ದೇಶಕ್ಕಿದೆ ಕುಶಲಕರ್ಮಿಗಳ ಅವಶ್ಯಕತೆ: ಶರಣಪ್ಪ
ಕೌಶಲ್ಯಕ್ಕೆ ಪೂರಕವಾಗುವ ದಿಸೆಯಲ್ಲಿ ಕಾರ್ಯನ್ಮುಖ ರಾಗುವುದೇ ನಿಜವಾದ ಕ್ಷಮತೆ
Team Udayavani, Feb 22, 2021, 4:14 PM IST
ಬೀದರ: ದೇಶಕ್ಕೆ ಪರಿಪೂರ್ಣ ಕುಶಲಕರ್ಮಿಗಳ ಅವಶ್ಯಕತೆ ಇದೆ. ಗುಣಮಟ್ಟದ ವಸ್ತುಗಳು ಉತ್ಪಾದನೆಯಾಗಲು ಕುಶಲಕರ್ಮಿಗಳ ಕ್ಷಮತೆ ತುಂಬಾ ಅವಶ್ಯಕತೆಯಾಗಿದೆ. ಐಟಿಐ ತರಬೇತಿದಾರರಲ್ಲಿ ಸೀಮಿತ ವಿಚಾರ ಬೇಡ ಇದರಲ್ಲಿಯೇ ತಾವು ಪರಿಪೂರ್ಣತೆ ಮೈಗೂಡಿಸಿಕೊಂಡರೆ ಉನ್ನತ ಮಟ್ಟದ ಸ್ಥಾನದ ಜತೆಗೆ ಕೈತುಂಬ ಸಂಬಳ ಸಿಗುವುದರಲ್ಲಿ ಸಂದೇಹವಿಲ್ಲ ಎಂದು ಪ್ರಾಚಾರ್ಯ ಪ್ರೊ. ಶರಣಪ್ಪ ಬಿರಾದಾರ ಹೇಳಿದರು.
ಔರಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿದಾರರ ಪಾಲಕರ ಸಭೆ ಹಾಗೂ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (ಎನ್.ಟಿ.ಸಿ.) ವಿತರಣ
ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕು ಕಟ್ಟಿಕೊಡಲು ಶ್ರಮ ಜೀವಿಗಳಾಗಿರಿ. ದಿನನಿತ್ಯ ಪ್ರಾಯೋಗಿಕ ಪಾಠ ಕರಗತ ಮಾಡಿಕೊಳ್ಳಲು
ಮನಸ್ಸು ಇಚ್ಛಾಶಕ್ತಿ ಒಂದಾಗಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ಯುವ ಮುಖಂಡ ಶಿವರಾಜ ಅಲ್ಮಾಜೆ ಮಾತನಾಡಿ, ಪಾಲಕರಾದವರು ಮಕ್ಕಳ ಜತೆಗೆ ದಿನಾಲೂ ಸಮಾಲೋಚನೆ ಮಾಡಬೇಕು. ತಮ್ಮ ಮಕ್ಕಳು ಪ್ರವೇಶ ಪಡೆದುಕೊಂಡ ಮೇಲೆ ಅವರ ಸಂಪರ್ಕ ಇಟ್ಟುಕೊಂಡು ಅರ್ಥೈಸಿಕೊಳ್ಳಬೇಕು. ಅವರಲ್ಲಿ ಓದು ಕಡಿಮೆಯಾಗುತ್ತಿದ್ದರೆ ಸಂಬಂಧಪಟ್ಟ ಸಿಬ್ಬಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಪಾಲಕರ ಪರವಾಗಿ ಗಂಗನಬೀಡದ ಗಣಪತಿ ಪವಾರ, ತುಳಜಾಪೂರದ ಕಲಾವತಿ, ಮುಧೋಳ (ಬಿ) ಮುನ್ನಾಬಿ, ಖೇರ್ಡಾದ ನೀಲಕಂಠ, ವಡಗಾಂವದ ಯೇಸುದಾಸ, ಎಕಲಾರದ ಬಬನ್ ರಾಠೊಡ ತಮ್ಮ ವಿಚಾರ ವ್ಯಕ್ತಪಡಿಸಿ ಮನೆಯ ಬಾಗಿಲಿಗೆ ಕೌಶಲ್ಯತೆಯ ಕಳಕಳಿ ಮುಟ್ಟಿಸುವ ಕಾರ್ಯ ಶ್ಲಾಘನೀಯ. ಮಕ್ಕಳು ಮೊಬೈಲ್ ಬಳಸುತ್ತಿರುವುದರಿಂದ ಅನೇಕ ಸಂಕಷ್ಟ ಎದುರಿಸುತ್ತಿದ್ದೇವೆ. ತಮ್ಮಂಥವರು ಮಕ್ಕಳಿಗೆ ಕೌಶಲ್ಯ ಜತೆಗೆ ಅಚ್ಚಕಟ್ಟುತನದ ಸಂಸ್ಕೃತಿಗೆ ಎಡೆಮಾಡಿ ಕೊಡುತ್ತಿರುವ ಈ ಸಭೆ ಮುಂಬರುವ ದಿನಗಳಲ್ಲಿ ತರಬೇತಿದಾರರ ಭವಿಷ್ಯತೆಗೆ ಇದು ಬುನಾದಿ ನೀಡಲಿದೆ ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಅನೇಕ ತೊಂದರೆಗಳು ಇರುವುದು ಸಹಜ. ಆದರೆ ಸಂಕಷ್ಟಗಳನ್ನು ಇಷ್ಟದಂತೆ ಸ್ವೀಕರಿಸಿ ತರಬೇತಿದಾರರ ಕೌಶಲ್ಯಕ್ಕೆ ಪೂರಕವಾಗುವ ದಿಸೆಯಲ್ಲಿ ಕಾರ್ಯನ್ಮುಖ ರಾಗುವುದೇ ನಿಜವಾದ ಕ್ಷಮತೆ. ತರಬೇತಿದಾರರಿಗೆ ಅಗತ್ಯ ಮೂಲ ವ್ಯವಸ್ಥೆ ಮಾಡಲಾಗಿದೆ. ಆದರೂ ನಿಗದಿತ ಸಮಯಕ್ಕೆ ಬಾರದೆ ಇರುವುದರಿಂದ ಅನಿವಾರ್ಯವಾಗಿ ಇಂದು ಪಾಲಕರ ಸಭೆ ಆಯೋಜಿಸಿದೆ. ದಯವಿಟ್ಟು ಪಾಲಕರಾದವರು ಮೇಲಿಂದ ಮೇಲೆ ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಕೌಶಲ್ಯ ಕಲಿಯಲು ಸಹಕರಿಸಬೇಕು ಎಂದು ಪ್ರಾರ್ಥಿಸಿದರು.
ಸಿಬ್ಬಂದಿಗಳಾದ ಸತೀಷ ಬಳ್ಳೂರೆ, ಚಂದ್ರಮೋಹನ ಬಂಗಾರೆ, ಸುಜಾತ ಗೋವಿಂದ, ಸಂಗಮೇಶ ಜೋಜನಾ, ಸಂತೋಷ ಹಕ್ಯಾಳೆ ಇದ್ದರು. ಆಡಳಿತಾಧಿ ಕಾರಿ ಅಸದುಲ್ ಬೇಗ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಬಂಬುಳಗೆ ದಯಾನಂದ ನಿರೂಪಿಸಿದರು. ಹುಲಸೂರೆ ಚಂದ್ರಕಾಂತ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!
Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ
Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ
Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.