ಬದುಕು ಬದಲಾಗಿದೆ, ನಾವೂ ಬದಲಾಗೋಣ; ಬ್ಯಾಂಕ್‌ ವ್ಯವಹಾರ: ಏನು? ಹೇಗೆ?


Team Udayavani, May 29, 2020, 5:00 AM IST

ಬ್ಯಾಂಕ್‌ ವ್ಯವಹಾರ: ಏನು? ಹೇಗೆ?

ಸಾಂದರ್ಭಿಕ ಚಿತ್ರ.

ಬ್ಯಾಂಕಿಂಗ್‌ ಕ್ಷೇತ್ರ ಇಂದು ಜನಜೀವನದ ಅವಿಭಾಜ್ಯ ಅಂಗವಾಗಿದೆ. ಹಣಕಾಸಿಗೆ ಸಂಬಂಧಿಸಿದ ಹೆಚ್ಚಿನ ಎಲ್ಲ ವ್ಯವಹಾರಗಳು ಬ್ಯಾಂಕ್‌ ಖಾತೆಯ ನೆರವಿನಿಂದಲೇ ನಡೆಯುತ್ತಿದೆ. ಕೋವಿಡ್‌-19 ಆತಂಕದ ನಡುವೆ ಇಲ್ಲಿ ಯಾವ ಮುನ್ನೆಚ್ಚರಿಕೆ ವಹಿಸಬೇಕು. ಇಲ್ಲಿದೆ ಮಾಹಿತಿ.

ವೇತನದಿಂದ ಪಿಂಚಣಿಯವರೆಗೆ, ಸಹಾಯಧನದಿಂದ ವಿವಿಧ ನೆರವಿನವರೆಗೆ ಎಲ್ಲವೂ ಈಗ ಬ್ಯಾಂಕ್‌ ಖಾತೆಗಳನ್ನೇ ಆಶ್ರಯಿಸಿದೆ. ಜನಧನ ಖಾತೆ ಆರಂಭವಾದ ಬಳಿಕವಂತೂ ಬಡವರೂ ಬ್ಯಾಂಕ್‌ ವ್ಯವಹಾರಗಳಿಗೆ ಒಗ್ಗಿಕೊಳ್ಳುವಂತಾಯಿತು. ಕೋವಿಡ್‌-19 ಸಂಕಷ್ಟ ಕಾಲದಲ್ಲಿ ಇಡೀ ದೇಶವೇ ಲಾಕ್‌ಡೌನ್‌ ಆಗಿ ಬಹುತೇಕ ಎಲ್ಲ ಕೆಲಸ ಕಾರ್ಯಗಳು ಸ್ಥಹಿತಗೊಂಡರೂ ಬ್ಯಾಂಕ್‌ ವ್ಯವಹಾರಗಳು ನಿರಾತಂಕವಾಗಿ ನಡೆದಿವೆ. ಜನಧನ ಖಾತೆಗೆ ಜಮಾ ಆಗಿರುವ ಹಣವನ್ನು ಜನರಿಗೆ ತಲುಪಿಸುವುದು ಸಹಿತ ಇತರ ಅಗತ್ಯಗಳನ್ನು ಪೂರೈಸಿವೆ. ಇದೇ ಸಂದರ್ಭ ವ್ಯವಹಾರದ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲಾಗಿದೆ. ಆರಂಭದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಅಲ್ಲಿನ ನಿಯಮಾವಳಿಗಳು ಸ್ವಲ್ಪ ಕಿರಿ ಕಿರಿ ಅನಿಸಿದರೂ ಈಗ ಜನರು ಅದಕ್ಕೆ ಹೊಂದಿಕೊಂಡಿದ್ದಾರೆ. ಮುಂದೆಯೂ ಮುಂಜಾಗ್ರತೆ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ವ್ಯವಹಾರ ನಡೆಸುವುದು ಎಲ್ಲರ ಜವಾಬ್ದಾರಿಯೂ ಆಗಿರುತ್ತದೆ.

ಈಗ ಆನ್‌ಲೈನ್‌ ಬ್ಯಾಂಕಿಂಗ್‌, ಡಿಜಿಟಲ್‌
1. ಬ್ಯಾಂಕಿಂಗ್‌ ಮತ್ತಿತರ ಸೇವೆಗಳು ಇರುವುದರಿಂದ ಎಲ್ಲ ಬ್ಯಾಂಕ್‌ ವ್ಯವಹಾರಗಳಿಗಾಗಿ ಬ್ಯಾಂಕ್‌ಗೆ ಬರಬೇಕಾದ ಅಗತ್ಯವಿಲ್ಲ. ತೀರಾ ಅನಿವಾರ್ಯವೆನಿಸಿದರೆ ಮಾತ್ರ ಬ್ಯಾಂಕಿಗೆ ಬಂದು ಕೆಲಸ ಮಾಡಿಸಿಕೊಳ್ಳಬಹುದು.

2. ಖಾಸಗಿ ಆ್ಯಪ್‌ ಗಳಿಗಿಂತ ಭೀಮ್‌ನಂತಹ ಸರಕಾರಿ ಆ್ಯಪ್‌ಗ್ಳು ಅಥವಾ ನಿಮ್ಮ ಖಾತೆಯಿರುವ ಬ್ಯಾಂಕ್‌ಗಳ ಅಧಿಕೃತ ಆ್ಯಪ್‌ ಗಳನ್ನು ಬಳಸಿ. ಅದು ಹೆಚ್ಚು ಸುರಕ್ಷಿತ. ಅದೂ ಅಲ್ಲದೆ ಎಲ್ಲ ಬ್ಯಾಂಕ್‌ಗಳು ಸಹಾಯವಾಣಿ ಸಂಖ್ಯೆ ಹೊಂದಿದ್ದು, ಅಲ್ಲಿಂದಲೂ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದು.

3. ಎಲ್ಲ ಬ್ಯಾಂಕ್‌ಗಳು ಕೂಡ ಈಗ ತಮ್ಮದೇ ಪ್ರತ್ಯೇಕ ಆ್ಯಪ್‌ ಗಳನ್ನು ಹೊಂದಿದ್ದು, ಅದನ್ನು ಗ್ರಾಹಕರು ತಮ್ಮ ಮೊಬೈಲ್‌ಗ‌ಳಲ್ಲಿ ಅಳವಡಿಸಿಕೊಂಡರೆ ಖಾತೆಯಿಂದ ಖಾತೆಗೆ, ಬೇರೆ ಬ್ಯಾಂಕಿನ ಖಾತೆಗಳಿಗೆ ಹಣ ವರ್ಗಾವಣೆ ಮಾಡಬಹುದು. ಖಾತೆಯ ವ್ಯವಹಾರಗಳ ಮಾಹಿತಿಯನ್ನೂ ತಿಳಿದುಕೊಳ್ಳಬಹುದು.

4. ಕೆಲವು ಎಟಿಎಂ ಕೇಂದ್ರಗಳಲ್ಲಿ ನಗದು ಹಣವನ್ನು ಖಾತೆಗೆ ಜಮೆ ಮಾಡುವ ಸೌಲಭ್ಯವೂ ಇದೆ. ಇದರಿಂದ ಜಾಸ್ತಿ ಜನ ಸೇರುವ ಬ್ಯಾಂಕ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳಬಹುದು. ಈ ಸೇವೆ ಬಳಸುವ ಸಂದರ್ಭ ಮುಖಕ್ಕೆ ಮಾಸ್ಕ್ ಬಳಕೆ, ಹ್ಯಾಂಡ್‌ ಸ್ಯಾನಿಟೈಸರ್‌ ಉಪಯೋಗ ಕಡ್ಡಾಯವಾಗಿ ಮಾಡಿ.

5. ಸಾಮಾನ್ಯವಾಗಿ ಬೆಳಗ್ಗೆ ಬ್ಯಾಂಕ್‌ಗಳಲ್ಲಿ ಜನಸಂದಣಿ ಜಾಸ್ತಿಯಿರುತ್ತದೆ. ಸಂಜೆ 4 ಗಂಟೆಯ ವರೆಗೂ ಎಲ್ಲ ರೀತಿಯ ಹಣದ ವಹಿವಾಟುಗಳು ನಡೆಯುವುದರಿಂದ ಮಧ್ಯಾಹ್ನದ ಅನಂತರ ಕೂಡ ಬ್ಯಾಂಕ್‌ಗಳಿಗೆ ತೆರಳಬಹುದು. ಇದರಿಂದ ಸಾಮಾಜಿಕ ಅಂತರ ಕಾಯುವುದು ಸುಲಭವಾಗುವುದು.

6. ಬ್ಯಾಂಕ್‌ ಎಟಿಎಂ ಕಾರ್ಡ್‌ಗಳ ಪಿನ್‌ ಸಂಖ್ಯೆಯನ್ನೂ ಯಾರು ಕೇಳಿದರೂ ಕೊಡಬೇಡಿ. ಬ್ಯಾಂಕ್‌ನವರಂತೂ ಕೇಳುವುದಿಲ್ಲ. ಬೇರೆಯವರಿಗೆ ಪಿನ್‌ ಸಂಖ್ಯೆ ಕೊಟ್ಟರೆ ನಿಮ್ಮ ಬ್ಯಾಂಕ್‌ ಖಾತೆಯ ಹಣವನ್ನು ಲಪಟಾಯಿಸುವ ಸಾಧ್ಯತೆಯೇ ಹೆಚ್ಚು. ಅದನ್ನು ಸಾಧ್ಯವಾದಷ್ಟು ಗೌಪ್ಯವಾಗಿಯೂ ಇರಿಸಿ.

ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್‌ ಮಾಡಿ. 9148594259

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.