ಸಾಮಾಜಿಕ ಪರಿವರ್ತನೆಯ ಹರಿಕಾರ

ಸಾಂದರ್ಭಿಕ

Team Udayavani, Sep 2, 2020, 6:01 AM IST

ಸಾಂದರ್ಭಿಕ: ಸಾಮಾಜಿಕ ಪರಿವರ್ತನೆಯ ಹರಿಕಾರ

ಬುಧವಾರ (ಸೆಪ್ಟಂಬರ್‌ 2 ) ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ. ಕೇರಳದಲ್ಲಿ ನಾರಾಯಣ ಗುರು ಅವರ ನಾಯಕತ್ವದಲ್ಲಿ ಆರಂಭವಾದ ಸಮಾನತೆಯ ಹೋರಾಟ ಮುಂದೆ ಸಾಮಾಜಿಕ ಮತ್ತು ಧಾರ್ಮಿಕ ಪರಿವರ್ತನೆಗೆ ಮುನ್ನುಡಿಯಾಯಿತು.

ದೇವಾಲಯಗಳಿಗೆ ಪ್ರವೇಶ ನಿರಾಕರಿಸಲ್ಪಟ್ಟಿದ್ದ ಸಮುದಾಯ ಶ್ರೀ ನಾರಾಯಣ ಗುರು ಅವರ ನೇತೃತ್ವದಲ್ಲಿ ದೇವಾಲಯಗಳನ್ನು ನಿರ್ಮಿಸಿ ಸ್ಥಾಪಿತ ಸಂಪ್ರದಾಯಗಳನ್ನು ಪ್ರಶ್ನಿಸಿತು.

ಬ್ರಿಟಿಷರ ಆಳ್ವಿಕೆ ವೇಳೆ ಭಾರತದಲ್ಲಿ ನಡೆದ ಈ ಪರಿವರ್ತನ ಕ್ರಾಂತಿ ಅಹಿಂಸಾ ತತ್ವದಲ್ಲಿ ನಡೆಯಿತು ಎಂಬುದು ಗಮನಾರ್ಹ.

ಒಂದೇ ಜಾತಿ, ಒಂದೇ ಮತ, ಒಂದೇ ದೇವರು – ಈ ಕಲ್ಪನೆಯನ್ನು ಮೂಡಿಸಿ, ಅದನ್ನು ಜನ ಮನಕ್ಕೆ ಹರಡಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಶಾಸ್ತ್ರಗಳನ್ನು ಓದಿ, ಅದನ್ನು ಅರ್ಥೈಸಿಕೊಂಡೇ ರೂಢಿಗಳನ್ನು ಪ್ರಶ್ನಿಸಿದರು. ಅವರು ದೇವರನ್ನು ನಿರಾಕರಿಸಲಿಲ್ಲ.

ನಿಮ್ಮ ದೇವಾಲಯಗಳಲ್ಲಿ ನಮಗೆ ಪ್ರವೇಶ ಇಲ್ಲದಿದ್ದರೇನಂತೆ, ನಾವೇ ದೇವಾಲಯಗಳನ್ನು ಕಟ್ಟುತ್ತೇವೆ, ನಾವೇ ದೇವರನ್ನು ಸಂಸ್ಥಾಪಿಸುತ್ತೇವೆ ಎಂದರು. ಆ ಮೂಲಕ ಮತಾಂತರಕ್ಕೆ ತಡೆಯೊಡ್ಡಿದರು. ಒಂದು ಧರ್ಮದೊಳಗಿದ್ದೇ ಅದನ್ನು ಪರಿವರ್ತನೆಯ ಮೂಲಕ ಸುಧಾರಿಸಲು ಹೊರಟರು.

ಕೇರಳದ ತಿರುವನಂತಪುರದ ಚೆಂಬಳತ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹುಟ್ಟೂರು. ತಂದೆ ಮದನ್‌ ಆಶಾನ್‌, ತಾಯಿ ಕುಟ್ಟಿಯಮ್ಮ. ಅವರು ಮಗನಿಗಿಟ್ಟ ಹೆಸರು ನಾಣು. ಬಾಲ್ಯದಲ್ಲಿ ವಿದ್ಯಾಭ್ಯಾಸಕ್ಕಾಗಿ ಅವರು ಊರೂರು ಅಲೆದಾಡ ಬೇಕಾಯಿತು.

ತಂದೆಗೆ ಅಸೌಖ್ಯ ಕಾಡಿದಾಗ ಅವರು ಊರಿಗೆ ಮರಳಿ, ಶಾಲೆ ತೆರೆದು, ಮಕ್ಕಳಿಗೆ ಪಾಠ ಮಾಡಿದರು. ಜನ ಅವರನ್ನು ನಾಣು ಆಶಾನ್‌ ಎಂದು ಕರೆದರು. ಆಶಾನ್‌ ಎಂದರೆ ಉಪಾಧ್ಯಾಯ ಎಂದರ್ಥವಿದೆ. ಶ್ರೀ ನಾರಾಯಣ ಗುರುಗಳು ಅನೇಕ ವಿದ್ವಾಂಸರು, ಗುರುಗಳಲ್ಲಿ ಕಲಿತರು, ಮಾರ್ಗದರ್ಶನ ಪಡೆದರು.

ಧರ್ಮ ಮತ್ತು ಅದರ ಆಚಾರ-ವಿಚಾರಗಳಿಗೆ ಸಂಬಂಧಿಸಿ ಅವರ ವಿಶಾಲ ನಿಲುವಿಗೆ ಇದೂ ಒಂದು ಕಾರಣ ಆಗಿರಲೂಬಹುದು. ಬ್ರಹ್ಮಶ್ರೀ ಶ್ರೀ ನಾರಾಯಣ ಗುರುಗಳು ಸಂಸ್ಕೃತ ಕಲಿತು ಆ ಮೂಲಕ ವೇದ ಉಪನಿಷತ್ತುಗಳನ್ನು ಅಭ್ಯಾಸ ಮಾಡಿದ್ದರು. ತಮ್ಮ ಬದುಕಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸಂಚರಿಸುತ್ತಿದ್ದ ಅವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರು.

ವೈಕೋ ದೇವಾಲಯವನ್ನು ಪ್ರವೇಶಿಸಲು ಎದುರಾದ ಅಡ್ಡಿಯೇ ಅವರು ಸಮಾಜ ಸುಧಾರಣೆಯ ಸಂಕಲ್ಪ ತೊಡಲು ಕಾರಣವಾಯಿತು. ದೇವರಿಲ್ಲದವರಿಗೆ ದೇವರನ್ನು ಕೊಟ್ಟರು ಎಂಬ ಮಾತು ವಾಸ್ತವ ಕೂಡ. ಕೇರಳದಲ್ಲಿ ಸುಧಾರಣೆಯ ಗಾಳಿ ಬೀಸಲು ಕಾರಣಕರ್ತರಾದವರಲ್ಲಿ ಅಗ್ರಣಿ ಬ್ರಹ್ಮಶ್ರೀ ನಾರಾಯಣ ಗುರುಗಳು. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ಶ್ರೀ ನಾರಾಯಣ ಗುರುಗಳ ಸಿದ್ಧಾಂತದಲ್ಲಿ ಒಲವಿತ್ತು.

ಇವರಿಬ್ಬರೂ ಪರಸ್ಪರ ಭೇಟಿಯಾಗಿದ್ದರು. ರವೀಂದ್ರನಾಥ ಠಾಗೋರ್‌ ಅವರು ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿ ಅವರ ತತ್ವಾದರ್ಶಗಳ ಬಗ್ಗೆ ತಿಳಿದುಕೊಂಡಿದ್ದರು. ಸಮಾಧಿಯಾಗುವಾಗ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ 73 ವರ್ಷ.

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವಿತರಿರುವಾಗಲೇ ಅವರ ಪ್ರತಿಮೆ ತಲಶ್ಯೇರಿಯಲ್ಲಿ ಸ್ಥಾಪನೆಯಾಗಿತ್ತು. ಕೇರಳ ಸರಕಾರ ಅವರ ಜನ್ಮ ದಿನ ಮತ್ತು ಸಮಾಧಿ ದಿನಗಳನ್ನು ಆಚರಿಸುತ್ತದೆ. ಕರ್ನಾಟಕ ಸರಕಾರ ಸೆ. 2ರಂದು ಅವರ ಜನ್ಮದಿನ ಆಚರಿಸುತ್ತದೆ. ಮಂಗಳೂರು ವಿಶ್ವವಿದ್ಯಾನಿಲಯ ಸಹಿತ ವಿವಿಧೆಡೆ ಅವರ ಹೆಸರಿನಲ್ಲಿ ಅಧ್ಯಯನ ಪೀಠಗಳು ಕಾರ್ಯಾಚರಿಸುತ್ತಿವೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ನೇತೃತ್ವದಲ್ಲಿ ನಡೆದ ಚಳವಳಿಯನ್ನು ಸಾಮಾಜಿಕ ಅನ್ಯಾಯದ ವಿರುದ್ಧ ನಡೆದ ಚಳವಳಿ ಎಂದು ಸಮಾಜ ವಿಜ್ಞಾನ ಬಣ್ಣಿಸುತ್ತದೆ. ಅವರು ಕೇರಳದ ಈಳವ ಜನಾಂಗದ ಸುಧಾರಣೆಗೆ ಕೈಗೊಂಡ ಕ್ರಮಗಳು ಇಂದು ಆ ಸಮಾಜವನ್ನು ಪುಲಿಕುಡಿಯಂತಹ ಅನೇಕ ಮೂಢನಂಬಿಕೆ ಮತ್ತು ಹಣವ್ಯಯದ ಧಾರ್ಮಿಕ ನಂಬಿಕೆಗಳನ್ನು ತ್ಯಜಿಸುವಂತೆ ಮಾಡಿವೆ. ಕೆಡವಿ ಕಟ್ಟಿದವರು ಶ್ರೀ ನಾರಾಯಣ ಗುರುಗಳು. ಅದು ಹೇಗೆಂದರೆ ಶೇಂದಿ ಇಳಿಸುತ್ತಿದ್ದ ಈಳವರು ಮೊದಲು ಹುಣಸೆ ಮರದ ಕೆಳಗೆ ಪಿರಮಿಡ್‌ ಮಾದರಿಯ ಸಣ್ಣ ದೇವಾಲಯಗಳನ್ನು ಕಟ್ಟುತ್ತಿದ್ದರು, ಅಲ್ಲಿ ಬಲಿ ನೀಡುತ್ತಿದ್ದ ಸಂಪ್ರದಾಯವನ್ನು ಅನುಸರಿಸುತ್ತಿದ್ದರು.

ಇಂತಹ ಧಾರ್ಮಿಕ ಆಚರಣೆ ಗಳನ್ನು ತಪ್ಪಿಸಲು ನಾರಾಯಣ ಗುರುಗಳು “ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು’ ಸಿದ್ಧಾಂತವನ್ನು ಜಾರಿಗೆ ತಂದರು. ಸಾಂಪ್ರದಾಯಿಕ ಉದ್ಯೋಗಗಳನ್ನು ತ್ಯಜಿಸಿ ಹೊಸ ಶಿಕ್ಷಣ ಕ್ರಮ ರೂಪಿಸಿದ, ಕೈಗಾರಿಕಾ ಕ್ರಾಂತಿ ಸೃಷ್ಟಿಸಿದ ಉದ್ಯೋಗಗಳನ್ನು ಬಳಸಿಕೊಳ್ಳುವಂತೆ ಮತ್ತು ಅದಕ್ಕಾಗಿ ಶಿಕ್ಷಣ ಪಡೆಯುವಂತೆ ಜನ ಸಮುದಾಯವನ್ನು ಪ್ರೇರೇಪಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಬದಲಾವಣೆಗಳ ಅಧ್ಯ ಯನಗಳ ನಿವೃತ್ತ ಪ್ರಾಧ್ಯಾಪಕ ಮತ್ತು ಯುಜಿಸಿ ಎಮಿರಿ ಟಸ್‌ ಪ್ರಾಧ್ಯಾಪಕರಾಗಿರುವ ಡಾ| ರಾಜಮಣಿ ಅವರು ತಮ್ಮ ‘ಕೇರಳದಲ್ಲಿ ಹಿಂದುಳಿದ ವರ್ಗಗಳ ಹೋರಾಟ’ ಲೇಖನದಲ್ಲಿ ನಾರಾಯಣ ಗುರುಗಳು ತಮ್ಮವರಿಗೆ ದೇವಾಲಯ ಪ್ರವೇಶ ನಿರಾಕರಿಸುತ್ತಿದ್ದವರ ವಿರುದ್ಧ “ಪ್ರತಿಭಟನೆ, ಸವಾಲು ಮತ್ತು ಸ್ಪರ್ಧೆ’ಯ ರೂಪದಲ್ಲಿ ಪ್ರಚುರ ಪಡಿಸಿದರು ಎನ್ನುತ್ತಾರೆ. ಅವರು ಹಳೆಯ ದೇವರನ್ನು ಕೈಬಿಟ್ಟು ಶೈವ ಮತ್ತು ವೈಷ್ಣವ ದೇವರಾದ ಶಿವ, ಸುಬ್ರಹ್ಮಣ್ಯ ಮತ್ತು ಜಗನ್ನಾಥ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು.

‘ಅವರು ಈಳವರನ್ನು ಅವರ ದೇವಾಲಯದೊಳಗೆ ಪ್ರವೇಶಿಸಲು ಬಿಡದಿದ್ದರೇನಂತೆ, ನಾವು ನಮ್ಮದೇ ದೇವಾಲಯಗಳನ್ನು ಮಠಗಳನ್ನು ಕಟ್ಟೋಣ, ಅವರು ನನಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಅಧಿಕಾರ ಇಲ್ಲ ಎನ್ನುತ್ತಾರಾದರೆ ನಾನು ಹೇಳುತ್ತೇನೆ, ನಾನು ಪ್ರತಿಷ್ಠಾಪಿ ಸುತ್ತಿರುವುದು ಈಳವ ಶಿವ’ ಎಂದು ಹೇಳುವ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳು ಧಾರ್ಮಿಕ ಆವಶ್ಯಕತೆಗಳನ್ನು ಪೂರೈ ಸಲು ಹೊಸ ದೇವಾಲಯಗಳನ್ನು ಕಟ್ಟಿದರು. ಅಲ್ಲಿಗೇ ವಿರಮಿಸದೆ ಅವರು ದೇವಾಲಯಗಳು ಸ್ವತ್ಛತೆಗೆ ಪ್ರತೀಕವಾಗಬೇಕು ಎಂದರು.

ಅವರು ಮುಂಚೂಣಿಯಲ್ಲಿ ನಿಂತು ನಡೆಸಿದ ಚಳವಳಿ ಹಿಂದುಳಿದವರಿಗೆ ಮೇಲ್ಮುಖ ಸಾಮಾಜಿಕ ಚಲನೆ ಯನ್ನು ಒದಗಿಸಿಕೊಟ್ಟಿತು. ಈಳವ ಜನಾಂಗಕ್ಕೆ ಅವಶ್ಯವಾದ ತತ್ವಜ್ಞಾನವನ್ನು ಒದಗಿಸಿ, ಅದ್ಭುತ ವಾದ ಸರ್ವಾಂಗೀಣ ಸುಧಾರಣ ಕಾರ್ಯ ಕ್ರಮಗಳನ್ನು ನೀಡಿ ಆಧ್ಯಾತ್ಮಿಕ ಪುನರುತ್ಥಾನ ವನ್ನು ಕೊಡುವ ಮೂಲಕ ಪರಿವರ್ತನ ಶೀಲ ಆಂದೋಲನಕ್ಕೆ ಕಾರಣರಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು.

– ಡಾ| ನಾಗವೇಣಿ ಎನ್‌. ಮಂಚಿ, ಮಂಗಳೂರು

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.