆ ಅನುಗುಣವಾಗಿ ನೀವು ಬಡ್ಡಿಯನ್ನು ಪಡೆಯುತ್ತೀರಿ. ಇದರಲ್ಲಿ ಸಿಂಗಲ್‌ ಅಥವಾ ಜಾಯಿಂಟ್‌ ಖಾತೆಯನ್ನು ಹೊಂದಬಹುದಾಗಿದೆ.

ಬಡ್ಡಿ ದರ ಎಷ್ಟು?
ಎಸ್‌ಬಿಐ ವರ್ಷಾಶನ ಯೋಜನೆಗೆ ಅನ್ವಯವಾಗುವ ಬಡ್ಡಿದರ ಎಸ್‌ಬಿಐ ಸ್ಥಿರ ಠೇವಣಿ (ಎಫ್ಡಿ)ಯಂತೆಯೇ ಇರುತ್ತದೆ. ನೀವು 5 ವರ್ಷಗಳ ಕಾಲ ಹಣವನ್ನು ಠೇವಣಿ ಮಾಡಿದ್ದರೆ, ಅನಂತರ 5 ವರ್ಷಗಳ ಸ್ಥಿರ ಠೇವಣಿಗೆ ಅನ್ವಯವಾಗುವ ಬಡ್ಡಿದರಕ್ಕೆ ಅನುಗುಣವಾಗಿ ಬಡ್ಡಿಯನ್ನು ಮಾತ್ರ ಪಡೆಯುತ್ತೀರಿ. ಪ್ರಸ್ತುತ ಎಸ್‌ಬಿಐ 5 ರಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇ. 5.40ರಷ್ಟು ಬಡ್ಡಿ ದರವನ್ನು ನೀಡುತ್ತದೆ. 3ರಿಂದ 5 ವರ್ಷದೊಳಗಿನ ಅವಧಿಯ ಎಫ್ಡಿಗಳಿಗೆ ಎಸ್‌ಬಿಐ ಶೇ. 5.30ರಷ್ಟು ಬಡ್ಡಿದರವನ್ನು ನೀಡುತ್ತದೆ.

ಇವರಿಗೆ ಬಡ್ಡಿ ದರ ಹೆಚ್ಚು
ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ನಿಗದಿತ ಬಡ್ಡಿದರಕ್ಕಿಂತ ಶೇ. 0.50ರಷ್ಟು ಹೆಚ್ಚು ಪಡೆಯಲಿದ್ದಾರೆ. ಆದರೆ ಎಸ್‌ಬಿಐ ಸಿಬಂದಿ ಮತ್ತು ಎಸ್‌ಬಿಐ ಪಿಂಚಣಿದಾರರಿಗೆ ಬಡ್ಡಿದರವು ಶೇ. 1ರಷ್ಟು ಹೆಚ್ಚಿರಲಿದೆ.

ಪಾವತಿ ಸಮಯ
ವರ್ಷಾಶನ ಪಾವತಿ ಠೇವಣಿ ತಿಂಗಳ ಕಡೆಯ ದಿನದಂದು ಪಾವತಿ ಮಾಡಲಾಗುತ್ತದೆ. ಒಂದು ವೇಳೆ ತಿಂಗಳಿನ 29, 30 ಮತ್ತು 31ನೇ ತಾರೀಕಿನಂದು ಆಗದೇ ಇದ್ದರೆ ಮುಂದಿನ ತಿಂಗಳ 1ರಂದು ಪಾವತಿಸಲಾಗುತ್ತದೆ. ಬಡ್ಡಿ ಮೊತ್ತದ ಮೇಲೆ ವರ್ಷಾಶನ ಪಾವತಿಗಳು ಟಿಡಿಎಸ್‌ಗೆ ಒಳಪಟ್ಟಿರುತ್ತವೆ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. ಇದನ್ನು ಲಿಂಕ್ಡ್ ಸೇವಿಂಗ್ಸ್‌ ಬ್ಯಾಂಕ್‌ (ಎಸ್‌ಬಿ) ಅಥವಾ ಕರೆಂಟ್‌ ಅಕೌಂಟ್‌ (ಸಿಎ) ಖಾತೆಗೆ ಜಮೆ ಮಾಡಲಾಗುತ್ತದೆ.

ಇತರ ಸೌಲಭ್ಯಗಳು
ಎಸ್‌ಬಿಐ ವರ್ಷಾಶನ ಠೇವಣಿ ಯೋಜನೆಯೊಂದಿಗೆ ನಾಮನಿ ರ್ದೇಶನ ಸೌಲಭ್ಯವನ್ನು ನೀಡುತ್ತದೆ. ಇದಲ್ಲದೆ ವಿಶೇಷ ಪ್ರಕರಣಗಳಲ್ಲಿ ವರ್ಷಾಶನದ ಬಾಕಿ ಮೊತ್ತದ ಶೇ. 75 ರಷ್ಟು ಓವರ್‌ಡ್ರಾಫ್ಟ್ ಅಥವಾ ಸಾಲವನ್ನು ನೀಡಬಹುದು. ಈ ಯೋಜನೆಯ ಅವಧಿ, ಮೊತ್ತ ಹಾಗೂ ಬಡ್ಡಿ ದರಗಳ ಕುರಿತ ಪೂರ್ಣ ಮಾಹಿತಿಗೆ ನಿಮ್ಮ ಸಮೀಪದ ಎಸ್‌ಬಿಐ ಬ್ರ್ಯಾಂಚ್‌ ಅನ್ನು ಸಂಪರ್ಕಿಸಿ.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.