ಶೂನ್ಯದಿಂದ ಸಮೃದ್ಧ ಬದುಕು ಕಟ್ಟಿಕೊಂಡ ಸಾಹಸಿ ಉದ್ಯಮಿ
ಮುಂಬೈನಲ್ಲಿ ವ್ಯಾಪಾರ ಕೈ ಕೊಟ್ಟಾಗ ಊರಿಗೆ ಮರಳಿದ್ದ ಶ್ರೀಪಾದ ಹೆಗಡೆ, 2 ಎಕರೆಯಲ್ಲಿ ಕೃಷಿ ಉತ್ಪನ್ನ ಮೌಲ್ಯವರ್ಧನೆ, ಮಾರುಕಟ್ಟೆ ವಿಸ್ತರಣೆಗೆ ದೇಶಪಾಂಡೆ ಫೌಂಡೇಷನ್ ಬಲ
Team Udayavani, Feb 22, 2021, 3:45 PM IST
ಹುಬ್ಬಳ್ಳಿ: ಬಿಎಸ್ಸಿ ಪದವೀಧರ ಕೆಲಸಕ್ಕೆಂದು ಮುಂಬೈಗೆ ಹೋಗಿ ಅಲ್ಲಿಯೇ ವ್ಯಾಪಾರ ಆರಂಭಿಸಿದ್ದರು. ವ್ಯಾಪಾರದಲ್ಲಿ ಕೈ ಸುಟ್ಟುಕೊಂಡು ಬರಿಗೈ ದಾಸರಾಗಿ ಊರಿಗೆ ಬಂದರು. ಪ್ರಯೋಜನಕ್ಕೆ ಬಾರದವರೆಂಬ ಮೂದಲಿಕೆಗೆ ಒಳಗಾಗಿದ್ದರು. ಪಿತ್ರಾರ್ಜಿತವಾಗಿ ಸಿಕ್ಕ 2 ಎಕರೆ ಹೊಲದಲ್ಲೇ ಸಾವಯವ ಕೃಷಿಗಿಳಿದಿದ್ದು, ವಿವಿಧ ಉತ್ಪನ್ನಗಳೊಂದಿಗೆ ಸಮೃದ್ಧ ಬದುಕು ಕಟ್ಟಿಕೊಂಡು ಜರ್ಮನಿಗೂ ಉತ್ಪನ್ನ ಕಳುಹಿಸಿದ ಖ್ಯಾತಿ ಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಂಡೆಮನೆಯ ಶ್ರೀಪಾದ ಹೆಗಡೆ ಅವರ ಸಾಧನೆ ಇದು. ಕಳೆದ 15 ವರ್ಷಗಳಿಂದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಔಷಧಿ ಗುಣವುಳ್ಳ ಆಯುರ್ವೇದಉತ್ಪನ್ನಗಳ ತಯಾರಿಯಲ್ಲಿ ತೊಡಗಿದ್ದು,ಬೆಂಗಳೂರು ಸೇರಿದಂತೆ ವಿವಿಧ ಕಡೆ ಉತ್ಪನ್ನ ರಫ್ತು ಮಾಡುತ್ತಿದ್ದು, ಅದೆಷ್ಟೋ ರೈತರು, ಯುವಕರಿಗೆ ಪ್ರೇರಣೆಯಾಗಿದ್ದಾರೆ.
ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಹರ್ಬಲ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಶ್ರೀಪಾದ ಹೆಗಡೆಯವರು, ಗೋಕರ್ಣದಲ್ಲಿ ನಡೆದ ವಿಶ್ವಹವ್ಯಕ ಸಮ್ಮೇಳನದಲ್ಲಿ ಆರಂಭಿಸಿದ ಮೌಲ್ಯವರ್ಧನೆ ಉತ್ಪನ್ನಗಳ ಮಾರಾಟ ಅಭಿಯಾನ ಮುಂದುವರಿದಿದೆ.ಇವರ ಯತ್ನಕ್ಕೆ ಇದೀಗ ದೇಶಪಾಂಡೆ ಫೌಂಡೇಶನ್ ಮಾರುಕಟ್ಟೆ ವಿಸ್ತರಣೆ ಸಾಥ್ ನೀಡುತ್ತಿದೆ.
ಶೂನ್ಯದಿಂದ ಕೃಷಿ ಪಯಣ: ಮುಂಬೈನಲ್ಲಿ ವ್ಯಾಪಾರ ಕೈಕೊಟ್ಟು ನಷ್ಟ ತಂದೊಡ್ಡಿದಾಗ ಇರುವುದಕ್ಕೆ ಉಚಿತವಾಗಿ ದೊರೆತ ಕೋಣೆ ಒಂದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಮುಂಬೈನಲ್ಲಿದ್ದ ರಾಘವೇಂದ್ರ ಮಠಕ್ಕೆ ತೆರಳಿ ಅಲ್ಲಿ ಸೇವೆ ಮಾಡುವುದು, ಅಲ್ಲಿಯೇ ಭೋಜನ ಸೇವಿಸಿ ಬರುವುದು ಮಾಡಿದ್ದರು. ನಂತರಸ್ವಂತ ಗ್ರಾಮ ಮಂಡೆಮನೆಗೆ ಬಂದು ಅಣ್ಣನ ಮನೆಯಲ್ಲಿ ಉಳಿದು ಕೊಂಡಿದ್ದರಾದರೂ ಏನು ಮಾಡಬೇಕೆಂದು ತೋಚದಾಗಿದ್ದರು.
ಹಿರಿಯರು ಈತ ಏನನ್ನೂ ಮಾಡಲಾರ, ಮುಂದೊಂದು ದಿನ ಓಡಿ ಹೋಗುತ್ತಾನೆ ಎಂದೇ ಹೇಳುತ್ತಿದ್ದರು. ಕೊನೆಗೂ ಪಿತ್ರಾರ್ಜಿತವಾಗಿ ದೊರೆತ ಎರಡು ಎಕರೆ ಜಮೀನಿನಲ್ಲಿ ಕೃಷಿಗೆ ಮುಂದಾಗಿದ್ದರು. ಹಲವು ಸಂಕಷ್ಟ-ಸಮಸ್ಯೆಗಳನ್ನು ಮೆಟ್ಟಿ ನಿಂತು ಯಶಸ್ಸಿನ ಹೆಜ್ಜೆ ಇರಿಸತೊಡಗಿದರು. ಹೊಲದಲ್ಲಿ ಅಡಕೆ, ತೆಂಗು, ಬಾಳೆ, ಕಾಳು ಮೆಣಸು ಇನ್ನಿತರೆ ಬೆಳೆ ಬೆಳೆಯುತ್ತಿದ್ದು, ಅವುಗಳ ಮೌಲ್ಯವರ್ಧನೆಜತೆಗೆ ಸುತ್ತಮುತ್ತ ರೈತರು ಬೆಳೆಯುವ ಉತ್ಪನ್ನ, ನಿಸರ್ಗದತ್ತವಾಗಿ ಸಿಗುವ ಉತ್ಪನ್ನಗಳನ್ನು ತಂದು ಮೌಲ್ಯವರ್ಧನೆ ಮಾಡುತ್ತಿದ್ದಾರೆ.
64 ಉತ್ಪನ್ನಗಳ ಮಾರಾಟ: ಶ್ರೀಪಾದ ಹೆಗಡೆ ಅವರು ಕೃಷಿಯಲ್ಲಿ ಒಂದಿಷ್ಟು ಚೇತರಿಸಿಕೊಂಡು, ಮನೆನಿರ್ಮಾಣ ಮಾಡಿದರು. ಪತ್ನಿ ಮನೆಯವರು ಕೇರಳ ಮೂಲದವರಾಗಿದ್ದರಿಂದ ಅತ್ತೆ ಅವರಿಗೆ ಗೊತ್ತಿರುವಆಯುರ್ವೇದ ಹಾಗೂ ವನಸ್ಪತಿ ಉತ್ಪನ್ನಗಳಬಳಕೆ, ಮೌಲ್ಯವರ್ಧನೆ ಪರಿಚಯವಾಗಿತ್ತು.ಜತೆಗೆ ಬಿಎಸ್ಸಿಯಲ್ಲಿ ಜಿಯೋಲಾಜಿ ಕಲಿತಿದ್ದರಿಂದಸುಲಭವಾಗಿ ಅರ್ಥೈಸಿಕೊಳ್ಳುವಿಕೆಯೊಂದಿಗೆ ಸಂಬಂಧಿಸಿದ ಕೃತಿಗಳ ಓದಿನೊಂದಿಗೆ ಮಾಹಿತಿ ಸಂಗ್ರಹಿಸಿದ್ದರು.
ಪರಿಣಾಮ ಇಂದು ಸುಮಾರು 64 ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಕೋಕಂ ರಸ ತೆಗೆಯದೆಯೇ ನೇರವಾಗಿ ಅದನ್ನು ಪೌಡರ್ ಮಾಡಿದ್ದು, ಕೋಕಂನಿಂದ ಬೆಣ್ಣೆ ತಯಾರಿಸಿ ಮಾರಾಟ ಮಾಡಿದ್ದಾರೆ. ಅನೇಕ ನಾಟಿ ವೈದ್ಯರೊಂದಿಗೆ ಸಂಪರ್ಕಹೊಂದಿದ್ದು, ಅವರಿಗೆ ತಿಳಿದಿರುವ ಕಾಡು ಉತ್ಪನ್ನಗಳು, ಆಯುರ್ವೇದ-ಔಷಧೀಯ ಸಸ್ಯಗಳ ಮಾಹಿತಿ ಪಡೆದು ಅವುಗಳ ಮೌಲ್ಯವರ್ಧನೆ ಕಾರ್ಯದಲ್ಲಿ ತೊಡಗಿದ್ದಾರೆ.
ಜರ್ಮನ್‌ನಲ್ಲಿ ಹೋಟೆಲ್ ಹೊಂದಿರುವ ಮಹಿಳೆಯೊಬ್ಬರಿಗೆ ಎರಡು ವರ್ಷಗಳವರೆಗೆ ಕೋಕಂ ಪೌಡರ್, ವಾಟೆಹುಳಿ, ಶುಂಠಿ ಪೌಡರ್, ಅರಿಶಿಣ, ಮಸಾಲಾ ಇನ್ನಿತರೆ ಸಾಮಗ್ರಿ ಕಳುಹಿಸಿದ್ದಾರೆ.ಇಂದಿಗೂ ಬೆಂಗಳೂರು ಇನ್ನಿತರೆ ಕಡೆಗಳಲ್ಲಿ ಸುಮಾರು64 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಇದರಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಉತ್ಪನ್ನಗಳಪ್ರದರ್ಶನ, ಮಾರಾಟ ಮೇಳದಲ್ಲಿ ಇರಿಸುತ್ತಿದ್ದು, ಉಳಿದವುಗಳನ್ನು ಬೇಡಿಕೆ ಆಧಾರದಲ್ಲಿ ತಯಾರಿಸಿನೀಡುತ್ತಿದ್ದಾರೆ.
ಆಲೆಮನೆ ಹೊಂದಿದ್ದರಾದರೂ ನಿರ್ವಹಣೆ ಸಾಧ್ಯವಾಗದೆ ಕೈಬಿಟ್ಟಿದ್ದರು. ಇದೀಗ ಮತ್ತೆ ಆಲೆಮನೆಮಾಡಬೇಕೆಂಬ ಚಿಂತನೆಗೆ ಮುಂದಾಗಿದ್ದು, ಅದಕ್ಕಾಗಿ ಕಬ್ಬು ನಾಟಿಗೆಂದು ಜಮೀನು ಗುರುತಿಸಿತಯಾರಿಯಲ್ಲಿ ತೊಡಗಿದ್ದಾರೆ. ಹಲ್ಲು ನೋವು ಇನ್ನಿತರೆ ಕೆಲವೊಂದು ಸಮಸ್ಯೆಗಳಿಗೆ ಆಯುರ್ವೇದ ಪದ್ಧತಿಯ ಪರಿಹಾರವನ್ನು ಉಚಿತವಾಗಿ ಕೈಗೊಳ್ಳುತ್ತಿದ್ದಾರೆ.
ಆರೋಗ್ಯ ಹಾಗೂ ಶುದ್ಧ ಆಹಾರ ಪರಿಕಲ್ಪನೆಯಲ್ಲಿ ವಿವಿಧ ಉತ್ನನ್ನಗಳನ್ನುನೀಡುತ್ತಿದ್ದೇನೆ. 22 ವಿವಿಧ ಹರ್ಬಲ್‌ಉತ್ಪನ್ನಗಳನ್ನು ಬಳಸಿ ಹರ್ಬಲ್ ಚಹಾತಯಾರಿಸಿದ್ದೇನೆ. ಅದೇ ರೀತಿ ಹರ್ಬಲ್ ಹೇರ್ ಆಯಿಲ್, ನೋವು ನಿವಾರಕ ಎಣ್ಣೆ ತಯಾರಿಸಿದ್ದೇನೆ. ಇನ್ನಷ್ಟು ಉತ್ಪನ್ನಗಳ ಚಿಂತನೆ ಇದೆ. –ಶ್ರೀಪಾದ ಹೆಗಡೆ, ಸಾವಯವ ರೈತ ಮಂಡೆಮನೆ
–ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.