ಯಾರ ಕೈಗೆ ಶ್ವೇತ ಭವನದ ಕೀಲಿ ಕೈ?


Team Udayavani, Nov 3, 2020, 6:09 AM IST

ಯಾರ ಕೈಗೆ ಶ್ವೇತ ಭವನದ ಕೀಲಿ ಕೈ?

ಕೋವಿಡ್‌ ಅಪಾಯ ಅಧಿಕವಿದೆಯಾದರೂ, ಆರ್ಥಿಕ ಚೇತರಿಕೆಯ ದೃಷ್ಟಿಯಿಂದ ಕೆಲವು ರಾಜ್ಯಗಳಿಗೆ ನಿರ್ಬಂಧ ಸಡಿಲಿಸಲು ಟ್ರಂಪ್‌ ಆಗ್ರಹಿಸುತ್ತಾ ಬಂದಿದ್ದಾರೆ. ಆರ್ಥಿಕತೆಗೆ ಮರುವೇಗ ನೀಡಲು ಲಕ್ಷಾಂತರ ಕೋಟಿ ರೂಪಾಯಿಗಳ ಪ್ಯಾಕೇಜ್‌ ಒದಗಿಸಿದ್ದಾರೆ. ಕೋವಿಡ್‌ ಪರೀಕ್ಷೆಯ ಪ್ರಮಾಣ ಹೆಚ್ಚಿಸದೇ, ನಿರ್ಬಂಧಗಳನ್ನು ಸಡಿಲಗೊಳಿಸುವುದನ್ನು ವಿರೋಧಿಸುತ್ತಾ ಬಂದಿದ್ದಾರೆ ಬೈಡೆನ್‌.

ಬರ್ನಿ ಬದಲು ಬೈಡೆನ್‌
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಾಗಿ ಫೆಬ್ರವರಿ-ಮಾರ್ಚ್‌ ತಿಂಗಳಿಂದಲೇ ಡೆಮಾಕ್ರಟಿಕ್‌ ಹಾಗೂ ರಿಪಬ್ಲಿಕನ್‌ ಪಕ್ಷಗಳ ನಡುವೆ ಚಟುವಟಿಕೆಗಳು ಆರಂಭವಾಗಿದ್ದವು. ಟ್ರಂಪ್‌ ಅವರೇ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಖಾತ್ರಿಯಿತ್ತಾದರೂ, ಡೆಮಾಕ್ರಟಿಕ್‌ ಪಕ್ಷದಲ್ಲಿ ಗೊಂದಲವಿತ್ತು. ಏಕೆಂದರೆ, ಒಂದು ವರ್ಷದ ಹಿಂದಿನಿಂದಲೂ ಆ ಪಕ್ಷದಲ್ಲಿ 79 ವರ್ಷದ ಬರ್ನಿ ಸ್ಯಾಂಡರ್ಸ್‌ ಡೆಮಾಕ್ರಟಿಕ್‌ ಪ್ರಮುಖ ಚಹರೆಯಾಗಿ ಗುರುತಿಸಿಕೊಂಡಿದ್ದರು, ಆದರೆ ತೀವ್ರ ಎಡಪಂಥೀಯ ನಿಲುವಿನ ಬರ್ನಿ ಅವರಿಗೆ ಪಕ್ಷದಲ್ಲೇ ಬೈಡೆನ್‌ರಿಂದ ಪೈಪೋಟಿಯಿತ್ತು. ಅಧ್ಯಕ್ಷೀಯ ಅಭ್ಯರ್ಥಿಯಾಗುವ ವಿಚಾರದಲ್ಲಿ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಇಬ್ಬರ ನಡುವೆಯೂ ತೀವ್ರ ಸ್ಪರ್ಧೆ ಏರ್ಪಟ್ಟು, ಬೈಡೆನ್‌ ಮೇಲುಗೈ ಸಾಧಿಸಲಾರಂಭಿಸಿದ್ದರು. ಎಪ್ರಿಲ್‌ ತಿಂಗಳಲ್ಲಿ ಬರ್ನಿ ಸ್ಯಾಂಡರ್ಸ್‌ ಅಭ್ಯರ್ಥಿಯಾಗುವ ಆಕಾಂಕ್ಷೆಯಿಂದ ಹಿಂದೆ ಸರಿದದ್ದೇ, ಬೈಡೆನ್‌ ಮುನ್ನೆಲೆಗೆ ಬಂದರು. ಬರ್ನಿ ಬದಲು, ಬೈಡೆನ್‌ ಬಂದರೆ ಟ್ರಂಪ್‌ ಸುಲಭವಾಗಿ ಗೆಲ್ಲುತ್ತಾರೆ ಎಂದು ಪಕ್ಷದಲ್ಲೇ ಅಸಮಾಧಾನ ಹುಟ್ಟಿತಾದರೂ, 8 ವರ್ಷ ಉಪಾಧ್ಯಕ್ಷರಾಗಿ ಅಮೆರಿಕನ್ನರಿಗೆ ಚಿರಪರಿಚಿತರಾಗಿರುವ ಬೈಡೆನ್‌, ಕೆಲವೇ ತಿಂಗಳಲ್ಲಿ ಟ್ರಂಪ್‌ರ ಪ್ರಬಲ ಎದುರಾಳಿಯಾಗಿ ಬದಲಾಗಿದ್ದಾರೆ.

ಚೀನಕ್ಕೆ ಟ್ರಂಪ್‌ ಬೇಡ, ರಷ್ಯಾಗೆ ಬೈಡೆನ್‌ ಬೇಡ?
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಗುಪ್ತಚರ ವಿಭಾಗ ನೂರಾರು ಫೇಕ್‌ನೂÂಸ್‌ ಜಾಲತಾಣಗಳನ್ನು ಸೃಷ್ಟಿಸಿ, ಹಿಲರಿ ವಿರುದ್ಧ ಆನ್‌ಲೈನ್‌ ಅಪಪ್ರಚಾರಕ್ಕೆ ಕೋಟ್ಯಂತರ ಡಾಲರ್‌ವ್ಯಯಿಸಿತ್ತು ಹಾಗೂ ಆ ದೇಶದ ಹ್ಯಾಕರ್‌ಗಳು ಹಿಲರಿ ಮತ್ತು ಇತರೆ ನಾಯಕರ ಇಮೇಲ್‌ಗ‌ಳನ್ನು ಹ್ಯಾಕ್‌ ಮಾಡಿ ಲೀಕ್‌ ಮಾಡಿತು ಎನ್ನುವ ಆರೋಪ ಡೆಮಾಕ್ರಟಿಕ್‌ ಪಕ್ಷದ್ದು. ಆದರೆ ಪುಟಿನ್‌ ಇದನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಈ ಬಾರಿ ಟ್ರಂಪ್‌ತಂಡ ಇಂಥದ್ದೇ ಆರೋಪವನ್ನು ಚೀನ- ಇರಾನ್‌ನ ಮೇಲೆ ಮಾಡುತ್ತಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಈ ಬಾರಿ ಟ್ರಂಪ್‌ ಸೋಲಲಿ ಎಂದು ಚೀನ ಬಯಸುತ್ತಿದೆ, ಬೈಡೆನ್‌ ಸೋಲಲಿ ಎಂಬ ನಿರೀಕ್ಷೆಯಲ್ಲಿ ರಷ್ಯಾ ಇದೆ.

ಈ ಬಾರಿ ಅತ್ಯಧಿಕ ಮತದಾನ?
ಕೋವಿಡ್‌ ಸಂಕಷ್ಟವಿರುವುದರಿಂದ ಮತದಾನ ಪ್ರಮಾಣ ಕಡಿಮೆಯಾ ಗಬಹುದು ಎಂದು ಭಾವಿಸಲಾಗಿತ್ತು. ಆದರೆ ರವಿವಾರದ ವೇಳೆಗೆ 9.3 ಕೋಟಿ ಜನ ಮತ ಚಲಾಯಿಸಿದ್ದಾರೆ. ಈಗಿನ ಮತದಾನ ವೇಗ ನೋಡಿದರೆ ಈ ಬಾರಿ 15 ಕೋಟಿಗೂ ಅಧಿಕ ಜನ ಮತದಾನ ಮಾಡುವ ನಿರೀಕ್ಷೆಯಿದ್ದು, ಒಟ್ಟು 18-19 ಕೋಟಿ ಮತದಾನವಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಕಳೆದ ಬಾರಿ 13 ಕೋಟಿ ಜನ ಮತ ಚಲಾಯಿಸಿದ್ದರು.

ಕೆಸರಿಗೆ ಧುಮುಕಿದ ನಾಯಕರು
ಕಳೆದ ಕೆಲವು ತಿಂಗಳಿಂದ, ಅದರಲ್ಲೂ ಸೆಪ್ಟೆಂಬರ್‌ ತಿಂಗಳಿಂದೀಚೆಗೆ ಬೈಡೆನ್‌ ಮತ್ತು ಟ್ರಂಪ್‌ ನಡುವೆ ವಾಕ್ಸಮರ, ಆರೋಪ-ಪ್ರತ್ಯಾರೋಪ ಹೆಚ್ಚಾಗಿದೆ. ಅದರಲ್ಲೂ ಮೊದಲ ಅಧ್ಯಕ್ಷೀಯ ಚರ್ಚೆಯಲ್ಲಿ ಇವರಿಬ್ಬರ ನಡುವೆ ಮಾತಿಗೆ ಮಾತು ಹೇಗೆ ಬೆಳೆಯಿತೆಂದರೆ, ಎರಡನೇ ಚರ್ಚೆಯಲ್ಲಿ ಹೊಸ ನಿಯಮ ತರಲಾಯಿತು. ಏನೆಂದರೆ, ಒಬ್ಬ ಅಭ್ಯರ್ಥಿ ಮಾತನಾಡುವಾಗ ಇನ್ನೊಬ್ಬರ ಮೈಕ್‌ ಮ್ಯೂಟ್‌ ಮಾಡಲಾಯಿತು.

ಮೈಕ್‌ ಪೆನ್ಸ್‌
ಅಮೆರಿಕದ ಪ್ರಸಕ್ತ ಉಪಾಧ್ಯಕ್ಷ. ಅಮೆರಿಕದ ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಇಂಡಿಯಾನಾ ರಾಜ್ಯದ ಗವರ್ನರ್‌ ಆಗಿ ಆರು ಅವಧಿಗೆ ಪ್ರತಿನಿಧಿಸಿದ್ದಾರೆ.

ಕಮಲಾ ಹ್ಯಾರಿಸ್‌
2 ಅವಧಿಗೆ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಡೆಮಾಕ್ರಟಿಕ್‌ ಪಕ್ಷದಲ್ಲಿ ಬೈಡೆನ್‌ಅನಂತರ ಪ್ರಸಕ್ತ ಅತಿ ಬಲಿಷ್ಠ ನಾಯಕರೆಂಬ ಗರಿಮೆ.

ಭಾರತದ ವಿಚಾರದಲ್ಲಿ ಬೈಡೆನ್‌- ಟ್ರಂಪ್‌
ತಾವು ಯಾವಾಗಲೂ ಭಾರತದ ಪರ ನಿಲ್ಲುವುದಾಗಿ ಹೇಳುತ್ತಾರೆ. ಆದರೆ, ಬೈಡೆನ್‌ ಉಪಾಧ್ಯಕ್ಷರಾಗಿದ್ದಾಗ ಭಾರತಕ್ಕಿಂತ ಚೀನ ಪರ ಹೆಚ್ಚು ವಾಲಿದ್ದರು ಎನ್ನುವ ಆರೋಪವಿದೆ.

ಟ್ರಂಪ್‌ಗೆ ಮೋದಿ ಜತೆ ದೋಸ್ತಿ ಇದೆ. ಆದರೆ ಭಾರತವನ್ನು “ಸುಂಕದ ರಾಜ’ ಎಂದೂ ಹಂಗಿಸಿದ್ದರು. ಜಾಗತಿಕ ಮಾಲಿನ್ಯದಲ್ಲಿ ಭಾರತವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾ ಬಂದಿದ್ದಾರೆ.

ಎಚ್‌-1ಬಿ ವೀಸಾ ಮೇಲಿನ ತಾತ್ಕಾಲಿಕ ರದ್ದತಿಯನ್ನು ತಾವು ತೆಗೆದುಹಾಕುವುದಾಗಿ ಹೇಳುತ್ತಿದ್ದಾರೆ ಬೈಡೆನ್‌. ವಲಸಿಗರು ಅಮೆರಿಕದ ಪ್ರಮುಖ ಶಕ್ತಿ ಎನ್ನುತ್ತಾರೆ.

ಅಮೆರಿಕನ್‌ ಉದ್ಯೋಗಿಗಳ ರಕ್ಷಣೆಗಾಗಿ, ಎಚ್‌-1ಬಿ ವೀಸಾ ಸೇರಿದಂತೆ, ವಿವಿಧ ಉದ್ಯೋಗ ವಿಸಾ ವಿಚಾರದಲ್ಲಿ ನಿರ್ಬಂಧ ಹೇರಿದ್ದು, ಭಾರತೀಯರ ಮುನಿಸಿಗೆ ಪಾತ್ರವಾಗಿದೆ.

ತಾವು ಅಧಿಕಾರಕ್ಕೆ ಬಂದರೆ ಭಾರತ ಮತ್ತು ಅಮೆರಿಕದಲ್ಲಿನ ಮಧ್ಯಮವರ್ಗದ ಬೆಳವಣಿಗೆಗೆ ಪೂರಕವಾಗುವಂಥ
ನೀತಿಗಳನ್ನು ಅನುಷ್ಠಾನ ಮಾಡುವುದಾಗಿ ಭರವಸೆ ನೀಡುತ್ತಾರೆ ಬೈಡೆನ್‌.

ಚೀನ ವಿರುದ್ಧದ ಬಿಕ್ಕಟ್ಟು ತೀವ್ರವಾದರೆ ಅಂಥ ಸಂದರ್ಭದಲ್ಲಿ ಭಾರತದ ಪರ ನಿಲ್ಲುವ ಆಶ್ವಾಸನೆ ನೀಡುತ್ತಾರೆ. ಕ್ವಾಡ್‌ ಒಕ್ಕೂಟದ ಭಾಗವಾಗಿದ್ದುಕೊಂಡು ಭಾರತಕ್ಕೆ ಬೆಂಬಲ ನೀಡುತ್ತಿದ್ದಾರೆ.

ಹವಾಮಾನ ಬದಲಾವಣೆ, ಜಾಗತಿಕ ಆರೋಗ್ಯ, ಉಗ್ರವಾದದ ವಿರುದ್ಧದ ಸಮರದಲ್ಲಿ ಭಾರತದೊಂದಿಗೆ
ಇರುವುದಾಗಿ ಹೇಳುತ್ತಾರೆ.

ಕಾಶ್ಮೀರದ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹಲವು ಬಾರಿ ಹೇಳಿದ್ದಾರೆ. ಆದರೆ ಭಾರತ ಇದನ್ನು ನಿರಾಕರಿಸಿದೆ.

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.