ಇಸ್ರೇಲ್‌ಗೆ ಮಾನ್ಯತೆ ನೀಡಲು ಪಾಕ್ ಮೇಲೆ ಭಾರೀ ಒತ್ತಡ!
Team Udayavani, Dec 9, 2020, 6:25 AM IST
ಪಾಕಿಸ್ಥಾನವು ಆರ್ಥಿಕವಾಗಿ ಸೌದಿ ಮತ್ತು ಯುಎಇಯ ಮೇಲೆ ಅವಲಂಬಿತವಾಗಿದೆ. ಈ ದೇಶಗಳಲ್ಲಿ ಅಗಣಿತ ಸಂಖ್ಯೆಯಲ್ಲಿ ಪಾಕ್ ಮೂಲದ ಕೆಲಸಗಾರರಿದ್ದಾರೆ. ವಿದೇಶಗಳಲ್ಲಿ ಕೆಲಸಮಾಡುವ ಈ ಪಾಕಿಸ್ಥಾನಿಯರು ತಮ್ಮ ದೇಶಕ್ಕೆ ಕಳುಹಿಸುವ ಹಣದಿಂದಲೇ ಪಾಕಿಸ್ಥಾನದ ಅರ್ಥವ್ಯವಸ್ಥೆಯ ಗಾಲಿ ತಿರುಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇಸ್ರೇಲ್‌ಗೆ ಮಾನ್ಯತೆ ನೀಡಬೇಕೆಂದ ಸೌದಿ ಮತ್ತು ಯುಎಇಯ ಒತ್ತಡವನ್ನು ಪಾಕಿಸ್ಥಾನ ಎಲ್ಲಿಯವರೆಗೂ ಸಹಿಸಿಕೊಳ್ಳಬಹುದು?
ಒಂದೆಡೆ ಅನೇಕ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜತೆಗೆ ಶಾಂತಿ ಒಪ್ಪಂದ ಮಾಡಿಕೊಳ್ಳುವ ಜತೆಗೆ, ಅದಕ್ಕೆ ಮಾನ್ಯತೆಯನ್ನೂ ನೀಡುತ್ತಾ ಹೊರಟಿದ್ದರೆ, ಇನ್ನೊಂದೆಡೆ ಪಾಕಿಸ್ಥಾನದ ಮೇಲೂ ಇಸ್ರೇಲ್‌ಗೆ ಮಾನ್ಯತೆ ನೀಡುವ ಭಾರೀ ಒತ್ತಡವಿದೆ. ಈ ವಿಚಾರದಲ್ಲಿ ತಮ್ಮ ಮೇಲೆ ಒತ್ತಡ ಹಾಕುತ್ತಿರುವ ರಾಷ್ಟ್ರಗಳಲ್ಲಿ ಅಮೆರಿಕ ಕೂಡ ಇದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳುತ್ತಿದ್ದಾರೆ. ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನ ತೊರೆಯುವ ಮುನ್ನ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆ ಮಾಡಿದ ಹೆಗ್ಗಳಿಕೆ ಪಡೆದು ಹೊರನಡೆಯಬೇಕೆಂದು ಬಯಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ, ಇಸ್ರೇಲ್‌ಗೆ ಮಾನ್ಯತೆ ನೀಡಬೇಕೆಂದು ಅವರು ಸೌದಿ ಅರಬ್‌ನ ಮೇಲೂ ಒತ್ತಡ ಹಾಕುತ್ತಿದ್ದಾರೆ. ಇದಷ್ಟೇ ಅಲ್ಲದೆ ಟ್ರಂಪ್, ಅಮೆರಿಕದ ದೂತಾವಾಸ ಕಚೇರಿಯನ್ನು ಟೆಲ್ ಅವೀವ್‌ನಿಂದ ಜರೂಸಲೇಂಗೆ ಸ್ಥಳಾಂತರಿಸಿದ್ದಾರೆ.
ಆದಾಗ್ಯೂ ಇಮ್ರಾನ್ ಖಾನ್ ಸೌದಿಯ ಹೆಸರನ್ನು ಉಲ್ಲೇಖೀಸಿಲ್ಲವಾದರೂ, ಇಸ್ರೇಲ್‌ಗೆ ಮಾನ್ಯತೆ ನೀಡುವ ಸಮಯ ಬಂದಿದೆ ಎಂದು ಸೌದಿ ಪಾಕಿಸ್ಥಾನ ಅರ್ಥಮಾಡಿಸಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತದೆ. ಸೌದಿ ಇದೇ ವಾರ ಹೊಸ ನೀತಿಯೊಂದನ್ನು ಘೋಷಿಸಿದೆ, ಇದರನ್ವಯ ಇನ್ಮುಂದೆ ಇಸ್ರೇಲಿ ವಿಮಾನಗಳು ತನ್ನ ವೈಮಾನಿಕ ಕ್ಷೇತ್ರದ ಮೂಲಕ ಯುಎಇಗೆ ತಲುಪಲು ಅನುಮತಿ ನೀಡಿದೆ.
ಕಳೆದ ಕೆಲವು ತಿಂಗಳಲ್ಲಿ ಯುಎಇ, ಬಹರೇನ್ ಮತ್ತು ಸೂಡಾನ್ ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಂಡಿವೆ. ಒಂದು ವೇಳೆ ಸೌದಿಯೂ ಇದೇ ರೀತಿ ಮಾಡಿದರೆ, ಅದು ಬಹುದೊಡ್ಡ ಬದಲಾವಣೆಯ ಕುರುಹು ಆಗಲಿದೆ. ಆದರೆ, ಎಲ್ಲಿಯವರೆಗೂ ಪ್ಯಾಲಸ್ತೀನ್ ವಿಚಾರ ಬಗೆಹರಿಯುವುದಿಲ್ಲವೋ, ಅಲ್ಲಿಯವರೆಗೂ ತಾನು ಇಸ್ರೇಲ್ ಅನ್ನು ಒಂದು ರಾಷ್ಟ್ರವಾಗಿ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಪಾಕಿಸ್ಥಾನದ ನಿಲುವು.
ಆದರೆ ಪಾಕಿಸ್ಥಾನವು ಆರ್ಥಿಕವಾಗಿ ಸೌದಿ ಮತ್ತು ಯುಎಇಯ ಮೇಲೆ ಅವಲಂಬಿತವಾಗಿದೆ. ಈ ದೇಶಗಳಲ್ಲಿ ಅಗಣಿತ ಸಂಖ್ಯೆಯಲ್ಲಿ ಪಾಕ್ ಮೂಲದ ಕೆಲಸಗಾರರಿದ್ದಾರೆ. ವಿದೇಶಗಳಲ್ಲಿ ಕೆಲಸಮಾಡುವ ಈ ಪಾಕಿಸ್ಥಾನಿಯರು ತಮ್ಮ ದೇಶಕ್ಕೆ ಕಳುಹಿಸುವ ಹಣದಿಂದಲೇ ಪಾಕಿಸ್ಥಾನದ ಅರ್ಥವ್ಯವಸ್ಥೆಯ ಗಾಲಿ ತಿರುಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇಸ್ರೇಲ್‌ಗೆ ಮಾನ್ಯತೆ ನೀಡಬೇಕೆಂದ ಸೌದಿ, ಯುಎಇ ಒತ್ತಡವನ್ನು ಪಾಕಿಸ್ಥಾನ ಎಲ್ಲಿಯವರೆಗೂ ಸಹಿಸಿಕೊಳ್ಳಬಹುದು?
ಯುಎಇ ಪಾಕಿಸ್ಥಾನ, ಅಫ್ಘಾನಿಸ್ಥಾನ ಸೇರಿದಂತೆ 13 ಇಸ್ಲಾಮಿಕ್ ರಾಷ್ಟ್ರಗಳ ಪ್ರವಾಸಿ ಹಾಗೂ ಉದ್ಯೋಗ ವೀಸಾಗಳಿಗೆ ಅನಧಿಕೃತವಾಗಿ ತಾತ್ಕಾಲಿಕ ತಡೆ ಹಾಕಿದೆ ಎನ್ನಲಾಗುತ್ತದೆ. ಈ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಯುಎಇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ “ಇಸ್ರೇಲ್‌ನೊಂದಿಗೆ ಹತ್ತಿರವಾಗಿ’ ಎಂದು ಈ ರಾಷ್ಟ್ರಗಳಿಗೆಲ್ಲ ಯುಎಇ ಪರೋಕ್ಷ ಸಂದೇಶ ನೀಡುತ್ತಿದೆ ಎನ್ನಲಾಗುತ್ತಿದೆ.
ಇದಕ್ಕೆ ಇನ್ನೊಂದು ಕಾರಣ ಏನಿರಬಹುದೆಂದರೆ, ಯಾವಾಗ ಯುಎಇ ಇಸ್ರೇಲ್‌ಗೆ ಮಾನ್ಯತೆ ನೀಡಿತೋ ಆಗಿನಿಂದ ಬೃಹತ್ ಸಂಖ್ಯೆಯಲ್ಲಿ ಇಸ್ರೇಲಿ ನಾಗರಿಕರು ಆ ದೇಶಕ್ಕೆ ಪ್ರವಾಸಕ್ಕೆ ಹಾಗೂ ಖರೀದಿಗೆ ಬರಲಾರಂಭಿಸಿದ್ದಾರೆ. ಈ ಸಮಯದಲ್ಲಿ ಏನೂ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ ಯುಎಇ ಹೀಗೆ ಮಾಡಿರಬಹುದೇ? ಇದಕ್ಕೆ ಉತ್ತರ ಸ್ಪಷ್ಟವಿಲ್ಲ. ಆದರೆ ಎಲ್ಲಿ ತಮ್ಮ ನೌಕರಿಗಳಿಗೆ ಇದರಿಂದಾಗಿ ಅಪಾಯ ಏರ್ಪಟ್ಟುಬಿಡುತ್ತದೋ ಎನ್ನುವ ಚಿಂತೆಯಂತೂ ಪಾಕ್ ಮೂಲದ ನೌಕರರಿಗೆ ಆರಂಭವಾಗಿದೆ. ಈಗ ಪಾಕಿಸ್ಥಾನಿ ಸುದ್ದಿ ವಾಹಿನಿಗಳಲ್ಲೂ ಇಸ್ರೇಲ್‌ಗೆ ಮಾನ್ಯತೆ ಕೊಡಬೇಕೇ ಎನ್ನುವ ವಿಚಾರದಲ್ಲಿ ಚರ್ಚೆಗಳು ಆರಂಭವಾಗಿವೆ. ಒಟ್ಟಲ್ಲಿ ಯಹೂದಿ ಬಾಹುಳ್ಯದ ಇಸ್ರೇಲ್‌ಗೆ ಹತ್ತಿರವಾದರೆ, ಸಾರ್ವಜನಿಕರ ಭಾವನೆ ಹೇಗಿರಬಹುದು ಎಂದು ಅಳೆಯಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ.
ಈ ಹಿಂದೆ, ಅಂದರೆ 2005ರಲ್ಲಿ ಜನರಲ್ ಪರ್ವೇಜ್ ಮುಷರ್ರಫ್ ಗುಪ್ತವಾಗಿ ಇಸ್ರೇಲ್‌ನೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದರು. ಆಗ ಅವರು ವಿದೇಶಾಂಗ ಸಚಿವ ಖುರ್ಷಿದ್ ಕಸೂರಿ ಅವರನ್ನು ಇಸ್ರೇಲಿ ವಿದೇಶಾಂಗ ಸಚಿವರೊಂದಿಗೆ ಚರ್ಚೆ ನಡೆಸಲು ಟರ್ಕಿಗೆ ಕಳಿಸಿದ್ದರು. ಆದರೆ, ಯಾವಾಗ ಖುರ್ಷಿದ್ ಕಸೂರಿ ಪಾಕಿಸ್ಥಾನ ಹಿಂದಿರುಗಿದರೋ ಆಗ ಸಾರ್ವಜನಿಕರಲ್ಲಿ ಸಿಟ್ಟು ಮಡುಗಟ್ಟಿತ್ತು. ಇದನ್ನು ಜನರು ಪ್ಯಾಲಸ್ತೀನಿಯರೊಂದಿಗೆ ಮಾಡಿದ ವಿಶ್ವಾಸಘಾತ ಎಂದೇ ನೋಡಿದ್ದರು. ಆಗ ಪಾಕಿಸ್ಥಾನ, ಇಸ್ರೇಲ್‌ನೊಂದಿಗೆ ಸಂಪರ್ಕ ಸಾಧಿಸಲು ಇದು ಸರಿಯಾದ ಸಮಯವಲ್ಲ ಎಂದು ಅರ್ಥವಾಗಿತ್ತು.
ಮತ್ತೆ 2005ರ ಡಿಸೆಂಬರ್ ತಿಂಗಳಲ್ಲಿ ಮುಷರ್ರಫ್ ನ್ಯೂಯಾರ್ಕ್ ಪ್ರವಾಸದಲ್ಲಿದ್ದಾಗ, ಅವರಿಗೆ ಅಮೆರಿಕದ ಯಹೂದಿ ಕಾಂಗ್ರೆಸ್‌ನಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ಮುಷರ್ರಫ್ ಆಗಮಿಸುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರೆಲ್ಲ ಎದ್ದು ನಿಂತು ಗೌರವ ಸೂಚಿಸಿದ್ದರು. ಇದರಿಂದ ಚಕಿತರಾದ ಮುಷರ್ರಫ್ “”ಯಹೂದಿ ಸಮುದಾಯವೊಂದು ಪಾಕಿಸ್ಥಾನದ ನಾಯಕನಿಗೆ ಎದ್ದು ನಿಂತು ಗೌರವ ಸೂಚಿಸುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ” ಎಂದಿದ್ದರು. ಅಲ್ಲದೇ, ಪಾಕಿಸ್ಥಾನ ಹಾಗೂ ಇಸ್ರೇಲ್ ನಡುವೆ ಯಾವುದೇ ಶತ್ರುತ್ವವೂ ಇಲ್ಲ ಎಂದು ಅವರು ಹೇಳಿದ್ದರು. ಆದರೆ, ಇಸ್ರೇಲ್‌ನೊಂದಿಗೆ ಸ್ನೇಹ ಬೆಳೆಸಿ ತಮ್ಮ ಅಧಿಕಾರವನ್ನು ಅಪಾಯಕ್ಕೆ ತಳ್ಳಿಕೊಳ್ಳಲು ಅವರಿಗೆ ಸಾಧ್ಯವಿರಲಿಲ್ಲ.
ಇತಿಹಾಸವನ್ನು ನೋಡಿದರೆ ಒಂದು ವಿಷಯ ಅರ್ಥವಾಗುತ್ತದೆ. ಇಸ್ರೇಲ್ ಅಥವಾ ಕಾಶ್ಮೀರದಂಥ ಸೂಕ್ಷ್ಮ ವಿದೇಶಿ ನೀತಿಗಳ ವಿಚಾರದಲ್ಲಿ ಪಾಕಿಸ್ಥಾನದ ಸೇನಾ ವ್ಯವಸ್ಥೆಯೇ ತೀರ್ಮಾನ ಕೈಗೊಳ್ಳುತ್ತಾ ಬಂದಿದೆಯೇ ಹೊರತು, ಪ್ರಧಾನಮಂತ್ರಿಗಳಲ್ಲ. ಅನೇಕ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಜತೆ ಸಂಬಂಧ ಸುಧಾರಿಸಿಕೊಳ್ಳುತ್ತಿರುವುದರಲ್ಲಿ ಪಾಕಿಸ್ಥಾನಿಯರಿಗೆ ತೊಂದರೆ ಇಲ್ಲ, ಆದರೆ ಎಲ್ಲಿಯವರೆಗೂ ಪ್ಯಾಲಸ್ತೀನ್ ವಿಚಾರ ಬಗೆಹರಿಯುವುದಿಲ್ಲವೋ ಅಲ್ಲಿಯವರೆಗೂ ಪಾಕಿಸ್ಥಾನ ಈ ವಿಚಾರದಲ್ಲಿ ರಾಜಿಯಾಗಬಾರದು ಎಂದು ಅವರು ಭಾವಿಸುತ್ತಾರೆ.
ಬಹರೇನ್, ಯುಎಇ ಮತ್ತು ಸೂಡಾನ್‌ನಂಥ ರಾಷ್ಟ್ರಗಳು ಇಸ್ರೇಲ್‌ಗೆ ಮಾನ್ಯತೆ ನೀಡಿದ ಮೇಲೆ ಇಸ್ಲಾಮಿಕ್ ಪ್ರಪಂಚದಲ್ಲಿ ಯಾವ ಗದ್ದಲವೂ ಆಗಿಲ್ಲ. ಇದನ್ನು ನೋಡಿ ಸೌದಿಯೂ ಇಸ್ರೇಲ್‌ಗೆ ಮಾನ್ಯತೆ ನೀಡಬಹುದೇನೋ. ಆದರೆ ಪಾಕಿಸ್ಥಾನವಂತೂ ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಸದ್ಯಕ್ಕೆ ಸಿದ್ಧವಿಲ್ಲ.
(ಕೃಪೆ ಅಮರ್ ಉಜಾಲಾ)
ಮರಿಆನಾ ಬಾಬರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Digital Arrest: ಡಿಜಿಟಲ್ ಅರೆಸ್ಟ್ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು
Emotions: ಭಾವನೆಗಳ ಬಸ್ ನಿಲ್ದಾಣ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.