ಓ ಅನ್ನದಾತ ಮಾನಸಿಕ ಆರೋಗ್ಯದತ್ತ ಇರಲಿ ನಿನ್ನ ಚಿತ್ತ; ರೈತರಿಗೆ ಮನೋವೈದ್ಯರ ‘ಹೆಲ್ತ್ ಟಿಪ್ಸ್’


Team Udayavani, Jun 20, 2020, 5:52 PM IST

ಓ ಅನ್ನದಾತ ಮಾನಸಿಕ ಆರೋಗ್ಯದತ್ತ ಇರಲಿ ನಿನ್ನ ಚಿತ್ತ ; ರೈತರಿಗೆ ಮನೋ ವೈದ್ಯರ ‘ಹೆಲ್ತ್ ಟಿಪ್ಸ್’

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೃಷಿಯೇ ಭಾರತದ ಆರ್ಥಿಕ ಬೆನ್ನೆಲುಬು. ರೈತರು, ಕೃಷಿ ಕಾರ್ಮಿಕರೇ ಭಾರತ ಆಲಯದ ಕಂಬಗಳು. ಇವು ಮಾನಸಿಕವಾಗಿ ಸದೃಢವಾದಾಗ ಭಾರತ ಜಾಗತಿಕ ಗುರುವಾಗಬಹುದು.

‘ ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿಯಿನ್ನೆಂತೋ?

ಸತ್ಯಕ್ಕೆ ಸಾಕ್ಷಿಯಿಲ್ಲದೆ ಮಿಥ್ಯಕ್ಕೆ ಸಾಕ್ಷಿಯೇ?’
– ಸಿದ್ದರಾಮ

ಭಾರತ ದೇಶದ ಬೆನ್ನೆಲುಬು ಎಂದರೆ ಅದು ನಮ್ಮ ರೈತ ಸಮುದಾಯ. ಇವರ ಜೊತೆ ಜೊತೆಗೆ ನಿಲ್ಲುವ ಲಕ್ಷಾಂತರ ಕೃಷಿ ಕಾರ್ಮಿಕರು ಹೀಗೆ ಕೋಟಿ ಕೋಟಿ ಭಾರತೀಯರಿಗೆ ಈತನೇ ಖಂಡಿತವಾಗಿಯೂ ಅನ್ನದಾತ. ಈತ ಬೆಳೆಯುವ ಧವಸ ಧಾನ್ಯಗಳೇ ನಮಗೆಲ್ಲಾ ತ್ರಾಣಮಂತ್ರ.

ನಮ್ಮೆಲ್ಲರ ಜೀವ ಉಳಿಸುವ ಕರ್ಮಯೋಗಿ, ನೇಗಿಲಯೋಗಿ, ನಿಜಾರ್ಥದ ಕಾಯಕಯೋಗಿ. ಕೃಷಿಯ ಎಲ್ಲಾ ಕೆಲಸಗಳನ್ನು ಪ್ರೀತಿಯಿಂದಲೇ ಮಾಡಿಕೊಂಡು ಬರುತ್ತಿರುವ ಇವರು ಒಂದೇ ಒಂದು ವಿಚಾರದಲ್ಲಿ ಹಿಂದಿದ್ದಾರೆ, ಅದೆಂದರೆ ತಮ್ಮ ಆರೋಗ್ಯದ ಕಡೆ ಅದರಲ್ಲೂ ಮಾನಸಿಕ ಆರೋಗ್ಯದ ಕಡೆ ಗಮನಕೊಡದೆ ನಿರ್ಲಕ್ಷ್ಯವಹಿಸುವುದು.

ಇವರು ತಮ್ಮ ಕೃಷಿ ಕೆಲಸಕ್ಕೆ ಬೇಕಾಗುವ ನೇಗಿಲು, ಟ್ರ್ಯಾಕ್ಟರ್, ಪಂಪ್ ಸೆಟ್ ಜೊತೆಗೆ ಪೂಜ್ಯಭಾವನೆಯ ಎತ್ತುಗಳು, ನೀರಾವರಿ ಸಲಕರಣೆಗಳು, ಹೀಗೆ ಎಲ್ಲದರವುಗಳ ಕಾಳಜಿಯನ್ನು ವಹಿಸುತ್ತಾರೆ. ಇವುಗಳ ಕಾರ್ಯಕ್ಷಮತೆ ಕುಂದದಂತೆ ಜಾಗರೂಕತೆ ವಹಿಸುತ್ತಾರೆ. ಆದರೆ ತಮ್ಮ ಆರೋಗ್ಯದ ಕಡೆಗೆ ಅದರಲ್ಲೂ ಮಾನಸಿಕ ಆರೋಗ್ಯದ ಕಡೆ ಗಮನನೀಡುವುದಕ್ಕೇ ಹೋಗುವುದಿಲ್ಲ.

ಸೂರ್ಯ ಮೂಡುವ ವೇಳೆಗೆ ಕೆಲಸ ಪ್ರಾರಂಭಿಸುವ ನಮ್ಮ ರೈತರು ಕೆಲಸ ಪ್ರಾರಂಭಿಸುತ್ತಾರೆ, ಏನಿಲ್ಲವೆಂದರೂ ದಿನಕ್ಕೆ ಹನ್ನೊಂದರಿಂದ ಹನ್ನೆರಡು ಗಂಟೆಗಳ ಕಾಲ ದುಡಿಯುವ ರೈತಾಪಿ ವರ್ಗದವರಿಗೆ ವಿಶ್ರಾಂತಿ ಎಂಬುದೇ ಅಪರೂಪ.

ಈ ರೀತಿಯಾಗಿ ಅವಿರತ ಶ್ರಮದಲ್ಲೇ ದೇವರನ್ನು ಕಾಣುವ ಈ ಶ್ರಮಜೀವಿ ವರ್ಗದ ರೈತರ ಮಾನಸಿಕ ಸ್ಥಿತಿಯಾದರೂ ಎಂಥದ್ದು ಎಂಬುದನ್ನು ನಾವು ಯೋಚಿಸುವುದು ಅಗತ್ಯವಾಗಿದೆ. ರೈತರು ಹೆಚ್ಚುಕಡಿಮೆ ತಮ್ಮ ಬಹುಪಾಲು ಸಮಯವನ್ನು ಹೊಲ-ಗದ್ದೆಗಳಲ್ಲಿ ಕಳೆಯುವುದರಿಂದ ಅವರಿಗೆ ತಮ್ಮ ಕುಟುಂಬ, ಬಂಧು ಬಳಗ, ಸ್ನೇಹಿತರ ಜೊತೆಯಲ್ಲಿ ಕಾಲ ಕಳೆಯುವ ಸಾಧ್ಯತೆಗಳು ತುಂಬಾ ಕಡಿಮೆ ಇರುತ್ತದೆ. ಇದರಿಂದಾಗಿ ಸಾಮಾಜಿಕ ಒಡನಾಟ ಕಡಿಮೆ ಆಗಿ ಸ್ವಲ್ಪಮಟ್ಟಿಗೆ ನಮ್ಮ ರೈತ ಏಕಾಂಗಿ ಆಗಿಬಿಡುತ್ತಾನೆ. ಒಂದರ್ಥದಲ್ಲಿ ಅವರಲ್ಲಿ ಸಮಾಜಿಕ ಸಂಪರ್ಕ ವಿರಳವಾಗಿರುತ್ತದೆ.

ನಮ್ಮೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ ದೇಶಾದ್ಯಂತ ಕಾರ್ಮಿಕರು ನಗರ ಪ್ರದೇಶಗಳಿಗೆ ವಲಸೆ ಅಥವಾ ಗುಳೇ ಹೋಗುವುದು ಸಾಮಾನ್ಯವಾಗಿದೆ. ನಮ್ಮ ರಾಜ್ಯದ ಉತ್ತರ ಕರ್ನಾಟಕ ಭಾಗಗಳಿಂದಲೂ ಲಕ್ಷಾಂತರ ರೈತ ವರ್ಗದವರು ಕೆಲಸ ಅರಸಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಿರುತ್ತಾರೆ. ಮಾತ್ರವಲ್ಲದೇ ಹೊರ ರಾಜ್ಯಗಳಾಗಿರುವ ಇವರಲ್ಲಿ ಕೆಲವರು ನಮ್ಮ ಪಕ್ಕದ ರಾಜ್ಯಗಳಿಗೂ ಗುಳೆ ಹೋಗಿರುವುದು ಅಂಕಿ-ಅಂಶಗಳಿಂದ ಸಾಬೀತುಗೊಂಡಿದೆ.

ಸಕಾದಲ್ಲಿ ಮಳೆಯಾಗದೇ ಇರುವುದು, ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೇಡಿಕೆ ಹಾಗೂ ಬೆಲೆಗಳು ಸಿಗದಿರುವುದು, ಕೃಷಿ ಭೂಮಿ ಬರಡಾಗಿರುವುದು ಇತ್ಯಾದಿ ಕಾರಣಗಳನ್ನು ನಾವು ರೈತರ ವಲಸೆಗೆ ನೀಡಬಹುದಾಗಿರುತ್ತದೆ.

ವರ್ಷದಿಂದ ವರ್ಷಕ್ಕೆ ನಮ್ಮಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತಿರುವುದು ರೈತರ ಮೇಲೆ ಮಾನಸಿಕ ಒತ್ತಡದ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ. ಇನ್ನು ಇವರ ಕೆಲಸದಲ್ಲಿ ರಜೆ ಮತ್ತು ನಿವೃತ್ತಿ ಎಂಬೆರಡು ಪದಗಳಿಗೆ ಅವಕಾಶವಿಲ್ಲದಿರುವುದೂ ರೈತಾಪಿ ವರ್ಗ ಹಲವಾರು ರೀತಿಯ ಮಾನಸಿಕ ಒತ್ತಡಗಳಿಂದ ಬಳಲಲು ಕಾರಣವಾಗುತ್ತಿದೆ.

ವಿಶ್ರಾಂತಿ ರಹಿತ ಕೆಲಸದ ಬದುಕು ರೈತರನ್ನು ದೈಹಿಕವಾಗಿ ಬಳಲಿಸಿದರೆ, ಬ್ಯಾಂಕು ಸಾಲಗಳು ಹಾಗೂ ಇತರೇ ಮೂಲಗಳಿಂದ ಪಡೆದುಕೊಂಡ ಹಣಕಾಸಿನ ಬಾಧ್ಯತೆಗಳು ಮತ್ತು ತಾವು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದಿರುವುದು, ಅಕಾಲಿಕ ಮಳೆ ಮತ್ತು ಇನ್ನಿತರ ಪ್ರಾಕೃತಿಕ ಸಮಸ್ಯೆಗಳಿಂದ ಬೆಳೆ ಹಾಳಾಗುವುದು ಸೇರಿದಂತೆ ಇನ್ನಿತರ ಸಮಸ್ಯೆಗಳು ರೈತರನ್ನು ಮಾನಸಿಕವಾಗಿ ಜರ್ಝರಿತರನ್ನಾಗಿಸುತ್ತವೆ. ಇದು ಅಂತಿಮವಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತೆ ಯೋಚಿಸುವ ಮಟ್ಟಕ್ಕೂ ಹೋಗುವುದು ದುರದೃಷ್ಟಕರವೇ ಸರಿ.

ಇನ್ನು, ನಮ್ಮ ರೈತರಿಗೆ ಸಾಲ ಮಾಡುವಾಗ ಇರುವಷ್ಟು ಮನೋ ಸ್ಥೈರ್ಯ ಸಾಲ ತೀರಿಸುವ ಸಮಯದಲ್ಲಾಗುವಾಗ ಯಾಕೆ ಕುಗ್ಗಿಹೋಗುತ್ತದೆ ಎಂಬುದನ್ನು ಮನೋವೈಜ್ಞಾನಿಕ ನೆಲೆಯಲ್ಲಿ ನಾವು ವಿಶ್ಲೇಷಿಸುವುದಾದರೆ ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಬಹುದಾಗಿರುತ್ತದೆ:

1. ಅಸಮತೋಲನದಿಂದ ಕೂಡಿದ ಕಾರ್ಯ ಶೈಲಿ

2. ಕೃಷಿಯಲ್ಲಿ ಬಳಸುವ ರಾಸಾಯನಿಕ ಔಷಧಿಗಳು, ಪೌಷ್ಠಿಕಾಂಶಗಳ ಕುರಿತಾಗಿ ನಿಖರ ಜ್ಞಾನದ ಕೊರತೆ.

3. ಅರಣ್ಯ ಭಾಗದ ಸಮೀಪದಲ್ಲಿರುವ ಹೊಲಗದ್ದೆಗಳಲ್ಲಿ ಕಾಡು ಪ್ರಾಣಿಗಳ ಕಾಟ ಮತ್ತು ಅವುಗಳನ್ನು ನಿಗ್ರಹಿಸುವ ವಿಧಾನದಲ್ಲಿನ ವೈಫಲ್ಯತೆ.

4. ಕೃಷಿ ಹಾಗೂ ರೈತಾಪಿ ವರ್ಗದ ವಿಚಾರದಲ್ಲಿ ಗೊಂದಲ ಮೂಡಿಸುವ ಸರಕಾರಿ ಕಾನೂನುಗಳು.

5. ಕೃಷಿ ಪದ್ಧತಿಯಲ್ಲಿ ದಿನನಿತ್ಯವೆಂಬಂತೆ ಆಗುತ್ತಿರುವ ವೈಜ್ಞಾನಿಕ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ವೈಫಲ್ಯ.

6. ಕೃಷಿ ಮಾರುಕಟ್ಟೆಯಲ್ಲಿನ ಏರುಪೇರು ಹಾಗೂ ಇವುಗಳ ಕುರಿತಾಗಿರುವ ಸೀಮಿತ ಜ್ಞಾನ.

7. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಸಕಾಲಿಕ ಮಾಹಿತಿಯ ಕೊರತೆ.

8. ಇವೆಲ್ಲದರ ಪರಿಣಾಮವಾಗಿ ಕೃಷಿಯಲ್ಲಿ ಹೂಡಿದ ಬಂಡವಾಳ ನಷ್ಟವಾಗಿ ಹಣಕಾಸಿನ ಮುಗ್ಗಟ್ಟು ಉಂಟಾಗಿ ಪರಿಹಾರ ಮಾರ್ಗ ಕಾಣಿಸದೇ ಇರುವುದು.

9. ಬಿತ್ತನೆ ಕಾಲಕ್ಕೆ ಸರಿಯಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ರೈತವರ್ಗದ ಕೈ ಸೇರದೇ ಇರುವುದು.

ಈ ಎಲ್ಲಾ ಸಮಸ್ಯೆಗಳು ಒಂದೊಂದಾಗಿ ಅಥವಾ ಬಹಳಷ್ಟು ಸಂದರ್ಭಗಳಲ್ಲಿ ಎಲ್ಲವೂ ಒಮ್ಮೆಲೇ ಬಂದೆರೆಗಿದಾಗ ರೈತರು ಧೃತಿಗೆಡುವುದು ಸಹಜ. ಮತ್ತು ಈ ಅಸಹಾಯಕತೆ/ಅಸಹನೆಗಳೇ ರೈತರನ್ನು ಆತ್ಮಹತ್ಯೆಗೆ ಪ್ರೇರೇಪಿಸುವಂತೆ ಮಾಡುತ್ತದೆ.

ಇಷ್ಟು ಮಾತ್ರವಲ್ಲದೇ ಈ ಸಮಸ್ಯೆಗಳು ರೈತಾಪಿ ವರ್ಗದ ಕುಟುಂಬದಲ್ಲಿ ಕಲಹ, ದುಃಶ್ಚಟಗಳು ಕಾಣಿಸಿಕೊಳ್ಳಲೂ ಕಾರಣವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಹಾಗಾದರೆ ನಮ್ಮ ದೇಶದಲ್ಲಿ ರೈತರು ಎದುರಿಸುತ್ತಿರುವ ಈ ರೀತಿಯ ಮಾನಸಿಕ ಸಮಸ್ಯೆಗಳಿಗೆ ಪರಿಹಾರವೆಂಬುದೇ ಇಲ್ಲವೇ? ಅವರ ತೊಂದರೆಗಳಿಗೆ ಸಮಾಧಾನ ಹೇಳುವವರು ಯಾರು? ಎಂದು ಕೇಳಿದರೆ, ಖಂಡಿತವಾಗಿಯೂ ಈ ಸಮಸ್ಯೆಗಳಿಗೆ ಸ್ವತಃ ರೈತರೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿರುತ್ತದೆ.

ಅದು ಹೇಗೆಂದರೆ ತಮ್ಮ ಜೀವನಶೈಲಿಯಲ್ಲಿ ಕೆಲವೊಂದು ಧನಾತ್ಮಕ ಬದಲಾವಣೆಗಳನ್ನು ತಂದುಕೊಳ್ಳುವುದರ ಮೂಲಕ ಈ ರೀತಿಯ ಮಾನಸಿಕ ಗೊಂದಲಗಳಿಂದ ಹೊರಬರಲು ಸಾಧ್ಯವಿರುತ್ತದೆ.

– ಸರಿಯಾದ ಸಮಯದಲ್ಲಿ ಆಹಾರ ಸೇವಿಸುವುದು.

– ದಿನಕ್ಕೆ ಕನಿಷ್ಟ 7-8 ಗಂಟೆ ನಿದ್ರಿಸುವುದು.

– ಕೌಟುಂಬಿಕ ಸಮಾರಂಭ, ಜಾತ್ರೆ, ಊರಿನ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.

– ಗ್ರಾಮೀಣ ಕ್ರೀಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು.

– ಯಶಸ್ವೀ ಕೃಷಿಕರೊಂದಿಗೆ ಒಡನಾಟವನ್ನು ಇರಿಸಿಕೊಳ್ಳುವುದು.

– ನಿಯಮಿತವಾಗಿ ಕೃಷಿ ಮೇಳಗಳಿಗೆ ಹೋಗುತ್ತಿರುವುದು.

– ಕೃಷಿ ಮಾಹಿತಿ ಸಿಗುವ ದೂರದರ್ಶನದ ಕಾರ್ಯಕ್ರಮಗಳ ವೀಕ್ಷಣೆ

– ಅಕ್ಕ ಪಕ್ಕದ ಗ್ರಾಮಸ್ಥರೊಂದಿಗೆ ಸಂಪರ್ಕವಿರಿಸಿಕೊಳ್ಳುವುದು ಹಾಗೂ ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ಳುವುದು.

– ಅಗತ್ಯ ಸಂದರ್ಭಗಳಲ್ಲಿ ವೈದ್ಯರನ್ನು ಅಥವಾ ಆಪ್ತಸಮಾಲೋಚಕರನ್ನು ಭೇಟಿ ಮಾಡುವುದು.

‘ನಾನೊಬ್ಬ ಮಾದರಿ ರೈತನಾಗಬೇಕು’ ಎಂಬ ಸಂಕಲ್ಪವನ್ನು ಇಂದೇ ಮಾಡಿಕೊಳ್ಳಿ. ಪ್ರತೀ ಸಮಸ್ಯೆಗೂ ಒಂದು ಪರಿಹಾರ ಎಂಬುದು ಇದ್ದೇ ಇರುತ್ತದೆ. ಸಾವಧಾನವಾಗಿ ಯೋಚಿಸಿ ಮುನ್ನಡೆದಾಗ ಬಂಗಾರದ ಬೆಳೆಯಂತೆ ನಿಮ್ಮ ಬದುಕೂ ಬಂಗಾರವಾಗುತ್ತದೆ.

ಯಾವುದೇ ಸಮಸ್ಯೆಗೆ ಸಾವೆಂಬುದು ಪರಿಹಾರವೇ ಅಲ್ಲ ; ಅದು ನಿಮ್ಮ ಪರಿವಾರವನ್ನು, ನಿಮ್ಮನ್ನು ನಂಬಿದವರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತದೆ.

ಹಾಗಾಗಿ ಸಾವಿನ ಯೋಚನೆಯನ್ನು ಸಾಯಿಸಿ, ಛಲದಲ್ಲಿ ಬದುಕಿ ಸಾಧಿಸುವ ವಿಚಾರವನ್ನು ಸಂಕಲ್ಪಿಸಿ ಮುನ್ನಡೆದಾಗಲೇ ‘ಅನ್ನದಾತ’ರಾದ ನಿಮ್ಮ ಬದುಕು ಬಂಗಾರವಾಗಲು ಸಾಧ್ಯ ಹಾಗೂ ನಿಮ್ಮನ್ನು ನಂಬಿದವರ ಪಾಲಿಗೆ ನೀವು ‘ಬಂಗಾರದ ಮನುಷ್ಯ’ರಾಗಲು ಸಾಧ್ಯ.

– ಡಾ| ಶ್ವೇತ ಟಿ.ಎಸ್‌., ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್‌ ಸೈಕಾಲಜಿ ವಿಭಾಗ, ಕೆ.ಎಂ.ಸಿ. ಮಣಿಪಾಲ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.