ಹದ್ದುಮೀರಿದ ಓಲಿ, ಬುದ್ಧಿ ಹೇಳಿದ ನೇಪಾಲ


Team Udayavani, Jul 17, 2020, 6:45 AM IST

ಹದ್ದುಮೀರಿದ ಓಲಿ, ಬುದ್ಧಿ ಹೇಳಿದ ನೇಪಾಲ

ಅಯೋಧ್ಯೆಯ ವಿಚಾರವಾಗಿ ಓಲಿ ಮಾತುಗಳಿಗೆ ಭಾರತದಿಂದಷ್ಟೇ ಅಲ್ಲ, ಖುದ್ದು ನೇಪಾಲದ ಆಡಳಿತ ಪಕ್ಷ ಹಾಗೂ ಜನಸಾಮಾನ್ಯರಿಂದಲೂ ತೀವ್ರ ಪ್ರತಿರೋಧ ಎದುರಾಗಿದೆ.

ನೆರೆ ರಾಷ್ಟ್ರ ನೇಪಾಲದ ಬಗ್ಗೆ ಭಾರತದಲ್ಲಿ ಈ ಹಿಂದೆ ಯಾವತ್ತೂ ಇಷ್ಟು ಚರ್ಚೆಯಾಗಿರಲಿಲ್ಲ ಎನಿಸುತ್ತದೆ.

ಆದರೆ, ದುರದೃಷ್ಟವಶಾತ್‌ ಈ ಚರ್ಚೆಗೆ ಒಂದು ಋಣಾತ್ಮಕ ಛಾಯೆ ಇದೆ.

ಇದಕ್ಕೆ ಪ್ರಮುಖ ಕಾರಣ ನೇಪಾಲದ ಪ್ರಧಾನಮಂತ್ರಿ ಖಡ್ಗ ಪ್ರಸಾದ್‌ ಶರ್ಮಾ ಓಲಿ.

ಓಲಿ ಕೆಲ ತಿಂಗಳಿಂದ ಭಾರತ ವಿರೋಧಿ ಹೇಳಿಕೆಗಳು ಮತ್ತು ನಡೆಗಳ ಮೂಲಕ ಸುದ್ದಿಯಾಗುತ್ತಿದ್ದಾರೆ. 2015ರಲ್ಲಿ ಭಾರತ ವಿರೋಧಿ ಭಾವನೆಯ ಅಲೆಯ ಮೇಲೆಯೇ ಅಧಿಕಾರಕ್ಕೇರಿದ ಈ ಕಮ್ಯುನಿಸ್ಟ್ ನಾಯಕ, ಈಗಲೂ ಭಾರತ ವಿರೋಧಿ ಸೆಂಟಿಮೆಂಟ್‌ ಸೃಷ್ಟಿಸಿ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಬಹುದೆಂಬ ಭ್ರಮೆಯಲ್ಲಿದ್ದಾರೆ.

ಓಲಿ ಭಾರತದ ವಿರುದ್ಧ ನಿರಂತರ ವಾಗ್ಧಾಳಿ ನಡೆಸಿದ್ದಾರೆ ಮತ್ತು ಮುಖ್ಯವಾಗಿ ಭಾರತದ ಜತೆಗಿನ ನೇಪಾಲದ ಸಂಬಂಧವನ್ನು ಹಾಳು ಮಾಡುವಂಥ ನೀತಿಗಳನ್ನು ಜಾರಿಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಓಲಿ ನಡೆ-ನುಡಿಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.

1) ಚೀನದ ಕೋವಿಡ್ ಗಿಂತಲೂ ಭಾರತದ ಕೋವಿಡ್ ಅಪಾಯಕಾರಿ ಎಂದು ಹಂಗಿಸಿದ್ದಷ್ಟೇ ಅಲ್ಲದೇ, ತಮ್ಮ ದೇಶದಲ್ಲಿ ಸೋಂಕು ಹೆಚ್ಚಾಗಲು ಭಾರತವೇ ಕಾರಣ ಎಂದು ಆರೋಪಿಸಿದರು.

2) ಲಿಪುಲೇಖ್‌, ಕಾಲಾಪಾನಿ, ಲಿಂಪಿಯಾಧುರಾವನ್ನು ನೇಪಾಲದ ಪ್ರದೇಶಗಳೆಂದು ಸಾರುವ ನಕ್ಷೆಯನ್ನು ಹೊರತಂದರು.

3) ಭಾರತವನ್ನೇ ಗುರಿಯಾಗಿಟ್ಟುಕೊಂಡು ತಮ್ಮ ದೇಶದ ವಿವಾಹ ನಿಯಮಗಳಲ್ಲಿ ಬದಲಾವಣೆ ಮಾಡಿದರು.

4) ನೇಪಾಲದ ರೇಡಿಯೋ ಚಾನೆಲ್‌ಗ‌ಳಲ್ಲಿ ಭಾರತ ವಿರೋಧಿ ಹಾಡುಗಳು ಪ್ರಸಾರವಾಗುವಂತೆ ನೋಡಿಕೊಂಡರು.

5) ನೇಪಾಳದಲ್ಲಿ ಭಾರತೀಯ ಖಾಸಗಿ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸಿದರು.

6) ಅಯೋಧ್ಯೆಯಿರುವುದು ನೇಪಾಲದಲ್ಲಿ, ಅದು ಭಾರತದಲ್ಲಿಲ್ಲ. ಭಾರತ ಫೇಕ್‌ ಅಯೋಧ್ಯೆಯನ್ನು ಸೃಷ್ಟಿಸಿದೆ ಎಂದು ಹೇಳಿದ್ದಾರೆ!

ಅಯೋಧ್ಯೆಯ ವಿಚಾರವಾಗಿ ಅವರ ಮಾತುಗಳಿಗೆ ಭಾರತದಿಂದಷ್ಟೇ ಅಲ್ಲ, ಖುದ್ದು ನೇಪಾಲದ ಆಡಳಿತ ಪಕ್ಷ ಹಾಗೂ ಜನಸಾಮಾನ್ಯರಿಂದಲೂ ತೀವ್ರ ಪ್ರತಿರೋಧ ಎದುರಾಗಿದೆ. ಇದರಿಂದಾಗಿ ತಾವು ಹದ್ದುಮೀರಿದೆವೆಂದು ಓಲಿಯವರಿಗೂ ಈಗ ಅರಿವಾಗಿದ್ದು, ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಜಾರಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಅಯೋಧ್ಯೆ ವಿಚಾರ, ಸ್ವಪಕ್ಷೀಯರಿಂದಲೇ ಅಸಮಾಧಾನ
ಓಲಿ ಚೀನದ ಕುಮ್ಮಕ್ಕಿನಿಂದಾಗಿ ಈ ರೀತಿಯ ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈಗಂತೂ ಅವರ ಪ್ರತಿಯೊಂದು ನಡೆ-ನುಡಿಯನ್ನೂ ಚೀನ ರಾಯಭಾರಿ ಹೌ ಯಾಂಕಿಯೇ ನಿರ್ದೇಶಿಸುತ್ತಿದ್ದಾರೇನೋ ಎನ್ನುವಂತೆ ಭಾಸವಾಗುತ್ತಿದೆ.

ಆದರೆ, ಭಾರತ ವಿರೋಧಿ ಭಾವನೆಯನ್ನು ಹರಡುವ ಓಲಿ- ಚೀನ ಪ್ರಯತ್ನಕ್ಕೆ ಈಗ ನಿಧಾನಕ್ಕೆ ಬ್ರೇಕ್‌ ಬೀಳಲಾರಂಭಿಸಿದೆ. ನೇಪಾಲದ ಆಡಳಿತ ಪಕ್ಷದ ಸ್ಥಾಯಿ ಸಮಿತಿಯ ಸದಸ್ಯ ರಘೂಜಿ ಪಂಥ್‌ ಸಹ ಈ ವಿಚಾರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಓಲಿಯವರು ಧಾರ್ಮಿಕ ವಿಷಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಬೇಕು ಎನ್ನುವ ಪಂಥ್‌, ರಾಮ ಜನ್ಮ ಸ್ಥಾನದ ಬಗ್ಗೆ ವಿವಾದ ಸೃಷ್ಟಿಸಿ ಓಲಿ ತಪ್ಪು ಮಾಡಿದ್ದಾರೆ ಎನ್ನುತ್ತಾರೆ. ರಾಮಜನ್ಮಭೂಮಿಯ ವಿಷಯ ಭಾರತೀಯರ ಹೃದಯಕ್ಕೆ ಹತ್ತಿರವಿರುವಂಥದ್ದು. ಅದರಲ್ಲೂ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಭರವಸೆಗಳಲ್ಲಿ ರಾಮ ಮಂದಿರ ನಿರ್ಮಾಣದಂಥ ವಿಷಯವೂ ಇದೆ.

ಹೀಗಾಗಿ, ಈ ವಿಷಯದಲ್ಲಿ ವಿವಾದ ಸೃಷ್ಟಿಸುವುದರಿಂದ ಎರಡೂ ರಾಷ್ಟ್ರಗಳ ನಡುವೆ ವೈಮನಸ್ಯ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಸುವ ಪಂಥ್‌ ಅವರು, ಮುಂದುವರಿದು ಹೇಳುತ್ತಾರೆ- “ಹೇಗೆ ನೇಪಾಲದ ಜನಮಾನಸಕ್ಕೆ ಪಶುಪತಿನಾಥ್‌ ಮತ್ತು ಲುಂಬಿನಿ ಅತ್ಯಾಪ್ತವೋ, ಅಂಥದ್ದೇ ಭಾವನೆ ಅಯೋಧ್ಯೆ ವಿಚಾರದಲ್ಲಿ ಕೋಟ್ಯಂತರ ಭಾರತೀಯರಿಗೆ ಇದೆ.

ಈ ರೀತಿಯ ವಿಚಾರಗಳಲ್ಲಿ ಚರ್ಚೆ ಮತ್ತು ವಾದಗಳನ್ನು ಇತಿಹಾಸಕಾರರಿಗೆ, ಸಂಶೋಧಕರಿಗೆ ಮತ್ತು ಬುದ್ಧಿ ಜೀವಿಗಳಿಗೆ ಬಿಟ್ಟುಬಿಡಬೇಕು. ಒಟ್ಟಲ್ಲಿ, ಪ್ರಧಾನಿ ಓಲಿ ಹೇಳಿಕೆಯ ನಂತರ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಕುಸಿಯುತ್ತದೇನೋ ಎಂದು ನನಗೆ ಭಯವಾಗುತ್ತಿದೆ’.

ಓಲಿಯನ್ನು ಖಂಡಿಸುತ್ತಿವೆ ನೇಪಾಲದ ಪತ್ರಿಕೆಗಳು
ರಾಜಕಾರಣಿಗಳಷ್ಟೇ ಅಂತಲ್ಲ, ಓಲಿಯವರಿಂದ ಹೆಚ್ಚುತ್ತಿರುವ ಭಾರತ ವಿರೋಧಿ ಹೆಜ್ಜೆಗಳ ಬಗ್ಗೆ ನೇಪಾಲದ ಪತ್ರಕರ್ತರೂ ಪ್ರಶ್ನಿಸಲಾರಂಭಿಸಿದ್ದಾರೆ. ಭಾರತೀಯ ಮಾಧ್ಯಮಗಳು ತಮ್ಮನ್ನು ಟೀಕಿಸುವುದನ್ನು ಸಹಿಸದ ಓಲಿಯವರಿಗೆ, ಈಗ ನೇಪಾಳದ ಮಾಧ್ಯಮಗಳೇ ಪ್ರಶ್ನೆ ಎದುರಿಡುತ್ತಿರುವುದು ಹೊಸ ತಲೆನೋವಾಗಿದೆ.

ಅಯೋಧ್ಯೆ ಕುರಿತು ಓಲಿ ಹೇಳಿಕೆ ಹೊರಬಿದ್ದದ್ದೇ, ನೇಪಾಲದ ಪ್ರಖ್ಯಾತ ಪತ್ರಿಕೆ “ಕಾಠ್ಮಂಡು ಪೋಸ್ಟ್’ ಸಹ ತನ್ನ ಮುಖಪುಟದಲ್ಲಿ ಓಲಿ ಯವರ ಹೇಳಿಕೆಯನ್ನು ಖಂಡಿಸಿದೆ. “ಇತ್ತೀಚೆಗೆ, ಭಾರತದ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ವರದಿಗಳ ಬಗ್ಗೆ ನೇಪಾಲದಲ್ಲಿ ಅಸಮಾಧಾನ ಅಧಿಕವಾಗಿತ್ತು. ಈ ಕಾರಣಕ್ಕಾಗಿಯೇ, ಭಾರತದ ಸುದ್ದಿ ವಾಹಿನಿಗಳನ್ನು ನಿಷೇ ಧಿಸಬೇಕು ಎನ್ನುವ ವಿಚಾರಕ್ಕೆ ಎಲ್ಲಾ ವಲಯದಿಂದಲೂ ಓಲಿಯವರಿಗೆ ಬೆಂಬಲ ವ್ಯಕ್ತವಾಗಿತ್ತು. ಆದರೆ, ಓಲಿ, ಇದು ಜನರು ತಮಗೇ ಕೊಡುತ್ತಿರುವ ಬೆಂಬಲ ಎಂದು ತಪ್ಪಾಗಿ ಅರ್ಥೈ ಸಿ ಕೊಂಡರು. ಈ ಕಾರಣಕ್ಕಾಗಿಯೇ, ಒಂದು ಹೆಜ್ಜೆ ಮುಂದೆ ಹೋಗಿ ಅಯೋಧ್ಯೆ ವಿಷಯವನ್ನು ಮಾತಾಡಿದರೆನಿಸುತ್ತದೆ’ ಎಂದು ಕಾಠ್ಮಂಡು ಪೋಸ್ಟ್ ಹೇಳುತ್ತದೆ.

ಈಗ ನೇಪಾಲದ ಎಲ್ಲಾ ವಲಯದಿಂದಲೂ ವಿರೋಧ ವ್ಯಕ್ತವಾಗುತ್ತಿರುವುದರಿಂದ ಓಲಿ ಕೆಲ ಸಮಯದವರೆಗಂತೂ ಸುಮ್ಮನಿರುವ ಲಕ್ಷಣ ಗೋಚರಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಲುಗಾಡುತ್ತಿರುವ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಅವರು ಹೆಣಗಾಡುವಂತಾಗಿದ್ದು ಇದಕ್ಕೆಲ್ಲ ಅವರ ಭಾರತೀಯ ವಿರೋಧಿ ಗುಣ ಹಾಗೂ ಸರ್ವಾಧಿಕಾರಿ ವರ್ತನೆಗಳೇ ಕಾರಣ.  ಈಗ ಆಡಳಿತ ಪಕ್ಷದಲ್ಲೇ ಬಹು ದೊಡ್ಡ ಬಿರುಕು ಮೂಡಿದ್ದು, ನೇಪಾಲ ಕಮ್ಯುನಿಸ್ಟ್ ಪಾರ್ಟಿಯ ಪುಷ್ಪ ಕಮಲ್‌ ದಹಲ್ (ಪ್ರಚಂಡ) ಓಲಿಯನ್ನು ಕುರ್ಚಿಯಿಂದ ಕೆಡವಲು ಸಕಲ ಪ್ರಯತ್ನ ನಡೆಸಿದ್ದಾರೆ. ಆದಾಗ್ಯೂ ಪ್ರಚಂಡ ಸಹ ಚೀನ ಪರ ಧೋರಣೆಯಿರುವವರಾದರೂ, ಓಲಿಯವರಂತೆ ನೇಪಾಲವನ್ನು ಚೀನದ ಜೋಳಿಗೆಗೆ ಹಾಕುವಂಥ ನಡೆ ಇಡುವವರಲ್ಲ ಎನ್ನುತ್ತಾರೆ ವಿಶ್ಲೇಷಕರು.

(ಕೃಪೆ: ಜನವಾಸ್ತವ್‌ ನ್ಯೂಸ್‌)

1947ರ ಅನಂತರ ಇದೇ ಮೊದಲ ಬಾರಿ ನೇಪಾಲ- ಭಾರತದ ನಡುವಿನ ಸಂಬಂಧ ತೀವ್ರ ಹದಗೆಟ್ಟಿದೆ. ಈ ಎರಡೂ ರಾಷ್ಟ್ರಗಳ ಸಂಬಂಧದಲ್ಲಿ ಸುಧಾರಣೆಯಾಗದಿದ್ದರೆ ದಕ್ಷಿಣ ಏಷ್ಯಾದಲ್ಲಿನ ಭೂ- ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ತಡವಾಗುವ ಮುನ್ನ ಪರಿಹಾರ ಕಂಡು ಹಿಡಿಯಬೇಕಿದೆ.

– ರಮೇಶ್‌ನಾಥ್‌ ಪಾಂಡೆ, ನೇಪಾಲದ ಮಾಜಿ ವಿದೇಶಾಂಗ ಸಚಿವ

ಟಾಪ್ ನ್ಯೂಸ್

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

5-aranthodu

Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ

4-road-mishap

Anandapura: ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

State records liquor sales worth Rs 408 crore in a single day

Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ

Bengaluru; Cab driver fell asleep: Passenger drove the vehicle!

Bengaluru; ನಿದ್ರೆಗೆ ಜಾರಿದ ಕ್ಯಾಬ್‌ ಡ್ರೈವರ್‌: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video

ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್‌ ಮ್ಯಾನೇಜರ್!

Out of syllabus movie review

Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್‌

INDvAUS; For the first time in history…: Bumrah sets new record with 200 wickets

INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್‌ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.