ಮಕ್ಕಳಿಗೆ ನಾವೇನು ಕಲಿಸಬೇಕು?: ಮಗುವಿನೊಂದಿಗೆ ಪೋಷಕರ ಸಂಬಂಧ ‘ಫೆದರ್ ಟಚ್’ ಇದ್ದಂತೆ


Team Udayavani, Jul 31, 2020, 8:10 AM IST

ಮಕ್ಕಳಿಗೆ ನಾವೇನು ಕಲಿಸಬೇಕು?: ಮಗುವಿನೊಂದಿಗೆ ಪೋಷಕರ ಸಂಬಂಧ ‘ಫೆದರ್ ಟಚ್’ ಇದ್ದಂತೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಗುವಿನೊಂದಿಗೆ ಪೋಷಕರ ಸಂಬಂಧ ಬಹಳ ಅಮೂಲ್ಯವೂ ಪ್ರಮುಖವೂ ಆಗಿದ್ದಾಗಿದೆ.

ಅದು ಫೆದರ್ ಟಚ್ ಇದ್ದ ಹಾಗೆ ನವಿರು ನವಿರಾದ ರೀತಿಯದ್ದು. ಯಾಕೆಂದರೆ ಈ ಸಂಬಂಧ ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವವನ್ನು ಬೀರುತ್ತದೆ.

ಮಗುವಿನ ಶಿಕ್ಷಣ ಪ್ರಾರಂಭ ಆಗುವುದೇ ತನ್ನ ಸುತ್ತಲಿನ ಪರಿಸರದ ವೀಕ್ಷಣೆ, ಸದ್ದು, ಗದ್ದಲಗಳ ಆಲಿಸುವಿಕೆ ಮತ್ತು ತನ್ನ ಸುತ್ತಲಿರುವವರು ನಡೆಸುವ ಚಟುವಟಿಕೆಗಳನ್ನು ಅನುಕರಣೆ ಮಾಡುವ ಮೂಲಕ.

ಈ ಮೂರು ಕ್ರಿಯೆಗಳನ್ನು ಮಗುವೊಂದು ನಡೆಸಲು ಪ್ರಾರಂಭಿಸುವುದೇ ತನ್ನ ಪೋಷಕರ ಜೊತೆಯಲ್ಲಿ ಮತ್ತು ಈ ಸಂದರ್ಭದಲ್ಲಿ ಮಗುವಿನ ಪ್ರತಿಕ್ರಿಯೆ ಪೋಷಕರ ಕ್ರಿಯೆಯನ್ನು ಅವಲಂಬಿಸಿರುತ್ತದೆ, ಇದು ಹೇಗೆಂದರೆ ಗೋಡೆಗೆ ಚೆಂಡೊಂದನ್ನು ಎಸೆದಂತೆ!

ಮಗುವಿನ ಯೋಚನಾ ಶಕ್ತಿ (ಕಾಗ್ನಿಟಿವ್) ಹಾಗೂ ಸಮಾಜದಲ್ಲಿ ಬದುಕಲು ಬೇಕಾಗುವ ಕೌಶಲಗಳು (ಸ್ಕಿಲ್ಸ್) ಇವೆರಡು ಮಗುವೊಂದು ಶಾಲೆಯಲ್ಲಿ ಉತ್ತಮ ರೀತಿಯಲ್ಲಿ ತೇರ್ಗಡೆ ಹೊಂದಲು ಬೇಕಾಗುವಂತಹ ಕೌಶಲಗಳಾಗಿವೆ.

ಇವನ್ನು ಮಕ್ಕಳು ಗಳಿಸಿಕೊಳ್ಳುವಲ್ಲಿ ಪೋಷಕರ ಪಾತ್ರ ಅಪಾರವಾದುದು. ಇದನ್ನೇ ನಾವು (ರೆಸ್ಪಾನ್ಸಿಬಲ್ ಪೇರೆಂಟಿಂಗ್) ಪೋಷಕ ಜವಾಬ್ದಾರಿ ಎಂದು ಕೂಡ ಕರೆಯಬಹುದಾಗಿದೆ.

ಪೋಷಕರ ಪಾತ್ರ:
ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳ ಬಗ್ಗೆ ಕಾಳಜಿ ವಹಿಸುತ್ತಾರೋ ಅದು ಮಕ್ಕಳ ಸಾಧನೆಗೆ ಪೂರಕವಾಗುತ್ತದೆ. ಮಕ್ಕಳ ಶಿಕ್ಷಣದಲ್ಲಿ ಪೋಷಕರು ಹಲವು ರೀತಿಯ ಪಾತ್ರಗಳನ್ನು ವಹಿಸುವುದನ್ನು ನಾವಿಲ್ಲಿ ಗಮನಿಸಬಹುದಾಗಿರುತ್ತದೆ. ಅವುಗಳಲ್ಲಿ ಮುಖ್ಯವಾಗಿರುವುದೆಂದರೆ:

1) ಉತ್ತೇಜಿಸುವ ನಾಯಕ (ಚಿಯರ್ ಲೀಡರ್)

2) ಸ್ನೇಹಿತ (ಫ್ರೆಂಡ್)

3) ಶಿಕ್ಷಕ (ಟೀಚರ್)

4) ಸ್ಪೂರ್ತಿಯ ಸೆಲೆ (ಇನ್ ಸ್ಪಿರಿಟ್)

ಪೋಷಕರಾದವರು ಈ ನಾಲ್ಕು ಪಾತ್ರಗಳ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ತಿಳಿದುಕೊಂಡಾಗ ನಿಮ್ಮ ಮಗುವನ್ನು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿಸಲು ಸಾಧ್ಯವಾಗುತ್ತದೆ.

ಹಾಗಾದರೆ, ಪೋಷಕರು ತಮ್ಮ ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ವಹಿಸಬೇಕಾದ ಆ ನಾಲ್ಕು ಮುಖ್ಯ ಪಾತ್ರಗಳ ಕುರಿತಾಗಿ ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.
1) ಬಿ ಎ ಚಿಯರ್ ಲೀಡರ್:
ಮಕ್ಕಳು ತಮ್ಮ ಕಲಿಕೆಯಲ್ಲಿ ದೃಢವಾಗಿ ಮುಂದುವರಿಯಲು ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಪ್ರೋತ್ಸಾಹ (Encouragement). ನಿಜವಾದ ಪ್ರೋತ್ಸಾಹ ಎಂದರೆ ನಿಮ್ಮ ಮಕ್ಕಳಿಗೆ ಯಾವಾಗಲೂ ಬಹುಮಾನ (Gift) ಅಥವಾ ಉಡುಗೊರೆ (Reward) ಇಲ್ಲವೇ ಏನಾದರೂ ವಸ್ತುಗಳನ್ನು ನೀಡುವುದಲ್ಲ. ಬದಲಾಗಿ ನಿಮ್ಮ ಮಗುವನ್ನು ಆಗಾಗ ಪ್ರಶ್ನಿಸುವುದೂ ನಿಮ್ಮಲ್ಲಿರುವ ಪ್ರೋತ್ಸಾಹದಾಯಕ ನಾಯಕತ್ವ ಗುಣದ ಲಕ್ಷಣವಾಗಿರುತ್ತದೆ.

ಉದಾಹರಣೆಗೆ: ಯಾವುದೋ ಒಂದು ಪ್ರಯತ್ನದಲ್ಲಿ ನಿಮ್ಮ ಮಗು ಸೋತರೆ ಆ ಸಂದರ್ಭದಲ್ಲಿ ಏನು ಮಾಡುತ್ತೀಯ? ಎಂದು ಪ್ರಶ್ನಿಸಿ ಬಳಿಕ ಈ ವಿಚಾರದಲ್ಲಿ ಮರು ಪ್ರಯತ್ನ ಮಾಡುವುದು ಹೇಗೆಂದು ಮಗುವಿಗೆ ಕಲಿಸಿಕೊಡುತ್ತಲೇ ಇರಬೇಕು. ಮತ್ತು ಮಕ್ಕಳು ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳುವಂತೆ ಪ್ರೋತ್ಸಾಹಿಸುವುದೂ ಸಹ ಚಿಯರ್ ಲೀಡರ್ ಗುಣದ ಒಂದು ಲಕ್ಷಣವಾಗಿರುತ್ತದೆ.

ಸ್ನೇಹಿತರಂತೆ ವರ್ತಿಸುವುದು:
ಓದುವುದರಲ್ಲಿ ಹಾಗೂ ಲೆಕ್ಕ ಸಹಿತ ಕಷ್ಟಕರ ವಿಚಾರದಲ್ಲಿ ಮಾತ್ರವೇ ನಿಮ್ಮ ಮಗು ಸಮಸ್ಯೆ ಎದುರಿಸುತ್ತಿದೆ ಎಂದು ಭಾವಿಸಬೇಡಿ. ಮಗುವಿಗೆ ತನ್ನ ಶಿಕ್ಷಕರಲ್ಲಿ ಅಥವಾ ಸ್ನೇಹಿತರೊಂದಿಗೆ ಬೆರೆಯುವ, ವ್ಯವಹರಿಸುವ ವಿಚಾರದಲ್ಲೂ ತೊಂದರೆ ಎದುರಾಗುತ್ತಿರಬಹುದು. ಅವುಗಳನ್ನು ತಾಳ್ಮೆಯಿಂದ ಕೇಳುವ ಸ್ವಭಾವ ಮತ್ತು ಸ್ನೇಹಗುಣ ನಮ್ಮಲ್ಲಿರಬೇಕು.

ಯಾವಾಗ ನಿಮ್ಮ ಮಗುವಿನ ಸಮಸ್ಯೆ, ತೊಂದರೆಗಳಿಗೆ ನೀವು ಕಿವಿಯಾಗುತ್ತೀರೋ ಆಗ ಮಗು ಎಲ್ಲವನ್ನೂ ನಿಮ್ಮಲ್ಲಿ ಮುಕ್ತವಾಗಿ ಹಂಚಿಕೊಳ್ಳುತ್ತದೆ. ಮತ್ತು ಆ ಮೂಲಕ ಮಗುವಿನ ಸೂಕ್ಷ್ಮ ಮನಸ್ಸನ್ನು ನೀವು ಗೆಲ್ಲಬಹುದಾಗಿರುತ್ತದೆ.

ಬಿ ಎ ಟೀಚರ್ ; ಮಗುವಿನ ಪಾಲಿಗೆ ಉತ್ತಮ ಶಿಕ್ಷಕರಾಗುವುದು:
ಮಕ್ಕಳು ಕೇವಲ ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟದ್ದನ್ನು ಕಲಿತರೆ ಮಾತ್ರವೇ ಸಾಕಾಗುವುದಿಲ್ಲ. ಶಿಕ್ಷಣ ಎನ್ನುವುದು ಶಾಲಾ ಕಲಿಕೆಗೆ ಮಾತ್ರವೇ ಸೀಮಿತವಾದುದು ಅಲ್ಲವಲ್ಲ? ಮಕ್ಕಳಿಗೆ ಒನ್ ಟು ಒನ್ ಸಂವಹನ ನಡೆಸುವ ಅಗತ್ಯ ಬಹಳಷ್ಟಿರುತ್ತದೆ. ಹೀಗಾಗಿ ಮಕ್ಕಳು ಹೋಂ ವರ್ಕ್ ಅಥವಾ ಪ್ರಾಜೆಕ್ಟ್ ಕೆಲಸಗಳನ್ನು ಮಾಡುವ ಸಂದರ್ಭದಲ್ಲಿ ನಾವು ನಮ್ಮ ಸಮಯವನ್ನು ಮಕ್ಕಳಿಗೆ ನೀಡುವುದು ಅತೀ ಅಗತ್ಯವಾಗಿರುತ್ತದೆ.

ಮತ್ತು ಮಕ್ಕಳ ಕಲಿಕೆ ಹಾಗೂ ಶಾಲೆಯಲ್ಲಿ ಅವರ ವರ್ತನೆಗೆ ಸಂಬಂಧಿಸಿದಂತೆ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇರುವುದೂ ಅಷ್ಟೇ ಅಗತ್ಯವಾಗಿರುತ್ತದೆ. ಹಾಗಾಗಿ ನಿಮ್ಮ ಮಗುವಿಗಾಗಿ ಪ್ರತೀ ದಿನ ಒಂದಷ್ಟು ಅಮೂಲ್ಯ ಸಮಯವನ್ನು ಮೀಸಲಿಡಿ.

ಸ್ಪೂರ್ತಿಯ ಸೆಲೆಯಾಗಿ:
ಮಕ್ಕಳು ಪ್ರಾಜೆಕ್ಟ್ ವರ್ಕ್ ಮಾಡುವ ಸಮಯದಲ್ಲಿ ಪೋಷಕರು ಅವರಿಗೆ ಸ್ಪೂರ್ತಿಯನ್ನು ತುಂಬುವ ಕೆಲಸವನ್ನು ಮಾಡಬೇಕು. ಮಕ್ಕಳು ತಮ್ಮ ಕೆಲಸದಲ್ಲಿ ಸಂತೋಷದಿಂದ ತೊಡಗಿಸಿಕೊಳ್ಳುವ ವಾತಾವರಣವನ್ನು ನಿರ್ಮಿಸಿಕೊಡಬೇಕು. ಕೆಲವೊಮ್ಮೆ ಸ್ವಲ್ಪ ದೃಢ ಮತ್ತು ಕಠಿಣ ನಿಲುವನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆಯೂ ಒದಗಿಬರಬಹುದು.

ಹೀಗೆ, ಯಾವಾಗ ಮಕ್ಕಳ ವಿದ್ಯಾಭ್ಯಾಸದಲ್ಲಿ ಪೋಷಕರು ಸಕಾರಾತ್ಮಕವಾಗಿ ಮೇಲೆ ತಿಳಿಸಿದ ನಾಲ್ಕು ರೀತಿಯ ಪಾತ್ರಗಳನ್ನು ಮತ್ತು ಕರ್ತವ್ಯಗಳನ್ನು ನಿಭಾಯಿಸುತ್ತಾರೋ ಆಗ ಮಕ್ಕಳ ಜೀವನದಲ್ಲಿ ಪೂರಕ ಬದಲಾವಣೆಗಳನ್ನು ತರಲು ಸಾಧ್ಯವಿರುತ್ತದೆ.

ಇದು ಹೇಗೆಂದರೆ:
– ಉತ್ತಮ ಅಂಕ/ಶ್ರೇಣಿಯನ್ನು ಮಕ್ಕಳು ಪಡೆಯಲು ಸಾಧ್ಯವಾಗುವುದು.

– ವಿಭಿನ್ನ ರೀತಿಯ ಕಲಿಕಾ ಶಿಬಿರಗಳಲ್ಲಿ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಆತ್ಮವಿಶ್ವಾಸ ಮೂಡುವುದು.

– ಸ್ಕೂಲ್ ಡ್ರಾಪ್ ಔಟ್ ಅಥವಾ ಮಕ್ಕಳು ಅರ್ಧದಲ್ಲೇ ಶಾಲೆ ಬಿಡುವ ಪ್ರಮೇಯ ಒದಗಿ ಬರುವುದಿಲ್ಲ.

– ಶಾಲೆಯೆಂಬುದು ಮಕ್ಕಳ ಪಾಲಿಗೆ ನಲಿವಿನ, ಖುಷಿಯ ಸ್ಥಳವಾಗಿ ರೂಪುಗೊಳ್ಳುತ್ತದೆ.

ಮಾತ್ರವಲ್ಲದೇ ಮಕ್ಕಳ ಎಲ್ಲಾ ಶೈಕ್ಷಣಿಕ ವಿಚಾರಗಳಲ್ಲಿ ಹಾಗೂ ಅವರ ವ್ಯಕ್ತಿತ್ವದಲ್ಲಿ ಕೆಲವೊಂದು ಬದಲಾವಣೆಗಳು ತೋರಿಬರಲಾರಂಭಿಸುತ್ತದೆ.

– ಉತ್ತಮ ಸಾಮಾಜಿಕ ಕೌಶಲಗಳು ಅಭಿವೃದ್ಧಿಗೊಳ್ಳುತ್ತವೆ.

– ಮಕ್ಕಳ ಗುಣ ನಡತೆ ಉತ್ತಮಗೊಳ್ಳುತ್ತದೆ.

– ಮಕ್ಕಳಲ್ಲಿ ನಾಯಕತ್ವದ ಗುಣಗಳು ಬೆಳೆಯಲಾರಂಭಿಸುತ್ತವೆ.

– ಶಾಲಾ ಹಾಜರಾತಿಯಲ್ಲು ಗಮನಾರ್ಹ ಸುಧಾರಣೆಗಳಾಗುತ್ತವೆ.

– ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಸುಧಾರಿಸುತ್ತದೆ.

– ಮಕ್ಕಳಿಗೆ ಶಿಕ್ಷಣದ ಪ್ರಾಮುಖ್ಯತೆ ಮನದಟ್ಟಾಗತೊಡಗುತ್ತದೆ.

ಅಕ್ಷರ ಜ್ಞಾನ ಒಂದೇ ಶಿಕ್ಷಣವಲ್ಲ ಆದರೆ ಉತ್ತಮ ಭವಿಷ್ಯವನ್ನು ಕಂಡುಕೊಳ್ಳುವಲ್ಲಿ ಹಾಗೂ ಸಕರಾತ್ಮಕ ವ್ಯಕ್ತಿತ್ವನ್ನು ರೂಪುಗೊಳಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿರುತ್ತದೆ. ಹಿರಿಯರಾದ ನಾವು ನುಡಿದಂತೆ ನಡೆದು ಅದೇ ದಾರಿಯಲ್ಲಿ ನಮ್ಮ ಮಕ್ಕಳೂ ನಡೆಯುವಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರಾದ ನಮ್ಮೆಲ್ಲರ ಕರ್ತವ್ಯವೂ ಆಗಿರುತ್ತದೆ.

ಯಾಕೆಂದರೆ ನಾನು ಈ ಮೊದಲೇ ಹೇಳಿದಂತೆ ಮಗುವಿನ ಮೊದಲ ಶಿಕ್ಷಣ ಪ್ರಾರಂಭವಾಗುವುದು ನಮ್ಮ ನಡೆ, ನುಡಿಗಳನ್ನು ನೋಡಿಕೊಂಡೇ ಆಗಿರುತ್ತದೆ ಎಂಬುದನ್ನು ನಾವು ಯಾವತ್ತೂ ಮರೆಯಬಾರದು.

‘Parents are powerful models for their children – Wish you all happy parenting.


– ಡಾ. ಶ್ವೇತಾ ಟಿ.ಎಸ್.
ಸಹಾಯಕ ಪ್ರಾಧ್ಯಾಪಕರು, ಕ್ಲಿನಿಕಲ್ ಸೈಕಾಲಜಿ ವಿಭಾಗ, KMC ಮಣಿಪಾಲ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.