ರೀ ಸಾಹೇಬ್ರ ಕರೆಂಟ್ ಕೊಡ್ರಿ..ಕುಡ್ಯಾಕ ನೀರ ಕೊಡ್ರಿ
Team Udayavani, Feb 21, 2021, 4:28 PM IST
ಕಲಘಟಗಿ: ರೀ ಸಾಹೇಬ್ರೆ ನಮಗೆ ಸರಿಯಾಗಿ ವಿದ್ಯುತ್ ಕೊಡ್ರಿ.. ಕುಡ್ಯಾಕ ಶುದ್ಧ ನೀರ ಕೊಡ್ರಿ..ವಸತಿರಹಿತರಿಗೆ ನಿವೇಶನಕ್ಕೆ ಜಾಗಾ ಕೊಡ್ರಿ..ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನಿಗೆ ಹೋಗಲು ರಸ್ತೆ ಮಾಡಾಕ ಕೊಡೋದಿಲ್ರೀ ಪ್ರೌಢಶಾಲೆ ಕಟ್ಟಡಕ್ಕೆ ಜಾಗಾನ ಇಲ್ರೀ ಇಂತಹ ಹತ್ತು ಹಲವಾರು ದೂರುಗಳುತಾಲೂಕಿನ ತಂಬೂರ ಗ್ರಾಪಂ ವ್ಯಾಪ್ತಿಯ ಶಿಂಗನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ತಹಶೀಲ್ದಾರ್ ಅಶೋಕ ಶಿಗ್ಗಾವಿ ಸೇರಿ ತಾಲೂಕಾ ಡಳಿತದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಕೇಳಿ ಬಂದವು.
ಕಂದಾಯ, ಭೂ ದಾಖಲೆಗಳ ಇಲಾಖೆ, ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಆರೋಗ್ಯ, ಅರಣ್ಯ, ಮಹಿಳಾಮತ್ತು ಮಕ್ಕಳ ಕಲ್ಯಾಣ ಹಾಗೂ ಸಮಾಜ ಕಲ್ಯಾಣ ಇಲಾಖೆಗಳುಸೇರಿದಂತೆ ಪ್ರಮುಖ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮಇಲಾಖೆಗಳ ಮೂಲಕ ಜಾರಿಯಾಗಿರುವ ಎಲ್ಲ ಯೋಜನೆಗಳ ವಿಸ್ತೃತ ವರದಿ ನೀಡಿದರಲ್ಲದೇ ಸಮಸ್ಯೆಗಳ ಕುರಿತು ಜನರಅಹವಾಲು ಆಲಿಸಿ ಪರಿಹರಿಸಲು ಪ್ರಯತ್ನಿಸಿದರು. ಶಿಂಗನಹಳ್ಳಿ ಗ್ರಾಮದ ಸಂಗಪ್ಪ ಮಾತನಾಡಿ, ಇರುವ ಒಂದೇ ಟಿಸಿ ಅನ ಧಿಕೃತ ಸಂಪರ್ಕಗಳ ಒತ್ತಡದಿಂದ ಮೇಲಿಂದಮೇಲೆ ಕೆಡುತ್ತಿರುವುದಲ್ಲದೇ ಅದಕ್ಕೆ ಅಳವಡಿಸಿರುವ ಕೇಬಲ್ ಕೂಡಾ ಸುಟ್ಟು ಹೋಗುತ್ತಲಿದೆ. ಕಾರಣ ಅಧಿಕೃತ ಸಂಪರ್ಕದಾರರಿಗೆ ಯಾವುದೇ ತೊಂದರೆಯಾಗದಂತೆ ನಿರಂತರ-ಸಮರ್ಪಕ ವಿದ್ಯುತ್ ಸರಬಾರಾಜಿಗೆ ತಕ್ಷಣ ಕ್ರಮಜರುಗಿಸಬೇಕೆಂದರು. ಇದಕ್ಕೆ ಸ್ಪಂದಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹರ್ಷಾ ಬೆಂತೂರ, ತಾಲೂಕಿನಲ್ಲಿ10,163 ನೋಂದಾಯಿತ ನೀರಾವರಿ ಪಂಪ್ ಸೆಟ್‌ಗಳಿದ್ದರೆ,ಇನ್ನುಳಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚಿನ ನೀರಾವರಿ ಪಂಪಸೆಟ್‌ಗಳು ಅಕ್ರಮವಾಗಿ ಬಳಕೆಯಾಗುತ್ತಿವೆ. ಇದರಿಂದ ಟ್ರಾನ್ಸ್‌ಫಾರ್ಮರ್, ಕೇಬಲ್‌ಗಳು ಹಾಗೂ ವಿತರಣಾ ಕೇಂದ್ರದಲ್ಲಿ ಮೇಲಿಂದ ಮೇಲೆ ದುರಸ್ತಿಗೊಳಪಡುತ್ತಿದ್ದು, ಸಮರ್ಪಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಈ ಕುರಿತು ಅನೇಕ ಬಾರಿ ರೈತರಿಗೆ, ಗ್ರಾಹಕರಿಗೆ, ಸಾರ್ವಜನಿಕರಿಗೆಸಭೆಗಳನ್ನು ಜರುಗಿಸಿ ಮನವರಿಕೆ ಮಾಡಿಕೊಡಲಾಗಿದೆ. ಕಾರಣ ರೈತರ ಹಿತ ಕಾಪಾಡಲು ರೈತರೇ ತಮ್ಮ ನೀರಾವರಿ ಪಂಪಸೆಟ್ ಗಳನ್ನು ಸಕ್ರಮಗೊಳಿಸಿಕೊಂಡು ಗುಣಮಟ್ಟದ ವಿದ್ಯುತ್ ಪೂರೈಸಲು ಇಲಾಖೆಗೆ ಸಹಕರಿಸಬೇಕೆಂದರು. ಈಗಾಗಲೇ ರೈತ ವರ್ಗಕ್ಕೆ ಗುಣಮಟ್ಟದ ವಿದ್ಯುತ್ ಪೂರೈಸಲು ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿದ್ದು, ತಬಕದ ಹೊನ್ನಳ್ಳಿಯಲ್ಲಿ ವಿದ್ಯುತ್‌ವಿತರಣಾ ಕೇಂದ್ರ ಸ್ಥಾಪನೆಗೊಳ್ಳಲಿದ್ದು, ದೇವಿಕೊಪ್ಪದಲ್ಲೂವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ತಂಬೂರ ಗ್ರಾಪಂ ಅಧ್ಯಕ್ಷರಾದಿಯಾಗಿ ಸದಸ್ಯರೆಲ್ಲರೂ ವಸತಿರಹಿತರಿಗೆ ನಿವೇಶನ ಒದಗಿಸಲು 3 ಎಕರೆ ಜಮೀನು ಕಲ್ಪಿಸುವಂತೆ ಒತ್ತಾಯಿಸಿದರು. ತಾಪಂ ಮಾಜಿ ಅಧ್ಯಕ್ಷ ಫಕ್ಕೀರೇಶನೆಸ್ರೇಕರ ತಂಬೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ಸ್ಥಳಾವಕಾಶ ಒದಗಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ಅಡುಗೆ ಅನಿಲದ ಅರ್ಜಿಗಳು ಎರಡು ವರ್ಷ ಕಳೆಯುತ್ತ ಬಂದರೂ ಇನ್ನೂ ಸಂಪರ್ಕ ಸಿಕ್ಕಿಲ್ಲ. ಸೀಮೆಎಣ್ಣೆ ಸಿಗುತ್ತಿಲ್ಲ ಎಂದು ಹಲವರು ಹೇಳುತಿದ್ದಂತೆಯೇ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಅಶೋಕ ಶಿಗ್ಗಾವಿ ಸಂಬಂಧಿಸಿದ ಸಿಬ್ಬಂದಿಗೆ ಅಹವಾಲು ಪಡೆದು ಪರಿಹರಿಸುವಂತೆ ಸೂಚಿಸಿದರು.ಗ್ರಾಮಸ್ಥ ಮಣ್ಣಪ್ಪ ಮಡಿವಾಳರ ಜಮೀನು ಹಾಗೂ ಹಳ್ಳಕ್ಕೆ ಹೋಗಲು ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಿಸಲು ಅವಕಾಶ ಕಲ್ಪಿಸುವಂತೆ ವಿನಂತಿಸಿದರು. ತಂಬೂರ ಗ್ರಾಪಂ ವ್ಯಾಪ್ತಿಯ ಅರಣ್ಯಕ್ಕೆ ಹೊಂದಿಕೊಂಡ ರಸ್ತೆಗಳು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬೇಕೆಂಬ ಬೇಡಿಕೆಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಎಮ್. ವೈ.ಚಲವಾದಿ ತಿಳಿಸುತ್ತಿದ್ದಂತೆ ರೈತರಿಗೆ ಅನುಕೂಲವಾಗುವಂತೆ ಪರಿಶೀಲನೆ ನಡೆಸಲು ತಹಸೀಲ್ದಾರ್ ಸೂಚಿಸಿದರು.
ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಮ್.ಎಸ್. ಮೇಟಿ ಮಾತನಾಡಿ, ರಾಜ್ಯ-ಕೇಂದ್ರ ಸರ್ಕಾರಗಳ ಸಹಾಯಧನದೊಂದಿಗೆ ಗ್ರಾಪಂ ಮತ್ತು ಸಾರ್ವಜನಿಕರ ವಂತಿಗೆಯ ಸಹಯೋಗದಲ್ಲಿಒಬ್ಬ ವ್ಯಕ್ತಿಗೆ 55 ಲೀಟರ್‌ನಂತೆ ಪ್ರತಿ ಕುಟುಂಬಕ್ಕೂ ಅವಶ್ಯಕಕುಡಿಯುವ ನೀರನ್ನು 2024ರೊಳಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್. ಕಟ್ಟೆಗೌಡರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಮ್.ವೀಣಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದಬಲರಾಮ ಚವ್ಹಾಣ, ಭೂಮಾಪನ ಇಲಾಖೆಯ ಶಿವಶಂಕರ್ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ,ಆರೋಗ್ಯ ಇಲಾಖೆಯ ಡಾ|ಎಸ್.ಬಿ.ನಿಂಬಣ್ಣವರ, ಡಾ|ಬಸವರಾಜ ಬಾಸೂರ, ಸಮಾಜ ಕಲ್ಯಾಣ ಇಲಾಖೆಯ ಎ.ಜಿ. ಯೊಗಪ್ಪನವರ್ ಸಾರ್ವಜನಿಕರ ಅಹವಾಲುಗಳಿಗೆ ಉತ್ತರಿಸಿದರು. ಕಾರ್ಮಿಕ ಹಾಗೂ ಪಶುಸಂಗೋಪನಾ ಇಲಾಖೆ ಸೇರಿದಂತೆ ಕೆಲವು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಿರುವುದು ಕಂಡು ಬಂದಿತು. ಜಿಪಂ ಸದಸ್ಯೆ ವಿದ್ಯಾ ಬಾವನವರ, ತಾಪಂ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯಬಸವರಾಜ ಬಾವಕಾರ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಬಾವುಕಾರ, ಉಪಾಧ್ಯಕ್ಷ ನಿಂಗಪ್ಪ ಬೈಚವಾಡ, ಸದಸ್ಯರಾದ ಶೋಭಾ ಕಮ್ಮಾರ, ಪಾರವ್ವ ಮುಂಡಗಿ, ಮಂಜುಳಾ ಲಮಾಣಿ, ಗೌಸಿಯಾ ಮುಲ್ಲಾನವರ, ಪರಶುರಾಮ ಹುಲಗೋಡ, ಇಮಾಮ್‌ಸಾಬ್ ಗಂಜಿಗಟ್ಟಿ, ಮಾಂತೇಶ ಚಿಕ್ಕಲಗಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
ಹೊಸ ವರ್ಷದ ಕೊಡುಗೆ: ಬೈಸಿಕಲ್ ಉತ್ತೇಜನಕ್ಕೆ ಉಚಿತ ರೈಡ್
Laxmi Hebbalkar ಮತ್ತೊಂದು ದೂರು ನೀಡಿದ ಅನಂತರವಷ್ಟೇ ಮುಂದಿನ ಕ್ರಮ: ಹೊರಟ್ಟಿ
Hubballi: ಹಳೇ ವೈಷಮ್ಯದಿಂದ ಸಹಚರರೊಂದಿಗೆ ಸೇರಿ ಹಲ್ಲೆ; ವ್ಯಕ್ತಿ ಮೃತ್ಯು
Hubli: ತುಂಬು ಗರ್ಭಿಣಿ ಸಾವು; ಪತಿಯೂ ಆತ್ಮಹತ್ಯೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.