ಹೊರರಾಜ್ಯ ರಂಗ ಕಲಾವಿದರಿಂದ ಯಕ್ಷಹೆಜ್ಜೆ

ಉಡುಪಿ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ತರಬೇತಿ

Team Udayavani, Feb 22, 2021, 5:20 AM IST

ಹೊರರಾಜ್ಯ ರಂಗ ಕಲಾವಿದರಿಂದ ಯಕ್ಷಹೆಜ್ಜೆ

ಉಡುಪಿ: ಕರಾವಳಿಯ ಗಂಡು ಕಲೆ ಎನಿಸಿದ ಯಕ್ಷಗಾನದ ಹೆಜ್ಜೆಗಳು ಈಗ ಹೊರರಾಜ್ಯದತ್ತ ಹೆಜ್ಜೆ ಇಡಲು ಅಣಿಯಾಗಿವೆ. ಉಡುಪಿ ಎಂಜಿಎಂ ಕಾಲೇಜಿನ ಯಕ್ಷಗಾನ ಕೇಂದ್ರದಲ್ಲಿ ವಿವಿಧ ರಾಜ್ಯಗಳ 16 ರಂಗಭೂಮಿ ಕಲಾವಿದರು ಯಕ್ಷಗಾನ ನಾನಾ ಆಯಾಮಗಳನ್ನು ಕಲಿಯುತ್ತಿದ್ದಾರೆ.

ಕೇವಲ ರಂಗಭೂಮಿ ಕಲಾವಿದರಲ್ಲದೆ ಭರತನಾಟ್ಯದಂತಹ ಕ್ಷೇತ್ರದವರೂ ಇಲ್ಲಿ ಸೇರಿಕೊಂಡಿದ್ದಾರೆ. ಹಿಂದೆ ಕಳರಿಪಯಟ್‌, ಕೂಡಿಯಾಟ್ಟಂ, ಕಥಕ್ಕಳಿ ಕಲೆಯನ್ನು ಕಲಿಯಲು ಹೊರ ರಾಜ್ಯದ ರಂಗಭೂಮಿ ಕಲಾವಿದರು ಕೇರಳಕ್ಕೆ ಹೋಗುತ್ತಿದ್ದರು. ಯಕ್ಷಗಾನದ ಸಾಧ್ಯತೆಗಳು ಮತ್ತು ರಂಗಕ್ರಿಯೆ ಕಲಿಯಲು ಈಗ ಉಡುಪಿಗೆ ಬರುವಂತಾಗಿದೆ.

20 ದಿನಗಳವರೆಗೆ ಕಾರ್ಯಾಗಾರ
ಈ ಕಲಾವಿದರಿಗೆ ಬೇಕಾದಂತಹ ಪಠ್ಯಗಳನ್ನೂ ರಚಿಸಿ ಕೊಡಲಾಗಿದೆ. ಫೆ. 20 ರಂದು ಆರಂಭಗೊಂಡ ಕಾರ್ಯಾಗಾರ 20 ದಿನಗಳವರೆಗೆ ಯಕ್ಷಗಾನ ತಾಳ, ಸ್ವರ ಅಭ್ಯಾಸ, ವೀಡಿಯೋ ಮೂಲಕ ದೃಶ್ಯವೀಕ್ಷಣೆ, ಕುಣಿತ ಅಭ್ಯಾಸ, ಆಂಗಿಕ ಅಭ್ಯಾಸ ಇತ್ಯಾದಿಗಳನ್ನು ಕಲಿಸಲಾಗುತ್ತಿದೆ.

ಪರಂಪರೆಯ ನೃತ್ಯ ಕಲಿಕೆ
ಯುದ್ಧ ನೃತ್ಯ, ಜಲಕ್ರೀಡೆ, ಪ್ರಯಾಣ ಕುಣಿತ, ಸುತ್ತು ಬಲಿ, ಮಲ್ಲಯುದ್ಧ, ಕತ್ತಿ ಪಡೆ ಹೀಗೆ ಹಲವು ರಂಗ ಕ್ರಿಯೆಗಳು ಯಕ್ಷಗಾನದಲ್ಲಿವೆ. ಆದರೆ ಇವುಗಳು ಈಗ ಯಕ್ಷಗಾನ ಪ್ರದರ್ಶನದಲ್ಲಿ ಹೆಚ್ಚಾಗಿ ಕಂಡುಬರುತ್ತಿಲ್ಲ.

ಇದಕ್ಕೆ ಕಾರಣ ಗುರುಪರಂಪರೆಯಿಂದ ಇದನ್ನು ಕಲಿಯಬೇಕಾಗಿದೆ. ಹಳೆಯ ಪರಂಪರೆಯ ಕಲಾವಿದರನ್ನು ಬಿಟ್ಟರೆ ಹೊಸಬರಿಗೆ ಇದರ ಪರಿಚಯವಿಲ್ಲದೆ ಭಾಗವತರ ಹಾಡಿಗೆ ತಕ್ಕಂತೆ ಕುಣಿತ ಚಾಲ್ತಿಗೆ ಬಂದಿದೆ. ಇದನ್ನು ಕಲಿಯಲು ನಾಲ್ಕೈದು ವರ್ಷಗಳಾದರೂ ಬೇಕು. ಇದನ್ನು ರಂಗಭೂಮಿ ಕಲಾವಿದರಿಗೆ ಕಲಿಸಿದರೆ ನಮ್ಮ ಕಲೆಯ ವೈಶಿಷ್ಟ್ಯಗಳು ಇತರ ರಾಜ್ಯಗಳಿಗೆ ಪ್ರಸಾರವಾಗುತ್ತದೆ ಎಂಬ ಕಾರಣಕ್ಕೆ ಯಕ್ಷಗಾನ ಕೇಂದ್ರದ ಸುವರ್ಣ ಮಹೋತ್ಸವದ ಸಂದರ್ಭ ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎನ್ನುತ್ತಾರೆ ಕೇಂದ್ರದ ಗುರು, ಪ್ರಾಂಶುಪಾಲ ಬನ್ನಂಜೆ ಸಂಜೀವ ಸುವರ್ಣ. ವಿಶೇಷವೆಂದರೆ ಸಂಜೀವ ಸುವರ್ಣರ ಶಿಷ್ಯರೇ ಶಿಬಿರಾರ್ಥಿಗಳಿಗೆ ಕಲಿಸುತ್ತಿರುವುದು.

ಕಾರ್ಯಾಗಾರವನ್ನು ಉಚಿತವಾಗಿ ನಡೆಸಿಕೊಡಲಾಗುತ್ತಿದೆ. 10 ಕಲಾವಿದರಿಗೆ ಅವಕಾಶ ಎಂಬ ಗುರಿ ಇರಿಸಿಕೊಂಡರೂ 16 ಕಲಾವಿದರು ಬಂದಿದ್ದಾರೆ. ಇವರಲ್ಲಿ ಇಬ್ಬರಿಗೆ ಕೊರೊನಾ ಸೋಂಕಿನ ಕಾರಣದಿಂದ ಅವಕಾಶ ಕೊಡಲಿಲ್ಲ.

ರಂಗಭೂಮಿಯಲ್ಲಿ ಅಳವಡಿಸುವ ಉದ್ದೇಶ
ಪ್ರಸಾದನ, ಮಾತು, ಹೆಜ್ಜೆಗಳನ್ನು ರಂಗಭೂಮಿ ಕ್ಷೇತ್ರದಲ್ಲಿ ಅಳವಡಿಸಲು ಸಾಧ್ಯ ಎನ್ನುತ್ತಾರೆ ಚೆನ್ನೈನಿಂದ ಆಗಮಿಸಿದ ಬೆಂಗಳೂರಿನವರಾದ ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಕವಿತಾ. ಹೀಗೆ ಮಹಾರಾಷ್ಟ್ರ ನಾಶಿಕ್‌ನ ಯಶೋದಾ ಸಂಜಯ್‌, ಪೂಜಾ ವೇದವಿಖ್ಯಾತ್‌, ಮುಂಬಯಿನ ಲತಾ ಎಸ್‌. ಸಿಂಗ್‌, ಬೆಂಗಳೂರಿನ ಮುತ್ತುಕುಮಾರ್‌, ಗುಜರಾತ್‌ ವಡೋದರದ ಚೌಹಾಣ್‌ ಪ್ರಮೋದ್‌, ಜೈಪುರದ ವಿಶಾಲ್‌ ಚೌಧರಿ, ಲಖನೌನ ವಿಕಾಸ್‌, ಮೋಸಮ್‌ ಖಾನ್‌, ದಿಲ್ಲಿಯ ಧೃತಿ, ಅತುಲ್‌ ಸಿಂಗ್‌, ಅಜೀತ್‌ ಶರ್ಮಾ, ಬೆಂಗಳೂರಿನಲ್ಲಿರುವ ಕುಂದಾಪುರ ಮೂಲದ ಕುಮಾರಿ ಜಲಜಾ ಮೊದಲಾದವರು ಉತ್ಸುಕತೆಯಿಂದ ಯಕ್ಷಗಾನ ಕಲೆಯ ಸಾಧ್ಯತೆಗಳನ್ನು ಕಲಿಯ ಹೊರಟಿದ್ದಾರೆ.

ಟಾಪ್ ನ್ಯೂಸ್

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

Train: ಮುರುಡೇಶ್ವರ ಎಕ್ಸ್‌ಪ್ರೆಸ್‌ ಸಮಯ ಬದಲಾವಣೆ ಬೇಡ

yadiyurappa

B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1

Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.