ಭಾರತೀಯ ಮೂಲದವರ ಮತ, ದೇಣಿಗೆಯತ್ತ ಚಿತ್ತ!
Team Udayavani, Oct 31, 2020, 5:15 AM IST
ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಪಕ್ಷ ಭಾರತೀಯ ಮೂಲದ ಮತದಾರರತ್ತ ಹೆಚ್ಚು ಗಮನ ಹರಿಸುತ್ತಿವೆ. ಭಾರತೀಯ ಮೂಲದವರ ಸಂಖ್ಯೆ ಒಟ್ಟು ಮತದಾರರ ಪ್ರಮಾಣದಲ್ಲಿ ಕೇವಲ 1 ಪ್ರತಿಶತವಿದೆಯಾದರೂ, ಇವರೆಲ್ಲ ಅಮೆರಿಕದಲ್ಲಿನ ಎರಡನೇ ಅತೀದೊಡ್ಡ ವಲಸಿಗ ಸಮೂಹವಾಗಿದ್ದಾರೆ. 2000-2018ರ ನಡುವೆ ಇಂಡಿಯನ್ ಅಮೆರಿಕನ್ ಜನಸಂಖ್ಯೆ 150 ಪ್ರತಿಶತ ಹೆಚ್ಚಳ ಕಂಡಿದೆ. ಇದೂ ಚಿಕ್ಕ ಪ್ರಮಾಣವೇ ಆದರೂ ಚುನಾವಣೆಯಲ್ಲಿ ನಿರ್ಣಾಯಕವಾಗಬಲ್ಲದು.
ಅತೀದೊಡ್ಡ ಆದಾಯ ವರ್ಗಗಳಲ್ಲಿ ಒಂದು
ಅಮೆರಿಕದಲ್ಲಿ ಅತೀಹೆಚ್ಚು ಆದಾಯ ಇರುವ ವರ್ಗಗಳಲ್ಲೂ ಭಾರತೀಯ ಮೂಲದವರ ಪ್ರಮಾಣ ಅಧಿಕವಿದೆ. ಒಂದು ಅಂದಾಜಿನ ಪ್ರಕಾರ ಅಮೆರಿಕ ದಲ್ಲಿನ ಭಾರತೀಯ ಕುಟುಂಬವೊಂದರ ವಾರ್ಷಿಕ ಸರಾಸರಿ ಆದಾಯ 1 ಲಕ್ಷ ಡಾಲರ್‌ನಷ್ಟಿದೆ (74. 58 ಲಕ್ಷ ರೂಪಾಯಿ). ಇದು ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು.
ಡೆಮಾಕ್ರಾಟ್ ಗಳಿಗೇ ದೇಣಿಗೆ ಹೆಚ್ಚು
ಭಾರತೀಯ ಮೂಲದ ಮತ ದಾರರ ವರ್ಗ ಅಮೆರಿಕದ ಪಕ್ಷಗಳಿಗೆ ದೇಣಿಗೆ ನೀಡುವಲ್ಲೂ ಮುಂದಿವೆ. 2016ರ ಚುನಾವಣೆಯಲ್ಲಿ ಭಾರತೀಯರು ಡೆಮಾಕ್ರಟಿಕ್ ಪಕ್ಷಕ್ಕೆ 75 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ನೀಡಿದ್ದರು. ಅದೇ ವರ್ಷ ಶಲಭ್ ಕುಮಾರ್ ಎನ್ನುವ ಉದ್ಯಮಿಯೊಬ್ಬರೇ ಟ್ರಂಪ್‌ರ ಪಕ್ಷಕ್ಕೆ 6.70 ಕೋಟಿ ರೂಪಾಯಿ ನೀಡಿದ್ದರು. ಈ ಸೆಪ್ಟಂಬರ್ ತಿಂಗಳೊಂದರಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಭಾರತೀಯ ಮೂಲದ ಮತದಾರರು 24 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಸ್ವಿಂಗ್ ಸ್ಟೇಟ್‌ಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ
ಚುನಾವಣ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಟೆಕ್ಸಾಸ್, ಮಿಶಿಗನ್, ಕ್ಯಾಲಿಫೋರ್ನಿಯಾ ಮತ್ತು ಪೆಲ್ಸಿಲ್ವೇನಿಯಾದಂಥ ರಾಜ್ಯಗಳಲ್ಲಿ ಭಾರತೀಯರ ಹಾಗೂ ದಕ್ಷಿಣ ಏಷ್ಯನ್ ಸಮುದಾಯಗಳ ಸಂಖ್ಯೆ ಅಧಿಕವಿದ್ದು, ಚುನಾವಣೆಗೆ ತಿರುವು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಡೆಮಾಕ್ರಾಟ್ಸ್ ಮತ್ತು ರಿಪಬ್ಲಿಕನ್ನರು ಸ್ವಿಂಗ್ ಸ್ಟೇಟ್‌ಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಇಲ್ಲಿಯವರೆಗಿನ ಸಮೀಕ್ಷೆಗಳ ಆಧಾರದಲ್ಲಿ ನೋಡುವುದೇ ಆದರೆ, ಅಮೆರಿಕದಲ್ಲೇ ಹುಟ್ಟಿದ ಭಾರತೀಯ ಕುಟುಂಬದ ಜನ ಡೆಮಾಕ್ರಟಿಕ್ ಪಕ್ಷದ ಪರವಿದ್ದರೆ, ಭಾರತದಲ್ಲಿಯೇ ಹುಟ್ಟಿ ಅಮೆರಿಕದ ಪೌರತ್ವ ಪಡೆದವರು ಡೊನಾಲ್ಡ್ ಟ್ರಂಪ್‌ರ ಪರ ಹೆಚ್ಚು ಒಲವು ಹೊಂದಿದ್ದಾರೆ.
ಭಾರತೀಯ ಭಾಷೆಗಳಲ್ಲಿ ಜಾಹೀರಾತು
ಕಳೆದ ಕೆಲವು ತಿಂಗಳಿಂದ ಟ್ರಂಪ್ ಹಾಗೂ
ಬೈಡೆನ್‌ರ ಟೆಲೀವಿಷನ್ ಜಾಹೀರಾತುಗಳು, ಹಿಂದಿ ಮತ್ತು ಭಾರತದ ಇತರೆ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಟಿವಿ ಏಷ್ಯಾ ಮತ್ತು ಸೋನಿ ಎಂಟಟೇìನ್ಮೆಂಟ್ ಚಾನೆಲ್‌ಗಳಲ್ಲಿ ಈ ಜಾಹೀರಾತುಗಳು ಹೆಚ್ಚು ಪ್ರಚಾರವಾಗುತ್ತಿವೆ.
ಹೌಡಿ ಮೋದಿ, ಟ್ರಂಪ್ ದೋಸ್ತಿ
ಯೂಗೌ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿನ ಭಾರತೀಯ ಮೂಲದ ಮತದಾರರು ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾ ಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿ-ಟ್ರಂಪ್‌ರ ನಡುವೆ ದೋಸ್ತಿ ಹೆಚ್ಚಾಗಿರುವುದರಿಂದಾಗಿ ಮತದಾರರು ಟ್ರಂಪ್‌ರ ಪರವೂ ವಾಲುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷ ಕಮಲಾ ಹ್ಯಾರಿಸ್‌ರನ್ನು ಬಳಸುತ್ತಿದೆಯಾದರೂ, ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದ ಕಮಲಾ ಅವರ ಬಗ್ಗೆ ಈ ಮತ ವರ್ಗದಲ್ಲಿ ಅಷ್ಟು ಸೆಳೆತ ಕಾಣಿಸುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.