ಜಿಪಂ 2 ಕ್ಷೇತ್ರ ಹೆಚ್ಚಳ, ತಾಪಂ 19 ಕ್ಷೇತ್ರ ಕಡಿತ
ಕ್ಷೇತ್ರ ಪುನರ್ ವಿಂಗಡಣೆ , ಆಕಾಂಕ್ಷಿಗಳಿಗೆ ಕ್ಷೇತ್ರಗಳ ಹುಡುಕಾಟ, 35 ಸಾವಿರ ಜನಸಂಖ್ಯೆಗೆ ಒಂದು ಜಿಪಂ ಕ್ಷೇತ್ರ
Team Udayavani, Feb 22, 2021, 12:11 PM IST
ದೇವನಹಳ್ಳಿ: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಅವಧಿ ಮುಕ್ತಾಯ ಹಂತಕ್ಕೆ ಬಂದಿದ್ದು, ಚುನಾವಣೆ ದೃಷ್ಟಿಯಿಂದ ಕ್ಷೇತ್ರ ಪುನರ್ ವಿಂಗಡಣೆ ಮಾಡಿದೆ. ಜಿಪಂ ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಎರಡು ಕ್ಷೇತ್ರ ಹೆಚ್ಚಳವಾಗಿದೆ. ತಾಪಂಗೆ 19 ಕ್ಷೇತ್ರ ಇಳಿಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 23 ಜಿಪಂ ಕ್ಷೇತ್ರ, 58 ತಾಪಂ ಕ್ಷೇತ್ರಗಳನ್ನು ಚುನಾವಣಾ ಆಯೋಗ ನಿಗದಿಗೊಳಿಸಿದೆ.
ಇತ್ತೀಚೆಗೆ ತಾಪಂ ರದ್ದು ಮಾಡಿ, ಕೇವಲ ಎರಡು ಹಂತದ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಮುಂದಾಗಿತ್ತು. ಇದು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಕ್ಷೇತ್ರ ಪುನರ್‌ವಿಂಗಡಣೆಯಿಂದ ತಾಪಂ ರದ್ದಾಗುವುದಿಲ್ಲ ಎಂಬುವುದು ರಾಜಕೀಯ ನಾಯಕರ ವಿಶ್ಲೇಷಣೆಯಾಗಿದೆ.
ಗ್ರಾಮಮಟ್ಟಕ್ಕೆ ಆಡಳಿತ ತಲುಪಿಸುವ ಉದ್ದೇಶದಿಂದ ಚುನಾವಣಾ ಆಯೋಗವು ತಾಪಂ, ಜಿಪಂ ಕ್ಷೇತ್ರಗಳ ಪುನರ್‌ವಿಂಗಡಣೆಗೆ ಸಿದ್ಧತೆ ಮಾಡುವಂತೆ ಸೂಚನೆ ನೀಡಿದ್ದು, ಮುಂದಿನ ಚುನಾವಣೆಗೆ ತಾಪಂ ಸ್ಥಾನಗಳ ಸಂಖ್ಯೆ ಕಡಿಮೆಯಾಗಲಿದ್ದು, ಜಿಪಂ ಸ್ಥಾನ ಹೆಚ್ಚಾಗಲಿವೆ. ಆಯೋಗದ ಆದೇಶದಂತೆ ಜಿಲ್ಲೆಯಲ್ಲಿ ಹೊಸದಾಗಿ ಎರಡು ಜಿಪಂ ಕ್ಷೇತ್ರ ಸೃಷ್ಟಿಯಾಗಲಿದ್ದು, ತಾಪಂನ 19 ಕ್ಷೇತ್ರಗಳು ರದ್ದಾಗಲಿವೆ.
ಗ್ರಾಮವನ್ನೇ ಕ್ಷೇತ್ರದ ಹೆಸರು: ಭೌಗೋಳಿಕವಾಗಿ ಗ್ರಾಪಂಗಳನ್ನು ಸೇರಿಸಿಕೊಳ್ಳಲಾಗಿದೆ. ಜಿಪಂ ಮತ್ತು ತಾಪಂ ಕ್ಷೇತ್ರಗಳಿಗೆ ಅನುಗುಣವಾಗಿ ಮತದಾರರ ಸಂಖ್ಯೆ ಹಾಗೂ ಗ್ರಾಮ ದೊಡ್ಡದಾಗಿದ್ದರೆ, ಆ ಗ್ರಾಮವನ್ನೇ ಕ್ಷೇತ್ರವನ್ನಾಗಿ ಹೆಸರಿಸಬಹುದು. ಈಗಾಗಲೇ ತಾಲೂಕುಗಳಲ್ಲಿ ಕ್ಷೇತ್ರಗಳ ಬದಲಾವಣೆ ಆಗದಿದ್ದರೆ ಆ ತಾಲೂಕಿನಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ತಿಳಿಸಿದೆ.
ದೇವನಹಳ್ಳಿ: ತಾಲೂಕಿನಲ್ಲಿ ನಾಲ್ಕು ಇದ್ದ ಜಿಪಂ ಕ್ಷೇತ್ರಗಳು ಇದೀಗ ಒಂದು ಜಿಪಂ ಹೆಚ್ಚುವರಿ ಯಾಗಿದ್ದು, ಒಟ್ಟು 5 ಜಿಪಂ ಕ್ಷೇತ್ರಗಳಲ್ಲಿ 5 ಜಿಪಂ ಸದಸ್ಯರನ್ನು ಒಳಗೊಂಡಿರುತ್ತದೆ. ಯಾವ ಕ್ಷೇತ್ರ ಜಿಪಂ ಕ್ಷೇತ್ರವಾಗಲಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಹೊಸಕೋಟೆ: ತಾಲೂಕಿನಲ್ಲಿ ಈ ಹಿಂದೆ 6 ಜಿಪಂ ಕ್ಷೇತ್ರಗಳಿದ್ದು, ಇದೀಗ ಒಂದು ಕ್ಷೇತ್ರ ಹೆಚ್ಚುವರಿಯಾಗುವ ಮೂಲಕ 7ಕ್ಕೇರಿದೆ. ಅಲ್ಲಿಯೂ ಸಹ ಯಾವ ಕ್ಷೇತ್ರ ಹೊಸದಾಗಿ ಸೇರ್ಪಡೆಗೊಳ್ಳುತ್ತದೆ ಎಂಬುವುದು ಜನರಲ್ಲಿ ಕೂತೂಹಲ ಮೂಡಿಸಿದೆ.
ರಾಜ್ಯ ಚುನಾವಣಾ ಆಯೋಗದ ಕ್ಷೇತ್ರಗಳ ಪುನರ್ ವಿಂಗಡಣೆ ಆದೇಶ ಪರಿಣಾಮ ಚುನಾವಣೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಕ್ಷೇತ್ರ ಹುಡುಕಾಟದ ತಲೆಬಿಸಿ ಶುರುವಾಗಿದೆ. ತಾಪಂ ಕ್ಷೇತ್ರಗಳು ಇಳಿಕೆಯಾಗಿರುವುದರಿಂದ ಯಾವ ಕ್ಷೇತ್ರ ರದ್ದಾಗುತ್ತದೆ ಎಂಬ ಚಿಂತೆ ಸದಸ್ಯರನ್ನು ಕಾಡುತ್ತಿದೆ.
ತಾಪಂ, ಜಿಪಂ ಅಧಿಕಾ ರ ಏಪ್ರಿಲ್ ಅಂತ್ಯಕ್ಕೆ ಮುಗಿಯಲಿದ್ದು, ಚುನಾವಣೆಯನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಆಯೋಗ 2011ರ ಜನಗಣತಿ ಪ್ರಕಾರ ಕ್ಷೇತ್ರ ಪುನರ್ ವಿಂಗಡನೆ ಮಾಡಿದೆ. – ಸಿ.ನಾರಾಯಣಸ್ವಾಮಿ, ಮಾಜಿ ಸಂಸದ
ತಾಪಂ ಕ್ಷೇತ್ರಗಳನ್ನು ರದ್ದುಗೊಳಿಸುತ್ತಿರುವುದರಿಂದ ಗೊಂದಲ ಮೂಡಿಸುವಂತಿದೆ. ಜನಸಂಖ್ಯೆ ಆಧಾರದಲ್ಲಿ ಕಡಿಮೆ ಮಾಡಿರುವುದು ಒಳ್ಳೆಯದು. ಕ್ಷೇತ್ರಗಳಿಗೆ ಈಗ ಬರುತ್ತಿರುವ ಅನುದಾನ ಸಾಲದಾಗಿದ್ದು, ಹೆಚ್ಚಿಸಿದರೆ ಅನುಕೂಲವಾಗಲಿದೆ. ತಾಪಂರದ್ದುಗೊಳಿಸಿದರೆ ಸ್ಥಳೀಯ ಅಧಿಕಾರ ಮೊಟುಕುಗೊಳಿಸುವಂತೆ ಆಗುವುದರ ಜೊತೆಗೆ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. – ಕಾರಹಳ್ಳಿ ಶ್ರೀನಿವಾಸ್, ತಾಪಂ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Tragic: ಮದುವೆ ಹರಕೆ ಹೊತ್ತು ಘಾಟಿ ದೇಗುಲಕ್ಕೆ ಬಂದಿದ್ದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI: ಶ್ರೀಲಂಕಾ ಬ್ಯಾಟಿಂಗ್ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kundapura: ಗುಲ್ವಾಡಿ; ಗಾಯಾಳು ಸಾವು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.