ಚುನಾವಣೆಯಲ್ಲಿ ಸೋಲು! ಡೊನಾಲ್ಡ್ ಟ್ರಂಪ್ಗೆ ವಿಚ್ಛೇದನ ನೀಡಲಿದ್ದಾರೆಯೇ ಮೆಲಾನಿಯಾ?
Team Udayavani, Nov 9, 2020, 9:13 AM IST
ವಾಷಿಂಗ್ಟನ್ ಡಿಸಿ: ಅಮೆರಿಕ ಚುನಾವಣೆಯಲ್ಲಿ ಸೋತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮತ್ತೂಂದು ಆಘಾತ ಕಾದಿದೆಯೇ? ಹೌದು ಎನ್ನುತ್ತಿವೆ ಮೂಲಗಳು.
ಶ್ವೇತಭವನಕ್ಕೆ ಡೊನಾಲ್ಡ್ ಟ್ರಂಪ್ ಗುಡ್ಬೈ ಹೇಳುತ್ತಿದ್ದಂತೆ, ಟ್ರಂಪ್ಗೆ ಗುಡ್ಬೈ ಹೇಳಲು ಪತ್ನಿ ಮೆಲಾನಿಯಾ ಕಾಯುತ್ತಿದ್ದಾರಂತೆ! ಹೀಗೆಂದು ಶ್ವೇತಭವನದ ಸಿಬಂದಿಯೇ ಮಾಹಿತಿ ನೀಡಿದ್ದಾರೆ.
“15 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿ, ಟ್ರಂಪ್ ಬದುಕಿನಿಂದ ಹೊರನಡೆಯಲು ಮೆಲಾನಿಯಾ ನಿರ್ಧರಿಸಿದ್ದು, ಇದಕ್ಕಾಗಿ ದಿನ ಎಣಿಸುತ್ತಿದ್ದಾರೆ’ ಎಂದು ಸಿಬಂದಿ ಹೇಳಿದ್ದಾರೆ.
ಟ್ರಂಪ್ ಕಂಡರೆ ಹಿಂದಿನಿಂದಲೂ ಮೆಲಾನಿಯಾಗೆ ಅಷ್ಟಕ್ಕಷ್ಟೆ. ಆದರೆ ಅವರು ಅಧಿಕಾರದಲ್ಲಿರುವಾಗಲೇ ತಾವು ವಿಚ್ಛೇದನ ನೀಡಿದರೆ, ಅಧಿಕಾರ ಉಪಯೋಗಿಸಿ ತಮ್ಮನ್ನು ಶಿಕ್ಷಿಸುವ ಸಾಧ್ಯತೆ ಅಧಿಕವಾಗಿದೆ ಎಂಬ ಕಾರಣಕ್ಕಾಗಿಯೇ ಮೆಲಾನಿಯಾ ಇಷ್ಟು ದಿನ ಕಾಯುತ್ತಿದ್ದರು ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ಟ್ರಂಪ್ ಬದುಕಲ್ಲಿ ಸದ್ಯದಲ್ಲೇ ಬಿರುಗಾಳಿ ಏರುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:ಬೈಡೆನ್ ಸರಕಾರದಿಂದ ಭಾರತಕ್ಕಿದೆ ನಿರೀಕ್ಷೆಗಳು
ಸೋಲೊಪ್ಪಲು ಸಲಹೆ ನೀಡಿದ ಟ್ರಂಪ್ ಅಳಿಯ
“ಮಾವಾ ಸೋಲು ಒಪ್ಪಿಕೊಳ್ಳಿ” ಹೀಗೆಂದು ಡೊನಾಲ್ಡ್ ಟ್ರಂಪ್ ಅವರಿಗೆ ಅಳಿಯ ಮತ್ತು ಹಿರಿಯ ಸಲಹೆಗಾರ ಜೆರಾರ್ಡ್ ಕುಶ್ನರ್ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಮಾಧ್ಯಮ ಸಂಸ್ಥೆಗಳು ಡೆಮಾಕ್ರಾಟ್ ಪಕ್ಷದ ಜೋ ಬೈಡೆನ್ ಅವರೇ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ ಎಂದು ವರದಿಗಳನ್ನು ಪ್ರಕಟಿಸಿದ ಬಳಿಕ ಟ್ರಂಪ್ “ಜಯ ಸಾಧಿಸಿದ್ದೇನೆ ಎಂದು ಬೈಡೆನ್ ಆತುರದಿಂದ ಹೇಳಿಕೊಳ್ಳುತ್ತಿದ್ದಾರೆ. ಹೋರಾಟ ಇನ್ನೂ ಮುಕ್ತಾಯವಾಗಿಲ್ಲ’ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ಕುಶ್ನರ್ ಟ್ರಂಪ್ರನ್ನು ಭೇಟಿ ಮಾಡಿ ಹೆಚ್ಚು ವಿವಾದ ಮಾಡದೆ ಚುನಾವಣೆಯಲ್ಲಿ ಸೋಲು ಒಪ್ಪಿಕೊಳ್ಳುವುದು ಸೂಕ್ತ ಎಂದು ಸಲಹೆ ಮಾಡಿದ್ದರೆಂದು ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
ಬಾಹ್ಯಾಕಾಶದಲ್ಲಿ ಕ್ರಿಸ್ಮಸ್ ಆಚರಿಸಿದ ಸುನೀತಾ ವಿಲಿಯಮ್ಸ್
Kazakhstan: ಅಜೆರ್ಬೈಜಾನ್ ಏರ್ ಲೈನ್ಸ್ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.