ಪ್ರಕೃತಿಯ ಮೌಲ್ಯಗಳೊಂದಿಗೆ ಬದುಕು ರೂಪಿಸೋಣ


Team Udayavani, Jan 28, 2021, 6:23 AM IST

ಪ್ರಕೃತಿಯ ಮೌಲ್ಯಗಳೊಂದಿಗೆ ಬದುಕು ರೂಪಿಸೋಣ

ಸಾಂದರ್ಭಿಕ ಚಿತ್ರ

ಬದುಕು ನಿಂತ ನೀರಲ್ಲ. ಹರಿಯುತ್ತಿರುವ ನದಿ ಯಂತೆ. ಮಗುವೊಂದು ಜನಿಸಿದೊಡನೆ ತಿಳಿದೋ ತಿಳಿಯದೆಯೋ ಬದುಕಿನ ಪಾಠವನ್ನು ಅದು ಕಲಿಯಲು ಆರಂಭಿಸುತ್ತದೆ. ತಾನು ಬೆಳೆದಂತೆಲ್ಲ ಹೆಚ್ಚೆಚ್ಚು ಜನರೊಂದಿಗೆ ಅದರ ಸಂವಹನ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಡೆಯುತ್ತಿರುತ್ತದೆ. ಚಿಕ್ಕ ಮಗುವೊಂದು ಯಾವುದೋ ಕಾರಣದಿಂದ ಅಳುತ್ತಿರಬಹುದು. ಮಗುವಿನ ಅಳು ತಾಯಿಯ ಹೃದಯವನ್ನು ತಟ್ಟದಿರದು. ಅಳುವಿಗೆ ನಿರ್ದಿಷ್ಟವಾದ ಕಾರಣವನ್ನು ಕಂಡು ಹಿಡಿದು ಪರಿಹಾರವನ್ನು ಕೊಟ್ಟೇ ಕೊಡುತ್ತಾಳೆ ಆ ಮಹಾತಾಯಿ. ಈ ಪರಸ್ಪರ ಅವಿನಾ ಭಾವ ಸಂಬಂಧ ಮಗು ಮತ್ತು ಅಮ್ಮ ಇಬ್ಬರಿಗೂ ಅನೇಕ ಪಾಠಗಳನ್ನು ಕಲಿಸುತ್ತದೆ. ಮಗು ತನಗೆ ಬೇಕಾದ್ದನ್ನು ಪಡೆದುಕೊಳ್ಳಲು ಅಳಬೇಕು ಎಂಬ ಪಾಠವನ್ನು ಕಲಿತರೆ ಮಗು ಅತ್ತಾಗ ಅದಕ್ಕೆ ಏನೋ ತೊಂದರೆಯುಂಟಾಗಿದೆ ಹಾಗೂ ಪರಿಹಾರವನ್ನು ಕಂಡುಕೊಳ್ಳಬೇಕೆಂಬ ಜಿಜ್ಞಾಸೆ ತಾಯಿಯಲ್ಲೂ ಉಂಟಾಗುತ್ತದೆ. ಹೀಗೆ ಪರಸ್ಪರ ಪವಿತ್ರವಾದ, ನಿಸ್ವಾರ್ಥದಿಂದ ಕೂಡಿದ, ಪ್ರೇಮಮ ಯವಾದ, ಕಲುಷಿತವಿಲ್ಲದ ಸಂಬಂಧ ಬೆಸೆಯುತ್ತದೆ.

ಈ ತಾಯಿ-ಮಗುವಿನ ಸಂಬಂಧವನ್ನು ವಿಸ್ತರಿಸಿದರೆ, ಪ್ರಕೃತಿ ಮತ್ತು ಜೀವರಾಶಿಗಳ ಮಧ್ಯೆ ನಡೆಯುವ ಕೊಡು-ಕೊಳ್ಳುವಿಕೆ ಹಾಗೂ ಪರಸ್ಪರ ಬೆಸೆ ಯುವ ಸಂಬಂಧಗಳು ಅತೀ ಮುಖ್ಯವಾಗಿ ಕಾಣುತ್ತದೆ. ಪ್ರಕೃತಿ ಮತ್ತು ಜೀವರಾಶಿಗಳು ಬೇರೆ ಬೇರೆಯೆಂದು ಮೇಲ್ನೋಟಕ್ಕೆ ಕಂಡರೂ ಯಥಾರ್ಥವಾಗಿ ಒಂದು ಇನ್ನೊಂದನ್ನು ಬಿಟ್ಟಿರಲಾರದು.

ಪ್ರಕೃತಿ ಹಾಗೂ ಜೀವರಾಶಿ ಎಲ್ಲವೂ ಭಗವಂತನ ಸೃಷ್ಟಿ. ಇಲ್ಲಿ ದೇವರು ಸಕಲ ಜೀವರಾಶಿಗೂ ನೆಮ್ಮದಿಯಿಂದ ಬದುಕಲು ವ್ಯವಸ್ಥೆಯನ್ನು ಕಲ್ಪಿಸಿದ್ದಾನೆ. ಪ್ರತಿಯೊಂದು ಜೀವಿಗೂ ಬೇಕಾಗುವ ಗಾಳಿ, ನೀರು, ಬೆಳಕು, ಆಹಾರ, ವಸತಿ ಇವೇ ಮೊದಲಾದ ಅವಶ್ಯಗಳನ್ನು ಧಾರಾಳವಾಗಿ ಪೂರೈಸಿದ್ದಾನೆ. ಜತೆ ಜತೆಗೆ ಭಗವಂತ ಒಂದು ಸಾತ್ವಿಕವಾದ ನಿಯಮವನ್ನೂ ನಮ್ಮ ಮುಂದಿಟ್ಟಿದ್ದಾನೆ. ಯಾವೊಂದು ಪ್ರಾಣಿಯೇ ಆಗಲಿ, ಮನುಷ್ಯನೇ ಆಗಲಿ ಪ್ರಕೃತಿಯ ಕೊಡುಗೆಯನ್ನು ಹಿತಮಿತವಾಗಿ ಬಳಸಬೇಕು. ತನ್ನ ಅಗತ್ಯಕ್ಕೆ ತಕ್ಕಷ್ಟು ತನ್ನ ಪಾಲನ್ನು ಸ್ವೀಕರಿಸಬೇಕಲ್ಲದೆ, ಇತರರ ಪಾಲನ್ನಲ್ಲ. ಈ ರೀತಿಯ ನಿಯಮದೊಳಗೆ ಬದುಕಿದವನಿಗೆ ಶಾಶ್ವತವಾಗಿ ಸಾತ್ವಿಕತೆ, ಮಾನವೀಯತೆ, ಪರೋಪಕಾರ, ಇತರರ ಕಷ್ಟದ ಬಗ್ಗೆ ಅನುಕಂಪ ಇತ್ಯಾದಿಗಳು ಸಹಜವಾಗಿಯೇ ಇರುತ್ತವೆ. ಆದರೆ ಈ ನಿಯಮದೊಳಗೆ ಬದುಕಲಾರದವ ಸಮಾಜಕ್ಕೆ ಹಾಗೂ ಇತರ ಎಲ್ಲ ಜೀವ ರಾಶಿಗಳಿಗೆ ಸದಾ ಕಂಟಕನಾಗುತ್ತಾನೆ. ಆತ ಸ್ವಾರ್ಥ, ಅನ್ಯಾಯ, ಹಿಂಸೆ, ವ್ಯಭಿಚಾರ ಇವೇ ಮೊದಲಾದ ಗುಣಗಳುಳ್ಳ ಸಮಾಜಘಾತಕ ಶಕ್ತಿಯಾಗಿ ಬೆಳೆಯುತ್ತಾನೆ.

ನದಿಯೊಂದು ತಾನು ಏನನ್ನೂ ಬಯಸದೆ ಎಷ್ಟೋ ದೂರ ಹರಿದು ಸಾಗುತ್ತಾ ಕೃಷಿ ಭೂಮಿಗೆ, ಜನರಿಗೆ, ಗಿಡಗಳಿಗೆ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಾ ತ್ಯಾಗದ ಪ್ರತೀಕವಾಗಿ ಕಾಣಿಸುತ್ತದೆ. ಒಂದು ಗಿಡ ಅದೆಷ್ಟೋ ಸುಮಧುರವಾದ ಹೂಗಳನ್ನು ಕೊಡುತ್ತಾ ತನ್ನನ್ನು ಇತರರಿಗೆ ಹಾಗೂ ದೇವರಿಗೆ ಸಮರ್ಪಿಸಿಕೊಳ್ಳುತ್ತದೆ. ಆದರೆ ಅದು ನಮ್ಮಿಂದ ಏನನ್ನೂ ಕೇಳುವುದಿಲ್ಲ. ಹುಲ್ಲುಕಡ್ಡಿ ಒಣಗಿ ಮಣ್ಣಿನೊಳಗೆ ಸೇರಿದ್ದು, ಮಳೆಬಿದ್ದು ಇಳೆ ತಂಪಾದಾಗ ಪುಟಿದೆದ್ದು ಚಿಗುರಿ ನಿಂತು ಅನೇಕ ಪ್ರಾಣಿಗಳಿಗೆ ಆಹಾರವಾಗಿ ತನ್ನ ಜೀವನವನ್ನು ಸಾರ್ಥಕಗೊಳಿಸುತ್ತದೆ. ಗಿಡವೊಂದು ಬೆಳೆದು ಮರವಾಗಿ ಕೊನೆಗೆ ಹಣ್ಣನ್ನು ನೀಡುವುದರೊಂದಿಗೆ, ಪುನಃ ಅದೇ ಹಣ್ಣಿನ ಬೀಜ ಗಿಡವಾಗಿ, ಮರವಾಗಿ ಬೆಳೆದು ಮತ್ತೆ ಮತ್ತೆ ಹಣ್ಣನ್ನು ಕೊಡುತ್ತಿರುತ್ತದೆ.

ಭೂಮಿ ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ನಿರ್ದಿಷ್ಟ ಸಮಯದಲ್ಲಿ ಸ್ವಲ್ಪವೂ ವ್ಯತ್ಯಾಸವಾಗದೆ, ಸುತ್ತುತ್ತಾ ಹಗಲು-ರಾತ್ರಿಗಳಾಗುತ್ತಲೇ ಇರುತ್ತದೆ. ಸೂರ್ಯ ಮತ್ತು ಗ್ರಹಗಳ ಈ ನಂಟು ಹಾಗೂ ಚಲನೆ ಪ್ರಾಮಾ ಣಿಕತೆಗೆ ಪ್ರತಿಬಿಂಬದಂತಿದೆ. ಮೇಲಿನ ಈ ಎಲ್ಲ ಉದಾಹ ರಣೆಗಳಲ್ಲಿ ಕಾಣಸಿಗುವ ಮೌಲ್ಯಗಳು ಅಪಾರ. ತ್ಯಾಗ, ಪರೋಪಕಾರ, ನಂಬಿಕೆ, ಪ್ರಾಮಾಣಿಕತೆ, ನಿಷ್ಟೆ ಇತ್ಯಾದಿ.

ನಮ್ಮ ಬಾಳಿನ ಶಿಲ್ಪಿ ನಾವೇ ಆದಾಗ ಮಾತ್ರ ನಾವು ದಾರ್ಶನಿಕರಾಗುತ್ತೇವೆ. ದೇವರು ಪ್ರತಿಯೊಬ್ಬನನ್ನೂ ಹರಸುತ್ತಾನೆ. ಆದರೆ ಆತನ ಅನುಗ್ರಹ ಶಕ್ತಿ ಧನಾತ್ಮಕ ಮೌಲ್ಯಗಳೊಂದಿಗೆ ಸೇರಿಕೊಂಡಾಗ ಬದುಕು ಸಾರ್ಥಕತೆಯನ್ನು ಕಂಡುಕೊಳ್ಳುವುದರಲ್ಲಿ ಸಂದೇಹವಿಲ್ಲ.

ಈ ಎಲ್ಲ ಅಂಶಗಳಿಂದ ಜಾಗೃತಗೊಂಡು ಹಿರಿಯರು ಮನೆಯಲ್ಲಿ, ಶಿಕ್ಷಕರು ವಿದ್ಯಾಸಂಸ್ಥೆಗಳಲ್ಲಿ, ತಮ್ಮ ಜತೆಗಿನ ಯುವಪೀಳಿಗೆಗೆ ಪ್ರತೀ ಹಂತದಲ್ಲೂ, ತಮ್ಮ ನಡತೆ, ಮಾತು ಹಾಗೂ ಸಂವಹನಗಳಲ್ಲಿ ಮೌಲ್ಯಗಳನ್ನು ಬಟ್ಟಿ ಇಳಿಸುವುದು ಅತೀ ಆವಶ್ಯಕವಾದ ವಿಚಾರ.  ಸಮಾಜದ ಎಲ್ಲ ತೊಂದರೆಗಳನ್ನು ನಿವಾರಿಸಲು ಬೇಕಾದ ಅತೀ ಅಗತ್ಯದ ಸರಕು ಎಂದರೆ ಪ್ರಕೃತಿಯಿಂದ ಬಂದ ಮೌಲ್ಯಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳುವುದು. ಪ್ರಕೃತಿಯ ಸರಳ ನಿಯಮಗಳನ್ನು ಪಾಲಿಸದೆ ಮುನ್ನಡೆಯುವುದು ಇನ್ನಷ್ಟು ತೊಂದರೆಗಳಿಗೆ ಆಹ್ವಾನವಾಗಬಹುದು. ತ್ಯಾಗ ಹಾಗೂ ಪರೋಪಕಾರದಿಂದ ಕೂಡಿದ ಸರಳ, ಸಾತ್ವಿಕ, ಆಧ್ಯಾತ್ಮಿಕ ಹಾಗೂ ಯೋಗ ಮಾರ್ಗದ ನಮ್ಮ ದೇಶದ ಸಂಸ್ಕೃತಿ ಎಲ್ಲ ಸಮಸ್ಯೆಗಳಿಗೂ ಪರಿಹಾರ ಎನ್ನುವ ಸತ್ಯದರ್ಶನ ಪ್ರತಿಯೊಬ್ಬರಲ್ಲೂ ಜಾಗೃತಿಯನ್ನು ಮೂಡಿಸಲಿ ಹಾಗೂ ಮುಂದಿನ ನಮ್ಮ ಪೀಳಿಗೆ ಇನ್ನಷ್ಟು ಸತ್ವಭರಿತವಾಗಿ ಬಾಳಿ ದೇಶವನ್ನು ಮುನ್ನಡೆಸಲಿ ಎನ್ನುವುದೇ ಎಲ್ಲರ ಸದಾಶಯವಾಗಿರಲಿ.

 

ಡಾ| ಈಶ್ವರ ಭಟ್‌ ಎಸ್‌. ಮಂಗಳೂರು

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.