ಈ ಸಾಂಕ್ರಾಮಿಕದ ಸಮಯದಲ್ಲಿ ತಂತ್ರಜ್ಞಾನದಿಂದ ಪ್ರಯೋಜನಗಳಾಗುತ್ತಿವೆ


Team Udayavani, Jul 23, 2020, 6:58 AM IST

ಈ ಸಾಂಕ್ರಾಮಿಕದ ಸಮಯದಲ್ಲಿ ತಂತ್ರಜ್ಞಾನದಿಂದ ಪ್ರಯೋಜನಗಳಾಗುತ್ತಿವೆ

ಒಂದು ವೇಳೆ ವ್ಯಕ್ತಿಯೊಬ್ಬ ಸಾರ್ವಜನಿಕ ವಿತರಣ ವ್ಯವಸ್ಥೆಗೆ ಅರ್ಹವಾಗಿದ್ದಾನೆ ಎಂದರೆ, ಆತ ಅದರಡಿಯಲ್ಲಿ ಬರುವ ಸೇವೆಗಳನ್ನು ದೇಶದ ಯಾವುದೇ ಭಾಗದಲ್ಲೂ ಪಡೆಯುವಂತಾಗಬೇಕು. ಜನರಿಗೆ ಎಲ್ಲೆಡೆಯೂ ಸೌಲಭ್ಯಗಳು ಸಿಗಬೇಕೆಂದರೆ ನಾವು ನಿಜಕ್ಕೂ ಇಂಥ ಕೆಲವು ಸಂಗತಿಗಳ ಬಗ್ಗೆ ಮರು ಯೋಚಿಸಬೇಕಿದೆ. ಇವೆಲ್ಲವೂ ತಂತ್ರಜ್ಞಾನದ ಮೂಲಕವೇ ಸಾಧ್ಯವಾಗುವಂಥದ್ದು.

ನೀವು ಇತ್ತೀಚೆಗೆ ‘ಆಂತರಿಕ ಜಾಗತೀಕರಣ’ ಎಂಬ ಒಂದು ಐಡಿಯಾದ ಬಗ್ಗೆ ಮಾತನಾಡಿದ್ದೀರಿ. ಈ ವಿಷಯದಲ್ಲಿ ಹೆಜ್ಜೆ ಇಡಲು ಭಾರತಕ್ಕೆ ಇದು ಸರಿಯಾದ ಸಮಯ ಅನ್ನಿಸುತ್ತಾ?
ಹೌದು, ಯಾವುದನ್ನು ನಾವು ಆಂತರಿಕ ಜಾಗತೀಕರಣ ಅನ್ನುತ್ತೇವೋ ಅದರ ಅಗತ್ಯ ಈಗ ಇದೆ ಎಂದು ನನಗೆ ಅನ್ನಿಸುತ್ತದೆ. ಬಾಹ್ಯ ಜಾಗತೀಕರಣದ ಓಟ 20 ವರ್ಷಗಳ‌ವರೆಗಷ್ಟೇ ಜೋರಾಗಿತ್ತು. 1991ರ ವಿಚಾರವನ್ನೇ ನೋಡಿ, ಅದು ಭಾರತದ ಪಾಲಿಗೆ ಬೃಹತ್‌ ಆರ್ಥಿಕ ಸುಧಾರಣೆಗಳನ್ನಷ್ಟೇ ತಂದ ವರ್ಷವಾಗಿರಲಿಲ್ಲ, ಬದಲಾಗಿ, ಆ ಸಮಯದಲ್ಲಿ ಬರ್ಲಿನ್‌ ಗೋಡೆ ಕುಸಿದು, ಜಾಗತೀಕರಣದ ಪರ್ವಕ್ಕೆ ಮುನ್ನುಡಿ ಬರೆಯಿತು. ಅಂತರ್ಜಾಲದ ವಿಕಸನದಿಂದ ಇದಕ್ಕೆ ಮತ್ತಷ್ಟು ಬಲ ದೊರಕಿತು.

ಇನ್ನು ಚೀನ ಕೂಡ ವಿಶ್ವ ವ್ಯಾಪಾರ ಕೂಟದ ಭಾಗವಾಯಿತು. ದೇಶಗಳ ನಡುವಿನ ಸಾಗಣೆ – ಸಂಚಾರ ವ್ಯವಸ್ಥೆ ಸುಲಭವಾಯಿತು. ಆದರೆ ಈಗ ನನಗನ್ನಿಸುವುದೇನೆಂದರೆ, ಜಾಗತೀಕರಣ ಹಿಂದೆ ತಳ್ಳಲ್ಪಡುತ್ತಿದೆ. ಮುಖ್ಯವಾಗಿ, ಕೆಲವು ಆಧುನಿಕ ರಾಷ್ಟ್ರಗಳಿಂದ ಹಾಗೂ ಅಲ್ಲಿನ ಜನರಲ್ಲಿ ಇದು ಕಾಣಿಸುತ್ತಿದೆ. ನಾವೀಗ ನಮ್ಮ ಗಮನ ಹರಿಸಬೇಕಿರುವುದು, ಭಾರತದ ಆಂತರಿಕ ಆರ್ಥಿಕತೆಯನ್ನು ನಿರ್ಮಿಸುವತ್ತ. ನಮ್ಮಲ್ಲಿ ಹಣ ಚಲಾವಣೆಯ ವಿಷಯವಿರಲಿ, ಸಾಗಣೆ ಅಥವಾ ರಿಲೊಕೇಷನ್‌ ಇರಲಿ ಅದು ಸಂಪೂರ್ಣ ಮುಕ್ತವಾಗಿದೆ. ಈ ಕಾರಣಕ್ಕಾಗಿಯೇ ನಿಸ್ಸಂಶಯವಾಗಿಯೂ ಆಂತರಿಕ ಜಾಗತೀಕರಣದ ಮೂಲಕ ಭಾರತದ ಜನಸಂಖ್ಯೆಗೆ ಪ್ರಯೋಜನಗಳನ್ನು ನಾವು ತಲುಪಿಸಬೇಕಿದೆ.

ಕಳೆದ ಎರಡು ದಶಕಗಳಲ್ಲಿ ಒಂದು ರೀತಿಯಲ್ಲಿ ನಾವೆಲ್ಲ ಜಾಗತೀಕರಣದ ಓಟದ ಅಂತ್ಯವನ್ನು ನೋಡಿದ್ದೇವೆ. ಈಗ ನೀವು ಆಂತರಿಕ ಜಾಗತೀಕರಣದ ಅಗತ್ಯದ ಬಗ್ಗೆ ವಾದ ಮಾಡುತ್ತಿದ್ದೀರಲ್ಲ?
ಹೌದು, ಆ ಸಮಯದಲ್ಲಿ ಏನಾಗಿತ್ತೆಂದರೆ ಬಾಸ್ಟನ್‌ನಿಂದ ಬೆಂಗಳೂರಿನವರೆಗಿನ ನಿಲುಕು ಸುಲಭವಿತ್ತು. ಆದರೆ ಬೆಂಗಳೂರಿನಿಂದ ಬಿಡದಿ ನಡುವೆ ಅಷ್ಟು ಸುಲಭ ನಿಲುಕು ಇರಲಿಲ್ಲ.

ಹಾಗಿದ್ದರೆ, ಈಗ ಬೆಂಗಳೂರು ಮತ್ತು ಬಿಡದಿಯ ನಡುವಿನ ಅಂತರ ಅಗಾಧ ಪ್ರಮಾಣದಲ್ಲಿ ಕಡಿಮೆಯಾಗಿದೆಯೇ? ಹೌದು ಎನ್ನುವುದಾದರೆ, ಭಾರತವೀಗ ಆಂತರಿಕ ಜಾಗತೀಕರಣಕ್ಕೆ ಸಿದ್ಧವಾಗಿದೆ ಎಂದರ್ಥವೇ..?
ಇವತ್ತು ಬಿಡದಿಯಲ್ಲಿ ಟೋಯೋಟಾ ಫ್ಯಾಕ್ಟರಿ ಮತ್ತು ಗಾಲ್ಫ್ ಕೋರ್ಸ್‌ ಇದೆ. ಹಾಗೆಂದು ಇದು ಸರಿಯಾದ ಉದಾಹರಣೆ ಹೌದೋ ಅಲ್ಲವೋ ನನಗೆ ತಿಳಿಯದು. ಆದರೆ, ದೇಶಕ್ಕೆ ಈ ರೀತಿಯ ಬದಲಾವಣೆ ಅನಿವಾರ್ಯ ಎಂದು ನನಗನ್ನಿಸುತ್ತದೆ. ಮುಂದೆ ಉತ್ತರದಿಂದ ದಕ್ಷಿಣ ಭಾಗಕ್ಕೆ, ಪೂರ್ವದಿಂದ ಪಶ್ಚಿಮ ಭಾಗಕ್ಕೆ ಜನರ ವಲಸೆ ಪ್ರಮಾಣ ಹೆಚ್ಚಲಿದೆ. ಹೀಗಾಗಿ, ಆರ್ಥಿಕ ಬೆಳವಣಿಗೆಯ ಪ್ರಯೋಜನವು ಎಲ್ಲರಿಗೂ ತಲುಪುವಂತಾಗಬೇಕು. ಉದಾಹರಣೆಗೆ, ನನಗನ್ನಿಸುವಂತೆ, ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳು ಈ ದಿಕ್ಕಿನಲ್ಲಿವೆ. ಎಪಿಎಂಸಿಯ ಮೇಲೆ ಅದು ತೆಗೆದುಕೊಂಡ ನಿರ್ಣಯಗಳು, ಕೃಷಿಗೆ ಒಂದು ರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ ಮಾಡುವ ಪ್ರಯತ್ನವಾಗಿದೆ. ಇನ್ನು ಜಿಎಸ್ಟಿ ಎನ್ನುವುದು ಸರಕು ಮತ್ತು ಸೇವೆಗಳಿಗೆ ರಾಷ್ಟ್ರೀಯ ಮಾರುಕಟ್ಟೆ ನಿರ್ಮಿಸಿದೆ.

ಕೋವಿಡ್‌-19ರ ಈ ಸಮಯದಲ್ಲಿ ತಂತ್ರಜ್ಞಾನದ ಬಳಕೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.  ತಂತ್ರಜ್ಞಾನದ ಸದುಪಯೋಗವಾಗಬೇಕು ಎನ್ನುವ ಮಾತಿಗೆ, ಇದು ಪೂರಕವಾಗಿದೆ ಎಂದು ಅನಿಸುತ್ತದೆಯೇ?
ಖಂಡಿತ ಹೌದು. ಈ ಸಾಂಕ್ರಾಮಿಕದ ಸಮಯದಲ್ಲಿ ತಂತ್ರ ಜ್ಞಾನದಿಂದ ಪ್ರಯೋಜನಗಳಾಗುತ್ತಿವೆ. ಅಫ್‌ ಕೋರ್ಸ್‌, ಆರೋಗ್ಯ ಸೇತು ಅಪ್ಲಿಕೇಷನ್‌ ಅನ್ನೇ ನೋಡಿ. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚಲು (ಕಾಂಟ್ಯಾಕ್ಟ್ ಟ್ರೇಸಿಂಗ್‌) ಇದನ್ನು ಬಳಸಲಾಗುತ್ತಿದೆ. ಇದಷ್ಟೇ ಅಲ್ಲದೇ, ಇಂದು ಸುಪ್ರೀಂ ಕೋರ್ಟ್‌ ವೀಡಿಯೋ ಕಾನ್ಫರೆನ್ಸ್‌ಗಳ ಮೂಲಕ ವಿಚಾರಣೆ ನಡೆಸುತ್ತಿದೆ. ಇಂಥ ಬದಲಾವಣೆಯನ್ನು ಸಾಂಕ್ರಾಮಿಕಕ್ಕೂ ಮುನ್ನ ಊಹಿಸಲು ಸಾಧ್ಯವಿತ್ತೇ?

ಸತ್ಯವೇನೆಂದರೆ, ಗ್ರೌಂಡ್‌ ಲೆವೆಲ್‌ ಅಲ್ಲಿ ಬಹಳಷ್ಟು ಅಂಶಗಳು ಕೆಲಸ ಮಾಡುತ್ತವೆ. ನಾನು ಡಿಜಿಟಲ್‌ ಮತ್ತು ‘ಆಂತರಿಕ ಜಾಗತೀಕರಣದ’ ಪರಿಕಲ್ಪನೆ (ಇಂಟರ್ನಲ್‌ ಗ್ಲೋಬಲೈಸೇಷನ್‌) ಎರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮಾತಾಡುತ್ತೇನೆ.

ಮುಂದಿನ ದಿನಗಳಲ್ಲಿ ನಮ್ಮಲ್ಲಿ ಆಂತರಿಕ ವಲಸೆ ಪ್ರಮಾಣವಿದೆಯಲ್ಲ ಅದು ಹೆಚ್ಚಲಿದೆ. ಏಕೆಂದರೆ, ದಕ್ಷಿಣ ಭಾರತದಲ್ಲಿನ ಜನನದರಕ್ಕೂ ಉತ್ತರ ಭಾರತದಲ್ಲಿನ ಪ್ರಮಾಣಕ್ಕೂ ವ್ಯತ್ಯಾಸವಿದೆ. ಉತ್ತರ ಭಾರತದ ಕೆಲವು ರಾಜ್ಯಗಳು ಹಾಗೂ ಈಶಾನ್ಯ ರಾಜ್ಯವಾದಂಥ ಅಸ್ಸಾಂನಲ್ಲಿ ಟೋಟಲ್‌ ಫರ್ಟಿಲಿಟಿ ರೇಟ್‌ ಅಧಿಕವಿದೆ. ತತ್ಪರಿಣಾಮವಾಗಿ. ಮುಂದಿನ ದಶಕದಲ್ಲಿ ಇಂಥ ರಾಜ್ಯಗಳಲ್ಲಿನ ಜನಸಂಖ್ಯೆ ಅಧಿಕವಾಗುತ್ತದೆ. ಅಲ್ಲಿನ ಯುವ ಜನತೆ ವಲಸೆ ಬರಲಿದ್ದಾರೆ. ಈ ರಾಜ್ಯಗಳಿಂದ ಪಶ್ಚಿಮದ ರಾಜ್ಯಗಳಿಗೆ ಅಥವಾ ದಕ್ಷಿಣ ರಾಜ್ಯಗಳಿಗೆ ಆಂತರಿಕ ವಲಸೆ ಇರಲಿದೆ.

ಜನರು ಈ ರೀತಿ ಸಂಚರಿಸಲಿದ್ದಾರೆ ಎಂದರೆ, ಅವರು ಎಲ್ಲಿ ದ್ದಾರೋ ಅಲ್ಲಿಯೇ ಪ್ರತಿಯೊಂದು ಸೇವೆಗಳೂ ಲಭ್ಯವಾಗುವಂತೆ ಮಾಡಬೇಕಾಗುತ್ತದೆ. ಇಂದು ಆಧಾರ್‌ ನಂಬರ್‌ ಎನ್ನುವುದು ರಾಷ್ಟ್ರೀಯ ಸ್ತರದಲ್ಲಿ ಬಳಕೆಯಾಗುವಂಥದ್ದು. ಬ್ಯಾಂಕ್‌ ಅಕೌಂಟ್‌ ಸಹ ರಾಷ್ಟ್ರೀಯವಾಗಿ ಬಳಕೆಯಾಗುವಂಥದ್ದು. ನನ್ನ ಮೊಬೈಲ್‌ ಸಂಖ್ಯೆ ಕೂಡ ಹಾಗೆಯೇ ಅಲ್ಲವೇ…? ಇದು ಅನ್ಯ ಸಂಗತಿಗಳಿಗೂ ಅನ್ವಯವಾಗಬೇಕು. ಒಂದು ವೇಳೆ ವ್ಯಕ್ತಿಯೊಬ್ಬ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಅರ್ಹವಾಗಿದ್ದಾನೆ ಎಂದರೆ, ಆತ ಅದರಡಿಯಲ್ಲಿ ಬರುವ ಸೇವೆಗಳನ್ನು ದೇಶದ ಯಾವುದೇ ಭಾಗದಲ್ಲೂ ಪಡೆಯುವಂತಾಗಬೇಕು. ನನಗೆ ನನ್ನ ಮಾತೃಭಾಷೆಯಲ್ಲಿ ಶಿಕ್ಷಣ ಬೇಕು ಎಂದರೆ, ದೇಶದ ಯಾವುದೇ ಭಾಗದಲ್ಲೂ ಅದು ನನಗೆ ದೊರೆಯುವಂತಾಗಬೇಕು. ಜನರಿಗೆ ಎಲ್ಲೆಡೆಯೂ ಸೌಲಭ್ಯಗಳು ಸಿಗಬೇಕೆಂದರೆ ನಾವು ನಿಜಕ್ಕೂ ಇಂಥ ಕೆಲವು ಸಂಗತಿಗಳ ಬಗ್ಗೆ ಮರುಯೋಚಿಸಬೇಕಿದೆ. ಇವೆಲ್ಲವೂ ತಂತ್ರಜ್ಞಾನದ ಮೂಲಕವೇ ಸಾಧ್ಯವಾಗುವಂಥದ್ದು.

ಇಂಥದ್ದೊಂದು ಡಿಜಿಟಲ್‌ ಮೂಲಸೌಕರ್ಯ ನಿರ್ಮಾಣದಲ್ಲಿ ಭಾರತ 50 ಪ್ರತಿಶತ ಮುಂದಡಿಯಿಟ್ಟಿದೆ ಎಂದು ನೀವು ಹೇಳಿದ್ದೀರಿ. ಹಾಗಿದ್ದರೆ ಇನ್ನೂ ಬಾಕಿ ಉಳಿದಿರುವ 50 ಪ್ರತಿಶತ ಕೆಲಸವೇನು?
ಈಗ ರಾಷ್ಟ್ರೀಯ ಸ್ತರದಲ್ಲಿ ಏಕರೂಪದಲ್ಲಿ ಇರುವುದೇನೆಂದರೆ, ರಾಷ್ಟ್ರೀಯ ಐಡೆಂಟಿಟಿ, ರಾಷ್ಟ್ರೀಯ ಪಾವತಿ ವ್ಯವಸ್ಥೆ – ಬ್ಯಾಂಕಿಂಗ್‌ ಹಾಗೂ ಮೊಬೈಲ್‌ ಸೇವೆಗಳು. ಅತ್ತ ಜಿಎಸ್ಟಿಯು ಈಗಾಗಲೇ ‘ರಾಷ್ಟ್ರೀಯ’ ಸ್ತರದಲ್ಲಿ ಪರೋಕ್ಷ ತೆರಿಗೆ ಪದ್ಧತಿಗೆ ಬುನಾದಿಯನ್ನು ಒದಗಿಸಿದೆ. ಆದರೂ ಅದನ್ನು ಇನ್ನಷ್ಟು ಸರಳ‌ಗೊಳಿಸುವ ಅಗತ್ಯವಿದೆ. ಇನ್ನು ಫಾಸ್ಟ್‌ಟ್ಯಾಗ್‌ ಅನ್ನೇ ನೋಡಿ.

ಫಾಸ್ಟ್ ಟ್ಯಾಗ್‌ನಿಂದಾಗಿ ದೆಹಲಿಯಿಂದ ಕನ್ಯಾಕುಮಾರಿಯವರೆಗೂ ಟ್ರಕ್‌ ಡ್ರೈವ್‌ ಮಾಡುವವನು ಟೋಲ್‌ ಕಟ್ಟಲು ನಿಲ್ಲಬೇಕಾದ ಅಗತ್ಯ ದೂರವಾಗಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಕೂಡ ಈ ರೀತಿಯಾಗಬೇಕು. ಆರೋಗ್ಯ ವ್ಯವಸ್ಥೆಯಲ್ಲೂ ಇಂಥ ದ್ದೊಂದು ಏಕಸ್ಥರೀಯ ಬದಲಾವಣೆ ಬೇಕಿದೆ. ಮುಂದಿನ ದಿನಗಳಲ್ಲಿ ವಲಸೆಯಿಂದಾಗಿ ಬಹುಭಾಷೀಯ ರಾಜ್ಯಗಳನ್ನು ನಾವು ಹೊಂದಲಿರುವುದರಿಂದಾಗಿ ಅಲ್ಲೂ ಇಂಥ ಸುಧಾರಣೆಯಾಗಬೇಕಿದೆ..

(ಕೃಪೆ-ಲೈವ್‌ ಮಿಂಟ್‌)

– ನಂದನ್‌ ನಿಲೇಕಣಿ

ಟಾಪ್ ನ್ಯೂಸ್

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.