ಹುಲಿ, ಆನೆ ಯೋಜನೆಗೆ ಅನುದಾನ ಕಡಿತ
ಕೇಂದ್ರ ಬಜೆಟ್‌ನಲ್ಲಿ ವನ್ಯಜೀವಿ ಸಂರಕ್ಷಣೆಗಿಲ್ಲ ಒತ್ತು, ರಾಜ್ಯ ಬಜೆಟ್‌ನಲ್ಲಾ ದರೂ ಅನುದಾನ ಹೆಚ್ಚಳಕ್ಕೆ ಪರಿಸರವಾದಿಗಳ ಕೂಗು
Team Udayavani, Feb 22, 2021, 1:20 PM IST
ಸಂಗ್ರಹ ಚಿತ್ರ
ಮೈಸೂರು: ಜಗತ್ತಿನಲ್ಲೇ ಅತಿಹೆಚ್ಚು ಹುಲಿ, ಆನೆ ಹಾಗೂ ಅರಣ್ಯ ಸಂಪತ್ತನ್ನು ಹೊಂದಿರುವ ಭಾರತದಲ್ಲಿ ಅವುಗಳ ರಕ್ಷಣೆಗೆ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಿ ನಿರ್ಲಕ್ಷಿಸಿದೆ.
ವಿಶ್ವದ ಮತ್ಯಾವ ರಾಷ್ಟ್ರದಲ್ಲೂ ಇಲ್ಲದ ಹುಲಿ, ಆನೆ ಹಾಗೂ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿಭಾರತದಲ್ಲಿ ನೆಲೆ ಕಂಡುಕೊಂಡಿವೆ. ದೇಶದಲ್ಲಿ 51 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ 2018ರ ರಾಷ್ಟ್ರೀಯ ಹುಲಿ ಗಣತಿ ಪ್ರಕಾರ 2,967ಹುಲಿ, 2017ರ ಆನೆ ಗಣತಿ ಪ್ರಕಾರ 27,312 ಆನೆ ಹಾಗೂ 2015ರ ಸಮೀಕ್ಷೆ ಪ್ರಕಾರ 9,265 ಚಿರತೆಗಳು ದೇಶ ದಲ್ಲಿವೆ. ಹೀಗಿದ್ದರೂ ಇತ್ತೀಚೆಗೆ ಕೇಂದ್ರಹಣಕಾಸು ಸಚಿವೆ ಮಂಡಿಸಿದ ಬಜೆಟ್‌ನಲ್ಲಿ ಹುಲಿ ಮತ್ತು ಆನೆ ಯೋಜನೆಗೆಕಡಿಮೆ ಪ್ರಮಾಣದ ಅನುದಾನ ನೀಡಿರುವುದು ಪರಿಸರವಾದಿಗಳಲ್ಲಿ ಬೇಸರ ಮೂಡಿಸಿದೆ. ಜೊತೆಗೆ ದೇಶದಲ್ಲಿ ವನ್ಯಜೀವಿಗಳ ಸಂರಕ್ಷಣೆಗೆ ಹಣದ ಕೊರತೆ ಎದುರಾಗುವ ಸಾಧ್ಯತೆ ಗೋಚರಿಸಿದೆ.
ದೇಶದಲ್ಲಿ 51 ಹುಲಿ ಯೋಜನೆಗಳಿದ್ದು, ಜಗತ್ತಿನಲ್ಲಿರುವ ಒಟ್ಟು ಹುಲಿಗಳಲ್ಲಿ ಶೇ.70ರಷ್ಟು ವ್ಯಾಘ್ರಗಳು ಭಾರತದಲ್ಲೇ ವಾಸಿಸುತ್ತಿವೆ. 1973ರ ಅವಧಿಯಲ್ಲಿ ಭಾರತದಲ್ಲಿ ಬೆರಳೆಣಿಕೆಯಷ್ಟಿದ್ದ ಹುಲಿಗಳ ಸಂಖ್ಯೆ ಈಪ್ರಮಾಣದಲ್ಲಿ ಏರಿಕೆಯಾಗಲು ಹುಲಿ ಯೋಜನೆ ಮಹತ್ವದ ಪಾತ್ರ ವಹಿಸಿದೆ.
ಹೀಗಿರುವಾಗ ಸರ್ಕಾರಗಳು ಇಂತಹ ಯೋಜನೆಗೆ ವರ್ಷದಿಂದ ವರ್ಷಕ್ಕೆ ಮತ್ತಷ್ಟುಅನುದಾನ ಹೆಚ್ಚಿಸಿ ಉತ್ತೇಜನ ನೀಡಬೇಕು. ಆದರೆ, ಇರುವ ಅನುದಾನ ಕಡಿತ ಮಾಡಿದರೆ ವನ್ಯಜೀವಿಗಳ ಸಂರಕ್ಷಣೆಗೆ ಆರ್ಥಿಕ ಸಂಪನ್ಮೂಲದ ಕೊರತೆ ಎದುರಾಗುವ ಸಾಧ್ಯತೆ ಇದೆ.
ಅನುದಾನದ ಬಳಕೆ ಹೇಗೆ: ಆನೆ ಮತ್ತು ಹುಲಿ ಯೋಜನೆಯಡಿ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಪ್ರಾದೇಶಿಕಅರಣ್ಯ ಪ್ರದೇಶಗಳಿಗೆ ಸೇರಿದ ಮೀಸಲು ಅರಣ್ಯಗಳಲ್ಲಿ ಆನೆ, ಹುಲಿ ಆವಾಸಸ್ಥಾನಗಳ ಸಂರಕ್ಷಣೆ, ಆನೆ ನಿರೋಧಕ ಕಂದಕ, ಸೌರ ವಿದ್ಯುತ್ ಬೇಲಿಗಳ ನಿರ್ಮಾಣ ಮತ್ತು ನಿರ್ವಹಣೆ, ಕ್ಷಿಪ್ರ ಸ್ಪಂದನ ತಂಡಗಳ ರಚನೆ, ಕಳ್ಳ ಬೇಟೆ ತಡೆ ಶಿಬಿರಗಳು, ಆನೆ ಹಿಮ್ಮೆಟ್ಟಿಸುವ ಶಿಬಿರಗಳ ರಚನೆ ಮತ್ತು ನಿರ್ವಹಣೆ, ಹಾವಳಿ ನಡೆಸುವ ಪುಂಡಾನೆಗಳ ಸೆರೆ ಹಿಡಿದು ಸ್ಥಳಾಂತರಿಸುವುದು. ಹುಲಿ, ಕಾಡಾನೆಗಳನ್ನು ಸೆರೆಹಿಡಿಯಲು ಬಳಸುವ ಔಷಧ ಮತ್ತು ಉಪಕರಣಗಳ ಖರೀದಿ, ಅನಾರೋಗ್ಯ ಮತ್ತು ಗಾಯಗೊಂಡ ಹುಲಿ, ಆನೆಗಳ ಆರೈಕೆ ಮಾಡುವುದು, ಮರಣೋತ್ತರ ಪರೀಕ್ಷೆಗೆ ಮುಂತಾದ ವಿಚಾರಗಳಲ್ಲಿ ಪಶುವೈದ್ಯರಿಗೆ ತರಬೇತಿ ನೀಡುವುದು, ಅವುಗಳಆವಾಸ ಪ್ರದೇಶಗಳಲ್ಲಿ ಹಾಗೂ ಸುತ್ತಮುತ್ತ ಅವುಗಳ ಸಂರಕ್ಷಣೆ ಮತ್ತು ಸಂತತಿ ಉಳಿಸುವಿಕೆಯ ಬಗ್ಗೆಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇನ್ನಿತರ ಅಗತ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರತಿ ಬಜೆಟ್‌ನಲ್ಲೂ ಅನುದಾನ ಮೀಸಲಿಡಲಾಗುತ್ತದೆ. ಆದರೆ, ಕಳೆದೆರೆಡು ಸಾಲಿಗೆ ಹೋಲಿಸಿದರೆ ಈ ಬಾರಿಯ ಸಾಕಷ್ಟು ಅನುದಾನ ಕಡಿತವಾಗಿದೆ.
50 ಕೋಟಿ ಕಡಿತ: ಹುಲಿ ಯೋಜನೆಗೆ (ಪ್ರಾಜೆಕ್ಟ್ ಟೈಗರ್) ಕೇಂದ್ರ ಸರ್ಕಾರ 2019-20ರಲ್ಲಿ 282 ಕೋಟಿ ರೂ., 2020-21ರಲ್ಲಿ 300 ಕೋಟಿ ಅನುದಾನ ನೀಡಲಾಗಿತ್ತು. ಆದರೆ, ಈ ಬಾರಿಯ 2021-22 ಬಜೆಟ್‌ನಲ್ಲಿ 250 ಕೋಟಿ ನೀಡುವ ಮೂಲಕ 50 ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ.
ಆನೆ ಯೋಜನೆಗೂ ಕತ್ತರಿ: ದೇಶದಲ್ಲಿ ಆನೆ ಸಂತತಿ ಉಳಿವಿಗಾಗಿ ಆರಂಭಿಸಿದ ಆನೆ ಯೋಜನೆಗೆ ಕೇಂದ್ರ ಸರ್ಕಾರ 2019-2020ರಲ್ಲಿ 32 ಕೋಟಿ ರೂ. 2020-2021ರಲ್ಲಿ 35 ಕೋಟಿ ರೂ. ನೀಡಿತ್ತು. ಆದರೆ, ಈ ವರ್ಷ 33 ಕೋಟಿ ರೂ. ಮೀಸಲಿಡುವ ಮೂಲಕ 2 ಕೋಟಿ ರೂ. ಕಡಿತಗೊಳಿಸಿದೆ. ಜೊತೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ 2019-20ರಲ್ಲಿ 8.50 ಕೋಟಿ ರೂ.ನೀಡಿದ್ದ ಸರ್ಕಾರ, 2020-21ರಲ್ಲಿ 10.50 ಕೋಟಿ ರೂ. ನೀಡಿತ್ತು. ಆದರೆ. 2021-22ರ ಬಜೆಟ್‌ನಲ್ಲಿ 50 ಲಕ್ಷ ರೂ.ಕಡಿತ ಮಾಡಿ 10 ಕೋಟಿ ರೂ.ಗೆ ಇಳಿಸಿದೆ.
ವನ್ಯಜೀವಿಗಳ ಅವಾಸಸ್ಥಾನ ವಿಸ್ತರಣೆ ಪ್ರೋತ್ಸಾಹಕ್ಕೆ 2019-20ರಲ್ಲಿ 155 ಕೋಟಿ ರೂ., 2020-21ರಲ್ಲಿ 148 ಕೋಟಿ ರೂ. ಹಣ ನೀಡಿದ್ದ ಸರ್ಕಾರ ಈ ವರ್ಷ ಅದನ್ನು 116 ಕೋಟಿ ರೂ.ಗೆ ಇಳಿಸುವ ಮೂಲಕವನ್ಯಜೀವಿ ಮತ್ತು ಅರಣ್ಯವನ್ನು ಅನುತ್ಪಾದಕ ವಲಯಎಂದು ಭಾವಿಸಿದಂತಿದೆ ಎಂದು ವನ್ಯಜೀವಿ ತಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಜೆಟ್‌ನಲ್ಲಾದರೂ ಅನುದಾನ ಹೆಚ್ಚಿಸಿ: ಕರ್ನಾಟಕ ರಾಜ್ಯವು ಅತಿ ಹೆಚ್ಚು ಹುಲಿ, ಆನೆಸೇರಿದಂತೆ ಅಪರೂಪದ ವನ್ಯಜೀವಿಗಳನ್ನು ಹೊಂದಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಈ ಬಾರಿಯಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡುವಮೂಲಕ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡಲಿ ಎಂಬುದು ಪರಿಸರವಾದಿಗಳ ಆಶಯವಾಗಿದೆ.
ಜಗತ್ತಿನ ಸದ್ಯದ ಪರಿಸ್ಥತಿ ಗಮನಿಸಿದರೆ ಅರಣ್ಯ ಪರಿಸರ ಅವನತಿಯತ್ತಸಾಗಿದೆ. ನಾವೆಲ್ಲರೂ ಪರಿಸರವನ್ನುಒಂದಲ್ಲ ಒಂದು ರೀತಿ ನಿರ್ಲಕ್ಷ್ಯ ಮಾಡಿಕೊಂಡೇ ಬಂದಿದ್ದೇವೆ. ಆಳುವ ಸರ್ಕಾರಗಳು ಸಹಾ ಪರಿಸರವನ್ನು ಅನುತ್ಪಾದಕವಲಯ ಎಂದು ಭಾವಿಸಿವೆ. ಈ ಮನೋ ಭಾವ ಬದಲಾಗಿ ಪರಿಸರ, ಅರಣ್ಯ,ವನ್ಯಜೀವಿಯತ್ತ ಹೆಚ್ಚು ಆಸಕ್ತಿ ವಹಿಸ ಬೇಕು. ಆದರೆ ಇದಕ್ಕೆ ಪೂರಕವಾದ ಬಜೆಟ್ ನೀಡದೇ ಇರುವುದು ದುರಾದೃಷ್ಟಕರ. – ಕೃಪಾಕರ, ವನ್ಯಜೀವಿ ತಜ್ಞರು
ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿಹುಲಿ ಯೋಜನೆ, ಆನೆ ಯೋಜನೆ ಗಳಿಗೆ ಅನುದಾನ ಕಡಿತಗೊಳಿಸಿರುವುದು ಖುಷಿಯ ವಿಚಾರ. ಹೆಚ್ಚು ಅನುದಾನನೀಡಿದರೆ ಅಧಿಕಾರಿಗಳು ಕಾಡಿನಲ್ಲಿಇಲ್ಲಸಲ್ಲದ ಅಭಿವೃದ್ಧಿ ಮಾಡಿ, ಕಾಡನ್ನುಹಾಳುಗೆಡುವುತ್ತಾರೆ. ಸರ್ಕಾರಗಳು ಕಾಡುಮತ್ತು ವನ್ಯ ಜೀವಿಗಳ ರಕ್ಷಣೆಗಷ್ಟೇಅನುದಾನ ನೀಡಬೇಕು. – ಕೆ.ಎಂ.ಚಿಣ್ಣಪ್ಪ, ನಿವೃತ್ತ ಅರಣ್ಯಾಧಿಕಾರಿ
– ಸತೀಶ್ ದೇಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.