ಉತ್ತೇಜನ ಮತ್ತು ಸುಧಾರಣೆಗಳ ವಿವೇಕಯುತ ಸಂಯೋಜನೆ
Team Udayavani, May 21, 2020, 9:49 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೇಂದ್ರ ಹಣಕಾಸು ಸಚಿವರು ಸತತವಾಗಿ 5 ದಿನಗಳ ಕಾಲ ಮಾಡಿದ ಪ್ರಕಟಣೆಗಳು ಉತ್ತೇಜನ ಮತ್ತು ಸುಧಾರಣೆಗಳ ವಿವೇಕಯುತ ಸಂಯೋಜನೆಯಾಗಿವೆ.
ಕೋವಿಡ್-19ರಿಂದ ಉಂಟಾಗಿರುವ ಬಿಕ್ಕಟ್ಟು, ವ್ಯಾಪಾರ ಮತ್ತು ಉದ್ಯಮಗಳಿಗೆ ಎದುರಾಗಿರುವ ಅಲ್ಪಾವಧಿಯ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಮಧ್ಯಮಾವಧಿಯ ಬೆಂಬಲ ಮತ್ತು ಮಹತ್ವದ ನೀತಿ ಸುಧಾರಣೆಗಳ ಸ್ಪಷ್ಟ ಚಿಂತನೆ ನಡೆಸಿ ಪ್ಯಾಕೇಜನ್ನು ಪ್ರಸ್ತುತಪಡಿಸಲಾಗಿದೆ. ಇದು ದಿಗ್ಬಂಧನ ನಂತರ ಆರ್ಥಿಕ ಸುಧಾರಣೆಗೆ ವೇಗವರ್ಧಕವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ.
ಅಲ್ಪಾವಧಿಯಲ್ಲಿ ತಕ್ಷಣಕ್ಕೆ ಸಮಸ್ಯೆ ಬಗೆಹರಿಸುವ ಸಂಬಂಧ ಪಿಎಂಜಿಕೆವೈ ಮೂಲಕ ನಗದು ಮತ್ತು ಆಹಾರ ನೆರವು ನೀಡುತ್ತಿರುವುದು, ಸಾರ್ವಜನಿಕರಿಗೆ ಮತ್ತು ಉದ್ಯಮಗಳಿಗೆ ತೆರಿಗೆ ರಿಯಾಯಿತಿ, ಇಪಿಎಫ್ ಮೂಲಕ ಹೆಚ್ಚಿನ ಹಣ ಜನರ ಕೈಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ.
ತೆರಿಗೆ ಸಲ್ಲಿಕೆಯ ಗಡುವಿನ ಸಡಿಲಿಕೆ, ಹೊಸ ಚಟುವಟಿಕೆಗಳ ಸ್ಥಗಿತ ಮತ್ತು ಐಬಿಸಿ ನಡಾವಳಿಗಳಿಂದ ಕೋವಿಡ್-19 ಸಂಬಂಧಿತ ಸಾಲವನ್ನು ಹೊರಗಿಟ್ಟು ವ್ಯಕ್ತಿ ಮತ್ತು ಉದ್ಯಮಗಳಿಗೆ ತಕ್ಷಣದ ಪರಿಹಾರ ನೀಡಲಾಗಿದೆ. ಕೃಷಿ ಸುಧಾರಣೆಗಾಗಿ ಹಳೆ ಕಾನೂನುಗಳಿಂದ ಈ ವಲಯವನ್ನು ವಿತ್ತ ಸಚಿವರು ಮುಕ್ತಗೊಳಿಸಿದ್ದಾರೆ.
ಉತ್ತಮ ಬೆಲೆ ಪಡೆಯುವ ಪ್ರಕ್ರಿಯೆಗಾಗಿ, ಅಗತ್ಯ ಸರಕುಗಳ ಕಾಯ್ದೆಯ ತಿದ್ದುಪಡಿ ಈ ವಲಯದ ನಿರೀಕ್ಷೆಯಾಗಿತ್ತು. ಒಂದು ಲಕ್ಷ ಕೋಟಿ ರೂ.ಗಳ ಕೃಷಿ ನಿಧಿಯಿಂದಾಗಿ ಮೂಲ ಸೌಕರ್ಯ ಬಲಪಡಿಸುವುದಕ್ಕೆ, ಕೃಷಿ ಉತ್ಪಾದನೆ ಹೆಚ್ಚಳಕ್ಕೆ, ರೈತರಿಗೆ ಉತ್ತಮ ಬೆಲೆ ಸಿಗಲು ಕಾರಣವಾಗುತ್ತದೆ.
ಗಣಿಗಾರಿಕೆ ವಲಯ ಪ್ರಮುಖ ಹೂಡಿಕೆಗಳಿಂದ ವಂಚಿತವಾಗಿದೆ. ಈ ವಲಯದ ಉದಾರೀಕರಣಕ್ಕೆ ಸಿಐಐ ಮನವಿ ಮಾಡಿತ್ತು. ಈಗ ಕಲ್ಲಿದ್ದಲು, ಗಣಿಗಾರಿಕೆಗೆ ಸಂಬಂಧಿಸಿದಂತೆ ಸುಧಾರಣೆ ಕ್ರಮಗಳನ್ನು ತೆಗೆದುಕೊಂಡಿರುವುದರಿಂದ ಜಾಗತಿಕ ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸಬಹುದಾಗಿದೆ.
ಕೈಗಾರಿಕಾ ಮೂಲಸೌಕರ್ಯಗಳ ಉನ್ನತೀಕರಣ, ರಾಜ್ಯಗಳಿಗೆ ನೀಡುವ ಶ್ರೇಯಾಂಕದಿಂದಾಗಿ ಹೂಡಿಕೆದಾರರಿಗೆ ಅನುಕೂಲವಾಗುತ್ತದೆ. ಇದರ ಜತೆಗೆ ಹೂಡಿಕೆದಾರರ ಅನುಕೂಲಕ್ಕಾಗಿ ಉತ್ತಮ ಸೌಲಭ್ಯಗಳು ಸಿಗುವ ಮಾಹಿತಿವುಳ್ಳ ಕೈಪಿಡಿ ಮತ್ತು ಮಾರ್ಗದರ್ಶನದ ಅಗತ್ಯವಿದೆ.
ಕೈಗಾರಿಕಾ ಎಸ್ಟೇಟ್ ಮತ್ತು ಪಾರ್ಕ್‌ಗಳಲ್ಲಿ ಭೂಮಿಯನ್ನು ಹೂಡಿಕೆ ಮಾಡಲು ಸಿದ್ಧ ಮಾಹಿತಿಯನ್ನು ಒದಗಿಸುವ ಪೋರ್ಟಲ್, ಅಂತಹ ಮಾರ್ಗದರ್ಶನಕ್ಕೆ ಬಹಳ ಉಪಯುಕ್ತವಾಗಿದೆ. ದೀರ್ಘಕಾಲದ ಲಾಕ್ ಡೌನ್‌ಗಳಿಂದಾಗಿ ಎಂಎಸ್‌ಎಂಇಗಳು ಎದುರಿಸುತ್ತಿರುವ ಒತ್ತಡದ ದೃಷ್ಟಿಯಿಂದ, ಉತ್ತೇಜನಾ ಪ್ಯಾಕೇಜ್ ನೀಡಲಾಗಿದೆ.
ತೊಂದರೆಗೀಡಾದ ಈ ವಲಯಕ್ಕೆ ಸಹಾಯ ಮಾಡಲು ಹಲವಾರು ಕ್ರಮಗಳನ್ನು ಒಳಗೊಂಡಿರುವುದು ಸಂತೋಷ ತಂದಿದೆ. ಎಂಎಸ್‌ಎಂಇಗಳ ಪುನರ್ ವ್ಯಾಖ್ಯಾನದಲ್ಲಿ ಪ್ರಸ್ತಾವಿತ ವಹಿವಾಟು ಮಿತಿಗಳನ್ನು ಮರು ಪರಿಶೀಲಿಸುವಂತೆ ನಾವು ಸರ್ಕಾರವನ್ನು ಕೋರುತ್ತೇವೆ. ಏಕೆಂದರೆ ಈ ಮಿತಿಗಳು ತೀರಾ ಕಡಿಮೆ ಎಂದು ಪರಿಗಣಿಸಲಾಗಿದ್ದು, ಇದರಿಂದ ಈ ಘಟಕಗಳು ಬೆಳೆಯಲು ಪ್ರೋತ್ಸಾಹಿಸಿದಂತಾಗುವುದಿಲ್ಲ.
ಗ್ರಾಮೀಣ ಪ್ರದೇಶಗಳಿಗೆ ಹಿಂದಿರುಗುವ ವಲಸಿಗರು ಜೀವನೋಪಾಯ ಕಂಡುಕೊಳ್ಳಲು ಎಂನರೇಗಾದ ಹಂಚಿಕೆಯನ್ನು ಸಹ ಹೆಚ್ಚಿಸಲಾಗಿದೆ. ಇಡೀ ಪ್ಯಾಕೇಜ್ ಜಾರಿಗೆ ಬರುತ್ತಿದ್ದಂತೆ ಕ್ರಮೇಣ ಆರ್ಥಿಕ ಚೇತರಿಕೆಗೆ ಕಾರಣವಾಗುತ್ತದೆ ಎಂಬ ವಿಶ್ವಾಸವನ್ನು ಉದ್ಯಮ ಹೊಂದಿದೆ.
ವಲಸೆ ಕಾರ್ಮಿಕರಿಗೆ ಬಾಡಿಗೆ ವಸತಿ ಯೋಜನೆಯ ಘೋಷಣೆಯು ದೀರ್ಘಾವಧಿಯಲ್ಲಿ ಅವರ ಸ್ಥಿತಿ ಸುಧಾರಣೆಯಲ್ಲಿ ಅರ್ಥಪೂರ್ಣ ಬದಲಾವಣೆಗೆ ಕಾರಣವಾಗಬಹುದು. ಕೆಲವೊಮ್ಮೆ ಉದ್ಯಮವು ಅನೇಕ ರಚನಾತ್ಮಕ ಸುಧಾರಣೆಗಳನ್ನು ಬೇಡುತ್ತದೆ. ಅವುಗಳನ್ನು ಸಮಯಕ್ಕನುಗುಣವಾಗಿ ಕಾರ್ಯಗತಗೊಳಿಸಿದರೆ, ಆರ್ಥಿಕತೆಯ ಸ್ಪರ್ಧಾತ್ಮಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ.
ಆರ್ಥಿಕತೆಯು ಚೇತರಿಸಿಕೊಂಡಾಗ ಅದು ಶಕ್ತಿಯುತವಾಗಿರುತ್ತದೆ ಮತ್ತು ಹೆಚ್ಚು ಸ್ಪರ್ಧಾತ್ಮಕವಾಗಿರುತ್ತದೆ. ಇದಲ್ಲದೆ, 20 ಲಕ್ಷ ಕೋಟಿ ರೂ.ಗಳ ಉತ್ತೇಜನವನ್ನು ವೆಚ್ಚ ಮಾಡುವುದರಿಂದ ಆರ್ಥಿಕತೆಯ ಮೇಲೆ ಗುಣಾತ್ಮಕ ಪರಿಣಾಮ ಬೀರುತ್ತದೆ.
2020-21ನೇ ಹಣಕಾಸು ವರ್ಷದಲ್ಲಿ ಅಂದಾಜು ಕೊರತೆಯ ಪರಿಣಾಮದೊಂದಿಗೆ ಸರ್ಕಾರಿ ಬೊಕ್ಕಸಕ್ಕೆ ಹೆಚ್ಚಿನ ಹೊರೆಯಾಗದಂತೆ ಇದನ್ನು ಸಾಧಿಸುವಲ್ಲಿ ಯಶಸ್ವಿಯಾಗಿರುವ ಸರ್ಕಾರ ಮತ್ತು ಅದರ ನೀತಿ ನಿರೂಪಕರಿಗೆ ಇದರ ಶ್ರೇಯ ಸಲ್ಲಬೇಕು. ಇದು ಭವಿಷ್ಯದಲ್ಲಿ ಉದ್ಭವಿಸಬಹುದಾದ ಅನಿರೀಕ್ಷಿತ ಕ್ರಮಗಳಿಗೆ ಹೆಚ್ಚುವರಿ ಅವಕಾಶವನ್ನು ನೀಡುತ್ತದೆ.
– ಚಂದ್ರಜಿತ್ ಬ್ಯಾನರ್ಜಿ, ಮಹಾನಿರ್ದೇಶಕರು, ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.