ಟ್ರಂಪ್ ಪಾರು ಮಾಡಲು ಬಂದ ದೇವದೂತರು! ವೈರಲ್ ಆಯ್ತು ಪೌಲಾ ವೈಟ್ ಹೇಳಿಕೆ
Team Udayavani, Nov 6, 2020, 8:29 AM IST
ವಾಷಿಂಗ್ಟನ್ ಡಿಸಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶಕ್ಕೆ ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಂದ ಎದುರಾಳಿ ಜೋ ಬೈಡನ್ ಮುನ್ನಡೆ ಸಾಧಿಸಿದ್ದಾರೆ. ಆದರೆ ಇದೀಗ ಅಮೆರಿಕದಲ್ಲಿ ‘ದೇವದೂತ’ರ ವಿಚಾರವೊಂದು ಭಾರಿ ವೈರಲ್ ಆಗುತ್ತಿದೆ.
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಸೋಲಿನ ದವಡೆಯಿಂದ ಪಾರು ಮಾಡಲು ದೇವದೂತರು ಆಫ್ರಿಕಾದಿಂದ ಅಮೆರಿಕದತ್ತ ಧಾವಿಸುತ್ತಿದ್ದಾರೆ! ಹೀಗೆ ಹೇಳಿ, ಟ್ರಂಪ್‌ರನ್ನು ಸಂತೈಸುತ್ತಿರುವುದು ಅವರ ಆಧ್ಯಾತ್ಮಿಕ ಸಲಹೆಗಾರ್ತಿ ಪೌಲಾ ವೈಟ್!
ಟ್ರಂಪ್ ಮತ್ತೆ ಗದ್ದುಗೆಗೇರುವ ಸಲುವಾಗಿ ಈಕೆ ನಡೆಸಿದ ಪ್ರಾರ್ಥನೆ ಭಾರೀ ವೈರಲ್ ಆಗಿದೆ. “ನಾನು ವಿಜಯದ ಸದ್ದನ್ನು ಕೇಳುತ್ತಿದ್ದೇನೆ. ದೇವರೇ ಹೇಳಿದ್ದಾನೆ, ಆ ಗೆಲುವು ಈಗಾಗಲೇ ಘಟಿಸಿದೆ. ರಿಪಬ್ಲಿಕನ್‌ಗೆ ಸೋಲುಣಿಸಲು ರಕ್ಕಸಕೂಟಗಳು ಹೋರಾಡುತ್ತಿವೆ. ಆದರೆ, ಟ್ರಂಪ್‌ರನ್ನು ಗೆಲ್ಲಿಸುವುದಕ್ಕಾಗಿಯೇ ಆಫ್ರಿಕಾದಿಂದ ಯೇಸುವಿನ ದೇವದೂತರು ಇಲ್ಲಿಗೆ ಆಗಮಿಸುತ್ತಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:ಅಮೆರಿಕ ಫಲಿತಾಂಶ: ಮುಂದೇನು?
ಪೌಲಾ ವೈಟ್ ರ ಈ ಹೇಳಿಕೆ ಇದೀಗ ಅಮೆರಿಕದಲ್ಲಿ ಸಿಕ್ಕಾಪಟ್ಟೆ ಸುದ್ದಿಮಾಡಿದೆ. ನೆಟ್ಟಿಗರು ಇದೊಂದು “ಅರ್ಥಹೀನ ಪ್ರಾರ್ಥನೆ’ ಎಂದು ಟೀಕಿಸುತ್ತಿದ್ದಾರೆ.
ಟ್ರಂಪ್ ಸೋತರೆ ಅದು ಕೂಡ ದಾಖಲೆ!
ಹಾಲಿ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸೋಲನುಭವಿಸಿದರೆ 1992ರ ಬಳಿಕ ಮೊದಲ ಬಾರಿಗೆ ಎರಡನೇ ಅವಧಿಗೆ ಆಯ್ಕೆಯಾಗದೇ ಇರುವ ಅಭ್ಯರ್ಥಿ ಎಂಬ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ. 1992ರಲ್ಲಿ ನಡೆದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬಿಲ್ ಕ್ಲಿಂಟನ್ ಎದುರು ರಿಪಬ್ಲಿಕನ್‌ನ ಅಭ್ಯರ್ಥಿ, ಆಗಿನ ಅಧ್ಯಕ್ಷ ಜಾರ್ಜ್ ಎಚ್‌ಡಬ್ಲೂ ಬುಷ್ ಸೋಲನುಭವಿಸಿದ್ದರು. ಅಮೆರಿಕದ 100 ವರ್ಷಗಳ ಇತಿಹಾಸದಲ್ಲಿ ಕೇವಲ ಮೂವರು ಮಾತ್ರ 2ನೇ ಅವಧಿಗೆ ಆಯ್ಕೆಯಾಗಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.