ಶಿಕ್ಷಣದ ಶ್ರೇಷ್ಠತೆಯ ಹೊಸ ಅಲೆ ಆರಂಭ

ಬದಲಾವಣೆಯ ಹಾದಿಯಲ್ಲಿ: ಭಾರತೀಯ ಶಿಕ್ಷಣ ಪರಂಪರೆಯನ್ನು ಇನ್ನಷ್ಟು ಸದೃಢಗೊಳಿಸಲಿದೆ ರಾಷ್ಟ್ರೀಯ ಶಿಕ್ಷಣ ನೀತಿ

Team Udayavani, Jul 31, 2020, 7:04 AM IST

ಶಿಕ್ಷಣದ ಶ್ರೇಷ್ಠತೆಯ ಹೊಸ ಅಲೆ ಆರಂಭ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಶಿಕ್ಷಣ ವ್ಯವಸ್ಥೆಯ ರೂಪುರೇಷೆಗಳು ರಚನಾತ್ಮಕ ಬದಲಾವಣೆ ಕಂಡುಕೊಳ್ಳುವ ಜತೆಗೆ ಶಿಕ್ಷಣದಲ್ಲಿ ಮಾತೃಭಾಷೆ, ಸಂಸ್ಕೃತಿ, ಜ್ಞಾನ, ಕೌಶಲ ಹಾಗೂ ಉದ್ಯೋಗಾವಕಾಶಕ್ಕೆ ಆದ್ಯತೆ ಹೆಚ್ಚಲಿದೆ.

ಕಾಲೇಜುಗಳು ನಿರಂತರ ಮೌಲ್ಯಮಾಪನ ಕೇಂದ್ರವಾಗಿ ಬಲಿಷ್ಠವಾದರೆ, ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದ್ರವಾಗಿ ಪರಿವರ್ತನೆಗೊಳ್ಳಲಿವೆ.

ಶಿಕ್ಷಣ ವ್ಯವಸ್ಥೆಯಡಿ ಇರುವ ವಿವಿಧ ಮಂಡಳಿಗಳು ಭಾರತೀಯ ಉನ್ನತ ಶಿಕ್ಷಣ ಆಯೋಗದ ಅಧೀನಕ್ಕೆ ಬರಲಿವೆ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಉದಯಕ್ಕೂ “ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ ಕಾರಣವಾಗಬಹುದು.

ಈಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ಕಲಾ, ವಾಣಿಜ್ಯ, ಎಂಜಿನಿಯರಿಂಗ್‌, ವೈದ್ಯಕೀಯ, ದಂತವೈದ್ಯಕೀಯ ಹೀಗೆ ಎಲ್ಲ ಪದವಿ ಕೋರ್ಸ್‌ಗಳಲ್ಲಿ ಆಯಾ ವಿಭಾಗಕ್ಕೆ ಸೀಮಿತವಾದ ವಿಷಯಗಳನ್ನು ಮಾತ್ರ ಅಧ್ಯಯನ ಮಾಡಿ ಪರೀಕ್ಷೆ ಬರೆದು, ಪ್ರಮಾಣ ಪತ್ರ ಪಡೆಯಲು ಅವಕಾಶವಿದೆ. ಆದರೆ, ಕಲಾ ವಿಭಾಗದ ವಿದ್ಯಾರ್ಥಿ ವಿಜ್ಞಾನ ವಿಷಯವನ್ನು, ವಿಜ್ಞಾನದ ವಿದ್ಯಾರ್ಥಿ ವಾಣಿಜ್ಯ ವಿಭಾಗದ ವಿಷಯವನ್ನು, ಎಂಜಿನಿಯರಿಂಗ್‌ ವಿದ್ಯಾರ್ಥಿ ಕಲಾ ವಿಭಾಗದ ವಿಷಯವನ್ನು ಅಥವಾ ವೈದ್ಯಕೀಯ, ದಂತವೈದ್ಯಕೀಯ ವಿಭಾಗದ ವಿಷಯವನ್ನು ಕಲಾ ವಿಭಾಗದ ವಿದ್ಯಾರ್ಥಿ ತರಗತಿಯಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಲು ಅವಕಾಶವಿಲ್ಲ.

ಹೊಸ ಶಿಕ್ಷಣ ನೀತಿಯಲ್ಲಿ ಇದಕ್ಕೆಲ್ಲ ಮುಕ್ತ ಅವಕಾಶ ಸಿಗಲಿದೆ. ವಿಶ್ವವಿದ್ಯಾಲಯಗಳು ಸಂಶೋಧನಾ ಕೇಂದ್ರವಾಗಿ ಪರಿ ವರ್ತನೆ ಆಗಲಿವೆ, ನಿರಂತರ ಕಲಿಕಾ ಮೌಲ್ಯಮಾಪನವು ಜಾರಿಯಾಗಲಿದ್ದು, ಪ್ರತಿ ಕಾಲೇಜುಗಳೇ ಪರೀಕ್ಷೆ ನಡೆಸಿ, ಪದವಿ ಪ್ರಮಾಣ ನೀಡುವ ವ್ಯವಸ್ಥೆಗೆ ನಮ್ಮ ಶಿಕ್ಷಣ ಪದ್ಧತಿ ಬದಲಾಗಲಿದೆ. ಇದರಿಂದ ಜಾಗತಿಕಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿ ನಿಲ್ಲಿಲಿದೆ ಮತ್ತು ಜ್ಞಾನಾಧಾರಿತವಾಗಿ 2035ರ ವೇಳೆಗೆ ಭಾರತ ಸೂಪರ ಪವರ ಆಗ ಹೊರಹೊಮ್ಮಲಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ-2019) ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು 2030ರ ದೂರದೃಷ್ಟಿಯಿಟ್ಟುಕೊಂಡು ರಚನೆಯಾಗಿದೆ ಮತ್ತು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಿರುವ ಮೂಲಭೂತ ಪರಿವರ್ತನೆಗೆ ಇದು ಸಾಕ್ಷಿಯಾಗಲಿದೆ. ಉತ್ತಮ ಗುಣಮಟ್ಟದ ಸಾರ್ವತ್ರಿಕ, ಸಮಗ್ರ ಶಿಕ್ಷಣದ ಮೂಲಕ ಸಮಾನ ಜ್ಞಾನಾಧಾರಿತ ಸಮಾಜ ಸ್ಥಾಪಿಸಲು ಸಹಾಯ ಮಾಡಲಿದೆ.

ಕಡ್ಡಾಯ ಶಾಲಾ ಶಿಕ್ಷಣವನ್ನು 6 ರಿಂದ 14 ವರ್ಷದ ಬದಲಾಗಿ 3ರಿಂದ 18 ವರ್ಷಕ್ಕೆ ಏರಿಸಿರುವುದು ದೇಶದ ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಹೆಚ್ಚಿಸಲು ಪೂರಕವಾಗಲಿದೆ. ಹೊಸ ಶಿಕ್ಷಣ ನೀತಿಯು ಐದನೇ ತರಗತಿವರೆಗೂ ಒಂದು ಹಂತ, 6ರಿಂದ 8ನೇ ತರಗತಿ ಎರಡನೇ ಹಂತ, 9ರಿಂದ 11ನೇ ತರಗತಿ ಮೂರನೇ ಹಂತ ಹಾಗೂ 12ರಿಂದ 15ನೇ ತರಗತಿ ನಾಲ್ಕನೇ ಹಂತವಾಗಿ ವಿಂಗಡಿಸಿದೆ. ಅದೆಂದರೆ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು (5+3+3+4ರಂತೆ ವಿಂಗಡಿಸಿದೆ.)ಇದರಿಂದಾಗಿ ಪ್ರತಿ ಮಗು 15 ವರ್ಷಗಳ ಕಡ್ಡಾಯ ಶಿಕ್ಷಣವನ್ನು ಪಡೆಯಬಹುದು. ಇದು ಸಮಗ್ರ ಮತ್ತು ಸಮನಾದ ಬೆಳವಣಿ ನೀಡುತ್ತದೆ.

8ನೇ ತರಗತಿ ಶಿಕ್ಷಣ ಮುಗಿದು 9ನೇ ತರಗತಿಗೆ ಸೇರುತ್ತಿದ್ದಂತೆ ಕೌಶಲಾಧಾರಿತ ಶಿಕ್ಷಣ ಆರಂಭವಾಗುತ್ತದೆ ಹಾಗೂ ಇಲ್ಲಿಂದಲೇ ವೃತ್ತಿಪರತೆಯ ಜ್ಞಾನ ಲಭ್ಯವಾಗುತ್ತದೆ. ಈಗಿನ ಶಿಕ್ಷಣ ಪದ್ಧತಿಯಲ್ಲಿ ಕೌಶಲ ಹಾಗೂ ವೃತ್ತಿಪರತೆ ಪದವಿ ಶಿಕ್ಷಣದಲ್ಲಿ ಅಳವಡಿಸಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ 9ನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೌಶಲ ಹಾಗೂ ವೃತ್ತಿಪರತೆಯ ಜ್ಞಾನ ನೀಡಲಾಗುತ್ತದೆ.

11ನೇ ತರಗತಿ ಪೂರೈಸಿದ ನಂತರ 12ರಿಂದ 15ರವರೆಗಿನ ಶಿಕ್ಷಣ ವಿನ್ಯಾಸವೇ ಬದಲಾಗಲಿದೆ ಮತ್ತು ಅತ್ಯಂತ ವ್ಯವಸ್ಥಿತ ಹಾಗೂ ಅವಶ್ಯಕವಾದ ವಿಧಾನವನ್ನು ಅಳವಡಿಸಲಾಗಿದೆ. 12ರಿಂದ 15ನೇ ತರಗತಿವರೆಗೂ ಒಂದು ಶೈಕ್ಷಣಿಕ ಘಟ್ಟವಾಗಿ ಪರಿಗಣಿಸಬಹುದು ಅಥವಾ ನಾಲ್ಕು ವಿಭಾಗವಾಗಿಯೂ ಇದನ್ನು ವಿಂಗಡಿಸಿಕೊಳ್ಳಬಹುದು. ಒಂದು ವರ್ಷದ ಪ್ರಮಾಣ ಪತ್ರ ಕೋರ್ಸ್‌, ಎರಡು ವರ್ಷದ ಡಿಪ್ಲೊಮಾ, ಮೂರು ವರ್ಷ ಪದವಿ ಕೋರ್ಸ್‌ ಅಥವಾ ನಾಲ್ಕು ವರ್ಷದ ಮಲ್ಟಿ ಡಿಸಿಪ್ಲಿನರಿ ಬ್ಯಾಚುಲರ್‌ ಪದವಿ ಪಡೆಯಲು ಅವಕಾಶವಿದೆ.

ವಿದ್ಯಾರ್ಥಿ ತನ್ನ ಶೈಕ್ಷಣಿಕ ಕ್ಷಮತೆಯನ್ನು ಹೇಗೆ ಬೇಕಾದರೂ ರೂಪಿಸಿಕೊಳ್ಳಲು ಮುಕ್ತ ಅವಕಾಶವನ್ನು ಹೊಸ ಶಿಕ್ಷಣ ನೀತಿಯಲ್ಲಿ ಕಲ್ಪಿಸಲಾಗಿದೆ. 11ನೇ ತರಗತಿಯ ನಂತರ 12ನೇ ತರಗತಿಯನ್ನು ಮಾತ್ರ ಕಲಿತರು ಒಂದು ವರ್ಷಕ್ಕೆ ಅಗತ್ಯವಾದ ಕೌಶಲ್ಯಾಧಾರಿತ ಪ್ರಮಾಣ ಪತ್ರವನ್ನು ನೀಡಲಾ ಗುತ್ತದೆ. ಅದರ ಆಧಾರದಲ್ಲಿ ಉದ್ಯೋಗ ಪಡೆಯಲು ಅವಕಾಶವಿದೆ. ಎರಡು ವರ್ಷ (12 ಮತ್ತು 13ನೇ ತರಗತಿ) ಪೂರೈಸಿದರೆ ಡಿಪ್ಲೊಮಾ ಪ್ರಮಾಣ ಪತ್ರ ಸಿಗಲಿದೆ, ಇದರ ಆಧಾರದಲ್ಲಿ ಉದ್ಯೋಗ ಸೇರಿಕೊಳ್ಳಲು ಅವಕಾಶವಿದೆ. 12ರಿಂದ 14ನೇ ತರಗತಿವರೆಗೆ ಓದಿ ಸಾಮಾನ್ಯ ಪದವಿ ಪಡೆದು ಉದ್ಯೋಗಕ್ಕೆ ಸೇರಬಹುದು ಅಥವಾ 15ನೇ ತರಗತಿ ತನಕವೂ ಓದಿ ನಾಲ್ಕು ವರ್ಷದ ಕೋರ್ಸ್‌ ಪೂರ್ಣಗೊಳಿಸಬಹುದು. ಇದರ ಜತೆಗೆ ಒಂದು ವರ್ಷದ ಪ್ರಮಾಣ ಪತ್ರ, 2 ವರ್ಷದ ಡಿಪ್ಲೊಮಾ ಕೋರ್ಸ್‌ ಅಥವಾ 3 ವರ್ಷದ ಪದವಿ ಪಡೆದು ಉದ್ಯೋಗ ಸೇರಿಕೊಂಡು ವಿದ್ಯಾರ್ಥಿ ಮತ್ತೇ ಪುನಃ ವ್ಯಾಸಂಗ ಮುಂದುವರಿಸಲು ಅವಕಾಶ ಹೊಸ ನೀತಿಯಲ್ಲಿ ನೀಡಲಾಗಿದೆ.

ಹೀಗಾಗಿ ಶಿಕ್ಷಣದ ಸಮಗ್ರತೆಯ ಪರಿಕಲ್ಪನೆಯ ಎಲ್ಲ ಅಂಶಗಳನ್ನು ಪರಿಗಣಿಸಿ ಅತ್ಯಂತ ಸೂಕ್ತ ವಿಧಾನ ಅಳವಡಿಸಿಕೊಂಡು ನೀತಿಯನ್ನು ರೂಪಿಸಲಾಗಿದೆ. ಅಕಾಡೆಮಿಕ್‌ ಬ್ಯಾಂಕ್‌ ಆಫ್ ಕ್ರೆಡಿಟ್‌ (ಎಬಿಸಿ) ಸ್ಥಾಪಿಸಲಾಗುತ್ತದೆ. ವಿದ್ಯಾರ್ಥಿಗಳು ಪಡೆದ ಪದವಿಯನ್ನು ಡಿಜಿಟಲ್‌ ರೂಪದಲ್ಲಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಆಯಾ ತರಗತಿ ಅಥವಾ ವರ್ಷದ ಪದವಿಯ ಪ್ರಮಾಣ ಪತ್ರವನ್ನು ಡಿಜಿಟಲ್‌ ಸ್ಟೋರೆಜ್‌ನಿಂದ ಬೇಕೆಂದಾಗ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಉನ್ನತ ಶಿಕ್ಷಣ ಹಂತದಲ್ಲಿ ಅಂತಿಮ ಪರೀಕ್ಷೆಯ ಪರಿಕಲ್ಪನೆ ಕ್ಷೀಣಿಸುತ್ತದೆ. ನಿರಂತರ ಮೌಲ್ಯಮಾಪನದ ವ್ಯವಸ್ಥೆ ಜಾರಿಗೆ ಬರಲಿದೆ. ಕಾಲೇಜುಗಳಲ್ಲಿ ಆಗಿಂದಾಗೆ ತರಗತಿಯ ಪಠ್ಯಕ್ರಮದ ಆಧಾರದಲ್ಲಿ ಪರೀಕ್ಷೆ ನಡೆಸುತ್ತಾರೆ, ಮೌಲ್ಯಮಾಪನ ಮಾಡುತ್ತಾರೆ, ಇದೇ ವಿಧಾನ ಮುಂದುವರಿಯುತ್ತದೆ. ಹೀಗೆ ನಿರಂತರ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಇದರಲ್ಲಿ ಶಿಕ್ಷಕರ ತರಬೇತಿ ಮಂಡಳಿಯೂ ರಚನೆಯಾಗಲಿದೆ. ಕಾಲಕಾಲಕ್ಕೆ ಉನ್ನತೀಕರಿಸಿ ಬೋಧನೆಗಾಗಿ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ.

ಸದ್ಯ ಅಮೆರಿಕದಲ್ಲಿ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಶೇ.80ಕ್ಕಿಂತಲೂ ಹೆಚ್ಚಿದೆ. ಭಾರತದಲ್ಲಿ ಶೇ.26.3ರಷ್ಟಿದೆ. ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ ಶೇ.42ರಷ್ಟಿದೆ. ಒಟ್ಟಾರೆಯಾಗಿ ಭಾರತದ ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣವನ್ನು 2035ರ ವೇಳೆಗೆ ದ್ವಿಗುಣಗೊಳಿಸುವ ಎಲ್ಲ ಅಂಶಗಳನ್ನು ಈ ನೀತಿ ಹೊಂದಿದೆ.
ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಲು ಹೊಸ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಇದು ದೇಶದ ಸಂಶೋಧಾನ ಶಕ್ತಿಯನ್ನು ಬಲಪಡಿಸುವುದರ ಜತೆಗೆ ಭಾರತವನ್ನು ಜ್ಞಾನ ಸಂಪತ್ತಿನಲ್ಲಿ ಪ್ರಬಲವಾಗಿಸಲಿದೆ.

ಸಂಶೋಧನಾ ಅಡಿಪಾಯವನ್ನು ಗಟ್ಟಿಗೊಳಿಸಲು ಯೋಜಿಸಲಾದ ವಿಧಾನಗಳು ಎಲ್ಲ ಹಂತಗಳಲ್ಲಿ ಅಂತರ ಶಿಸ್ತು ಮತ್ತು ಟ್ರಾನ್ಸ್‌-ಡಿಸಿಪ್ಲಿನರಿ ಸಂಶೋಧನೆ ಗಳನ್ನು ಉತ್ತೇಜಿಸುತ್ತದೆ. ಸಾಮಾಜಿಕ-ಸಾಂಸ್ಕೃತಿಕ ಮತ್ತು ಆರ್ಥಿಕ ಗುರುತುಗಳ ಮೂಲಕ ಕಡಿಮೆ ಪ್ರತಿನಿಧಿಸಲ್ಪಟ್ಟ ಗುಂಪಿನ ಪ್ರಸ್ತಾ ವಿತ ವಿಶೇಷ ಕಾಳಜಿಯಿಂದ ಸಮಗ್ರ ಶಿಕ್ಷಣದ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ. ಉನ್ನತ ಶಿಕ್ಷಣದ ಪುನರ್‌ ರಚನೆ ಮತ್ತು ಬಲವರ್ಧನೆಯು ವೃತ್ತಿಪರ ಹಾಗೂ ಉತ್ತಮ ಗುಣಮಟ್ಟದ ತರಬೇತಿಗೆ ಕಾರಣವಾಗುತ್ತದೆ. ಉನ್ನತ ಶಿಕ್ಷಣದಲ್ಲಿ ಕಲೆ, ಮಾನವಿಕತೆ, ವಿಜ್ಞಾನ, ಕ್ರೀಡೆ, ಮತ್ತು ಇತರ ವೃತ್ತಿಪರ ವಿಷಯಗಳ ಸಂಯೋಜನೆಯೊಂದಿಗೆ ಅಧ್ಯಯನ ಮಾಡಲು ವಿಷಯಗಳ ನಮ್ಯತೆ ಮತ್ತು ಆಯ್ಕೆಯನ್ನು ಈ ನೀತಿ ಹೆಚ್ಚಿಸಿದೆ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಶೈಕ್ಷಣಿಕ ದತ್ತಾಂಶ ಮತ್ತು ವೃತ್ತಿಪರ ಶಿಕ್ಷಣದ ರಾಷ್ಟ್ರೀಯ ಭಂಡಾರದ ಮೂಲಕ ಶಿಕ್ಷಣದ ರಾಷ್ಟ್ರೀಯ ಮಿಷನ್‌ ಸ್ಥಾಪಿಸಲು ನೀತಿಯಲ್ಲಿ ಅವಕಾಶ ನೀಡಲಾಗಿದೆ. ಇದು ವೃತ್ತಿಪರ ಶಿಕ್ಷಣವನ್ನು ಮತ್ತು ವಯಸ್ಕರ ಶಿಕ್ಷಣವನ್ನು ಶಿಕ್ಷಣ ವ್ಯವಸ್ಥೆಯೊಂದಿಗೆ ಸಂಯೋಜಿಸುತ್ತದೆ. ನವೀನ ಶಿಕ್ಷಣ, ಸಮಸ್ಯೆ ಪರಿಹರಿಸುವ ವಿಧಾನ ಮತ್ತು ಇಂಟರರ್ನಶಿಪ್‌, ಸಂಶೋಧನಾ ಅವಕಾಶಗಳೊಂದಿಗೆ ವಿದ್ಯಾರ್ಥಿಗಳು ಉದ್ಯೋಗಕ್ಕೆ ಸಿದ್ಧರಾಗುತ್ತಾರೆ ಹಾಗೂ ಮೌಲ್ಯಾಧಾರಿತ ಜೀವನವನ್ನು ನಡೆಸಲು ಅಡಿಪಾಯ ಹಾಕಿಕೊಡಲಿದೆ. ಶಿಕ್ಷಣದ ವಾಣಿಜ್ಯೀಕರಣ ಪರಿಕಲ್ಪನೆಯನ್ನು ಬದಲಾಯಿಸಿ, ಶಿಕ್ಷಣವನ್ನು ದತ್ತಿ ಚಟುವಟಿಕೆಯನ್ನಾಗಿ ಮಾಡಲು ಹೊಸ ನೀತಿಯಲ್ಲಿ ಉದ್ದೇಶಿಸಲಾಗಿದೆ.

ಗುಣಮಟ್ಟದ ಶಿಕ್ಷಣ ದುಬಾರಿ ಎಂಬ ಸಮಾಜದ ಗ್ರಹಿಕೆಗಳನ್ನು ತೊಡೆದುಹಾಕಲಿದೆ. ಶಿಕ್ಷಣ ಸಂಸ್ಥೆ ಮತ್ತು ವೈಯಕ್ತಿಕ ಮಟ್ಟದಲ್ಲಿ ಶಿಕ್ಷಣ ಒದಗಿಸುವವರನ್ನು ಸಬಲೀಕರಣ ಗೊಳಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಅದ್ಯತೆಯ ಮೇಲೆ ಆದ್ಯತೆ ನೀಡಲಿದೆ. ಶಿಕ್ಷಣದ ಮೇಲಿನ ಸಾರ್ವಜನಿಕ ಹೂಡಿಕೆಯನ್ನು ಶೇ.10 ರಿಂದ ಶೇ.20ಕ್ಕೆ ಹೆಚ್ಚಿಸಲು ಮತ್ತು ಲೋಕೋ ಪಕಾರಿ ಖಾಸಗಿ ಧನಸಹಾಯವನ್ನು ಉತ್ತೇಜಿಸಲು ಎನ್‌ಪಿಎಸ್‌ನಲ್ಲಿ ಉದ್ದೇಶಿಸಲಾಗಿದೆ. ಇದು ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ ಅಭಿವೃದ್ಧಿ, ವಿದ್ಯಾರ್ಥಿವೇತನಗಳು, ಅಧ್ಯಾ ಪಕರ ಶೈಕ್ಷಣಿಕ ಸಾಮರ್ಥ್ಯ ವರ್ಧನೆ ಸಂಶೋಧನಾ ಚಟುವಟಿಕೆಗಳಲ್ಲಿನ ಸೌಲಭ್ಯ ಗಳನ್ನು ಸುಧಾರಿಸಲಿದೆ.

ಟ್ವಿನ್ನಿಂಗ್‌ ಪ್ರೋಗ್ರಾಮ್‌
ಭಾರತೀಯ ಶಿಕ್ಷಣ ವ್ಯವಸ್ಥೆಯ ಅಡಿಪಾಯ ಎಂದಾಗಿದ್ದ ನಳಂದ, ತಕ್ಷಶಿಲಾ ಮೊದಲಾದ ವಿಶ್ವ ವಿದ್ಯಾಲಯಗಳಿಗೆ ವಿದೇಶದಿಂದ ಅಸಂಖ್ಯಾತ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಬರುತ್ತಿದ್ದರು. ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಭಾರ ತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದಕ್ಕೊಂದು ಹೊಸ ರೂಪ ನೀಡಲು ಟ್ವಿನ್ನಿಂಗ್‌ ಪ್ರೋಗ್ರಾಮ್‌ ಪ್ರಸ್ತಾಪವನ್ನು ಹೊಸ ನೀತಿಯಲ್ಲಿ ಮಾಡಲಾಗಿದೆ.

ಭಾರತದ ಯಾವುದೇ ವಿಶ್ವವಿದ್ಯಾಲಯ ವಿದೇಶದಲ್ಲಿ ತನ್ನ ಶಾಖೆ ತೆರಲು ಸರ್ಕಾರ ಅನುಮತಿ ನೀಡಲಿದೆ. ಅಲ್ಲಿರುವ ವಿದ್ಯಾರ್ಥಿಗಳು ಭಾರತೀಯ ವಿಶ್ವವಿದ್ಯಾಲಯದ ಹೆಸರಿನಲ್ಲೇ ಪದವಿ ಪಡೆಯಲು ಅವಕಾಶವಿದೆ ಮತ್ತು ಭಾರತೀಯ ವಿಶ್ವವಿದ್ಯಾಲಯವೇ ಅವರಿಗೆ ಪ್ರಮಾಣಪತ್ರ ನೀಡಲಿದೆ. ಹಾಗೆಯೇ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಶಾಖೆ ಆರಂಭಿಸಲು ಅವಕಾಶವಿದೆ. ಭಾರತದಲ್ಲಿ ಒಂದು ಅಥವಾ ಎರಡು ವರ್ಷ ಓದು, ಮುಂದಿನ ವ್ಯಾಸಂಗವನ್ನು ವಿದೇಶದಲ್ಲಿ ಪೂರ್ಣಗೊಳಿಸಲು, ವಿದೇಶದಲ್ಲಿ ಅರ್ಧಭಾಗ ಅಧ್ಯಯನ ಮಾಡಿ, ಇನ್ನುಳಿದರ್ಧವನ್ನು ಭಾರತದಲ್ಲಿ ಅಧ್ಯಯನ ಮಾಡಲು ಅವಕಾಶ ಈ ನೀತಿ ನೀಡಲಿದೆ. ಭಾರತೀಯ ಶಿಕ್ಷಣ ಪರಂಪರೆಯನ್ನು ಇದು ಇನ್ನಷ್ಟು ಸದೃಢಗೊಳಿಸಲಿದೆ. ನೀತಿಯ ಅನುಷ್ಠಾನ ಸಮರ್ಪಕವಾಗಿ ಈಡೇರಿದರೆ ಭಾರತವು ವಿಶ್ವದ ಜ್ಞಾನಕೇಂದ್ರವಾಗಲಿದೆ ಮತ್ತು ಶಿಕ್ಷಣ ಇಲಾಖೆ ಶಿಕ್ಷಣದ ಶ್ರೇಷ್ಠತೆಯ ಪ್ರತಿಕವಾಗಿ ಉಳಿಯಲಿದೆ.

– ಪ್ರೊ| ಕೆ.ಆರ್‌.ವೇಣುಗೋಪಾಲ್‌, ಕುಲಪತಿ ಬೆಂಗಳೂರು ವಿಶ್ವವಿದ್ಯಾಲಯ

ಟಾಪ್ ನ್ಯೂಸ್

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Why is there a hesitation to name the M. Chinnaswamy stand after Shantha Rangaswamy? What is the controversy?

M. Chinnaswamy ಸ್ಟಾಂಡ್‌ಗೆ ಶಾಂತಾ ರಂಗಸ್ವಾಮಿ ಹೆಸರಿಡಲು ಯಾಕೆ ಹಿಂದೇಟು? ಏನಿದು ವಿವಾದ?

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬ್ಬಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾವು

Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Arrest Warrant Against Robin Uthappa

Arrest Warrant: ರಾಬಿನ್ ಉತ್ತಪ್ಪ ವಿರುದ್ದ ಬಂಧನ ವಾರೆಂಟ್;‌ ಜೈಲು ಪಾಲಾಗ್ತಾರಾ ಕ್ರಿಕೆಟಿಗ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.