ಜನರ ಆಕ್ರೋಶಕ್ಕೆ ಉತ್ತರಿಸುವ ಬದ್ಧತೆ ಆಡಳಿತಕ್ಕಿಲ್ಲವೇ?
Team Udayavani, Dec 3, 2019, 4:52 AM IST
ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲ್ಪಡುತ್ತಿರುವ ಹಾಗೂ ಅತೀ ಹೆಚ್ಚು ಟೀಕೆಗೆ ಒಳಗಾಗುತ್ತಿರುವ ವಿಷಯಗಳಲ್ಲಿ ರಸ್ತೆಗಳ ಸ್ಥಿತಿಗತಿ, ಅಸಮರ್ಪಕ ಟೋಲ್‌ಗೇಟ್ ಮತ್ತು ಮೇಲ್ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಆಗುತ್ತಿರುವ ಅಸಹನೀಯ ವಿಳಂಬ ಮುಖ್ಯವಾಗಿವೆ.
ಹೊಸದಾಗಿ ನಿರ್ಮಾಣವಾದ ರಸ್ತೆಯೇ ಇರಲಿ, ಹಳೆಯ ರಸ್ತೆಯೇ ಇರಲಿ, ಪ್ರತೀ ವರ್ಷದ ಮಳೆಗಾಲದಲ್ಲಿ ತೀರಾ ಹದಗೆಟ್ಟು ಸಂಚಾರವು ಸುತರಾಂ ಅಸಾಧ್ಯವೆಂಬ ಹಂತಕ್ಕೆ ತಲುಪುತ್ತದೆ. ಆ ಹಂತದಲ್ಲಿ ದುರಸ್ಥಿಯ ವಿಷಯಕ್ಕೆ ಬಂದರೆ ಮಳೆಗಾಲದ ನೆಪವೊಡ್ಡಿ ಮುಂದೂಡುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬೇಸಿಗೆಯಲ್ಲಿ ಅಲ್ಲಲ್ಲಿ ಒಂದಿಷ್ಟು ತೇಪೆ ಹಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಾರೆ. ರಸ್ತೆಯಲ್ಲಿ ಹೊಂಡ ಕಡಿಮೆಯಾದರೆ ಸಾಕು, ಜನರು ಗೊಣಗುವುದನ್ನು ಮರೆತು ಸುಮ್ಮನಾಗುತ್ತಾರೆ.
ಉತ್ತಮ ರಸ್ತೆ, ಪೂರಕ ಸೌಲಭ್ಯಗಳು ದೊರೆಕಿಸಿಕೊಟ್ಟ ಬಳಿಕವಷ್ಟೇ ಅಂತಹ ರಸ್ತೆಯ ಉಪಯೋಗ ಪಡೆಯುವುದಕ್ಕೆ ಪ್ರತಿಯಾಗಿ ಸುಂಕ ಅಥವಾ ಟೋಲ್ ಸಂಗ್ರಹಿಸುವುದು ನಿಯಮ. ಮಾತ್ರವಲ್ಲ ಒಂದು ಸುಂಕ ವಸೂಲಾತಿ ಕೇಂದ್ರದಿಂದ ಇನ್ನೊಂದು ಕೇಂದ್ರಕ್ಕೆ ಕನಿಷ್ಟ 60 ಕಿ.ಮೀ ದೂರವಿರಬೇಕೆಂಬ ನಿಯಮವೂ ಇದೆ. ಆದರೆ ರಾಷ್ಟ್ರೀಯ ಹೆ¨ªಾರಿ 66ರಲ್ಲಿ ತಲಪಾಡಿಯಿಂದ ಕೇವಲ 34 ಕಿ.ಮೀ ದೂರದಲ್ಲಿ ಸುರತ್ಕಲ್ ಸುಂಕ ವಸೂಲಿ ಕೇಂದ್ರವಿದ್ದರೆ ಅಲ್ಲಿಂದ ಕೇವಲ 13 ಕಿ.ಮೀ. ದೂರದ ಹೆಜಮಾಡಿಯಲ್ಲಿ ಇನ್ನೊಂದು ಕೇಂದ್ರವಿದೆ. ಅಂದರೆ 47 ಕಿ.ಮೀ. ಅಂತರದಲ್ಲಿ ಮೂರು ಸುಂಕ ವಸೂಲಿ ಕೇಂದ್ರಗಳು. ಜತೆಗೆ ಮನೆಯ ಅಂಗಳದಿಂದ ಪೇಟೆಗೆ ಏನನ್ನಾದರೂ ತರಲು ಸುಂಕ ವಸೂಲಿ ಕೇಂದ್ರ ದಾಟಿ ಹೋಗಬೇಕಾದರೆ ಸುಂಕ ಪಾವತಿಸಬೇಕಾದ ವಿಲಕ್ಷಣ ಪರಿಸ್ಥಿತಿ.
ಇನ್ನೇನು ಫಾಸ್ಟಾಗ್ ಪದ್ಧತಿ ಬಂದೇ ಬಿಟ್ಟಿದೆ. ಫಾಸ್ಟಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕವಂತೆ. ಅಲ್ಲಿಗೆ ಮುಗಿದೇ ಹೋಯ್ತು. ಮೊನ್ನೆಯಷ್ಟೇ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಮೆಜಾನ್ ಮೂಲಕ ಖರೀದಿಸಿದ ಫಾಸ್ಟಾಗ್ ಕೆಲಸ ಮಾಡುತ್ತಿಲ್ಲ ಎಂದು ಬರೆದಿದ್ದರು. ಇಂತಹ ಅಧ್ವಾನಗಳಿಗೆ ಹೊಣೆ ಯಾರು? ಕುಂದಾಪುರದ ಶಾಸ್ತ್ರಿ ವೃತ್ತದ ಮೇಲ್ಸೇತುವೆ, ಮಂಗಳೂರಿನ ಪಂಪ್‌ವೆಲ್ ಅಥವಾ ಮಹಾವೀರ ವೃತ್ತದ ಮೇಲ್ಸೇತುವೆ ಇವೆರಡರ ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ಎಲ್ಲಾಸಾರ್ವಜನಿಕ ಹಿತಾಸಕ್ತಿಯ ವಿಷಯದಲ್ಲಿ ಇಷ್ಟೆಲ್ಲಾ ಗಲಭೆ, ಪ್ರತಿಭಟನೆ ನಡೆಯುತ್ತಿದ್ದರೂ ಇದನ್ನು ಸರಿಪಡಿಸಲು ಏಕೆ ಸಾಧ್ಯವಾಗಿಲ್ಲ ಎಂಬ ಬಗ್ಗೆ ಸಮಜಾಯಿಷಿ ನೀಡುವ ಬದ್ಧತೆ ಜನಪ್ರತಿನಿಧಿಗಳಿಗೆ ಅಥವಾ ಅಧಿಕಾರಿಗಳಿಗೆ ಇಲ್ಲವೇ?
ಮೋಹನದಾಸ ಕಿಣಿ, ಕಾಪು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.