ದೃಢ ನಂಬಿಕೆಯೇ ಈ ಪ್ರಪಂಚದ ಬದುಕು


Team Udayavani, Jun 20, 2022, 6:10 AM IST

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಸಮಸ್ಯೆಗಳ ಸವಾಲು ಬಂದಾಗಲೆಲ್ಲ ಮನಸ್ಸಿನ ಸ್ಥಿತಿ ಅಯೋಮಯ. ಯಾರನ್ನು ನಂಬುವುದು ಎನ್ನುವುದೇ ಗೋಜಲಾಗಿರುವ ವಿಷಯ. ನಂಬಿಕೆ ಎನ್ನುವುದು ಹಾಗೆಯೇ. ಅಳೆದು ತೂಗಿ ನೋಡುವಂತಹುದು. ಮುಳುಗುವ ಸಂದರ್ಭ ಬಂದಾಗ ಹುಲ್ಲು ಕಡ್ಡಿಯ ಮೇಲೂ ನಂಬಿಕೆ ಬರುತ್ತದೆ ಎಂಬುದು ಬೇರೆ ಮಾತು. ಆದರೆ ಯೋಚನೆ ಮಾಡುವಷ್ಟು ಕಾಲವಕಾಶವಿದೆ ಎಂದಾದರೆ ಎಲ್ಲವನ್ನೂ ತಕ್ಕಡಿಗೆ ಹಾಕಿ ತೂಕ ಮಾಡಿಯೇ ನಂಬುವ ಬುದ್ಧಿ ಮನುಷ್ಯನದ್ದು. ಇದೇನೋ ಒಳ್ಳೆಯದೇ. ಆದರೆ ಬದುಕಲ್ಲಿ ಇರಬೇಕಾದದ್ದು ದೃಢ ನಂಬಿಕೆಯಷ್ಟೇ.

ಸುಗ್ರೀವನ ಬಳಿಯಿದ್ದವರು ಅಂತಿಂಥವರಲ್ಲ. ಸ್ವತಃ ಶ್ರೀ ರಾಮಚಂದ್ರ. ಆದರೇನು ಮಾಡೋದು? ಶ್ರೀ ರಾಮನ ನೆರವೊಂದಿದ್ದರೆ ಜಗವನ್ನೇ ಜಯಿಸಬಹುದು ಎಂಬುದು ಜಗತ್‌ಸತ್ಯವಾದರೂ ಸುಗ್ರೀವನಿಗೆ ಮಾತ್ರ ತನ್ನ ಸಮಸ್ಯೆಯು ಈ ಶ್ರೀರಾಮನಿಂದ ಪರಿಹಾರ ಆಗಬಹುದೇ ಎಂಬ ಸಣ್ಣ ಸಂಶಯವಿತ್ತು! ಹಾಗಂತ ಶ್ರೀ ರಾಮ ಮಹಾ ಪರಾಕ್ರಮಿ ಎಂಬ ಸತ್ಯ ಸುಗ್ರೀವನಿಗೆ ಗೊತ್ತಿಲ್ಲವೇನೆಂದಲ್ಲ. ಅದಕ್ಕಾಗಿಯೇ ಹಿಂದೆ ಮುಂದೆ ಯೋಚಿಸದೆ ಆತನ ಸಖ್ಯ ಸಾಧಿಸಿದ್ದು. ಆದರೂ ಅಣ್ಣನಾದ ವಾಲಿಯನ್ನು ಸೋಲಿಸುವ ತಾಕತ್ತು ಈ ಶ್ರೀ ರಾಮನಿಗೆ ಇದೆಯೇ ಎಂಬ ಸಂಶಯ ಸುಗ್ರೀವನದ್ದು! ಕೇಳುವುದುಹೇಗೆ? ಆದರೂ ಮನಸು ತಡೆಯದೆ ಸುಗ್ರೀವ ಕೇಳುತ್ತಾನೆ “ಹೇ ಶ್ರೀ ರಾಮ ಅಂದು ವಾಲಿ ದುಂದುಭಿ ಎನ್ನುವ ರಾಕ್ಷಸನನ್ನು ಕೊಂದು ಅವನ ದೇಹವನ್ನು ತನ್ನ ಎಡದ ಕಾಲಲ್ಲಿ ಜಾಡಿಸಿ ಅದನ್ನು ಈ ಋಷ್ಯ ಶೃಂಗ ಪರ್ವತದ ಮೇಲೆ ಬೀಳುವಂತೆ ಮಾಡಿದ್ದಾನೆ. ಅಂತಹ ಸಾಹಸ ನಿನ್ನಿಂದ ಸಾಧ್ಯವಾಗುತ್ತಿತ್ತೇ’ ಎಂದು! ಶ್ರೀ ರಾಮ ಸ್ವತಃ ಭಗವಂತ.

ಸುಗ್ರೀವನ ಮನವನ್ನು ಅರಿತ ರಾಮ ಕೊಂಚವೂ ತಡಮಾಡದೆ ಅಲ್ಲೇ ಬಿದ್ದಿದ್ದ ರಾಕ್ಷಸನ ಕಳೇಬರವನ್ನು ತನ್ನ ಕಾಲ ಬೆರಳಲ್ಲಿ ಒಂದು ಸಲ ಒಗೆದು ಬಿಡುತ್ತಾನೆ. ಒಗೆದ ರಭಸಕ್ಕೆ ಅದು ದಕ್ಷಿಣದ ಕಡಲನ್ನು ಸೇರುತ್ತದೆಯಂತೆ! ಅಲ್ಲಿಗೆ ಸುಗ್ರೀವನಿಗೆ ನಂಬಿಕೆ ಬಂತು!

ಅದೆಷ್ಟೋ ಸಂದರ್ಭಗಳಲ್ಲಿ ನಮ್ಮ ಪರಿಸ್ಥಿತಿಯೂ ಇದೇ ರೀತಿ ಆಗಿರುತ್ತದೆ. ಒಂದೆಡೆ ಸಂಪೂರ್ಣವಾಗಿ ನಂಬಿರುತ್ತೇವೆ. ಆದರೆ ಅದೆಲ್ಲೋ ಒಂದು ಮೂಲೆಯಲ್ಲಿ ಸಣ್ಣ ಸಂಶಯವೊಂದು ಹಾಗೇ ಉಸಿರಾಡುತ್ತಿರುತ್ತದೆ. ಮನುಷ್ಯರನ್ನು ನಂಬುವ ವಿಚಾರ ಬಿಡಿ. ಸ್ವತಃ ದೇವರನ್ನು ನಂಬುವ ವಿಚಾರದಲ್ಲೂ ನಮ್ಮದು ಇದುವೇ ಕತೆ! ನೀವೇ ನೋಡಿ, ಅದೆಷ್ಟೋ ಬಾರಿ ಕಷ್ಟಗಳು ಬಂದಾಗ ಕಂಡ ಕಂಡ ದೇವರುಗಳಿಗೆ ಹರಕೆ ಹಾಕುವುದು, ಕಾಣುವ ಎಲ್ಲ ಧರ್ಮ ಕ್ಷೇತ್ರಗಳಿಗೆ ತೆರಳುವುದು ನಮ್ಮ ರೂಢಿ. ಇದನ್ನೇ ನಾವು ದೇವರ ಮೇಲಣ ನಂಬಿಕೆ ಎಂದುಕೊಂಡಿರುತ್ತೇವೆಯಷ್ಟೇ. ಆದರೆ ಅದು ನಿಜಕ್ಕೂ ಪರಿಪೂರ್ಣವಾದ ನಂಬಿಕೆ ಅಲ್ಲವೇ ಅಲ್ಲ! ಇಲ್ಲಿ ಅಂತರ್ಗತ ವಾಗಿರುವುದು ಅಪನಂಬಿಕೆಯಷ್ಟೇ! ಯಾಕೆಂದರೆ ಒಂದು ದೇವರ ಮೇಲೆ ನಂಬಿಕೆ ಬಲವಾಗಿದ್ದರೆ, ಅಚಲವಾಗಿದ್ದರೆ ಇನ್ನೊಂದು ದೇವರ ಗರ್ಭಗುಡಿಯ ಮುಂದೆ ನಿಂತು ಅಂಗಲಾಚುವ, ಹರಕೆ ಸಲ್ಲಿಸುವ ಆವಶ್ಯಕತೆಯೇ ಇರುವುದಿಲ್ಲ ಅಲ್ಲವೇ!?

ಸಮಸ್ಯೆಗಳ ಸವಾಲು ಬಂದಾಗಲೆಲ್ಲ ಮನಸ್ಸಿನ ಸ್ಥಿತಿ ಅಯೋಮಯ. ಯಾರನ್ನು ನಂಬುವುದು ಎನ್ನುವುದೇ ಗೋಜಲಾಗಿರುವ ವಿಷಯ. ನಂಬಿಕೆ ಎನ್ನುವುದು ಹಾಗೆಯೇ. ಅಳೆದು ತೂಗಿ ನೋಡುವಂತಹುದು. ಮುಳುಗುವ ಸಂದರ್ಭ ಬಂದಾಗ ಹುಲ್ಲು ಕಡ್ಡಿಯ ಮೇಲೂ ನಂಬಿಕೆ ಬರುತ್ತದೆ ಎಂಬುದು ಬೇರೆ ಮಾತು. ಆದರೆ ಯೋಚನೆ ಮಾಡುವಷ್ಟು ಕಾಲವಕಾಶವಿದೆ ಎಂದಾದರೆ ಎಲ್ಲವನ್ನೂ ತಕ್ಕಡಿಗೆ ಹಾಕಿ ತೂಕ ಮಾಡಿಯೇ ನಂಬುವ ಬುದ್ಧಿ ಮನುಷ್ಯನದ್ದು. ಇದೇನೋ ಒಳ್ಳೆಯದೇ. ಆದರೆ ಬದುಕಲ್ಲಿ ಇರಬೇಕಾದದ್ದು ದೃಢ ನಂಬಿಕೆಯಷ್ಟೇ. ನಂಬಿಕೆ ಅದೆಷ್ಟು ಬಲವಾಗಿರಬೇಕು ಎಂಬುದಕ್ಕೆ ರಾಮಕೃಷ್ಣರು ಒಂದು ದೃಷ್ಟಾಂತ ಒದಗಿಸುತ್ತಾರೆ. ಒಮ್ಮೆ ಶಿಷ್ಯನೋರ್ವ ಬಂದು ನನಗೆ ದೇವರನ್ನು ತೋರಿಸಿ, ದೇವರನ್ನು ತೋರಿಸಿ ಎಂದು ದಿನಾ ದಂಬಾಲು ಬೀಳುತ್ತಿದ್ದ. ನಿನ್ನ ಸಾಧನೆ, ಶ್ರಮ ಸಾಲದು ಇನ್ನಷ್ಟು ಸಾಧಿಸು ಆಮೇಲೆ ದೇವರ ದರ್ಶನ ಮಾಡಿಸುತ್ತೇನೆ ಎಂದು ರಾಮಕೃಷ್ಣರು ದಿನ ದೂಡುತ್ತಲೇ ಇದ್ದರು. ಆ ಶಿಷ್ಯನಾದರೂ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜಪ, ಧ್ಯಾನದಲ್ಲಿ ತೊಡಗಿಕೊಂಡು ಗುರುಗಳೇ ಇನ್ನಾದರೂ ದೇವರನ್ನು ತೋರಿಸಿ ಎಂದು ಬೇಡುತ್ತಿದ್ದ. ಆದರೆ ರಾಮಕೃಷ್ಣರು ಮಾತ್ರ ಸಾಧನೆ ಸಾಲದು, ಸಾಧನೆ ಸಾಲದು ಎಂದು ಮುಂದಕ್ಕೆ ಹಾಕುತ್ತಲೇ ಇದ್ದರು. ಬೇಸತ್ತ ಶಿಷ್ಯ ಕೊನೆಗೆ ಗುರುಗಳೇ ನೀವು ನನ್ನ ಸಾಧನೆ ಸಾಲುತ್ತಿಲ್ಲ ಎಂದು ಸುಳ್ಳು ಹೇಳುತ್ತಿದ್ದೀರಿ.

ದೇವರನ್ನು ತೋರಿಸಲು ನಿಮ್ಮಿಂದ ಸಾಧ್ಯವಿಲ್ಲವಷ್ಟೇ. ಎಂದು ಮೂದಲಿಕೆಯ ನುಡಿಗಳನ್ನಾಡುತ್ತಾನೆ. ಅಂದರೆ ಸ್ವತಃ ಗುರುಗಳನ್ನೇ ನಂಬದ ಮನಃಸ್ಥಿತಿ ಆತನದ್ದು. ಶಾಂತ ಚಿತ್ತರಾದ ಪರಮಹಂಸರು ಆದೀತು ನಾಳೆ ಬೆಳಗ್ಗೆ ನದಿಯ ತಟ್ಟದಲ್ಲಿ ದೇವರ ದರ್ಶನ ಮಾಡಿಸುತ್ತೇನೆ. ಶುಚಿರ್ಭೂತನಾಗಿ ಬಾ ಎನ್ನುತ್ತಾರೆ. ಹರ್ಷಚಿತ್ತನಾದ ಶಿಷ್ಯ ಮರುದಿನ ಬೇಗನೆ ಬಂದು ಗುರುಗಳ ಜತೆ ದೇವರನ್ನು ಕಾಣುವ ಉತ್ಸಾಹದಿಂದ ನದಿ ಕಡೆಗೆ ತೆರಳುತ್ತಾನೆ. ಗುರುಗಳ ಅಪ್ಪಣೆಯಂತೆ ನದಿಯ ಸ್ನಾನಕ್ಕೆ ಇಳಿದು ಒಂದು ಬಾರಿ ಮುಳುಗಿ ಏಳುವಷ್ಟರಲ್ಲಿ ಅಲ್ಲೇ ಇದ್ದ ಗುರುಗಳು ಶಿಷ್ಯನ ತಲೆಯನ್ನು ಅಲ್ಲೇ ನೀರೊಳಗೆ ಒತ್ತಿ ಇಡುತ್ತಾರೆ.

ಉಸಿರುಗಟ್ಟಲು ಪ್ರಾರಂಭವಾದೊಡನೆ ಇದೇನು ಮಾಡುತ್ತಿದ್ದಾರೆ ರಾಮಕೃಷ್ಣರು ಬಹುಶಃ ನನ್ನನ್ನು ಕೊಂದೇ ಬಿಡುತ್ತಾರೇನೋ ಎಂದು ಭಯಗೊಂಡು ತನ್ನೆಲ್ಲ ಶಕ್ತಿಯನ್ನು ಒಟ್ಟು ಸೇರಿಸಿ ಗುರುಗಳು ಎನ್ನುವುದನ್ನೂ ಲೆಕ್ಕಿಸದೇ ಬಲವಾಗಿ ಅವರನ್ನು ತಳ್ಳಿ ನೀರಿನಿಂದ ಹೊರಗೆ ಬರುತ್ತಾನೆ! ಹೊರಗೆ ಬಂದು ನೋಡಿದರೆ ರಾಮಕೃಷ್ಣರು ಹಸನ್ಮುಖೀಯಾಗಿ ನಿಂತು ಕೊಂಡು ನೋಡಿದ್ಯಾ? ಕೇವಲ ಶರೀರದಲ್ಲಿರುವ ನಿನ್ನ ಉಸಿರಾಟವನ್ನು ಉಳಿಸಿಕೊಳ್ಳಲು ನೀನು ಇಷ್ಟೊಂದು ಶ್ರಮ ಪಟ್ಟೆ ಎಂದಾದರೆ ಇನ್ನು ಉಸಿರೊಳಗೆ ಉಸಿರಾಗಿರುವ ಆ ಭಗವಂತನನ್ನು ಕಾಣಲು ನೀನು ಇನ್ನೆಷ್ಟು ಶ್ರಮ ಪಡಬೇಕಾದೀತು ಎಂಬ ಸತ್ಯವನ್ನು ಶಿಷ್ಯನಿಗೆ ಗೋಚರಿಸುತ್ತಾರೆ! ಶಿಷ್ಯನಿಗೆ ಗುರುಗಳ ಮಾತು ಅರ್ಥವಾಯಿತು. ಗುರುಗಳ ಮೇಲಣ ನಂಬಿಕೆ ದೃಢವಾಯಿತು.

ಸತ್ಯದ ಪಥ ಗೋಚರಿಸಿತು!
ನಂಬಿಕೆ ಬಲವಾಗಿದ್ದರಷ್ಟೇ ಯಶಸ್ಸು ಸಾಧ್ಯ. ನನ್ನ ಯಶಸ್ಸು ನನ್ನಿಂದ ಸಾಧ್ಯ ಎನ್ನುವ ನಂಬಿಕೆಯೊಂದು ಗಟ್ಟಿಯಾಗಿ ಬಿಟ್ಟರೆ ಅಲ್ಲಿಗೆ ನಮ್ಮ ಯಶಸ್ಸು ಅರ್ಧ ಕೈಗೂಡಿದಂತೆ. ಆವಾಗಲೇ ನಮ್ಮ ಅಂತರ್ಯದ ಸೂಕ್ಷ್ಮ ಮನಸ್ಸು ನಮ್ಮನ್ನು ಸಾಧಿಸುವ ನಿಟ್ಟಿನಲ್ಲಿ ಪರಿವರ್ತಿಸಲು ಪ್ರಾರಂಭಿಸುತ್ತದಯಂತೆ. ನಮಗರಿವೇ ಇಲ್ಲದ ಹಾಗೆ ನಮ್ಮ ಆತ್ಮ ವಿಶ್ವಾಸದ ಮಟ್ಟವನ್ನು ಮೇಲ್ಮಟ್ಟಕ್ಕೆ ಏರಿಸುತ್ತಿರುತ್ತದೆಯಂತೆ. ಏಕಲವ್ಯನನ್ನೇ ನೋಡಿ. ಕೇವಲ ತನ್ನ ನಂಬಿಕೆಯಿಂದಲೇ ದ್ರೋಣರ ಮೂರ್ತಿಯಲ್ಲಿ ಸ್ವತಃ ದ್ರೋಣರನ್ನು ಕಂಡು ಗುರುವಾಗಿ ಪಡೆದ. ಅರ್ಜುನನಿಗೂ ಮೀರಿದ ಬಿಲ್ವಿದ್ಯೆಯನ್ನು ಸ್ವ-ಅಭ್ಯಾಸದಿಂದಲೇ ತನ್ನದಾಗಿಸಿಕೊಂಡ. ಅವನ ಅಂತರ್ಯದೊಳಗೆ ದ್ರೋಣರೇ ನನಗೆ ಕಲಿಸುತ್ತಿದ್ದಾರೆ ಎನ್ನುವ ನಂಬಿಕೆ ಅಷ್ಟೊಂದು ಬಲವಾಗಿತ್ತು. ಇವೆಲ್ಲವುಗಳು ಬರೇ ಕಥೆಗಳಲ್ಲ. ನಮ್ಮ ಜೀವನಕ್ಕೆ ತೋರಿಸಿರುವ ಸತ್ಯದ ಸಂದೇಶಗಳು.

ಸುಗ್ರೀವನ ಸಮಸ್ಯೆ ಹಾಗೆ ನೋಡಿದರೆ ಪರಿಹರಿಸಲು ಸಾಧ್ಯವೇ ಇಲ್ಲದ್ದು ಅಲ್ಲವೇ? ಯಾಕೆಂದರೆ ಆತನ ಹೆಂಡತಿ ಹಾಗೂ ಸಾಮ್ರಾಜ್ಯವನ್ನು ಕಸಿದುಕೊಂಡು ತನ್ನಲ್ಲಿ ಇರಿಸಿಕೊಂಡಿದ್ದು ಅಂತಿಂಥವನಲ್ಲ. ಮಹಾಪರಾಕ್ರಮಿಯಾದ ಅಣ್ಣ ವಾಲಿ. ಆತನನ್ನು ಸೋಲಿಸುವುದು ಮುಕ್ಕಣ್ಣನಿಗೂ ಅಸಾಧ್ಯ ಎನ್ನವ ಸಂದರ್ಭವದು. ಅದು ಆತನ ವರ ಬಲದ ತಾಕತ್ತು. ವಾಲಿಯ ಮುಂದೆ ನಿಂತು ಅದ್ಯಾರು ಯುದ್ಧ ಮಾಡಿದರೂ ವಿರೋಧಿಯ ಅರ್ಧ ಶಕ್ತಿಯು ವಾಲಿಗೆ ರವಾನೆ ಆಗುವ ವಿಶೇಷ ವರವದು! ಆದರೆ ವಾಲಿಯನ್ನು ಸೋಲಿಸಿ ತನ್ನ ಪ್ರಪಂಚವನ್ನು ಪಡೆಯಲೇ ಬೇಕು ಎಂಬ ದೃಢ ವಿಶ್ವಾಸದಿಂದ ಶ್ರೀ ರಾಮನನ್ನು ನಂಬಿದ, ಆರಾಧಿಸಿದ. ರಾಮ ನಾಮದ ಜಪಗೈದ. ನಂಬಿಕೆ ಹುಸಿಯಾಗಲಿಲ್ಲ ನೋಡಿ. ರಾಮ ವಾಲಿಯನ್ನು ಸೋಲಿಸಿ ಸುಗ್ರೀವನಿಗೆ ಮರಳಿ ಜೀವನ ನೀಡಿದ. ಇಲ್ಲವೆಂದಾದರೆ ಎಲ್ಲೋ ದಕ್ಷಿಣದ ಋಷ್ಯಮೂಕ ಎನ್ನುವ ಪರ್ವತದ ಮೇಲೆ ಅವಿತುಕೊಂಡು ಬದುಕುತ್ತಿದ್ದವನನ್ನು ಉತ್ತರ ದೇಶದ ರಾಜಕುಮಾರನೊಬ್ಬ ಅದ್ಯಾವುದೋ ಕಾರಣದಿಂದ ಕಾಡಾಡಿಯಾಗಿಕೊಂಡು ಬಂದು ಕಾಪಾಡಿದ್ದು ಎಂದರೆ ಸಣ್ಣ ವಿಷಯವೇನಲ್ಲ. ಕಷ್ಟವು ಹೇಗೆ ಬೇಕಾದರೂ ಕರಗಬಹುದು ಎನ್ನುವುದಕ್ಕೆ ಇದೊಂದು ನಿದರ್ಶನ ಕೂಡ ಹೌದು. ರಾಮ ಸೇತುವಿನ ನಿರ್ಮಾಣವಾಯಿತು. ಅಲ್ಲೂ ಕಾಪಾಡಿದ್ದು ನಂಬಿಕೆಯೇ. ಕಪಿ ಸೇನೆಯು ಎತ್ತಿ ತಂದು ಹಾಕುತ್ತಿದ್ದ ಬಂಡಕಲ್ಲುಗಳೆಲ್ಲ ನೀರ ಮೇಲಣ ಹೋಮದಂತೆ ಮುಳುಗಿ ಹೋಗುತ್ತಿತ್ತು. ಆವಾಗ ಮತ್ತೆ ಶ್ರೀ ರಾಮನನ್ನು ಬಲವಾಗಿ ನಂಬಿ ಆತನ ಹೆಸರನ್ನೇ ಬಂಡೆಗಳ ಮೇಲೆ ಭಕ್ತಿಯಿಂದ ಬರೆದು ಸಮುದ್ರಕ್ಕೆ ಹಾಕಲು ಬಂಡೆಯೇ ನೀರ ಮೇಲೆ ತೇಲಲು ಪ್ರಾರಂಭಗೊಂಡವಂತೆ! ಅಯ್ಯೋ ಇದು ವಿಚಿತ್ರವಲ್ಲವೇ ಎಂದು ಸ್ವತಃ ಶ್ರೀ ರಾಮ ಬಂಡೆಯನ್ನು ರಾಮ ನಾಮ ಬರೆಯದೆ ಸಮುದ್ರಕ್ಕೆ ಹಾಕಲು ಅದು ಮುಳುಗಿಯೇ ಹೋಯಿತಂತೆ! ಅಂದರೆ ದೈವದ ಮೇಲಿನ ನಂಬಿಕೆಯೇ ಕಪಿಸೇನೆಗೆ ತನ್ನ ಕಾರ್ಯವನ್ನು ನೆರವೇರಿಸಿದ್ದು.

ಆದರೆ ಇಂದಿನ ಪ್ರಪಂಚವನ್ನು ಗಮನಿಸಿದ್ದೇ ಆದರೆ ಇಂದು ಪ್ರಪಂಚದಲ್ಲಿ ಕೊರತೆಯಾಗಿರುವುದು ನಂಬಿಕೆಯದ್ದೆ. ಯಾರೂ ಯಾರನ್ನೂ ನಂಬದ ಹಂತಕ್ಕೆ ಬಂದು ನಿಂತಿದೆ ಈ ಪ್ರಪಂಚ. ರಾಷ್ಟ್ರ ರಾಷ್ಟ್ರಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ, ಜಾತಿ ಜಾತಿಗಳ ಮಧ್ಯೆ ಅಷ್ಟೇ ಏಕೆ ಅಕ್ಕಪಕ್ಕದ ಮನೆಯವರ ನಡುವೆಯೂ ನಮ್ಮ ಬಾಳ್ವೆ ಅಪನಂಬಿಕೆಯದ್ದೇ! ಅಷ್ಟೊಂದು ಮಂದಿರ, ಮಸೀದಿ, ಚರ್ಚ್‌ಗಳು, ಅಷ್ಟೊಂದು ಶಾಲೆ ವಿಶ್ವವಿದ್ಯಾನಿಲಯಗಳು, ಸಂಘಗಳು, ಸಂಘಟನೆಗಳು ಇದ್ದರೂ ಮನುಷ್ಯನಿಗೆ ಮನುಷ್ಯತ್ವದ ಪಾಠವನ್ನು ಪರಸ್ಪರ ಪ್ರೀತಿ, ಸ್ನೇಹ, ನಂಬಿಕೆಗಳಿಂದ ಹೇಗೆ ಬದುಕಬೇಕೆಂಬುದನ್ನು ಬೋಧಿಸುತ್ತಲೇ ಇಲ್ಲವೇನೋ! ಪರಸ್ಪರ ನಂಬಿಕೆಗಳು ಜನರೊಳಗೆ ಬಲಿತಗೊಂಡರಷ್ಟೇ ಶಾಂತಿ ಸಹಬಾಳ್ವೆ ಸಾಧ್ಯ. ಲೋಕದ ಏಳ್ಗೆ ಸಾಧ್ಯ ಎಂಬುದು ಸತ್ಯ. ಆದರೇನು ಮಾಡೋದು. ಈ ಸತ್ಯವನ್ನು ಸಮಾಜ ನಂಬುತ್ತಲೇ ಇಲ್ಲ!

-ಪ್ರಸಾದ್‌ ಕುಮಾರ್‌, ಮಾರ್ನಬೈಲ್‌

ಟಾಪ್ ನ್ಯೂಸ್

RBI-Gov–malhotra

Introduce: ಸೈಬರ್‌ ವಂಚನೆ ತಡೆಗೆ ಬ್ಯಾಂಕ್‌ಗಳಿಗೆ ಹೊಸ ಡೊಮೈನ್‌

Maha-vikas-Agadi-Press

Allege: ಮಹಾರಾಷ್ಟ್ರ ಮತಪಟ್ಟಿಯಲ್ಲೇ ಭಾರೀ ಅವ್ಯವಹಾರ: ವಿಪಕ್ಷ ಮಹಾ ವಿಕಾಸ ಅಘಾಡಿ

Fraud Case ಸೈಬರ್‌ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆFraud Case ಸೈಬರ್‌ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ

Fraud Case ಸೈಬರ್‌ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ

Union-cabinet

Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ

Trump-

Sanctions: ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ಗೆ ಟ್ರಂಪ್‌ ಬಹಿಷ್ಕಾರ

Karnataka Govt.,: ಕೋವಿಡ್‌ ಬಳಿಕದ ಹಠಾತ್‌ ಮರಣಗಳ ತನಿಖೆಗೆ ಸಮಿತಿ

Karnataka Govt.,: ಕೋವಿಡ್‌ ಬಳಿಕದ ಹಠಾತ್‌ ಮರಣಗಳ ತನಿಖೆಗೆ ಸಮಿತಿ

T20-win-Ring

T-20 Champions: 2024ರ ಟಿ20 ವಿಶ್ವಕಪ್‌ ವಿಜೇತ ವೀರರಿಗೆ ವಜ್ರದುಂಗುರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಎರಡು ಕೈಗಳಲ್ಲಿ ಎರಡು ವೈಕುಂಠ ಪತ್ರ!

ಎರಡು ಕೈಗಳಲ್ಲಿ ಎರಡು ವೈಕುಂಠ ಪತ್ರ!

MUST WATCH

udayavani youtube

ಪ್ರಥಮ ಶಿವಮೊಗ್ಗ ಕಂಬಳಕ್ಕೆ ಸರ್ವ ಸಿದ್ದತೆ: ಮಾಹಿತಿ ನೀಡಿದ ಈಶ್ವರಪ್ಪ

udayavani youtube

ಮಹಿಳೆಯರ ಸಣ್ಣ ಉದ್ದಿಮೆಗಳ ಬೆಂಬಲಕ್ಕೆ ‘ ಪವರ್ ಪರ್ಬ’

udayavani youtube

ಶ್ರೀ ಕೃಷ್ಣ ಮುಖ್ಯ ಪ್ರಾಣ ದೇವರ ದರ್ಶನ ಪಡೆದ e ಹಾಗೂ ಡಾ| ವೀರೇಂದ್ರ ಹೆಗ್ಗಡೆ

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಹೊಸ ಸೇರ್ಪಡೆ

RBI-Gov–malhotra

Introduce: ಸೈಬರ್‌ ವಂಚನೆ ತಡೆಗೆ ಬ್ಯಾಂಕ್‌ಗಳಿಗೆ ಹೊಸ ಡೊಮೈನ್‌

Maha-vikas-Agadi-Press

Allege: ಮಹಾರಾಷ್ಟ್ರ ಮತಪಟ್ಟಿಯಲ್ಲೇ ಭಾರೀ ಅವ್ಯವಹಾರ: ವಿಪಕ್ಷ ಮಹಾ ವಿಕಾಸ ಅಘಾಡಿ

Fraud Case ಸೈಬರ್‌ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆFraud Case ಸೈಬರ್‌ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ

Fraud Case ಸೈಬರ್‌ ಅಪರಾಧ: ಒಂದೇ ವರ್ಷ 3 ಸಾವಿರ ಕೋ. ರೂ. ವಂಚನೆ

Union-cabinet

Cabinet Approves: ನೂತನ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಂಪುಟ ಅನುಮತಿ

Trump-

Sanctions: ಅಂತಾರಾಷ್ಟ್ರೀಯ ಕ್ರಿಮಿನಲ್‌ ಕೋರ್ಟ್‌ಗೆ ಟ್ರಂಪ್‌ ಬಹಿಷ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.