ಬೈಡೆನ್ ಅಮೆರಿಕ ಅಧ್ಯಕ್ಷರಾದರೆ ಪಾಕಿಸ್ತಾನಕ್ಕೆ ಯಾಕೆ ಹೆಚ್ಚು ಖುಷಿ?ಭಾರತದ ಮೇಲೇನು ಪರಿಣಾಮ
ಗಡಿ ವಿವಾದದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಬೆನ್ನಿಗೆ ನಿಂತಿರುವುದನ್ನು ಅಲ್ಲಗಳೆಯುವಂತಿಲ್ಲ.
Team Udayavani, Nov 7, 2020, 11:44 AM IST
ವಾಷಿಂಗ್ಟನ್:ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರ್ಯಾಟ್ ಪಕ್ಷದ ಜೋ ಬೈಡೆನ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವ ಹಾದಿಯಲ್ಲಿದ್ದಾರೆ. ಆದರೆ ಬಹುತೇಕ ಭಾರತೀಯರ ಲೆಕ್ಕಾಚಾರದ ಪ್ರಕಾರ ಅಧಿಕಾರದಲ್ಲಿರುವ ಡೊನಾಲ್ಟ್ ಟ್ರಂಪ್ ಪುನರಾಯ್ಕೆಗೊಂಡರೆ ಉತ್ತಮ ಎಂಬುದಾಗಿದೆ. ಯಾಕೆಂದರೆ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತಮ ಗೆಳೆಯರಾಗಿದ್ದಾರೆ ಎಂಬುದು.
ಜೋ ಬೈಡೆನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ ಭಾರತೀಯರು ಹೆಚ್ಚಿನ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಟ್ರಂಪ್ ರೀತಿಯಲ್ಲಿಯೇ ಬೈಡೆನ್ ಅಧಿಕಾರಾವಧಿಯಲ್ಲಿಯೂ ಭಾರತ ಮತ್ತು ವಾಷಿಂಗ್ಟನ್ ನಡುವಿನ ಸ್ನೇಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ಹೇಳಿದೆ.
ಆದರೆ ಕೆಲವು ವಿಶ್ಲೇಷಕರ ಪ್ರಕಾರ, ಬೈಡೆನ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಭಾರತಕ್ಕೆ ತುಂಬಾ ಒಳ್ಳೆಯ ಸುದ್ದಿಯಲ್ಲ. ನೆರೆಯ ಪಾಕಿಸ್ತಾನ ಇದರಿಂದ ಹೆಚ್ಚು ಸಂತಸಗೊಳ್ಳಲಿದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ:ಟ್ರಂಪ್ ಗೆ ಮುಖಭಂಗ: ಪೆನ್ಸಿಲ್ವೇನಿಯಾ ಮತಎಣಿಗೆ ತಡೆಗೆ ಅಮೆರಿಕ ಸುಪ್ರೀಂಕೋರ್ಟ್ ನಕಾರ
ಪ್ರಸ್ತುತ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದದ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ಭಾರತದ ಬೆನ್ನಿಗೆ ನಿಂತಿರುವುದನ್ನು ಅಲ್ಲಗಳೆಯುವಂತಿಲ್ಲ. ಆದರೇ ಅದೇ ರೀತಿ 77 ವರ್ಷದ ಜೋ ಬೈಡೆನ್ ನವದೆಹಲಿ ಮತ್ತು ಚೀನಾವನ್ನು ಮಾತುಕತೆ ಕರೆಯಬಹುದು, ಹಾಗಂತ ಟ್ರಂಪ್ ಭಾರತವನ್ನು ಬಹಿರಂಗವಾಗಿ ಬೆಂಬಲಿಸಿದಂತೆ ಬೈಡೆನ್ ಮಾಡಲಾರರು. ಇನ್ನೂ ಒಂದು ಸ್ಪಷ್ಟವಾದ ವಿಚಾರವೆನೆಂದರೆ ಟ್ರಂಪ್ ರೀತಿ ಬೈಡೆನ್ ಕೂಡಾ ಭಾರತ ಜತೆಗಿನ ಸಂಘರ್ಷವನ್ನು ನಿಲ್ಲಿಸುವಂತೆ ಚೀನಾದ ಮೇಲೆ ಒತ್ತಡ ಹೇರುವುದಿಲ್ಲ ಎಂದು ವರದಿ ವಿಶ್ಲೇಷಿಸಿದೆ.
ಕಳೆದ ವರ್ಷ ಭಾರತ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಆರ್ ಸಿ)ಯನ್ನು ಜಾರಿಗೊಳಿಸಿದ್ದಕ್ಕೆ ಬೈಡೆನ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ರೀತಿ ಡೆಮಾಕ್ರ್ಯಾಟ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಕೂಡಾ, 370ನೇ ವಿಧಿಯನ್ನು ರದ್ದುಪಡಿಸಿದ್ದರ ಬಗ್ಗೆ ನೀಡಿದ್ದ ಹೇಳಿಕೆಯನ್ನೂ ಕೂಡಾ ಭಾರತ ಮರೆತಿಲ್ಲ ಎಂದು ಹೇಳಿದೆ.
ಕಾಶ್ಮೀರಿಗಳು ಕೂಡಾ ಏಕಾಂಗಿಯಲ್ಲ. ನಾವು ಕಾಶ್ಮೀರದಲ್ಲಿನ ಸನ್ನಿವೇಶದ ಬಗ್ಗೆ ಅವಲೋಕನ ನಡೆಸುತ್ತಿದ್ದೇವೆ. ಒಂದು ವೇಳೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂಬ ಒತ್ತಾಯಕೇಳಿ ಬಂದರೆ ನಾವು ಮಧ್ಯಪ್ರವೇಶಿಸುವುದಾಇ ಹೇಳಿದ್ದರು. ವಿಶ್ಲೇಷಕರ ಪ್ರಕಾರ, ಬೈಡೆನ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಈ ವಿಚಾರವನ್ನು ಹೆಚ್ಚು ಪ್ರಸ್ತಾಪಿಸದಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಬೈಡೆನ್ ಗೆ ಅಧ್ಯಕ್ಷಗಾದಿ- ಪಾಕಿಸ್ತಾನಕ್ಕೆ ಸಂತಸ:
ಒಂದು ವೇಳೆ ಜೋ ಬೈಡೆನ್ ಅಮೆರಿಕದ ನೂತನ ಅಧ್ಯಕ್ಞರಾಗಿ ಆಯ್ಕೆಯಾದರೆ ಪಾಕಿಸ್ತಾನಕ್ಕೆ ಹೆಚ್ಚಿನ ಸಂತೋಷವಾಗಲಿದೆ. ಅಷ್ಟೇ ಅಲ್ಲ ಬೈಡೆನ್ ಮಾಜಿ ರಾಯಭಾರಿ ಕೂಡಾ ಆಗಿದ್ದು, ಪಾಕ್ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಜೋ ಬೈಡೆನ್ ಗೆ ಬಹುಪರಾಕ್ ಹೇಳುತ್ತಿದೆ.
2008ರಲ್ಲಿ ಜೋ ಬೈಡೆನ್ ಗೆ ಪಾಕಿಸ್ತಾನ ಸರ್ಕಾರ ತನ್ನ ದೇಶದ ಎರಡನೇ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ “ಹಿಲಾಲ್ ಇ ಪಾಕಿಸ್ತಾನ್” ಅನ್ನು ಕೊಟ್ಟು ಗೌರವಿಸಿತ್ತು. ಪಾಕಿಸ್ತಾನಕ್ಕೆ 1.5 ಬಿಲಿಯನ್ ಡಾಲರ್ ನಷ್ಟು ಹಣಕಾಸಿನ ನೆರವು ಸಿಗುವ ಪ್ರಸ್ತಾಪದ ಹಿಂದೆ ಇದ್ದ ವ್ಯಕ್ತಿ ಜೋ ಬೈಡೆನ್ ಮತ್ತು ಸೆನೆಟರ್ ರಿಚರ್ಡ್ ಲೂಗಾರ್ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.